ಜೀ ಕನ್ನಡದಲ್ಲಿ ಬರುತ್ತಿದೆ ‘ಜಂಗಲ್ ಪವರ್’: ಆಧುನಿಕ ಯುಗದಿಂದ ಆದಿಮಾನವನ ಬದುಕಿನತ್ತ ರೋಚಕ ಪಯಣ
ಜೀ ಕನ್ನಡ ಹಾಗೂ ಜೀ5ನಲ್ಲಿ ಶೀಘ್ರದಲ್ಲೇ ಪ್ರಸಾರವಾಗಲಿರುವ ಜಂಗಲ್ ಪವರ್ ರಿಯಾಲಿಟಿ ಶೋ ಪ್ರೋಮೋ ಬಿಡುಗಡೆಯಾಗಿದೆ. ಅಕುಲ್ ಬಾಲಾಜಿ ನಿರೂಪಣೆಯ ಈ ಕಾರ್ಯಕ್ರಮವು ಆಧುನಿಕ ಯಂತ್ರಗಳ ಬದುಕಿನಿಂದ ಆದಿಮಾನವನ ಕಠಿಣ ಪರಿಸರಕ್ಕೆ ಕರೆದೊಯ್ಯುತ್ತದೆ. ಬದುಕಿನ ನಿಯಮಗಳನ್ನು ಬದಲಿಸುವ ಈ ಸಾಹಸಮಯ ಆಟಕ್ಕೆ ಸ್ಪರ್ಧಿಗಳು ಹೇಗೆ ಸಜ್ಜಾಗುತ್ತಾರೆ ಎಂಬ ಕುತೂಹಲ ಈಗ ಕಿರುತೆರೆ ವೀಕ್ಷಕರಲ್ಲಿ ಭಾರಿ ಹೆಚ್ಚಿದೆ.

ಮುಖ್ಯಾಂಶಗಳು
- ಯಂತ್ರಗಳ ಜಗತ್ತಿನಿಂದ ಕಾಡಿನ ಸವಾಲಿಗೆ
- : 'ಜಂಗಲ್ ಪವರ್' ಪ್ರೋಮೋದಲ್ಲಿ ಕುತೂಹಲದ ಕಥೆ
- ಖಡಕ್ ಲುಕ್ನಲ್ಲಿ ಅಕುಲ್ ಬಾಲಾಜಿ ಎಂಟ್ರಿ
ಕನ್ನಡ ಕಿರುತೆರೆಯಲ್ಲಿ ಹೊಸದೊಂದು ರಿಯಾಲಿಟಿ ಶೋ ತೆರೆದುಕೊಳ್ಳುತ್ತಿದೆ. ಬದುಕಿನ ನಿಯಮಗಳನ್ನೇ ಬದಲಿಸುವ ‘ಜಂಗಲ್ ಪವರ್’ ಕಾರ್ಯಕ್ರಮದ ಪ್ರೋಮೋ ಈಗ ಸದ್ದು ಮಾಡುತ್ತಿದೆ.b ಮತ್ತು ಜೀ5ನಲ್ಲಿ ಶೀಘ್ರದಲ್ಲೇ ಈ ಶೋ ಪ್ರಸಾರವಾಗಲಿದೆ. ನಟ ಹಾಗೂ ನಿರೂಪಕ ಅಕುಲ್ ಬಾಲಾಜಿ ಈ ಕಾರ್ಯಕ್ರಮದ ಪ್ರೋಮೋದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಎಂದಿನಂತೆ ತಮ್ಮ ಖಡಕ್ ಶೈಲಿಯಲ್ಲಿ ಈ ಶೋನ ಹೋಸ್ಟ್ ಮಾಡಲಿದ್ದಾರೆ.
ಯಂತ್ರಗಳಿಂದ ಕಾಡಿನ ಬದುಕಿನತ್ತ ಪಯಣ
ಪ್ರೋಮೋ ಆರಂಭದಲ್ಲಿ ಆಧುನಿಕ ತಂತ್ರಜ್ಞಾನ ಮತ್ತು ರೊಬೊಟಿಕ್ ಜಗತ್ತಿನ ದೃಶ್ಯಗಳಿವೆ. ಮನುಷ್ಯನ ದುರಾಸೆ ಎಲ್ಲಿಂದ ಶುರುವಾಯಿತು ಎಂಬ ವಿವರಣೆ ಇದೆ. ಮೆಟ್ರೋ ಸಾಲದೆ ಯಂತ್ರ ಬೇಕಾಯಿತು. ಭೂಮಿ ಸಾಲದೆ ಚಂದ್ರ ಬೇಕಾಯಿತು. ಕಾಲು ಸಾಲದೆ ಚಕ್ರ ಬೇಕಾಯಿತು. ಊರು ಸಾಲದೆ ಸಾಮ್ರಾಜ್ಯ ಬೇಕಾಯಿತು ಎಂಬ ಸಾಲುಗಳು ಗಮನ ಸೆಳೆಯುತ್ತವೆ.
View this post on Instagram
ಪೂರ್ವಜರ ಬದುಕೇ ಇಲ್ಲಿನ ಆಟ
ಆಧುನಿಕ ಸೌಲಭ್ಯಗಳ ನಡುವೆ ಬೆಳೆದ ಮನುಷ್ಯನಿಗೆ ಪ್ರಕೃತಿಯ ಸವಾಲು ಎದುರಾಗುತ್ತದೆ. ಬೇಟೆಯೇ ಊಟ ನೀಡುತ್ತಿತ್ತು. ಬದುಕಿನ ತಂತ್ರವೇ ದಾರಿ ತೋರಿಸುತ್ತಿತ್ತು. ಆಟ ಬದಲಾಗಿಲ್ಲ. ಬದಲಾಗಿರುವುದು ಆಟಗಾರರು ಮಾತ್ರ ಎಂಬ ಸಂದೇಶ ಪ್ರೋಮೋದಲ್ಲಿದೆ. ನಮ್ಮ ಪೂರ್ವಜರು ಬದುಕಿದ ಬದುಕೇ ಇಲ್ಲಿನ ಆಟವಾಗಿ ಬದಲಾಗಿದೆ.
ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ
ದಟ್ಟ ಕಾಡು ಮತ್ತು ಬೆಟ್ಟಗುಡ್ಡಗಳ ನಡುವೆ ಈ ರಿಯಾಲಿಟಿ ಶೋ ನಡೆಯಲಿದೆ. ಆದಿಮಾನವರಂತೆ ಕಲ್ಲು ತಿಕ್ಕಿ ಬೆಂಕಿ ಹಚ್ಚುವುದು. ಬೇಟೆ ಮತ್ತು ಕಠಿಣ ಸವಾಲುಗಳನ್ನು ಎದುರಿಸುವ ದೃಶ್ಯಗಳು ಪ್ರೋಮೋದಲ್ಲಿವೆ. ಸುಂದರ ಜಲಪಾತದ ಹಿನ್ನೆಲೆಯಲ್ಲಿ ಅಕುಲ್ ಬಾಲಾಜಿ ಖಡಕ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಆಟಕ್ಕೆ ನೀವು ಸಿದ್ಧರಿದ್ದೀರಾ ಎಂಬ ಪ್ರಶ್ನೆಯನ್ನು ವೀಕ್ಷಕರ ಮುಂದಿಡಲಾಗಿದೆ.
ಇದನ್ನೂ ಓದಿ: ಜೀ ಕನ್ನಡದಲ್ಲಿ ನವೆಂಬರ್ 16ರಿಂದ ‘ಗೌರಿಪುತ್ರ’ ಧಾರಾವಾಹಿ ಪ್ರಸಾರ
ಶೀಘ್ರದಲ್ಲೇ ಜೀ ಕನ್ನಡ ಮತ್ತು ಜೀ5ನಲ್ಲಿ
ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಎಂಬ ಹಿರಿಮೆಯೊಂದಿಗೆ ಜಂಗಲ್ ಪವರ್ ಬರುತ್ತಿದೆ. ಸ್ಪರ್ಧಿಗಳ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯವನ್ನು ಈ ಶೋ ಪರೀಕ್ಷಿಸಲಿದೆ. ಕಂಫರ್ಟ್ ಝೋನ್ ಬಿಟ್ಟು ಕಾಡಿನ ನಿಯಮಗಳಿಗೆ ಹೊಂದಿಕೊಳ್ಳುವುದು ಸುಲಭವಲ್ಲ. ಶೀಘ್ರದಲ್ಲೇ ಜೀ ಕನ್ನಡ ಹಾಗೂ ಜೀ5ನಲ್ಲಿ ಈ ಕಾರ್ಯಕ್ರಮ ಆರಂಭವಾಗಲಿದೆ. ‘ಹಳ್ಳಿ ಪವರ್ ರೀಲೋಡೆಡ್’ ಬಳಿಕ ಈ ಶೋ ಬರಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




