AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರಾಮಾಯಣ’ ಅಡ್ವಾನ್ಸ್ ಬುಕಿಂಗ್, ಅಮೆರಿಕದಲ್ಲಿ ಭರ್ಜರಿ ಆರಂಭ ಪಡೆದ ಸಿನಿಮಾ

‘ರಾಮಾಯಣ’ ಸಿನಿಮಾದ ಭರ್ಜರಿ ಪ್ರಚಾರವನ್ನು ಚಿತ್ರತಂಡ ಮಾಡುತ್ತಿದೆ. ಸಿನಿಮಾ ಅನ್ನು ಹಾಲಿವುಡ್​​ ಸಿನಿಮಾಗಳ ರೀತಿಯಲ್ಲಿ ಭಾರಿ ಅದ್ಧೂರಿಯಾಗಿ ವಿತರಣೆ ಮಾಡಲಾಗುತ್ತಿದೆ. ಸೋನಿ ಪಿಕ್ಚರ್ಸ್​​ನವರು ಈ ಸಿನಿಮಾದ ವಿದೇಶಿ ವಿತರಣೆ ಮಾಡುತ್ತಿದ್ದಾರೆ. ಅಮೆರಿಕ ಸೇರಿದಂತೆ ಕೆಲವೆಡೆ ಈಗಾಗಲೇ ಸಿನಿಮಾದ ಮುಂಗಡ ಬುಕಿಂಗ್ ಆರಂಭ ಆಗಿದ್ದು, ಅಮೆರಿಕದಲ್ಲಿ ಭರ್ಜರಿ ಆರಂಭವನ್ನೇ ಈ ಸಿನಿಮಾ ಪಡೆದುಕೊಂಡಿದೆ.

‘ರಾಮಾಯಣ’ ಅಡ್ವಾನ್ಸ್ ಬುಕಿಂಗ್, ಅಮೆರಿಕದಲ್ಲಿ ಭರ್ಜರಿ ಆರಂಭ ಪಡೆದ ಸಿನಿಮಾ
Ramayana Movie
ಮಂಜುನಾಥ ಸಿ.
|

Updated on: Oct 18, 2026 | 3:30 PM

Share

ಮುಖ್ಯಾಂಶಗಳು

  • ‘ರಾಮಾಯಣ’ ಸಿನಿಮಾ ಅಡ್ವಾನ್ಸ್ ಬುಕಿಂಗ್
  • ಅಮೆರಿಕದಲ್ಲಿ ಆರಂಭವಾಗಿದೆ ಮುಂಗಡ ಬುಕಿಂಗ್
  • ಒಳ್ಳೆಯ ಆರಂಭವನ್ನು ‘ರಾಮಾಯಣ’ ಪಡೆದುಕೊಂಡಿದೆ

ರಣ್‌ಬೀರ್ ಕಪೂರ್, ಯಶ್ ಮತ್ತು ಸಾಯಿ ಪಲ್ಲವಿ ನಟನೆಯ ಬಹುನಿರೀಕ್ಷಿತ ‘ರಾಮಾಯಣ: ರೈಸ್ ಆಫ್ ಎ ಲೆಜೆಂಡ್’ ಸಿನಿಮಾ ಬಿಡುಗಡೆಗೆ ಕೆಲ ದಿನಗಳಷ್ಟೆ ಬಾಕಿ ಇದೆ. ಇದು ಭಾರತದ ಈ ವರೆಗಿನ ಅತಿ ದೊಡ್ಡ ಬಜೆಟ್ ಸಿನಿಮಾ ಎನಿಸಿಕೊಂಡಿದೆ. ಸಿನಿಮಾದ ಭರ್ಜರಿ ಪ್ರಚಾರವನ್ನು ಚಿತ್ರತಂಡ ಮಾಡುತ್ತಿದೆ. ಸಿನಿಮಾ ಅನ್ನು ಹಾಲಿವುಡ್​​ ಸಿನಿಮಾಗಳ ರೀತಿಯಲ್ಲಿ ಭಾರಿ ಅದ್ಧೂರಿಯಾಗಿ ವಿತರಣೆ ಮಾಡಲಾಗುತ್ತಿದೆ. ಸೋನಿ ಪಿಕ್ಚರ್ಸ್​​ನವರು ಈ ಸಿನಿಮಾದ ವಿದೇಶಿ ವಿತರಣೆ ಮಾಡುತ್ತಿದ್ದಾರೆ. ಅಮೆರಿಕ ಸೇರಿದಂತೆ ಕೆಲವೆಡೆ ಈಗಾಗಲೇ ಸಿನಿಮಾದ ಮುಂಗಡ ಬುಕಿಂಗ್ ಆರಂಭ ಆಗಿದ್ದು, ಅಮೆರಿಕದಲ್ಲಿ ಭರ್ಜರಿ ಆರಂಭವನ್ನೇ ಈ ಸಿನಿಮಾ ಪಡೆದುಕೊಂಡಿದೆ.

‘ರಾಮಾಯಣ’ ಚಿತ್ರವು ಅಮೆರಿಕದಲ್ಲಿ ಪ್ರೀಮಿಯರ್ ಮುಂಗಡ ಬುಕಿಂಗ್‌ನಲ್ಲಿ 3,17,900 ಡಾಲರ್‌ಗಳನ್ನು (ಮೂರು ಕೋಟಿಗೂ ಹೆಚ್ಚು ಮೊತ್ತ) ಗಳಿಕೆ ಮಾಡಿದೆ. ಇದು ಕೇವಲ ಆರಂಭಿಕ ಸಂಖ್ಯೆ ಆಗಿದೆ. ಸಿನಿಮಾ ನವೆಂಬರ್ 5ರಂದು ರಿಲೀಸ್ ಆಗಲಿದ್ದು, ಆ ವೇಳೆಗಾಗಲೇ ಈ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಹೆಚ್ಚಳ ಆಗುವ ನಿರೀಕ್ಷೆ ಇದೆ. ಸಿನಿಮಾದ ಸರಾಸರಿ ಟಿಕೆಟ್ ಬೆಲೆಯನ್ನು 20 ಡಾಲರ್​​ಗೆ ನಿಗದಿಪಡಿಸಲಾಗಿದ್ದು, ವಿದೇಶದಲ್ಲಿ ನೆಲೆಸಿರುವ ಭಾರತೀಯರ ಜೊತೆಗೆ ವಿದೇಶಿಗರನ್ನು ಸಹ ಈ ಸಿನಿಮಾದತ್ತ ಸೆಳೆಯುವ ಪ್ರಯತ್ನವನ್ನು ನಿರ್ಮಾಪಕ ನಮಿತ್ ಮಲ್ಹೋತ್ರಾ ಮಾಡುತ್ತಿದ್ದಾರೆ.

ಸಿನಿಮಾ ಅನ್ನು ಹಾಲಿವುಡ್​​ನಲ್ಲಿ ದೊಡ್ಡ ಮಟ್ಟದಲ್ಲಿ ತಲುಪಿಸುವ ಉದ್ದೇಶದಿಂದ ಅಮೆರಿಕದ ಕೆಲವು ಪ್ರತಿಷ್ಠಿತ ಕಾಮಿಕಾನ್​​ಗಳಲ್ಲಿ ಭಾಗವಹಿಸಿ ಸಿನಿಮಾದ ಪ್ರಚಾರ ಮಾಡಲಾಗಿದೆ. ಸಿನಿಮಾದ ಗುಣಮಟ್ಟವನ್ನು ಅಲ್ಲಿ ಪ್ರದರ್ಶಿಸಲಾಗಿದೆ. ಸಿನಿಮಾದ ಇಂಗ್ಲೀಷ್ ಆವೃತ್ತಿಯ ಟ್ರೈಲರ್ ಅನ್ನು ಸಹ ರಿಲೀಸ್ ಮಾಡಲಾಗಿದ್ದು, ಟ್ರೈಲರ್​​ಗೆ ಬಹಳ ಒಳ್ಳೆಯ ಪ್ರತಿಕ್ರಿಯೆ ಸಹ ವ್ಯಕ್ತವಾಗಿದೆ. ಸೋನಿ ಪಿಕ್ಚರ್ಸ್ ಸಹ ವಿದೇಶದಲ್ಲಿ ಸಿನಿಮಾದ ಬೆಂಬಲವಾಗಿ ನಿಂತಿರುವ ಕಾರಣದಿಂದಾಗಿ ವಿದೇಶಗಳಲ್ಲಿ ಸಿನಿಮಾ ಉತ್ತಮ ಗಳಿಕೆ ಮಾಡುವ ನಿರೀಕ್ಷೆ ದೊಡ್ಡ ಮಟ್ಟದಲ್ಲಿದೆ. ಭಾರತದಲ್ಲೂ ಸಹ ಸಿನಿಮಾದ ಮುಂಗಡ ಬುಕಿಂಗ್ ಅನ್ನು ಮುಂಚಿತವಾಗಿಯೇ ಆರಂಭ ಮಾಡುವ ಸಾಧ್ಯತೆ ಇದೆ.

ಇದನ್ನೂ ಓದಿ:ರಣ್​ಬೀರ್ ಕಪೂರ್ ಅನ್ನು ರಾಮನ ಪಾತ್ರದಲ್ಲಿ ಒಪ್ಪಲಾಗದು, ತಗಾದೆ ತೆಗೆದ ಹಿರಿಯ ನಟ

‘ರಾಮಾಯಣ’ ಸಿನಿಮಾವು ಭಾರತದ ಈ ವರೆಗಿನ ಅತಿ ದೊಡ್ಡ ಬಜೆಟ್​​ನ ಸಿನಿಮಾ ಎನ್ನಲಾಗುತ್ತಿದೆ. ಸಿನಿಮಾನಲ್ಲಿ ರಣ್​​ಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ, ಯಶ್ ಅವರು ರಾವಣನ ಪಾತ್ರದಲ್ಲಿ ನಟನೆ ಮಾಡಿದ್ದಾರೆ. ಸನ್ನಿ ಡಿಯೋಲ್ ಹನುಮಂತನಾಗಿ ನಟಿಸಿದ್ದು, ಸಿನಿಮಾನಲ್ಲಿ ರಕುಲ್ ಪ್ರೀತ್ ಸಿಂಗ್, ಕಾಜಲ್ ಅಗರ್ವಾಲ್ ಸೇರಿದಂತೆ ಇನ್ನೂ ಹಲವು ಖ್ಯಾತನಾಮ ನಟ-ನಟಿಯರು ನಟನೆ ಮಾಡಿದ್ದಾರೆ. ಸಿನಿಮಾಕ್ಕೆ ವಿಶ್ವ ಸಿನಿಮಾ ಸಂಗೀತದ ದಿಗ್ಗಜರುಗಳಾದ ಎಆರ್ ರೆಹಮಾನ್ ಮತ್ತು ಹಾನ್ಸ್ ಜೀಮರ್ ಅವರುಗಳು ಸಂಗೀತ ನೀಡಿದ್ದಾರೆ. ಸಿನಿಮಾ ಅನ್ನು ‘ದಂಗಲ್’ ಖ್ಯಾತಿಯ ನಿತೀಶ್ ತಿವಾರಿ ನಿರ್ದೇಶನ ಮಾಡಿದ್ದಾರೆ. ಸಿನಿಮಾ ನವೆಂಬರ್ 5ರಂದು ರಿಲೀಸ್ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಪೋಲೆಂಡ್‌ನ ಕ್ರಾಕೋವ್‌ನಲ್ಲಿ ಗುಂಡಿನ ದಾಳಿ; 5 ಜನ ಸಾವು
ಪೋಲೆಂಡ್‌ನ ಕ್ರಾಕೋವ್‌ನಲ್ಲಿ ಗುಂಡಿನ ದಾಳಿ; 5 ಜನ ಸಾವು
ಸ್ಟಿಂಗ್​​​ನಿಂದ ಕರ್ನಾಟಕ ತಲೆ ತಗ್ಗಿಸುವಂತಾಗಿದೆ ಎಂದ ಡಾ. ಕೆ. ಸುಧಾಕರ್
ಸ್ಟಿಂಗ್​​​ನಿಂದ ಕರ್ನಾಟಕ ತಲೆ ತಗ್ಗಿಸುವಂತಾಗಿದೆ ಎಂದ ಡಾ. ಕೆ. ಸುಧಾಕರ್
ವೈಷ್ಣವಿ ಸಾವಿಗೆ ಕಾರಣವಾಯ್ತಾ ಅರಮನೆ ರಸ್ತೆಯ ಪ್ರೀ-ವೆಡ್ಡಿಂಗ್ ಶೂಟಿಂಗ್?
ವೈಷ್ಣವಿ ಸಾವಿಗೆ ಕಾರಣವಾಯ್ತಾ ಅರಮನೆ ರಸ್ತೆಯ ಪ್ರೀ-ವೆಡ್ಡಿಂಗ್ ಶೂಟಿಂಗ್?
ದೀಪಾವಳಿಗೆ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ ಅಯೋಧ್ಯೆ ರಾಮ ಮಂದಿರ
ದೀಪಾವಳಿಗೆ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ ಅಯೋಧ್ಯೆ ರಾಮ ಮಂದಿರ
ಬೆಂಗಳೂರಲ್ಲಿ ಸರಣಿ ಕೊಲೆ ಕೇಸ್: ತಮಿಳುನಾಡಿನ ಸೇಲಂನಲ್ಲಿ ಎರಡು ಶವ ಪತ್ತೆ
ಬೆಂಗಳೂರಲ್ಲಿ ಸರಣಿ ಕೊಲೆ ಕೇಸ್: ತಮಿಳುನಾಡಿನ ಸೇಲಂನಲ್ಲಿ ಎರಡು ಶವ ಪತ್ತೆ
30 ಲಕ್ಷಕ್ಕೂ ಹೆಚ್ಚು ದೀಪಗಳು; ಸರಯೂ ದಡದಲ್ಲಿ ಮತ್ತೊಂದು ವಿಶ್ವದಾಖಲೆ
30 ಲಕ್ಷಕ್ಕೂ ಹೆಚ್ಚು ದೀಪಗಳು; ಸರಯೂ ದಡದಲ್ಲಿ ಮತ್ತೊಂದು ವಿಶ್ವದಾಖಲೆ
ಬೆಲೆ ಏರಿಕೆ ಭಾಗ್ಯದ ಸರ್ಕಾರವಲ್ಲ, ಗ್ಯಾರಂಟಿಗಳ ಸರ್ಕಾರ: ಡಿಕೆ ಸುರೇಶ್
ಬೆಲೆ ಏರಿಕೆ ಭಾಗ್ಯದ ಸರ್ಕಾರವಲ್ಲ, ಗ್ಯಾರಂಟಿಗಳ ಸರ್ಕಾರ: ಡಿಕೆ ಸುರೇಶ್
ಮಗನ ಸಿನಿಮಾದಿಂದ ಹೊರಹಾಕಿದ ಪ್ರಿಯಾಂಕಾ ಉಪೇಂದ್ರ: ಅಳಲು ತೋಡಿಕೊಂಡ ನಿರ್ದೇಶಕ
ಮಗನ ಸಿನಿಮಾದಿಂದ ಹೊರಹಾಕಿದ ಪ್ರಿಯಾಂಕಾ ಉಪೇಂದ್ರ: ಅಳಲು ತೋಡಿಕೊಂಡ ನಿರ್ದೇಶಕ
ಎಥೆನಾಲ್ ವಿಚಾರದಲ್ಲಿ ರಾಜ್ಯ ಸರ್ಕಾರ ಸುಳ್ಳು ಆರೋಪ ಮಾಡ್ತಿದೆ: ಜೋಶಿ
ಎಥೆನಾಲ್ ವಿಚಾರದಲ್ಲಿ ರಾಜ್ಯ ಸರ್ಕಾರ ಸುಳ್ಳು ಆರೋಪ ಮಾಡ್ತಿದೆ: ಜೋಶಿ
ಪ್ರಿಯಾಂಕ್ ಖರ್ಗೆ ವಿರುದ್ಧ ಮರುಳಾರಾಧ್ಯ ಸ್ವಾಮೀಜಿ ಆಕ್ಷೇಪಾರ್ಹ ಹೇಳಿಕೆ
ಪ್ರಿಯಾಂಕ್ ಖರ್ಗೆ ವಿರುದ್ಧ ಮರುಳಾರಾಧ್ಯ ಸ್ವಾಮೀಜಿ ಆಕ್ಷೇಪಾರ್ಹ ಹೇಳಿಕೆ