ಬಾಲಿವುಡ್ ಸ್ಟಾರ್ ಹೀರೋ ಮಾಡಿದ ಅವಮಾನ ನೆನೆದು ಕಣ್ಣೀರು ಹಾಕಿದ ನಟ
ಈಗ ಬಾಲಿವುಡ್ನ ಭರವಸೆಯ ನಟರಲ್ಲಿ ಒಬ್ಬರು ಎನಿಸಿಕೊಂಡಿರುವ ನಟರೊಬ್ಬರು ತಮ್ಮ ಆರಂಭದ ದಿನಗಳಲ್ಲಿ ಯುವ ಸ್ಟಾರ್ ನಟನೊಬ್ಬ ತಮಗೆ ಮಾಡಿದ ಅವಮಾನ ನೆನೆದು ಕಣ್ಣೀರು ಹಾಕಿದ್ದಾರೆ. ತನಗೆ ಅವಮಾನ ಮಾಡಿದ ಆ ಯುವ ಸ್ಟಾರ್ ನಟನ ಹೆಸರನ್ನು ಅಪಾರಶಕ್ತಿ ಖುರಾನಾ ಹೇಳಿಲ್ಲವಾದರೂ ಆತ ಯಾರೆಂಬುದನ್ನು ನೆಟ್ಟಿಗರು ಹುಡುಕಿ ಹೊರತೆಗೆದಿದ್ದಾರೆ.
ಬಾಲಿವುಡ್ ಹೊರಗೆ ಮಾತ್ರ ಥಳುಕು-ಬಳುಕು, ಕ್ಯಾಮೆರಾದ ಮುಂದೆ ಎಲ್ಲರೂ ಒಳ್ಳೆಯವರಂತೆ, ಸುಭಗರಂತೆ ನಟಿಸುವ ಸಿನಿಮಾ ಜನ ತೆರೆಯ ಹಿಂದೆ ಕೀಳು ರಾಜಕೀಯ ಮಾಡುತ್ತಾರೆ. ಈಗ ಬಾಲಿವುಡ್ನ ಭರವಸೆಯ ನಟರಲ್ಲಿ ಒಬ್ಬರು ಎನಿಸಿಕೊಂಡಿರುವ ಅಪಾರಶಕ್ತಿ ಖುರಾನಾ, ತಮ್ಮ ಆರಂಭದ ದಿನಗಳಲ್ಲಿ ಯುವ ಸ್ಟಾರ್ ನಟನೊಬ್ಬ ತಮಗೆ ಮಾಡಿದ ಅವಮಾನ ನೆನೆದು ಕಣ್ಣೀರು ಹಾಕಿದ್ದಾರೆ. ತನಗೆ ಅವಮಾನ ಮಾಡಿದ ಆ ಯುವ ಸ್ಟಾರ್ ನಟನ ಹೆಸರನ್ನು ಅಪಾರಶಕ್ತಿ ಖುರಾನಾ ಹೇಳಿಲ್ಲವಾದರೂ ಆತ ಯಾರೆಂಬುದನ್ನು ನೆಟ್ಟಿಗರು ಹುಡುಕಿ ಹೊರತೆಗೆದಿದ್ದಾರೆ.
ಅಪಾರಶಕ್ತಿ ಖುರಾನಾ, ಬಾಲಿವುಡ್ನ ಭರವಸೆಯ ಯುವನಟ. ಅವರ ಸಹೋದರ ಆಯುಷ್ಮಾನ್ ಖುರಾನಾ ಈಗಾಗಲೇ ಬಾಲಿವುಡ್ನ ಸ್ಟಾರ್ ನಟ ಎನಿಸಿಕೊಂಡಿದ್ದಾರೆ. ತಮ್ಮ ಅದ್ಭುತ ನಟನಾ ಪ್ರತಿಭೆಯಿಂದ ಒಂದರ ಹಿಂದೊಂದು ಅವಕಾಶಗಳನ್ನು ಬಾಚಿಕೊಳ್ಳುತ್ತಿದ್ದಾರೆ. ಅಪಾರಶಕ್ತಿ ಖುರಾನಾ, ಅಣ್ಣ ಆಯುಷ್ಮಾನ್ ಅಷ್ಟು ಪ್ರಸಿದ್ಧಿ ಮತ್ತು ಯಶಸ್ಸು ಗಳಿಸಿಲ್ಲವಾದರೂ ಬಾಲಿವುಡ್ನಲ್ಲಿ ದೊಡ್ಡ ಭರವಸೆ ಮೂಡಿಸಿದ್ದಾರೆ. ಒಂದರ ಹಿಂದೊಂದು ಸಿನಿಮಾಗಳನ್ನು ಪಡೆಯುತ್ತಾ ಸಾಗುತ್ತಿದ್ದಾರೆ.
‘ದಂಗಲ್’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅಪಾರಶಕ್ತಿ ಖುರಾನಾ, ಸಣ್ಣ-ಪುಟ್ಟ ಪಾತ್ರಗಳಲ್ಲಿಯೇ ನಟಿಸುತ್ತಾ ಬಂದವರು. ಇದೀಗ ಅವರ ‘ಬರ್ಲಿನ್’ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಗಿದೆ. ಸಿನಿಮಾದ ಪ್ರಚಾರಕ್ಕೆಂದು ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ಅಪಾರಶಕ್ತಿ ಖುರಾನಾ, ತಾವು ಎದುರಿಸಿದ ಅತ್ಯಂತ ನೋವಿನ ಘಟನೆ ನೆನಪು ಮಾಡಿಕೊಂಡರು. ‘ನಾನು ಸಿನಿಮಾ ಒಂದರಲ್ಲಿ ನಟಿಸಿದ್ದೆ. ಆ ಸಿನಿಮಾ ಮುಖ್ಯ ಹೀರೋ ಈಗ ಸ್ಟಾರ್ ಯುವನಟ. ಆ ಸಿನಿಮಾದ ಟ್ರೈಲರ್ ಲಾಂಚ್ ಮುಂಬೈನಲ್ಲಿ ಆಗುತ್ತಿತ್ತು. ನಾನು ಖುಷಿಯಿಂದ ಚೆನ್ನಾಗಿ ರೆಡಿಯಾಗಿ ಇವೆಂಟ್ಗೆ ಬಂದಿದ್ದೆ. ಅದಕ್ಕಾಗಿ ಹೊಸ ಬಟ್ಟೆ ಖರೀದಿಸಿ ಡಿಸೈನ್ ಮಾಡಿಸಿಕೊಂಡು ಬಂದಿದ್ದೆ. ಆದರೆ ಇನ್ನೇನು ಶೋ ಪ್ರಾರಂಭ ಆಗಬೇಕು ಎನ್ನುವಷ್ಟರಲ್ಲಿ ಆ ನಟ, ಅಪಾರಶಕ್ತಿ ಖುರಾನಾ ಅನ್ನು ಸ್ಟೇಜ್ ಹತ್ತಿಸಬೇಡಿ ಎಂದುಬಿಟ್ಟರು’ ಎಂದು ನೆನಪು ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ಸಮಂತಾ ಋತ್ ಪ್ರಭು ವಿರುದ್ಧ ಬಾಲಿವುಡ್ನಲ್ಲಿ ನಡೆಯುತ್ತಿದೆಯೇ ಪಿತೂರಿ
ಆಗ ಇವೆಂಟ್ನವರು, ‘ನೀವು ಈ ಕಾರ್ಯಕ್ರಮಕ್ಕೆ ಹಾಜರಾಗುವುದು ಬೇಡ. ನಿಮ್ಮನ್ನು ಬೇರೆ ಇವೆಂಟ್ನಲ್ಲಿ ಮೀಡಿಯಾದವರಿಗೆ ಪರಿಚಯ ಮಾಡಿಸುತ್ತೇವೆ. ಈ ಶೋಗೆ ಬೇಡ’ ಎಂದರು. ನಾನು ಅಲ್ಲಿಯೇ ವೇದಿಕೆ ಹಿಂದೆಯೇ ನಿಂತಿದ್ದರೂ ಸಹ ನನ್ನನ್ನು ವೇದಿಕೆಗೆ ಕರೆಯಲಿಲ್ಲ. ಸಿನಿಮಾದ ಪಾತ್ರದ ಪರಿಚಯ ಮಾಡಿಸುವಾಗಲೂ ಸಹ ನನ್ನ ಹೆಸರನ್ನು ಸಹ ಯಾರೂ ಹೇಳಲಿಲ್ಲ. ನನಗೆ ಅಷ್ಟು ಅವಮಾನ ಎಂದೂ ಆಗಿರಲಿಲ್ಲ ಎಂದು ಆ ಘಟನೆ ಹೇಳುತ್ತಾ-ಹೇಳುತ್ತಾ ಕಣ್ಣೀರು ಹಾಕಿಬಿಟ್ಟರು ಅಪಾರಶಕ್ತಿ ಖುರಾನ.
ಅಂದಹಾಗೆ ಆಯುಷ್ಮಾನ್ ಖುರಾನಾಗೆ ಅವಮಾನ ಮಾಡಿದ ಆ ಸ್ಟಾರ್ ಯುವ ನಟ ಕಾರ್ತಿಕ್ ಆರ್ಯನ್. ‘ಲುಕಾಚುಪಿ’ ಸಿನಿಮಾನಲ್ಲಿ ಅಪಾರಶಕ್ತಿ ಖುರಾನಾ ಹಾಗೂ ಕಾರ್ತಿಕ್ ಆರ್ಯನ್ ಒಟ್ಟಿಗೆ ನಟಿಸಿದ್ದರು. ಆ ಸಿನಿಮಾದಲ್ಲಿ ಅಪಾರಶಕ್ತಿ ಖುರಾನಾಗೆ ತುಸು ಮುಖ್ಯ ಪಾತ್ರ ದೊರೆತಿತ್ತು. ಆದರೆ ಕಾರ್ತಿಕ್ ಆರ್ಯನ್ ಹೇಳಿದ್ದರಿಂದಲೇ ಅಪಾರಶಕ್ತಿ ಖುರಾನಾ ಅನ್ನು ಸಿನಿಮಾ ಪ್ರಚಾರದಿಂದ ದೂರ ಇಡಲಾಗಿತ್ತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ