Mike Tyson: ವಿಮಾನದಲ್ಲಿ ಕಿರಿಕಿರಿ ಮಾಡಿದ ಯುವಕ; ಸಿಟ್ಟಿಗೆದ್ದ ಮೈಕ್ ಟೈಸನ್ ಮಾಡಿದ್ದೇನು? ವಿಡಿಯೋ ವೈರಲ್
Mike Tyson punches passenger: ಮಾಜಿ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಮೈಕ್ ಟೈಸನ್ ವಿಮಾನ ಪ್ರಯಾಣದ ನಡುವೆ ಸಿಟ್ಟಿಗೆದ್ದು ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ. ಆದರೆ ಅದಕ್ಕೂ ಮುನ್ನ ಯುವಕ ಮೈಕ್ಗೆ ಕೀಟಲೆ ನೀಡಿದ್ದು ವಿಡಿಯೋದಲ್ಲಿ ದಾಖಲಾಗಿದೆ. ಸದ್ಯ ಅಂತರ್ಜಾಲದಲ್ಲಿ ಘಟನೆಯ ವಿಡಿಯೋ ವೈರಲ್ ಆಗಿದೆ.
ಮಾಜಿ ಬಾಕ್ಸಿಂಗ್ ಚಾಂಪಿಯನ್ ಮೈಕ್ ಟೈಸನ್ (Mike Tyson) ಯುಎಸ್‌ನ ಸ್ಯಾನ್ ಫ್ರಾನ್ಸಿಸ್ಕೊ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡುವ ಮೊದಲು ಸಹಪ್ರಯಾಣಿನೋರ್ವನ ಮೇಲೆ ಹಲ್ಲೆ ನಡೆಸಿದ್ದಾರೆ. ವರದಿಗಳ ಪ್ರಕಾರ, ಟೈಸನ್ ಅವರೊಂದಿಗೆ ಮಾತನಾಡಲು ಓರ್ವ ಯುವಕ ನಿರಂತರವಾಗಿ ಪ್ರಯತ್ನಿಸುತ್ತಿದ್ದ. ಅಲ್ಲದೇ ಕಿರಿಕಿರಿಯನ್ನೂ ಮಾಡುತ್ತಿದ್ದ. ಯುವಕನ ಈ ನಡವಳಿಕೆಯಿಂದ ಕಿರಿಕಿರಿಗೊಂಡ ಮೈಕ್ ಟೈಸನ್, ಉದ್ವೇಗಕ್ಕೆ ಒಳಗಾದರು. ಈ ಘಟನೆಯ ವಿಡಿಯೊವನ್ನು ಮೊದಲು TMZ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಫ್ಲೋರಿಡಾಗೆ ಹೊರಟಿದ್ದ ಜೆಟ್ ಬ್ಲೂ ವಿಮಾನದಲ್ಲಿ ನಡೆದ ಘಟನೆಯ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ವಿಡಿಯೋದಲ್ಲಿ ಟೈಸನ್ ತಮ್ಮ ಸೀಟಿನ ಹಿಂಭಾಗಕ್ಕೆ ಒರಗುತ್ತಿರುವುದನ್ನು ಮೊದಲಿಗೆ ಕಾಣಬಹುದು. ನಂತರ ಯುವಕನ ಮೇಲೆ ಹಲ್ಲೆ ನಡೆಸಿದ ಟೈಸನ್, ಇತರರು ಮಧ್ಯಪ್ರವೇಶಿಸುವವರೆಗೂ ಅಪರಿಚಿತ ವ್ಯಕ್ತಿಯ ತಲೆಗೆ ಪದೇ ಪದೇ ಗುದ್ದಿದ್ದಾರೆ. ವರದಿಗಳ ಪ್ರಕಾರ, ಯುವಕನಿಗೆ ರಕ್ತಸ್ರಾವವಾಗಿದೆ.
ದೈಹಿಕ ವಾಗ್ವಾದಕ್ಕೂ ಮುನ್ನ, ಮಾಜಿ ಬಾಕ್ಸರ್ ಶಾಂತವಾಗಿ ಎದುರಿನ ಸೀಟ್ನಲ್ಲಿ ಕುಳಿತಿದ್ದಾರೆ. ಆಗ ಯುವಕ ಟೈಸನ್ಗೆ ಕಿರಿಕಿರಿ ನೀಡುತ್ತಾ, ವಿವಿಧ ಭಂಗಿಗಳಿಂದ ಹಾಗೂ ಮಾತುಗಳಿಂದ ತೊಂದರೆ ನೀಡಿದ್ದು ಕೂಡ ವಿಡಿಯೋದಲ್ಲಿ ಸೆರೆಯಾಗಿದೆ. ಮತ್ತೋರ್ವ ವ್ಯಕ್ತಿ ವಿಡಿಯೋ ಚಿತ್ರೀಕರಣ ನಡೆಸಿದ್ದು, ಯುವಕ ವಿಡಿಯೋ ತೆಗೆಯುವಾತನತ್ತ ನೋಡುತ್ತಲೇ ಕೃತ್ಯ ಮುಂದುವರೆಸಿದ್ದಾನೆ.
ಮಾಜಿ ಬಾಕ್ಸಿಂಗ್ ಚಾಂಪಿಯನ್ ಯುವಕನಿಗೆ ಗುದ್ದಲು ಆರಂಭಿಸಿದಂತೆಯೇ, ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಪ್ರಯಾಣಿಕರು ಸಮಾಧಾನ ಮಾಡಿದ್ದಾರೆ. ಕೆಲ ಸಮಯದ ನಂತರ ಪೆಟ್ಟು ತಿಂದ ಯುವಕ ವಿಡಿಯೋಗೆ ರಕ್ತಸ್ರಾವವಾಗಿರುವುದನ್ನು ತೋರಿಸಿದ್ದಾನೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.
ವಿಡಿಯೋ ಇಲ್ಲಿದೆ:
#miketyson seemed to lose his cool on a #plane on Wednesday night … repeatedly #punching a man in the face after the guy had apparently annoyed him. Video Footage: TMZ pic.twitter.com/xiy9zgdrhd
— ???? ????????????? ?????? (@NoPlugMedia) April 21, 2022
‘ಈ ಘಟನೆ ದುರದೃಷ್ಟಕರ. ಪ್ರಯಾಣಿಕನೋರ್ವ ಕಿರುಕುಳ ನೀಡಿದ್ದ’ ಎಂದು ಟೈಸನ್ ಪ್ರತಿನಿಧಿಗಳು ಇಮೈಲ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ‘ಅಧಿಕಾರಿಗಳು ಆಗಮಿಸಿ ಘಟನೆಯಲ್ಲಿ ಭಾಗಿಯಾಗಿದ್ದಾರೆಂದು ಹೇಳಲಾದ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದಿದ್ದಾರೆ. ಒಬ್ಬ ವ್ಯಕ್ತಿಗೆ ಘಟನಾ ಸ್ಥಳದಲ್ಲಿಯೇ ಚಿಕಿತ್ಸೆ ನೀಡಲಾಯಿತು’ ಎಂದು ಸ್ಯಾನ್ ಫ್ರಾನ್ಸಿಸ್ಕೋ ಪೊಲೀಸರು ಗುರುವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬಾಕ್ಸಿಂಗ್‌ನಿಂದ ನಿವೃತ್ತರಾಗಿರುವ 55 ವರ್ಷದ ಮೈಕ್ ಟೈಸನ್ ಅವರು ಹಲವಾರು ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ಧಾರೆ. ಪ್ರಸ್ತುತ ‘ಲೈಗರ್’ ಚಿತ್ರದಲ್ಲಿ ಬಣ್ಣಹಚ್ಚುತ್ತಿದ್ದಾರೆ. ಜತೆಗೆ ಉದ್ಯಮಿಯೂ ಆಗಿದ್ದಾರೆ. ಟೈಸನ್ 1987 ರಲ್ಲಿ 20 ನೇ ವಯಸ್ಸಿನಲ್ಲಿ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಕಿರಿಯ ಹೆವಿವೇಯ್ಟ್ ಚಾಂಪಿಯನ್ ಆಗಿದ್ದರು.
ಇದನ್ನೂ ಓದಿ: Liger: ಮೈಕ್ ಟೈಸನ್ ಜತೆ ವಿಜಯ್ ದೇವರಕೊಂಡ ಫೈಟ್; ‘ಲೈಗರ್’ ಮೂಲಕ ಭಾರತೀಯ ಚಿತ್ರರಂಗಕ್ಕೆ ಬಾಕ್ಸಿಂಗ್ ಲೆಜೆಂಡ್ ಎಂಟ್ರಿ
KGF2: ನಿಮ್ಮ ಟೈಮ್ಲೈನ್; ಯೂಟ್ಯೂಬ್ನ ಮಿಲಿಯಗಟ್ಟಲೆ ವ್ಯೂವ್ಸ್, ಕಮೆಂಟ್ಸ್ ಸ್ವಯಂಪ್ರೇರಿತವೆ?