ರಣ್ಬೀರ್ ಕಪೂರ್ ಅನ್ನು ರಾಮನ ಪಾತ್ರದಲ್ಲಿ ಒಪ್ಪಲಾಗದು, ತಗಾದೆ ತೆಗೆದ ಹಿರಿಯ ನಟ
Ranbir Kapoor: ರಣ್ಬೀರ್ ಕಪೂರ್, ಸಾಯಿ ಪಲ್ಲವಿ, ಯಶ್ ನಟಿಸಿ ನಿತೇಶ್ ತಿವಾರಿ ನಿರ್ದೇಶನ ಮಾಡುತ್ತಿರುವ ರಾಮಾಯಣ ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದೆ. ಸಿನಿಮಾ ಬಿಡುಗಡೆಗೆ ಇನ್ನೂ ಒಂದು ವರ್ಷವಿದೆ. ಆದರೆ ಈಗಲೇ ಸಿನಿಮಾದ ಬಗ್ಗ ಋಣಾತ್ಮಕ ಮಾತುಗಳು, ಅಭಿಪ್ರಾಯಗಳು ಆರಂಭವಾಗಿವೆ. ರಣ್ಬೀರ್ ಕಪೂರ್ ಅನ್ನು ರಾಮನ ಪಾತ್ರದಲ್ಲಿ ಜನ ಒಪ್ಪಲ್ಲ ಎಂದು ನಟರೊಬ್ಬರು ಹೇಳಿಕೆ ನೀಡಿದ್ದಾರೆ.

ಪ್ರಭಾಸ್ ನಟನೆಯ ರಾಮಾಯಣ ಕತೆ ಆಧರಿಸಿದ ‘ಆದಿಪುರುಷ್’ ಸಿನಿಮಾ ಮಕಾಡೆ ಮಲಗಿದ ಬೆನ್ನಲ್ಲೆ ರಾಮಾಯಣ ಕತೆ ಆಧರಿಸಿದ ಮತ್ತೊಂದು ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ರಣ್ಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ, ಯಶ್ ರಾವಣನಾಗಿ ನಟಿಸುತ್ತಿರುವ ಈ ಸಿನಿಮಾವನ್ನು ನಿತೇಶ್ ತಿವಾರಿ ನಿರ್ದೇಶನ ಮಾಡಿದ್ದಾರೆ. ಪ್ರಭಾಸ್ರ ‘ಆದಿಪುರುಷ್’ ಸಿನಿಮಾಕ್ಕೆ ಸಂಪ್ರದಾಯವಾದಿಗಳು ನಾನಾ ರೀತಿಯ ತೊಂದರೆಗಳನ್ನು, ಟೀಕೆಗಳನ್ನು ನೀಡಿದರು. ಇದೀಗ ಅದೇ ರೀತಿಯ ಸಮಸ್ಯೆ ರಣ್ಬೀರ್ ಕಪೂರ್ ನಟನೆಯ ‘ರಾಮಾಯಣ’ಕ್ಕೂ ಶುರುವಾಗುವ ಸೂಚನೆ ಸಿಗುತ್ತಿದೆ.
ರಣ್ಬೀರ್ ಕಪೂರ್ ನಟನೆಯ ರಾಮಾಯಣ ಕತೆ ಆಧರಿಸಿದ ಸಿನಿಮಾದ ಶೂಟಿಂಗ್ ಚಾಲ್ತಿಯಲ್ಲಿದೆ. ಹಿರಿಯ ನಿರ್ದೇಶಕ ನಿತೀಶ್ ತಿವಾರಿ ಈ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಸಿನಿಮಾದ ಕೆಲವು ಫೋಟೊಗಳಷ್ಟೆ ಇದೀಗ ಹೊರಗೆ ಬಂದಿವೆ. ಸಿನಿಮಾದ ಬಿಡುಗಡೆಗೆ ಕನಿಷ್ಟ ಒಂದು ವರ್ಷವಾದರೂ ಇದೆ. ಆಗಲೇ ಸಿನಿಮಾದ ಬಗ್ಗೆ ಋಣಾತ್ಮಕ ಮಾತುಗಳು ಆರಂಭವಾಗಿವೆ. ಇದೀಗ ಹಿರಿಯ ನಟರೊಬ್ಬರು ‘ರಣ್ಬೀರ್ ಕಪೂರ್ ಅನ್ನು ರಾಮನಾಗಿ ಜನ ಒಪ್ಪಲ್ಲ’ ಎಂದಿದ್ದಾರೆ.
ಇಡೀ ದೇಶದ ಮೆಚ್ಚುಗೆ ಗಳಿಸಿದ್ದ ರಾಮಾನಂದ ಸಾಗರ್ ಅವರ ‘ರಾಮಾಯಣ’ ಧಾರಾವಾಹಿಯಲ್ಲಿ ಲಕ್ಷ್ಮಣನ ಪಾತ್ರದಲ್ಲಿ ನಟಿಸಿದ್ದ ಸುನಿಲ್ ಲಹರಿ ಇದೀಗ ರಣ್ಬೀರ್ ಕಪೂರ್ ಅವರ ರಾಮಾಯಣದ ಬಗ್ಗೆ ಹೇಳಿಕೆ ನೀಡಿದ್ದು, ‘ಅನಿಮಲ್’ ಸಿನಿಮಾದ ನಂತರ ರಣ್ಬೀರ್ ಕಪೂರ್ ಅನ್ನು ರಾಮನ ಪಾತ್ರದಲ್ಲಿ ಜನ ಒಪ್ಪುವುದಿಲ್ಲ ಎಂದಿದ್ದಾರೆ. ‘ರಣ್ಬೀರ್ ಕಪೂರ್ ಸ್ಮಾರ್ಟ್ ಆಗಿದ್ದಾರೆ, ಬಹಳ ಒಳ್ಳೆಯ ನಟ ಆದರೂ ಸಹ ಅವರ ವ್ಯಕ್ತಿತ್ವ ರಾಮನ ಪಾತ್ರಕ್ಕೂ ಹೊಂದುವುದಿಲ್ಲ. ‘ಅನಿಮಲ್’ ಅಂಥಹಾ ಸಿನಿಮಾದಲ್ಲಿ ನಟಿಸಿದ ಬಳಿಕ ರಣ್ಬೀರ್ ಅನ್ನು ರಾಮನ ಪಾತ್ರದಲ್ಲಿ ಜನ ಒಪ್ಪುವುದಿಲ್ಲ’ ಎಂದಿದ್ದಾರೆ.
ಇದನ್ನೂ ಓದಿ:‘ಟಾಕ್ಸಿಕ್’ ಸಿನಿಮಾದಲ್ಲಿ ಯಶ್ ಬ್ಯುಸಿ; ‘ರಾಮಾಯಣ’ ಶೂಟಿಂಗ್ ಯಾವಾಗ?
ಸಿನಿಮಾದಲ್ಲಿ ಸೀತೆಯ ಪಾತ್ರದಲ್ಲಿ ನಟಿಸುತ್ತಿರುವ ಸಾಯಿ ಪಲ್ಲವಿ ಬಗ್ಗೆಯೂ ಮಾತನಾಡಿರುವ ಸುನಿಲ್, ‘ಸಾಯಿ ಪಲ್ಲವಿ ಯಾರೆಂಬುದು ನನಗೆ ಗೊತ್ತಿಲ್ಲ. ಅವರ ಸಿನಿಮಾಗಳನ್ನು ನಾನು ನೋಡಿಲ್ಲ, ಅವರ ನಟನಾ ಪ್ರತಿಭೆ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ಆಕೆಯ ಕೆಲ ಫೋಟೊಗಳನ್ನು ನೋಡಿದ್ದೇನೆ. ಸೀತೆಯ ಪಾತ್ರಕ್ಕೆ ಅವರ ಮುಖ ಸೂಟ್ ಆಗುವುದಿಲ್ಲ ಅನಿಸುತ್ತದೆ’ ಎಂದಿದ್ದಾರೆ. ‘ಈ ನಟಿಯನ್ನು ಹೇಗೆ ಆಕರ್ಷಕವಾಗಿ ಅವರು ತೋರಿಸಬಲ್ಲರೋ ನನಗೆ ಗೊತ್ತಿಲ್ಲ. ರಾವಣ ಆಕೆಯ ಪ್ರೀತಿಯಲ್ಲಿ ಬೀಳುವಷ್ಟು ಸುಂದರಿಯಾಗಿ ಸಾಯಿ ಪಲ್ಲವಿಯನ್ನು ಅವರಿಗೆ ತೋರಿಸಲಾಗುತ್ತದೆಯೇ’ ಎಂದು ಸಾಯಿ ಪಲ್ಲವಿ ಸೌಂದರ್ಯದ ಬಗ್ಗೆ ಕಮೆಂಟ್ ಮಾಡಿದ್ದಾರೆ.
ರಮಾನಂದ ಸಾಗರ್ ರಾಮಾಯಣದಲ್ಲಿ ರಾಮನ ಪಾತ್ರದಲ್ಲಿ ನಟಿಸಿದ್ದ ಅರುಣ್ ಗೋವಿಲ್, ಈ ಸಿನಿಮಾನಲ್ಲಿ ದಶರತನ ಪಾತ್ರದಲ್ಲಿ ನಟಿಸುತ್ತಿದ್ದು, ಆ ಬಗ್ಗೆಯೂ ತಕರಾರು ತೆಗೆದಿರುವ ಸುನಿಲ್, ‘ಅರುಣ್ ಗೋವಿಲ್, ತಮ್ಮದೇ ಐಡೆಂಟಿಟಿಯನ್ನು ತುಳಿದುಕೊಳ್ಳುತ್ತಿದ್ದಾರೆ’ ಎಂದಿದ್ದಾರೆ. ‘ಆದಿಪುರುಷ್’ ಸಿನಿಮಾದ ಬಗ್ಗೆಯೂ ಮಾತನಾಡಿದ ಸುನಿಲ್, ‘ಆ ಸಿನಿಮಾದಲ್ಲಿ ಕಂಟೆಂಟ್ ಮತ್ತು ಭಾವುಕತೆ ಕಡಿಮೆ ಇತ್ತು’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ