ತಂದೆಯಾದ ಖುಷಿಯಲ್ಲಿ ಹೊಸ ಕಾರು ಖರೀದಿಸಿದ ರಣ್ವೀರ್ ಸಿಂಗ್, ಬೆಲೆ ಎಷ್ಟು ಕೋಟಿ?
Ranveer Singh: ರಣ್ವೀರ್ ಸಿಂಗ್ ಇತ್ತೀಚೆಗಷ್ಟೆ ಮುದ್ದಾದ ಹೆಣ್ಣು ಮಗುವಿನ ತಂದೆ ಆಗಿದ್ದಾರೆ. ಇದೇ ಖುಷಿಯಲ್ಲಿ ಅವರು ಹೊಸ ಐಶಾರಾಮಿ ಕಾರೊಂದನ್ನು ಖರೀದಿ ಮಾಡಿದ್ದಾರೆ. ಕಾರಿನ ಬೆಲೆ ಎಷ್ಟು ಕೋಟಿ ಗೊತ್ತೆ?
ಬಾಲಿವುಡ್ನ ಖ್ಯಾತ ನಟ ರಣ್ವೀರ್ ಸಿಂಗ್ ಇತ್ತೀಚೆಗಷ್ಟೆ ತಂದೆಯಾಗಿದ್ದಾರೆ. ರಣ್ವೀರ್ ಸಿಂಗ್ ಪತ್ನಿ ಖ್ಯಾತ ನಟಿ, ಕನ್ನಡತಿ ದೀಪಿಕಾ ಪಡುಕೋಣೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇದೇ ಖುಷಿಯಲ್ಲಿ ರಣ್ವೀರ್ ಸಿಂಗ್ ಹೊಸ ಐಶಾರಾಮಿ ಕಾರೊಂದನ್ನು ಖರೀದಿ ಮಾಡಿದ್ದಾರೆ. ಹೊಸ ಕಾರಿಗೆ ಭಾರಿ ದೊಡ್ಡ ಮೊತ್ತವನ್ನು ರಣ್ವೀರ್ ಸಿಂಗ್ ಖರ್ಚು ಮಾಡಿದ್ದಾರೆ. ಮಗಳ ಆಗಮನದಿಂದ ಥ್ರಿಲ್ ಆಗಿ ಈ ಹೊಸ ಕಾರು ಖರೀದಿ ಮಾಡಿದ್ದಾರೆ ರಣ್ವೀರ್ ಸಿಂಗ್.
ರಣ್ವೀರ್ ಸಿಂಗ್ ಬಳಿ ಈಗಾಗಲೇ ಹಲವು ಐಶಾರಾಮಿ ಕಾರುಗಳಿವೆ. ಅದರ ಜೊತೆಗೆ ಈಗ ಇನ್ನೊಂದು ಐಶಾರಾಮಿ ಕಾರು ಖರೀದಿ ಮಾಡಿದ್ದಾರೆ. ಇತ್ತೀಚೆಗೆ ಹಲವು ಸೆಲೆಬ್ರಿಟಿಗಳ ಫೇವರೇಟ್ ಆಗಿರುವ ರೇಂಜ್ ರೋವರ್ ಕಾರು ಖರೀದಿ ಮಾಡಿದ್ದಾರೆ. ಈ ಕಾರಿಗೆ 4.74 ಕೋಟಿ ರೂಪಾಯಿ ಹಣ ತೆತ್ತಿದ್ದಾರೆ ರಣ್ವೀರ್ ಸಿಂಗ್. ಈ ಕಾರಿಗೆ ವಿಶೇಷ ನಂಬರ್ ಅನ್ನು ಹಾಕಿಸಿದ್ದು, ಈ ನಂಬರ್ಗೆ ಸಹ ಭಾರಿ ಮೊತ್ತವನ್ನೇ ರಣ್ವೀರ್ ಸಿಂಗ್ ನೀಡಿದ್ದಾರೆ.
ರಣ್ವೀರ್ ಸಿಂಗ್ ಖರೀದಿ ಮಾಡಿರುವುದು ರೇಂಜ್ ರೋವರ್ 4.4 ಎಲ್ಡಬ್ಲುಬಿ ಕಾರು. ರೇಂಜ್ ರೋವರ್ ಕಾರು ಸರಣಿಯ ಅತ್ಯುತ್ತಮ ಮತ್ತು ಟಾಪ್ ಎಂಡ್ ಕಾರುಗಳಲ್ಲಿ ಇದು ಸಹ ಒಂದು. ಈ ಕಾರಿಗೆ ಕೆಲವು ವಿಶೇಷ ಕಸ್ಟಮ್ ಮೇಡ್ ಬದಲಾವಣೆಗಳನ್ನು ರಣ್ವೀರ್ ಸಿಂಗ್ ಮಾಡಿಸಿದ್ದಾರೆ. ಈ ಕಾರಿಗೆ 6969 ನಂಬರ್ ಅನ್ನು ಸಹ ರಣ್ವೀರ್ ಸಿಂಗ್ ಹಾಕಿಸುತ್ತಿದ್ದಾರೆ. ಇದು ಅವರ ನೆಚ್ಚಿನ ಸಂಖ್ಯೆ ಅಂತೆ.
ಇದನ್ನೂ ಓದಿ:ರಣ್ವೀರ್ ಸಿಂಗ್ ಧರಿಸಿರುವ ಈ ಕಪ್ಪು ಬಣ್ಣದ ಶೇರ್ವಾನಿ ಉಡುಪಿನ ಬೆಲೆ ಎಷ್ಟು ಲಕ್ಷ?
ತಂದೆ ಆದ ಬಳಿಕ ರಣ್ವೀರ್ ಸಿಂಗ್ ಸಿನಿಮಾಗಳಿಂದ ಕೆಲ ಕಾಲ ಬಿಡುವು ಪಡೆದಿದ್ದಾರೆ. ರಣ್ವೀರ್ ಸಿಂಗ್ ಹಾಗೂ ದೀಪಿಕಾ ಅತಿಥಿ ಪಾತ್ರಗಳಲ್ಲಿ ನಟಿಸಿರುವ ‘ಸಿಂಗಂ ಅಗೇನ್’ ಸಿನಿಮಾ ಮುಂದಿನ ವಾರ ಬಿಡುಗಡೆ ಆಗಲಿದೆ. ಇದರ ಹೊರತಾಗಿ ‘ಧುರಂದರ್’ ಹೆಸರಿನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟಿಸುತ್ತಿದ್ದಾರೆ. ಇದಾದ ಬಳಿಕ ತಮಿಳಿನ ಶಂಕರ್ ನಿರ್ದೇಶನದ ‘ಅನ್ನಿಯನ್’ ಸಿನಿಮಾದ ಹಿಂದಿ ರೀಮೇಕ್ನಲ್ಲಿ ರಣ್ವೀರ್ ನಟಿಸಲಿದ್ದಾರೆ. ತೆಲುಗಿನ ಪ್ರಶಾಂತ್ ವರ್ಮಾ ನಿರ್ದೇಶನದ ಸಿನಿಮಾದಲ್ಲಿ ರಣ್ವೀರ್ ನಟಿಸಬೇಕಿತ್ತು ಆದರೆ ಆ ಸಿನಿಮಾ ಮುಂದಕ್ಕೆ ಹೋಗಿದೆ.
ಇನ್ನು ದೀಪಿಕಾ ಪಡುಕೋಣೆ ಸಹ ತಾಯಿ ಆದ ಬಳಿಕ ಸಿನಿಮಾ ಚಿತ್ರೀಕರಣಗಳಿಂದ ಬಿಡುವು ಪಡೆದಿದ್ದಾರೆ. ದೀಪಿಕಾ ‘ಕಲ್ಕಿ’ ಸಿನಿಮಾದ ಎರಡನೇ ಭಾಗ ಬರುವವರೆಗೆ ಯಾವುದೇ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎನ್ನಲಾಗುತ್ತಿದೆ. ಸಂಜಯ್ ಲೀಲಾ ಬನ್ಸಾಲಿಯ ಸಿನಿಮಾವನ್ನು ಸಹ ದೀಪಿಕಾ ಪಡುಕೋಣೆ ರಿಜೆಕ್ಟ್ ಮಾಡಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬರುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ