IPL 2022: ಗೇಮ್ ಫಿನಿಷರ್ ಧೋನಿಯ ಆಟ ನೋಡಿ ಬೆಚ್ಚಿಬಿದ್ದ ಕ್ರೀಡಾ ಜಗತ್ತು! ಟ್ವಿಟರ್​ನಲ್ಲಿ ಹೊಗಳಿಕೆಯ ಸುರಿಮಳೆ

MS Dhoni: ಧೋನಿಯ ಈ ಆಟವನ್ನು ನೋಡಿದ ಕೆಲವರು ಅವರನ್ನು ವಿಶ್ವದ ಅತ್ಯುತ್ತಮ ಫಿನಿಶರ್ ಎಂದು ಹೇಳುತ್ತಿದ್ದರೆ, ಇನ್ನೂ ಕೆಲವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಧೋನಿ ಮರಳಬೇಕೆಂದು ಒತ್ತಾಯಿಸುತ್ತಿದ್ದಾರೆ.

IPL 2022: ಗೇಮ್ ಫಿನಿಷರ್ ಧೋನಿಯ ಆಟ ನೋಡಿ ಬೆಚ್ಚಿಬಿದ್ದ ಕ್ರೀಡಾ ಜಗತ್ತು! ಟ್ವಿಟರ್​ನಲ್ಲಿ ಹೊಗಳಿಕೆಯ ಸುರಿಮಳೆ
ಧೋನಿ
Follow us
TV9 Web
| Updated By: ಪೃಥ್ವಿಶಂಕರ

Updated on: Apr 22, 2022 | 2:43 PM

ಎಂಎಸ್ ಧೋನಿ (MS Dhoni) ಡೆತ್ ಓವರ್​ಗಳಲ್ಲಿ ಬೌಲರ್​ಗಳ ಮೇಲೆ ಮುರಿದು ಬೀಳುವ ಅಭ್ಯಾಸ ಇನ್ನೂ ಮುಗಿದಿಲ್ಲ. ವಯಸ್ಸಾದಂತೆಲ್ಲ ಧೋನಿ ಇನ್ನೂ ದೊಡ್ಡ ಫಿನಿಶರ್ ಆಗಿ ಹೊರಹೊಮ್ಮುತ್ತಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್​ (Chennai Super Kings)ಗೆ ರೋಚಕ ಗೆಲುವು ತಂದುಕೊಟ್ಟ ಧೋನಿಗೆ ಈಗ ಕ್ರಿಕೆಟ್ ಜಗತ್ತು ಸೆಲ್ಯೂಟ್ ಹೊಡೆಯುತ್ತಿದೆ. ಗುರುವಾರದಂದು ಧೋನಿ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಚೆನ್ನೈಗೆ ಜಯ ತಂದುಕೊಟ್ಟರು. ಮುಂಬೈ ಇಂಡಿಯನ್ಸ್ ವೇಗದ ಬೌಲರ್ ಜಯದೇವ್ ಉನದ್ಕಟ್ ವಿರುದ್ಧ, ಧೋನಿ ಕೊನೆಯ 4 ಎಸೆತಗಳಲ್ಲಿ 16 ರನ್ ಗಳಿಸಿ ಚೆನ್ನೈಗೆ ಪಂದ್ಯಾವಳಿಯಲ್ಲಿ ಎರಡನೇ ಜಯವನ್ನು ನೀಡಿದರು (CSK vs MI) . ಧೋನಿ 13 ಎಸೆತಗಳಲ್ಲಿ ಅಜೇಯ 28 ರನ್ ಗಳಿಸಿದರು ಮತ್ತು ಅಸಾಧ್ಯವೆಂದು ತೋರುವ ಕೆಲಸವನ್ನು ಸಾಧ್ಯವಾಗಿಸಿದರು. ಧೋನಿಯ ಈ ಇನ್ನಿಂಗ್ಸ್‌ನ ನಂತರ ಜಗತ್ತು ಈ ದಂತಕಥೆಗೆ ಸೆಲ್ಯೂಟ್ ಮಾಡುತ್ತಿದೆ.

ಧೋನಿಯ ಈ ಆಟವನ್ನು ನೋಡಿದ ಕೆಲವರು ಅವರನ್ನು ವಿಶ್ವದ ಅತ್ಯುತ್ತಮ ಫಿನಿಶರ್ ಎಂದು ಹೇಳುತ್ತಿದ್ದರೆ, ಇನ್ನೂ ಕೆಲವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಧೋನಿ ಮರಳಬೇಕೆಂದು ಒತ್ತಾಯಿಸುತ್ತಿದ್ದಾರೆ. ಪ್ರಪಂಚದಾದ್ಯಂತದ ಹಿರಿಯ ಕ್ರಿಕೆಟಿಗರು ಧೋನಿಗೆ ಸೆಲ್ಯೂಟ್ ಮಾಡಿದ್ದಾರೆ, ಇದನ್ನು ಚೆನ್ನೈ ಸೂಪರ್ ಕಿಂಗ್ಸ್ ಕೂಡ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಧೋನಿ ಬಗ್ಗೆ ಕ್ರಿಕೆಟ್ ಜಗತ್ತು ಮೆಚ್ಚುಗೆ ಧೋನಿ ಅವರ ಇನ್ನಿಂಗ್ಸ್ ನೋಡಿದ ಶ್ರೀಕಾಂತ್ ಅವರನ್ನು ಶ್ರೇಷ್ಠ ಫಿನಿಶರ್ ಎಂದು ಕರೆದಿದ್ದಾರೆ. ಈ ಋತುವಿಗೂ ಮುನ್ನ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವವನ್ನು ತೊರೆದಿದ್ದರು. ಇದರ ನಂತರ ಅವರು ಈ ಆವೃತ್ತಿಯ ಬಳಿಕ ಐಪಿಎಲ್‌ನಿಂದ ನಿವೃತ್ತರಾಗುತ್ತಾರೆ ಎಂಬ ಊಹಾಪೋಹ ಇತ್ತು. ಆದರೆ ಧೋನಿ ಆಡಿದ ಇನ್ನಿಂಗ್ಸ್ ನಿಜಕ್ಕೂ ಶ್ಲಾಘನೀಯ. ಇದೀಗ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಬೇಕೆಂಬ ಬೇಡಿಕೆಯೂ ವ್ಯಕ್ತವಾಗಿದೆ.

ಧೋನಿ ಅವರ ಸ್ನೇಹಿತ ಹಾಗೂ ಭಾರತದ ಮಾಜಿ ಕ್ರಿಕೆಟಿಗ ರುದ್ರ ಪ್ರತಾಪ್ ಸಿಂಗ್ ಅವರು ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳುವಂತೆ ಒತ್ತಾಯಿಸಿದ್ದಾರೆ. ಇದೇ ವೇಳೆ ಖ್ಯಾತ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಕೂಡ ಧೋನಿಗಾಗಿ ವಿಶೇಷ ಟ್ವೀಟ್ ಮಾಡಿದ್ದಾರೆ. ಮಹೀಂದ್ರಾಗೆ MAHI ಎಂಬ ಹೆಸರು ಇದೆ ಎಂದು ನನಗೆ ಖುಷಿಯಾಗಿದೆ ಎಂದು ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ.

ಕೊನೆಯ ಓವರ್‌ನ ರೋಚಕತೆ ಕೊನೆಯ ಓವರ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ಗೆ 17 ರನ್‌ಗಳ ಅಗತ್ಯವಿತ್ತು. ಜಯದೇವ್ ಉನಾದ್ಕಟ್ ಬೌಲಿಂಗ್​ನಲ್ಲಿ ಮೊದಲ ಎಸೆತದಲ್ಲೇ ಡ್ವೇನ್ ಪ್ರಿಟೋರಿಯಸ್ ಅವರನ್ನು ಔಟ್ ಮಾಡಿದರು. ಇದಾದ ನಂತರ ಬ್ರಾವೋ ಎರಡನೇ ಎಸೆತದಲ್ಲಿ 1 ರನ್ ಗಳಿಸಿದರು. ಇನ್ನು ಚೆನ್ನೈಗೆ ಕೊನೆಯ 4 ಎಸೆತಗಳಲ್ಲಿ 16 ರನ್ ಬೇಕಿತ್ತು. ಉನದ್ಕತ್ 3ನೇ ಎಸೆತದಲ್ಲಿ ಧೋನಿ ಬೌಲರ್ ತಲೆಯ ಮೇಲೆ ಸಿಕ್ಸರ್ ಬಾರಿಸಿದರು. ಈಗ ಕೊನೆಯ 3 ಎಸೆತಗಳಲ್ಲಿ 10 ರನ್‌ಗಳ ಅಗತ್ಯವಿತ್ತು. ನಂತರ ನಾಲ್ಕನೇ ಎಸೆತದಲ್ಲಿ ಧೋನಿ ಬೌನ್ಸರ್‌ನಲ್ಲಿ ಬೌಂಡರಿ ಬಾರಿಸಿದರು. ಕೊನೆಯ 2 ಎಸೆತಗಳಲ್ಲಿ 6 ರನ್‌ಗಳ ಅಗತ್ಯವಿತ್ತು. ಉನಾದ್ಕಟ್ ಅವರ 5ನೇ ಬಾಲ್‌ನಲ್ಲಿ ಮಿಡ್‌ವಿಕೆಟ್‌ನಲ್ಲಿ ಶಾಟ್ ಆಡಿದ ಧೋನಿ 2 ರನ್ ಗಳಿಸಿದರು. ಕೊನೆಯ ಎಸೆತದಲ್ಲಿ 4 ರನ್‌ಗಳ ಅಗತ್ಯವಿತ್ತು, ಈ ವೇಳೆ ಉನಾದ್ಕಟ್ ಲೋ ಫುಲ್ ಟಾಸ್ ಬಾಲ್‌ ಎಸೆದರು. ಈ ಎಸೆತಕ್ಕೆ ಧೋನಿ ಫೈನ್ ಲೆಗ್ ಕಡೆಗೆ ಬೌಂಡರಿ ಬಾರಿಸಿ ಚೆನ್ನೈಗೆ ಅವಿಸ್ಮರಣೀಯ ಜಯವನ್ನು ತಂದುಕೊಟ್ಟರು.

ಇದನ್ನೂ ಓದಿ: Highest Earners in IPL: ಧೋನಿಯಿಂದ ರೋಹಿತ್​ವರೆಗೆ; ಐಪಿಎಲ್​ನಲ್ಲಿ ಅತಿ ಹೆಚ್ಚು ಆದಾಯ ಗಳಿಸಿದ ಆಟಗಾರರಿವರು

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ