ಬ್ಲಾಕ್ಬಸ್ಟರ್ ಲವ್ಸ್ಟೋರಿಯಲ್ಲಿ ಸಾರಾ-ರಣವೀರ್: ರೋಹಿತ್ ಶೆಟ್ಟಿ ನಿರ್ದೇಶನ
Ranveer Singh-Sara Ali Khan: ರಣ್ವೀರ್ ಸಿಂಗ್ ಮತ್ತು ಸಾರಾ ಅಲಿ ಖಾನ್ ಅವರುಗಳು ಮತ್ತೆ ತೆರೆ ಮೇಲೆ ಒಂದಾಗುತ್ತಿದ್ದಾರೆ. ಈ ಹಿಂದೆ ರೋಹಿತ್ ಶೆಟ್ಟಿ ನಿರ್ದೇಶನದ ‘ಸಿಂಭ’ ಸಿನಿಮಾದಲ್ಲಿ ಇವರು ಒಟ್ಟಿಗೆ ನಟಿಸಿದ್ದರು. ಇದೀಗ ಈ ಜೋಡಿ ಮತ್ತೊಮ್ಮೆ ರೋಹಿತ್ ಶೆಟ್ಟಿ ಸಿನಿಮಾ ಮೂಲಕವೇ ಒಂದಾಗುತ್ತಿದ್ದಾರೆ.

ರೋಹಿತ್ ಶೆಟ್ಟಿ ಸಿನಿಮಾಗಳಲ್ಲಿ ಆ್ಯಕ್ಷನ್ ಮತ್ತು ಲವ್ಸ್ಟೋರಿ ಸಾಮಾನ್ಯವಾಗಿ ಕಾಣ ಸಿಗುತ್ತದೆ. ಇದೆರಡೂ ಅವರ ಚಿತ್ರದ ಹೈಲೈಟ್ ಆಗಿರುತ್ತದೆ. ಇತ್ತೀಚೆಗೆ ತೆರೆಗೆ ಬಂದ ‘ಸಿಂಗಂ ಅಗೇನ್’ ಚಿತ್ರದಲ್ಲಿ ಇದೆರಡೂ ವಿಚಾರಗಳು ಇದ್ದಿದ್ದನ್ನು ನೀವು ಗಮನಿಸಿರಬಹುದು. ಈಗ ರೋಹಿತ್ ಶೆಟ್ಟಿ ಅವರು ಮತ್ತೊಂದು ಬ್ಲಾಕ್ಬಸ್ಟರ್ ಲವ್ಸ್ಟೋರಿ ಜೊತೆ ಪ್ರೇಕ್ಷಕರ ಎದುರು ಬರುತ್ತಿದ್ದಾರೆ ಎಂದು ಹೇಳಲಾಗಿದೆ. ಇದರಲ್ಲಿ ರಣವೀರ್ ಸಿಂಗ್ ಹಾಗೂ ಸಾರಾ ಅಲಿ ಖಾನ್ ಮುಖ್ಯಭೂಮಿಕೆ ನಿರ್ವಹಿಸಲಿದ್ದಾರೆ.
ರೋಹಿತ್ ಶೆಟ್ಟಿ ಅವರು ‘ಸಿಂಬಾ’ ಹೆಸರಿನ ಸಿನಿಮಾ ನಿರ್ದೇಶನ ಮಾಡಿದ್ದರು. ಈ ಚಿತ್ರದಲ್ಲಿ ರಣವೀರ್ ಸಿಂಗ್ ಹಾಗೂ ಸಾರಾ ಅಲಿ ಖಾನ್ ಕೂಡ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ಈಗ ಈ ಜೋಡಿಯನ್ನು ಮತ್ತೆ ತೆರೆಮೇಲೆ ಒಟ್ಟಿಗೆ ತರುವ ಪ್ರಯತ್ನ ನಡೆದಿದೆ. ಈ ಬಗ್ಗೆ ರೋಹಿತ್ ಶೆಟ್ಟಿ ಅವರು ದೊಡ್ಡ ಸೂಚನೆ ಕೊಟ್ಟಿದ್ದಾರೆ.
ರಣವೀರ್ ಹಾಗೂ ಸಾರಾ ಒಟ್ಟಾಗಿ ಡ್ಯಾನ್ಸ್ ಮಾಡುತ್ತಿರುವ ವಿಡಿಯೋನ ರೋಹಿತ್ ಶೆಟ್ಟಿ ಅವರು ಪೋಸ್ಟ್ ಮಾಡಿದ್ದಾರೆ. ‘ಬ್ಲಾಕ್ಬಸ್ಟರ್ ಲವ್ ಸ್ಟೋರಿ ಆಫ್ 2025 ಶೀಘ್ರವೇ ಬರಲಿದೆ’ ಎಂದು ರೋಹಿತ್ ಶೆಟ್ಟಿ ಬರೆದುಕೊಂಡಿದ್ದಾರೆ. ಈ ಜೋಡಿಯನ್ನು ಮತ್ತೆ ತೆರೆಮೇಲೆ ತರಲಾಗುತ್ತಿದೆಯೇ ಎನ್ನುವ ಪ್ರಶ್ನೆ ಮೂಡುವಂತೆ ಆಗಿದೆ.
ಇದನ್ನೂ ಓದಿ:ತಂದೆಯಾದ ಖುಷಿಯಲ್ಲಿ ಹೊಸ ಕಾರು ಖರೀದಿಸಿದ ರಣ್ವೀರ್ ಸಿಂಗ್, ಬೆಲೆ ಎಷ್ಟು ಕೋಟಿ?
ಕೆಲವರು ಇದು ಜಾಹೀರಾತು ಇರಬಹುದೇ ಎನ್ನುವ ಅನುಮಾನ ಕೆಲವರಿಗೆ ಮೂಡಿದೆ. ಏಕೆಂದರೆ ಈಗ ಹಂಚಿಕೊಂಡಿರೋ ಟೀಸರ್ನಲ್ಲಿ ಜಾಹೀರಾತಿನ ಗುಣಲಕ್ಷಣಗಳು ಕಾಣಿಸಿವೆ. ಈ ಬಗ್ಗೆ ಕೆಲವರು ಅನುಮಾನ ಹೊರಹಾಕಿದ್ದಾರೆ.
‘ಸಿಂಬ’ ಸಿನಿಮಾ ಸೂಪರ್ ಹಿಟ್ ಆಗಿತ್ತು. ರಣವೀರ್ ಸಿಂಗ್ ಅವರು ಪೊಲೀಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದರು. ಈಗ ಹೊಸ ಚಿತ್ರಕ್ಕಾಗಿ ಇವರು ಒಂದಾದರೆ ಎಗ್ಸೈಟ್ಮೆಂಟ್ ಮತ್ತಷ್ಟು ಹೆಚ್ಚಲಿದೆ. ಫೆಬ್ರವರಿ 14 ಪ್ರೇಮಿಗಳ ದಿನ. ಈ ವಿಶೇಷ ದಿನದಂದು ಈ ಹೊಸ ಸಿನಿಮಾ ಬಗ್ಗೆ ಘೋಷಣೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ವಿಚಾರದ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ.
ರೋಹಿತ್ ಶೆಟ್ಟಿ ಅವರ ನಟನೆಯ ‘ಸಿಂಗಂ ಅಗೇನ್’ ಚಿತ್ರದಲ್ಲಿ ಹಲವು ಸ್ಟಾರ್ಗಳು ಇದ್ದರು. ಈ ಚಿತ್ರವನ್ನು ಜನರು ಇಷ್ಟಪಟ್ಟಿದ್ದಾರೆ. ಸಿನಿಮಾ ಒಳ್ಳೆಯ ಗಳಿಕೆ ಮಾಡಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:50 pm, Thu, 13 February 25