AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಜಯ್ ದೇವರಕೊಂಡ ನಟನೆಯ ‘ಲೈಗರ್’ ಬಗ್ಗೆ ಸಿಕ್ತು ಎರಡೆರಡು ಅಪ್​ಡೇಟ್

ಸಿನಿಮಾ ರಿಲೀಸ್​ಗೂ ಮುನ್ನ ದೊಡ್ಡ ಮಟ್ಟದಲ್ಲಿ ಪ್ರಚಾರ ನೀಡಲಾಗುತ್ತದೆ. ಸಿನಿಮಾಗೆ ಪ್ರಚಾರ ಸಿಗಬೇಕು ಎಂದರೆ ಹಾಡುಗಳ ಪಾತ್ರ ತುಂಬಾನೇ ಮುಖ್ಯವಾಗಿರುತ್ತದೆ. ಈಗ ಹಾಡಿನ ಮೂಲಕ ‘ಲೈಗರ್​’ ಸಿನಿಮಾ ಗಮನ ಸೆಳೆಯಲು ಮುಂದಾಗಿದೆ.

ವಿಜಯ್ ದೇವರಕೊಂಡ ನಟನೆಯ ‘ಲೈಗರ್’ ಬಗ್ಗೆ ಸಿಕ್ತು ಎರಡೆರಡು ಅಪ್​ಡೇಟ್
ವಿಜಯ್-ಅನನ್ಯಾ
TV9 Web
| Edited By: |

Updated on: Jul 06, 2022 | 6:38 PM

Share

ವಿಜಯ್ ದೇವರಕೊಂಡ (Vijay Devarakonda) ನಟನೆಯ ‘ಲೈಗರ್’ ಸಿನಿಮಾ (Liger Movie) ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಈ ಸಿನಿಮಾಗೆ ಪುರಿ ಜಗನ್ನಾಥ್ ( Puri Jagannadh) ಅವರು ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಚಿತ್ರದ ಪೋಸ್ಟರ್ ಹಾಗೂ ಹಾಡು ಸಾಕಷ್ಟು ನಿರೀಕ್ಷೆ ಸೃಷ್ಟಿ ಮಾಡಿದೆ. ಈಗ ಸಿನಿಮಾ ಎರಡು ಹೊಸ ಅಪ್​ಡೇಟ್​ ಸಿಕ್ಕಿದೆ.  ಚಿತ್ರದ ಹೊಸ ಹಾಡು ರಿಲೀಸ್ ಆಗುತ್ತಿರುವ ದಿನಾಂಕದ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

ಸಿನಿಮಾ ರಿಲೀಸ್​ಗೂ ಮುನ್ನ ದೊಡ್ಡ ಮಟ್ಟದಲ್ಲಿ ಪ್ರಚಾರ ನೀಡಲಾಗುತ್ತದೆ. ಸಿನಿಮಾಗೆ ಪ್ರಚಾರ ಸಿಗಬೇಕು ಎಂದರೆ ಹಾಡುಗಳ ಪಾತ್ರ ತುಂಬಾನೇ ಮುಖ್ಯವಾಗಿರುತ್ತದೆ. ಈಗ ಹಾಡಿನ ಮೂಲಕ ‘ಲೈಗರ್​’ ಸಿನಿಮಾ ಗಮನ ಸೆಳೆಯಲು ಮುಂದಾಗಿದೆ. ಈ ಚಿತ್ರದ ‘ಅಕ್ಡಿ ಪಕ್ಡಿ..’ ಹಾಡು ಜುಲೈ 11ರಂದು ರಿಲೀಸ್ ಆಗುತ್ತಿದೆ. ಈ ಹಾಡಿನ ಟೀಸರ್ ಜುಲೈ 8ಕ್ಕೆ ಬಿಡುಗಡೆ ಆಗಲಿದೆ.

ಇದನ್ನೂ ಓದಿ
Image
ಧೂಳೆಬ್ಬಿಸಿದ ವಿಜಯ್ ದೇವರಕೊಂಡ ಹೊಸ ಅವತಾರ; ಇಲ್ಲಿದೆ ‘ಲೈಗರ್’ ಚಿತ್ರದ ಪೋಸ್ಟರ್​
Image
Mike Tyson: ಬಾಕ್ಸಿಂಗ್​ ದಿಗ್ಗಜ ಮೈಕ್​ ಟೈಸನ್​ ಜನ್ಮದಿನಕ್ಕೆ ವಿಶೇಷ ವಿಡಿಯೋ ಮೂಲಕ ವಿಶ್​ ಮಾಡಿದ ‘ಲೈಗರ್​’ ತಂಡ
Image
ಧೂಳೆಬ್ಬಿಸಿದ ‘ಲೈಗರ್​’ ಗ್ಲಿಂಪ್ಸ್​ ವಿಡಿಯೋ; ವಿಜಯ್​ ದೇವರಕೊಂಡಗೆ ಭಾರೀ ಮೆಚ್ಚುಗೆ
Image
20 ಮಿಲಿಯನ್​ ವೀವ್ಸ್​, 5 ಲಕ್ಷ ಲೈಕ್ಸ್​ ಪಡೆದ ‘ಲೈಗರ್​’ ಗ್ಲಿಂಪ್ಸ್​; ವಿಜಯ್​ ದೇವರಕೊಂಡಗೆ ಫ್ಯಾನ್ಸ್​ ಉಘೇ ಉಘೇ

‘ಲೈಗರ್’ ಸಿನಿಮಾ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಹಿಂದಿ, ತೆಲುಗು, ಕನ್ನಡ, ತಮಿಳು ಹಾಗೂ ಮಲಯಾಳಂನಲ್ಲಿ ಸಿನಿಮಾ ತೆರೆಗೆ ಬರುತ್ತಿದೆ. ‘ಅಕ್ಡಿ ಪಕ್ಡಿ..’ ಹಾಡು ಕನ್ನಡದಲ್ಲೂ ಬಿಡುಗಡೆ ಆಗುತ್ತಿದೆ. ಕನ್ನಡ ವರ್ಷನ್​ಗೆ ಸಂತೋಷ್ ವೆಂಕಿ ಮತ್ತು ಸಂಗೀತಾ ರವಿಚಂದ್ರನಾಥ್ ಅವರು ಧ್ವನಿಯಾಗಿದ್ದಾರೆ. ಈ ಹಾಡಿಗಾಗಿ ಫ್ಯಾನ್ಸ್ ಕಾದಿದ್ದಾರೆ.

ವಿಜಯ್ ದೇವರಕೊಂಡ ಅವರು ಇತ್ತೀಚೆಗೆ ಬೋಲ್ಡ್ ಪೋಸ್ಟರ್ ಮೂಲಕ ಗಮನ ಸೆಳೆದಿದ್ದರು. ಅವರು ಅರೆಬೆತ್ತಲೆ ಪೋಸ್ಟರ್ ಹಂಚಿಕೊಂಡಿದ್ದರು. ಈ ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿತ್ತು.

ಕರಣ್​ ಜೋಹರ್​, ಪುರಿ ಜಗನ್ನಾಥ್​, ಚಾರ್ಮಿ ಕೌರ್​ ಹಾಗೂ ಅಪೂರ್ವ ಮೆಹ್ತಾ ಅವರು ‘ಲೈಗರ್​’ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ವಿಜಯ್​ ದೇವರಕೊಂಡ ಅವರಿಗೆ ಜೋಡಿಯಾಗಿ ಅನನ್ಯಾ ಪಾಂಡೆ ಕಾಣಿಸಿಕೊಳ್ಳಲಿದ್ದಾರೆ. ಬಾಕ್ಸಿಂಗ್ ಲೋಕದಲ್ಲಿ ದೊಡ್ಡ ಹೆಸರು ಮಾಡಿದ ಮೈಕ್ ಟೈಸನ್ ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಆಗಸ್ಟ್​ 25ರಂದು ‘ಲೈಗರ್​’ ಸಿನಿಮಾ ಬಿಡುಗಡೆ ಆಗಲಿದೆ. ಜುಲೈ 10ರಂದು ಈ ಚಿತ್ರದ ಟ್ರೇಲರ್​ ರಿಲೀಸ್​ ಆಗಲಿದೆ. ಶೀಘ್ರದಲ್ಲೇ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಲಾಗುವುದು. ತೆಲುಗು, ಕನ್ನಡ, ಹಿಂದಿ, ಮಲಯಾಳಂ ಹಾಗೂ ತಮಿಳಿನಲ್ಲಿ ಈ ಸಿನಿಮಾ ರಿಲೀಸ್​ ಆಗಲಿದೆ. ಪ್ಯಾನ್​ ಇಂಡಿಯಾ ಹೀರೋ ಆಗಿ ಸದ್ದು ಮಾಡಲು ವಿಜಯ್​ ದೇವರಕೊಂಡ ಸಜ್ಜಾಗಿದ್ದಾರೆ. ಸದ್ಯ ಈ ಚಿತ್ರಕ್ಕೆ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಭರದಿಂದ ಸಾಗುತ್ತಿವೆ.

ಇದನ್ನೂ ಓದಿ:Mike Tyson: ಬಾಕ್ಸಿಂಗ್​ ದಿಗ್ಗಜ ಮೈಕ್​ ಟೈಸನ್​ ಜನ್ಮದಿನಕ್ಕೆ ವಿಶೇಷ ವಿಡಿಯೋ ಮೂಲಕ ವಿಶ್​ ಮಾಡಿದ ‘ಲೈಗರ್​’ ತಂಡ 

ಧೂಳೆಬ್ಬಿಸಿದ ವಿಜಯ್ ದೇವರಕೊಂಡ ಹೊಸ ಅವತಾರ; ಇಲ್ಲಿದೆ ‘ಲೈಗರ್’ ಚಿತ್ರದ ಪೋಸ್ಟರ್​

Follow Us
TV9 Web
TV9 Web

TV9 Kannada

Read More
ಮುಡಾ ಹಗರಣ: ಸೈಟ್​​ ಖರೀದಿಸಿದವರಲ್ಲಿ ಹೆಚ್ಚಿದ ಆತಂಕ
ಮುಡಾ ಹಗರಣ: ಸೈಟ್​​ ಖರೀದಿಸಿದವರಲ್ಲಿ ಹೆಚ್ಚಿದ ಆತಂಕ
ಮಳೆಗಾಲದಲ್ಲಿ ಕೆಸರುಮಯ ರಸ್ತೆ, ಆಟದ ಮೈದಾನವೂ ಇಲ್ಲ
ಮಳೆಗಾಲದಲ್ಲಿ ಕೆಸರುಮಯ ರಸ್ತೆ, ಆಟದ ಮೈದಾನವೂ ಇಲ್ಲ
ಸಿದ್ದರಾಮಯ್ಯ ಪ್ರತಿಮೆ ತೆರವುಗೊಳಿಸಿದ್ದಕ್ಕೆ ಸಿಡಿದೆದ್ದ ಕುರುಬ ಸಮುದಾಯ
ಸಿದ್ದರಾಮಯ್ಯ ಪ್ರತಿಮೆ ತೆರವುಗೊಳಿಸಿದ್ದಕ್ಕೆ ಸಿಡಿದೆದ್ದ ಕುರುಬ ಸಮುದಾಯ
ತುಂಗಭದ್ರಾ ಡ್ಯಾಮ್‌ನಿಂದ ಕಾರ್ಖಾನೆಗಳಿಗೆ ಅನಧಿಕೃತ ನೀರು ಸರಬರಾಜು
ತುಂಗಭದ್ರಾ ಡ್ಯಾಮ್‌ನಿಂದ ಕಾರ್ಖಾನೆಗಳಿಗೆ ಅನಧಿಕೃತ ನೀರು ಸರಬರಾಜು
ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು
ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು
ಚಿತ್ರದುರ್ಗದಲ್ಲಿ ಮಹಾಗಣಪತಿ ಉತ್ಸವಕ್ಕೆ ನಗರ ದೇವತೆಗಳ ಮೆರುಗು
ಚಿತ್ರದುರ್ಗದಲ್ಲಿ ಮಹಾಗಣಪತಿ ಉತ್ಸವಕ್ಕೆ ನಗರ ದೇವತೆಗಳ ಮೆರುಗು
ಬೆಂಗಳೂರಿನ ಮಟನ್ ಶಾಪ್‌ನಲ್ಲಿ ನಡೀತಿತ್ತು ಡ್ರಗ್ಸ್ ಮಾರಾಟ! ಇಬ್ಬರ ಬಂಧನ
ಬೆಂಗಳೂರಿನ ಮಟನ್ ಶಾಪ್‌ನಲ್ಲಿ ನಡೀತಿತ್ತು ಡ್ರಗ್ಸ್ ಮಾರಾಟ! ಇಬ್ಬರ ಬಂಧನ
ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್: ಕನ್ನಡಿಗ ಸಚಿನ್ ಸಾಳುಂಕೆಗೆ ಬೆಳ್ಳಿ ಪದಕ
ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್: ಕನ್ನಡಿಗ ಸಚಿನ್ ಸಾಳುಂಕೆಗೆ ಬೆಳ್ಳಿ ಪದಕ
ಧಾರಾಕಾರ ಮಳೆಗೆ ಮಂಡ್ಯ, ಹನೂರು ತತ್ತರ: ಎಂ.ಎಂ. ಹಿಲ್ಸ್‌ನಲ್ಲಿ ಗುಡ್ಡ ಕುಸಿತ
ಧಾರಾಕಾರ ಮಳೆಗೆ ಮಂಡ್ಯ, ಹನೂರು ತತ್ತರ: ಎಂ.ಎಂ. ಹಿಲ್ಸ್‌ನಲ್ಲಿ ಗುಡ್ಡ ಕುಸಿತ
ಬೆಂಗಳೂರಿನ ಅಂಚೆಪಾಳ್ಯದಲ್ಲಿ ಚಿರತೆ ಪ್ರತ್ಯಕ್ಷ
ಬೆಂಗಳೂರಿನ ಅಂಚೆಪಾಳ್ಯದಲ್ಲಿ ಚಿರತೆ ಪ್ರತ್ಯಕ್ಷ