ಪಶ್ಚಿಮ ಬಂಗಾಳದಲ್ಲಿ ‘ರಾಮಾಯಣ’ ಚಿತ್ರಕ್ಕೆ ತೆರಿಗೆ ವಿನಾಯಿತಿ: ಮುಖ್ಯಮಂತ್ರಿ ಸುವೇಂಧು ಅಧಿಕಾರಿ ಘೋಷಣೆ
ರಣಬೀರ್ ಕಪೂರ್ ಹಾಗೂ ಯಶ್ ಅಭಿನಯದ ಬೃಹತ್ ಬಜೆಟ್‌ನ 'ರಾಮಾಯಣ' ಸಿನಿಮಾಗೆ ಪಶ್ಚಿಮ ಬಂಗಾಳ ಸರ್ಕಾರ ತೆರಿಗೆ ವಿನಾಯಿತಿ ಘೋಷಿಸಿದೆ. ನಿತೇಶ್ ತಿವಾರಿ ನಿರ್ದೇಶನದ ಈ ಪೌರಾಣಿಕ ಚಿತ್ರವು 2026ರ ದೀಪಾವಳಿ ಸಂದರ್ಭದಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಬೇರೆ ರಾಜ್ಯಗಳಲ್ಲಿ ಕೂಡ ತೆರಿಗೆ ವಿನಾಯಿತಿ ಸಿಗುವ ಸಾಧ್ಯತೆ ಇದೆ.

ಬಾಲಿವುಡ್‌ನ ಬಹುನಿರೀಕ್ಷಿತ ಹಾಗೂ ಬೃಹತ್ ಬಜೆಟ್‌ನ ‘ರಾಮಾಯಣ’ ಚಿತ್ರಕ್ಕೆ ಪಶ್ಚಿಮ ಬಂಗಾಳ ಸರ್ಕಾರವು ತೆರಿಗೆ ವಿನಾಯಿತಿ ಘೋಷಿಸಿದೆ. ವಿಜಯದಶಮಿ (ದಸರಾ) ಹಬ್ಬದ ಶುಭ ಸಂದರ್ಭದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂಧು ಅಧಿಕಾರಿ ಈ ಪ್ರಮುಖ ನಿರ್ಧಾರವನ್ನು ಪ್ರಕಟಿಸಿದ್ದಾರೆ. ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರವು ದೀಪಾವಳಿ ಹಬ್ಬದ ಪ್ರಯುಕ್ತ ನವೆಂಬರ್ 5ರಂದು ಜಗತ್ತಿನಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.
ವಿಜಯದಶಮಿಯಂದು ಸುದ್ದಿ ಸಂಸ್ಥೆ ‘ಎಎನ್‌ಐ’ ಜೊತೆ ಮಾತನಾಡಿದ ಸಿಎಂ ಸುವೇಂಧು ಅಧಿಕಾರಿ, ‘ರಾಮಾಯಣ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಲಾಗಿದೆ. ಈ ಹಿಂದೆ ದಿ ಕೇರಳ ಸ್ಟೋರಿ, ದಿ ಕಾಶ್ಮೀರ್ ಫೈಲ್ಸ್ ಮತ್ತು ದಿ ಬೆಂಗಾಲ್ ಫೈಲ್ಸ್ ಚಿತ್ರಗಳಿಗೆ ತೆರಿಗೆ ವಿನಾಯಿತಿ ನೀಡಿದಂತೆಯೇ, ರಾಮಾಯಣ ಚಿತ್ರಕ್ಕೂ ಇದು ಅನ್ವಯಿಸಲಿದೆ. ಮುಂಬರುವ ದಿನಗಳಲ್ಲಿ ಶ್ರೀಕೃಷ್ಣ, ಅರ್ಜುನ ಹಾಗೂ ಮಹಾಭಾರತಕ್ಕೆ ಸಂಬಂಧಿಸಿದ ಇನ್ನಷ್ಟು ಪೌರಾಣಿಕ ಸಿನಿಮಾಗಳನ್ನು ನಾವು ನೋಡಲಿದ್ದೇವೆ’ ಎಂದರು.
#WATCH | Kolkata: West Bengal CM Suvendu Adhikari says, “The Ramayana film has been made tax-free. The Kerala Story, The Kashmir Files, and The Bengal Files—all of these will be (or have been) made tax-free, and the same will apply to Ramayana. In the days to come, we will see films on Shri Krishna and Arjuna, as well as the Mahabharata…”
He also says, “We also carry a deep pain in our hearts regarding the incident at the Durga Puja pandal in Chorbagan area. From this very stage, we offered prayers for those affected as well. We observed a moment of silence. Everyone stands with the grieving family.”
— ANI (@ANI) October 20, 2026
ಇದೇ ಸಂದರ್ಭದಲ್ಲಿ ಕೋಲ್ಕತ್ತಾದ ಚೋರ್‌ಬಗಾನ್ ಪ್ರದೇಶದ ದುರ್ಗಾಪೂಜಾ ಪಂಡಾಲ್‌ನಲ್ಲಿ ನಡೆದ ದುರಂತ ಘಟನೆಗೆ ಸಂತಾಪ ಸೂಚಿಸಿದ ಸಿಎಂ, ದುರಂತದಲ್ಲಿ ಸಂತ್ರಸ್ತರಾದ ಕುಟುಂಬಸ್ಥರಿಗೆ ಶ್ರದ್ಧಾಂಜಲಿ ಸಲ್ಲಿಸಿ, ಒಂದು ನಿಮಿಷ ಮೌನ ಆಚರಿಸಿದರು.
ಸುಮಾರು 4,000 ಕೋಟಿ ರೂಪಾಯಿ ಬೃಹತ್ ವೆಚ್ಚದಲ್ಲಿ ಎರಡು ಭಾಗಗಳಾಗಿ ನಿರ್ಮಾಣವಾಗುತ್ತಿರುವ ಪೌರಾಣಿಕ ಕಥಾಹಂದರದ ‘ರಾಮಾಯಣ’ ಸಿನಿಮಾದಲ್ಲಿ ಶ್ರೀರಾಮನಾಗಿ ರಣಬೀರ್ ಕಪೂರ್, ರಾವಣನಾಗಿ ರಾಕಿಂಗ್ ಸ್ಟಾರ್ ಯಶ್, ಸೀತೆಯಾಗಿ ಸಾಯಿ ಪಲ್ಲವಿ, ಲಕ್ಷ್ಮಣನಾಗಿ ರವಿ ದುಬೆ, ಹನುಮಂತನಾಗಿ ಸನ್ನಿ ಡಿಯೋಲ್ ಅವರು ಅಭಿನಯಿಸಿದ್ದಾರೆ.
ಇದಲ್ಲದೆ ರಕುಲ್ ಪ್ರೀತ್ ಸಿಂಗ್, ವಿವೇಕ್ ಒಬೆರಾಯ್, ಅರುಣ್ ಗೋವಿಲ್, ಲಾರಾ ದತ್ತಾ, ಶೋಭನಾ, ಶೀಬಾ ಚಡ್ಡಾ, ಫೈಸಲ್ ಮಲಿಕ್ ಸೇರಿದಂತೆ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ.
ಇದನ್ನೂ ಓದಿ: ‘ರಾಮಾಯಣ’ ಮುಂಗಡ ಟಿಕೆಟ್ ಬುಕಿಂಗ್ ಶುರು, ನಿರೀಕ್ಷೆಗಿಂತಲೂ ಉತ್ತಮ ಆರಂಭ
ನಮಿತ್ ಮಲ್ಹೋತ್ರಾ ಅವರ ‘ಪ್ರೈಮ್ ಫೋಕಸ್ ಸ್ಟುಡಿಯೋಸ್’, ಯಶ್ ಅವರ ‘ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್’ ಮತ್ತು ‘DNEG’ ಸಂಸ್ಥೆಗಳು ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿವೆ. ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾದಾಗ ವಿಎಫ್‌ಎಕ್ಸ್ ಮತ್ತು ಪಾತ್ರವರ್ಗದ ಬಗ್ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿತ್ತಾದರೂ, ನಂತರ ಬಿಡುಗಡೆಯಾದ ಟ್ರೇಲರ್ ಪ್ರೇಕ್ಷಕರಿಂದ ಉತ್ತಮ ಮೆಚ್ಚುಗೆ ಪಡೆದುಕೊಂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




