AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರತಿಭಾವಂತ ಹುಡುಗಿಗೆ ಕೊಟ್ಟ ಮಾತು ಉಳಿಸಿಕೊಂಡ ವಿಜಯ್​ ದೇವರಕೊಂಡ; ಷಣ್ಮುಖಪ್ರಿಯಾಗೆ ಸಿಕ್ತು ಚಾನ್ಸ್​​

‘ಇಂಡಿಯನ್​ ಐಡಲ್​ 12’ ಶೋನಲ್ಲಿ ಹಿಂದಿ ಗಾಯಕರ ಮಧ್ಯೆ ಷಣ್ಮುಖಪ್ರಿಯಾ ಅವರು ಟಫ್​ ಸ್ಪರ್ಧೆ ನೀಡಿದ್ದರು. ಅಲ್ಲದೇ ಅವರ ಕಂಠಕ್ಕೆ ವಿಜಯ್​ ದೇವರಕೊಂಡ ಮಾರುಹೋಗಿದ್ದರು.

ಪ್ರತಿಭಾವಂತ ಹುಡುಗಿಗೆ ಕೊಟ್ಟ ಮಾತು ಉಳಿಸಿಕೊಂಡ ವಿಜಯ್​ ದೇವರಕೊಂಡ; ಷಣ್ಮುಖಪ್ರಿಯಾಗೆ ಸಿಕ್ತು ಚಾನ್ಸ್​​
ಷಣ್ಮುಖಪ್ರಿಯಾ, ವಿಜಯ್​ ದೇವರಕೊಂಡ
TV9 Web
| Edited By: |

Updated on: Sep 07, 2021 | 8:33 AM

Share

ನಟ ವಿಜಯ್​ ದೇವರಕೊಂಡ ಅವರಿಗೆ ಬಿಗ್​ ಬ್ರೇಕ್​ ನೀಡಿದ ಸಿನಿಮಾ ‘ಅರ್ಜುನ್​ ರೆಡ್ಡಿ’. ಆ ಸಿನಿಮಾ ಸೂಪರ್​ ಹಿಟ್​ ಆದ ಬಳಿಕ ಅವರು ದೇಶಾದ್ಯಂತ ಫೇಮಸ್​ ಆದರು. ಈಗ ಭಾರತೀಯ ಚಿತ್ರರಂಗದ ಬಹುಬೇಡಿಕೆ ನಟರಲ್ಲಿ ಅವರು ಕೂಡ ಮುಂಚೂಣಿಯಲ್ಲಿದ್ದಾರೆ. ಪ್ರಸ್ತುತ ವಿಜಯ್​ ದೇವರಕೊಂಡ ನಟಿಸುತ್ತಿರುವ ‘ಲೈಗರ್​’ ಚಿತ್ರದ ಮೇಲೆ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆ ನಿರೀಕ್ಷೆಯ ಮಟ್ಟವನ್ನು ಹೆಚ್ಚಲು ಇನ್ನೊಂದು ಕಾರಣ ಸಿಕ್ಕಿದೆ. ಈ ಸಿನಿಮಾದಲ್ಲಿ ‘ಇಂಡಿಯನ್​ ಐಡಲ್​ 12’ ಖ್ಯಾತಿಯ ಷಣ್ಮುಖಪ್ರಿಯಾ ಅವರು ಒಂದು ಸಾಂಗ್​ ಹಾಡಿದ್ದಾರೆ. ಈ ಸುದ್ದಿ ಕೇಳಿ ಅವರ ಫ್ಯಾನ್ಸ್​ ಫುಲ್​ ಖುಷ್​ ಆಗಿದ್ದಾರೆ.

ಭಾರಿ ಸೆನ್ಸೇಷನ್​ ಕ್ರಿಯೇಟ್​ ಮಾಡಿದ್ದ ‘ಇಂಡಿಯನ್​ ಐಡಲ್​ 12’ ರಿಯಾಲಿಟಿ ಶೋನಲ್ಲಿ ತೆಲುಗು ಮೂಲದ ಗಾಯಕಿ ಷಣ್ಮುಖಪ್ರಿಯಾ ಅವರು ಭಾಗವಹಿಸಿದ್ದರು. ಹಿಂದಿ ಗಾಯಕರ ಮಧ್ಯೆ ಅವರು ಟಫ್​ ಸ್ಪರ್ಧೆ ನೀಡಿದ್ದರು. ಅಲ್ಲದೇ ಅವರ ಕಂಠಕ್ಕೆ ವಿಜಯ್​ ದೇವರಕೊಂಡ ಕೂಡ ಮಾರುಹೋಗಿದ್ದರು. ಆಗಲೇ ಅವರೊಂದು ಭರವಸೆ ನೀಡಿದ್ದರು. ಅದನ್ನು ಈಗ ಈಡೇರಿಸಿದ್ದಾರೆ.

‘ಷಣ್ಮುಖಪ್ರಿಯಾ ಈ ರಿಯಾಲಿಟಿ ಶೋನಲ್ಲಿ ಗೆದ್ದರೂ, ಗೆಲ್ಲದಿದ್ದರೂ ಹೈದರಾಬಾದ್​ಗೆ ಬಂದ ಬಳಿಕ ನೀನು ನನ್ನ ಭೇಟಿ ಆಗಬೇಕು. ನನ್ನ ಸಿನಿಮಾದಲ್ಲಿ ಹಾಡುವ ಅವಕಾಶ ನಿನಗೆ ನೀಡುತ್ತೇನೆ. ಗುಡ್​ ಲುಕ್​’ ಎಂದು ವಿಡಿಯೋ ಮೆಸೇಜ್​ ಮೂಲಕ ವಿಜಯ್​ ದೇವರಕೊಂಡ ಹೇಳಿದ್ದರು. ಅದೀಗ ನಿಜವಾಗಿದೆ. ಅವರ ಮನೆಗೆ ಷಣ್ಮುಖಪ್ರಿಯಾ ಭೇಟಿ ನೀಡಿದ್ದಾರೆ. ನೆಚ್ಚಿನ ನಟನನ್ನು ಭೇಟಿಯಾಗಿ ಖುಷಿಪಟ್ಟಿದ್ದಾರೆ. ಅಲ್ಲದೇ, ‘ಲೈಗರ್​’ ಸಿನಿಮಾದಲ್ಲಿ ಹಾಡುವ ಅವಕಾಶ ಕೂಡ ಸಿಕ್ಕಿದೆ.

‘ಇಂಡಿಯಲ್​ ಐಡಲ್​ 12’ ಸ್ಪರ್ಧೆಯಲ್ಲಿ ಗೆಲ್ಲಲು ಷಣ್ಮುಖಪ್ರಿಯಾಗೆ ಸಾಧ್ಯವಾಗಲಿಲ್ಲ. ಆದರೆ ತೆಲುಗು ಮಂದಿಯ ಮನಗೆಲ್ಲುವಲ್ಲಿ ಅವರು ಯಶಸ್ವಿ ಆಗಿದ್ದಾರೆ. ‘ವಿಜಯ್​ ದೇವರಕೊಂಡ ಅವರು ನಮಗೆ ಈ ರೀತಿ ಬೆಂಬಲ ನೀಡುತ್ತಾರೆ ಎಂದು ನಾನು ನಿರೀಕ್ಷಿಸಿರಲಿಲ್ಲ. ಮೊದಲ ಬಾರಿಗೆ ಅವರ ವಿಡಿಯೋ ನೋಡಿದಾಗ ತುಂಬ ಆಶ್ಚರ್ಯ ಆಗಿತ್ತು’ ಎಂದು ಷಣ್ಮುಖಪ್ರಿಯಾ ಹೇಳಿದ್ದಾರೆ. ಅವರ ಧ್ವನಿಗೆ ಸರಿಹೊಂದುವಂತಹ ಗೀತೆಯನ್ನು ಲೈಗರ್​ ಸಿನಿಮಾದಲ್ಲಿ ಸೇರಿಸಲಾಗಿದೆ. ಈ ಚಿತ್ರಕ್ಕೆ ಪುರಿ ಜಗನ್ನಾಥ್​ ನಿರ್ದೇಶನ ಮಾಡುತ್ತಿದ್ದು, ತೆಲುಗಿನ ಜೊತೆಗೆ ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿಯಲ್ಲೂ ಮೂಡಿಬರುತ್ತಿದೆ.

ಇದನ್ನೂ ಓದಿ:

‘ನನ್ನ ಜೊತೆ ಮನೆಯಲ್ಲೇ ಇರು’ ಎಂದು ರಶ್ಮಿಕಾಗೆ ಒತ್ತಾಯ; ಹೀಗಾದರೆ ಕೆಲಸ ಮಾಡೋದು ಹೇಗೆ?

ಜಿಮ್​ನಲ್ಲಿ ಒಟ್ಟಾಗಿ ವರ್ಕೌಟ್​ ಮಾಡಿದ ರಶ್ಮಿಕಾ ಮಂದಣ್ಣ-ವಿಜಯ್​ ದೇವರಕೊಂಡ; ಫೋಟೋ ವೈರಲ್

ಅಸ್ಸಾಂನಲ್ಲಿ ಹಿಂಸಾಚಾರ; ಸರ್ಕಾರದಿಂದ ಭದ್ರತೆ, ಇಂಟರ್​​ನೆಟ್​ ಸೇವೆ ಸ್ಥಗಿತ
ಅಸ್ಸಾಂನಲ್ಲಿ ಹಿಂಸಾಚಾರ; ಸರ್ಕಾರದಿಂದ ಭದ್ರತೆ, ಇಂಟರ್​​ನೆಟ್​ ಸೇವೆ ಸ್ಥಗಿತ
ಸಿದ್ದರಾಮಯ್ಯ ಭೇಟಿ ಬಳಿಕ ಬಿಗ್ ಅಪ್ಡೇಟ್ ಕೊಟ್ಟ ರಾಜಣ್ಣ!
ಸಿದ್ದರಾಮಯ್ಯ ಭೇಟಿ ಬಳಿಕ ಬಿಗ್ ಅಪ್ಡೇಟ್ ಕೊಟ್ಟ ರಾಜಣ್ಣ!
ಬಿಜೆಪಿ ನಾಯಕಿಯಿಂದ ದೃಷ್ಟಿಹೀನ ಮಹಿಳೆಗೆ ಚಿತ್ರಹಿಂಸೆ; ವಿಡಿಯೋ ವೈರಲ್
ಬಿಜೆಪಿ ನಾಯಕಿಯಿಂದ ದೃಷ್ಟಿಹೀನ ಮಹಿಳೆಗೆ ಚಿತ್ರಹಿಂಸೆ; ವಿಡಿಯೋ ವೈರಲ್
ಹೊಸ ಡಾಂಬರು ರಸ್ತೆಯ ಪರಿಶೀಲನೆಗೆ ಹೋದ ಸಚಿವೆಗೆ ಕಾದಿತ್ತು ಶಾಕ್!
ಹೊಸ ಡಾಂಬರು ರಸ್ತೆಯ ಪರಿಶೀಲನೆಗೆ ಹೋದ ಸಚಿವೆಗೆ ಕಾದಿತ್ತು ಶಾಕ್!
ದೂರುದಾರರಿಂದ ಪೇಪರ್ ಬಂಡಲ್ ತರಿಸಿದ್ದ ಪಿಸಿ ಅಮಾನತು
ದೂರುದಾರರಿಂದ ಪೇಪರ್ ಬಂಡಲ್ ತರಿಸಿದ್ದ ಪಿಸಿ ಅಮಾನತು
ದಾವಣಗೆರೆ: ಗಾಂಜಾ ಕೇಸ್​ನಲ್ಲಿ ರಿಯಲ್​ ಎಸ್ಟೇಟ್​ ಉದ್ಯಮಿ ಅರೆಸ್ಟ್
ದಾವಣಗೆರೆ: ಗಾಂಜಾ ಕೇಸ್​ನಲ್ಲಿ ರಿಯಲ್​ ಎಸ್ಟೇಟ್​ ಉದ್ಯಮಿ ಅರೆಸ್ಟ್
ಮದುವೆಯಲ್ಲಿ ಕನ್ಯಾದಾನದ ವೇಳೆ ಮಂಗನಿಂದ ಮದುಮಗಳಿಗೆ ಶಾಕ್
ಮದುವೆಯಲ್ಲಿ ಕನ್ಯಾದಾನದ ವೇಳೆ ಮಂಗನಿಂದ ಮದುಮಗಳಿಗೆ ಶಾಕ್
ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ
ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ
ಹುಬ್ಬಳ್ಳಿ ಮರ್ಯಾದೆ ಹತ್ಯೆ: ಆಸ್ಪತ್ರೆ ಬಿಲ್​ ಭರಿಸಲಾಗದೆ ಕುಟುಂಬ ಕಂಗಾಲು
ಹುಬ್ಬಳ್ಳಿ ಮರ್ಯಾದೆ ಹತ್ಯೆ: ಆಸ್ಪತ್ರೆ ಬಿಲ್​ ಭರಿಸಲಾಗದೆ ಕುಟುಂಬ ಕಂಗಾಲು
ಮನೆಗಳಲ್ಲಿ ಕಳುವು ಮಾಡಿದ್ದಲ್ಲದೆ, ಚಹಾ ಮಾಡಿ ಕುಡಿದು ಹೋದ ಕಳ್ಳರು!
ಮನೆಗಳಲ್ಲಿ ಕಳುವು ಮಾಡಿದ್ದಲ್ಲದೆ, ಚಹಾ ಮಾಡಿ ಕುಡಿದು ಹೋದ ಕಳ್ಳರು!