ಹೇಗಿದೆ ರಶ್ಮಿಕಾ-ವಿಕ್ಕಿ ಕೌಶಲ್ರ ‘ಛಾವಾ’, ನೆಟ್ಟಿಗರು ಹೇಳಿದ್ದು ಹೀಗೆ
Chhaava movie: ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ‘ಛಾವಾ’ ಸಿನಿಮಾ ಇಂದು (ಫೆಬ್ರವರಿ 14) ಬಿಡುಗಡೆ ಆಗಿದೆ. ಸಿನಿಮಾ ನೋಡಿರುವ ಪ್ರೇಕ್ಷಕರು ತಮ್ಮ ಅಭಿಪ್ರಾಯವನ್ನು ಟ್ವಿಟ್ಟರ್ ಮತ್ತಿತರೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಮೊದಲ ಶೋ ಸಿನಿಮಾ ನೋಡಿದವರಿಗೆ ‘ಛಾವಾ’ ಸಿನಿಮಾ ಹೇಗನಿಸಿತು? ಇಲ್ಲಿದೆ ಮಾಹಿತಿ.

ರಶ್ಮಿಕಾ ಮಂದಣ್ಣ, ವಿಕ್ಕಿ ಕೌಶಲ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಹಿಂದಿ ಸಿನಿಮಾ ‘ಛಾವಾ’ ಇಂದು (ಫೆಬ್ರವರಿ 14) ಬಿಡುಗಡೆ ಆಗಿದೆ. ಛತ್ರಪತಿ ಶಿವಾಜಿಯ ಪುತ್ರ ಛತ್ರಪತಿ ಸಾಂಬಾಜಿ ಅವರ ಜೀವನವನ್ನು ಆಧರಿಸಿದ ಕತೆ ಒಳಗೊಂಡಿದೆ. ಸಿನಿಮಾದಲ್ಲಿ ವಿಕ್ಕಿ ಕೌಶಲ್ ಸಾಂಬಾಜಿ ಪಾತ್ರದಲ್ಲಿ ಅವರ ಪತ್ನಿ ಯೇಸುಭಾಯಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಸಿನಿಮಾ ಇಂದು ದೇಶದಾದ್ಯಂತ ಬಿಡುಗಡೆ ಆಗಿದ್ದು, ಸಿನಿಮಾದ ಬಗ್ಗೆ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಬಹುತೇಕರು ಸಿನಿಮಾ ಚೆನ್ನಾಗಿದೆ ಎಂದೇ ಹೇಳಿರುವುದು ಗಮನಾರ್ಹ.
1st se last scene tak @vickykaushal09 you breath the soul of Chhatrapati Sambhaji Maharaj brilliant brilliant performance !! #akshayekhanna as Aurangzeb was so evil in his performance made me hate him. #chaavva Is history coming to life #mustwatch #VickyKaushal @MaddockFilms
— RJ Karan (@rjkaranmehta) February 13, 2025
ಸಿನಿಮಾ ನೋಡಿ ಟ್ವೀಟ್ ಮಾಡಿರುವ ಆರ್ಜೆ ಕರಣ್, ‘ಸಿನಿಮಾದ ಮೊದಲಿನಿಂದ ಕೊನೆಯ ವರೆಗೂ ಸಂಬಾಜಿ ಮಹಾರಾಜರ ಆತ್ಮವನ್ನು ವಿಕ್ಕಿ ಕೌಶಲ್ ಮೈಮೇಲೆ ತೆಗೆದುಕೊಂಡಿದ್ದಾರೆ. ಅವರ ನಟನೆ ಅತ್ಯದ್ಭುತ. ಔರಂಗಾಜೇಬ್ ಪಾತ್ರದಲ್ಲಿ ನಟಿಸಿರುವ ಅಕ್ಷಯ್ ಖನ್ನಾ ನಟನೆಯೂ ಅಷ್ಟೇ ಅದ್ಭುತವಾಗಿದೆ. ಅದೆಷ್ಟು ರಾಕ್ಷಸೀಯವಾಗಿ ಅವರು ನಟಿಸಿದ್ದಾರೆಂದರೆ ಪಾತ್ರವನ್ನು ಜೀವನಪರ್ಯಂತ ದ್ವೇಷಿಸುವಂತೆ ಮಾಡಿದ್ದಾರೆ. ಇತಿಹಾಸಕ್ಕೆ ಜೀವ ತಂದಂತಿದೆ ಈ ಸಿನಿಮಾ’ ಎಂದಿದ್ದಾರೆ ಅವರು.
#VickyKaushal shines in #Chhaava, but other actors are just okay. The film feels long, and the BGM doesn’t fit the era. Still, it’s decent. The last 20 minutes hit hard & stay with you. Highly recommend watching in theaters! #ChhaavaReview pic.twitter.com/TLEu3kxteP
— Movies Talk Official (@moviestalkhindi) February 14, 2025
‘ಮೂವಿ ಟಾಕ್ಸ್’ ಟ್ವೀಟ್ ಮಾಡಿ ಸಿನಿಮಾ ಸಾಧಾರಣವಾಗಿದೆ ಎಂದಿದೆ. ವಿಕ್ಕಿ ಕೌಶಲ್ ಹೊರತುಪಡಿಸಿ ಇನ್ಯಾವುದೇ ನಟರ ನಟನೆ ಅದ್ಭುತ ಎನ್ನುವಂತಿಲ್ಲ. ಸಿನಿಮಾ ಸಹ ತುಸು ಹೆಚ್ಚು ಉದ್ದವಾಯ್ತು ಅನಿಸುತ್ತದೆ. ಕೊನೆಯ 20 ನಿಮಿಷ ಅದ್ಭುತವಾಗಿದೆ. ಆ 20 ನಿಮಿಷದ ದೃಶ್ಯಗಳು ನೆನಪಿನಲ್ಲಿ ಉಳಿಯುತ್ತವೆ. ಸಿನಿಮಾಕ್ಕೆ ಬಳಸಿರುವ ಹಿನ್ನೆಲೆ ಸಂಗೀತ ಯಾವುದೋ ಬೇರೆ ಕಾಲದ್ದು ಅನಿಸುತ್ತದೆ ಎಂದಿದ್ದಾರೆ.
#SingleWordReview… #Chhaava: AMAZING. Rating: ½
A masterful blend of history, emotion, and action, #Chhaava features #VickyKaushal in his best role yet, solidifying him as a top actor. Directed by #LaxmanUtekar, known for his diverse storytelling, the film pic.twitter.com/1lUY0fVCqQ
— ’ (@iViratOTC) February 14, 2025
ವಿರಾಟ್ ಎಂಬುವರು ಟ್ವೀಟ್ ಮಾಡಿ ಇದೊಂದು ಅದ್ಭುತವಾದ ಸಿನಿಮಾ, ಇತಿಹಾಸ, ಭಾವುಕತೆ ಮತ್ತು ಆಕ್ಷನ್ ಅನ್ನು ಸರಿಯಾದ ಪ್ರಮಾಣದಲ್ಲಿ ಬೆರೆಸಲಾಗಿದೆ. ವಿಕ್ಕಿ ಕೌಶಲ್ ಈ ವರೆಗೆ ನಟಿಸಿರುವ ಅದ್ಭುತ ಪಾತ್ರ ಇದು. ಈ ಪಾತ್ರಕ್ಕೆ ಅವರಿಗೆ ಪ್ರಶಸ್ತಿ ಪಕ್ಕಾ. ರಶ್ಮಿಕಾ ಮಂದಣ್ಣ ಸಿನಿಮಾಕ್ಕೆ ಸುಂದರತೆ ನೀಡಿದ್ದಾರೆ. ಅಕ್ಷಯ್ ಖನ್ನಾ ನಟನೆಯೂ ಅದ್ಭುತ ಎಂದಿದ್ದಾರೆ.
ಪಂಕಜ್ ಪಾಂಡೆ ಎಂಬುವರು ಟ್ವೀಟ್ ಮಾಡಿ, ‘ಛಾವಾ ಸಿನಿಮಾಕ್ಕೆ ಭಾರಿ ನಿರೀಕ್ಷೆ ಇಟ್ಟುಕೊಂಡು ಹೋಗಿದ್ದೆ ಆದರೆ ಅಂದುಕೊಂಡಷ್ಟು ಆನಂದವನ್ನು ಸಿನಿಮಾ ಕೊಡಲಿಲ್ಲ. ವಿಕ್ಕಿ ಕೌಶಲ್ ನಟನೆ ಅದ್ಭುತವಾಗಿದೆ. ಆದರೆ ರಶ್ಮಿಕಾ ಹಾಗೂ ಅಕ್ಷಯ್ ಖನ್ನಾ ನಟನೆ ಸಾಧಾರಣ ಅಷ್ಟೆ. ಸಿನಿಮಾಕ್ಕೆ ಐದರಲ್ಲಿ 3 ಸ್ಟಾರ್ ಕೊಡಬಹುದು ಅಷ್ಟೆ ಎಂದಿದ್ದಾರೆ.
ಹಿಂದಿ ಭಾಗದಲ್ಲಿ ‘ಪುಷ್ಪ 2’ ಸೇರಿದಂತೆ ಇತರೆ ಸಿನಿಮಾಗಳಿಗೆ ದೊಡ್ಡ ಹೊಡೆತ ಬಿದ್ದಿದೆ. ಏಕೆಂದರೆ ‘ಛಾವಾ’ ಬಂದಿದೆ. ಈ ಸಿನಿಮಾ ಬಂದಿದೆ. ಈ ಸಿನಿಮಾ ಪಕ್ಕಾ ಬ್ಲಾಕ್ ಬಸ್ಟರ್ ಆಗಲಿದೆ ಎಂದು ಕೆಎಲ್ ವಿಷ್ಣು ಟ್ವೀಟ್ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




