Aishwarya Rai: ಬರ್ತ್ ಡೇ ಪಾರ್ಟಿಗೆ ಐಶ್ವರ್ಯಾ-ಆರಾಧ್ಯ ಜೊತೆ ಅಭಿಷೇಕ್ ಬಚ್ಚನ್ ಬಂದಿಲ್ಲ ಎಂಬುದು ನಿಜವೇ?

ಅಭಿಷೇಕ್ ಬಚ್ಚನ್‌ನಿಂದ ವಿಚ್ಛೇದನದ ವದಂತಿಗಳ ನಡುವೆ ಐಶ್ವರ್ಯಾ, ತಮ್ಮ ಮಗಳು ಆರಾಧ್ಯ ಬಚ್ಚನ್ ಮತ್ತು ಅವರ ತಾಯಿ ಬೃಂದಾ ರೈ ಅವರೊಂದಿಗೆ ಖಾಸಗಿ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಿದ್ದರು, ಆದರೆ ಅಭಿಷೇಕ್ ಬಚ್ಚನ್ ಈ ಪಾರ್ಟಿಯಲ್ಲಿ ಕಾಣಿಸಿಕೊಂಡಿಲ್ಲ.

Aishwarya Rai: ಬರ್ತ್ ಡೇ ಪಾರ್ಟಿಗೆ ಐಶ್ವರ್ಯಾ-ಆರಾಧ್ಯ ಜೊತೆ ಅಭಿಷೇಕ್ ಬಚ್ಚನ್ ಬಂದಿಲ್ಲ ಎಂಬುದು ನಿಜವೇ?
ಬರ್ತ್ ಡೇ ಪಾರ್ಟಿಗೆ ಐಶ್ವರ್ಯಾ-ಆರಾಧ್ಯ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 23, 2024 | 6:21 PM

ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ನಡುವಿನ ಸಂಬಂಧವು ಮೊದಲಿನಿಂದಲೂ ವಿಶ್ವದಾದ್ಯಂತ ಚರ್ಚೆಯ ವಿಷಯವಾಗಿದೆ. ಕೆಲ ದಿನಗಳಿಂದ ಐಶ್ವರ್ಯಾ ಮತ್ತು ಅಭಿಷೇಕ್ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿದೆ ಎಂಬ ವರದಿಗಳು ಬಂದಿದ್ದವು. ಅನಂತ್-ರಾಧಿಕಾ ಮದುವೆಗೆ ಐಶ್ವರ್ಯಾ-ಅಭಿಷೇಕ್ ಪ್ರತ್ಯೇಕವಾಗಿ ಆಗಮಿಸಿದ್ದು ಇದಕ್ಕೆ ಮತ್ತಷ್ಟು ಪುಷ್ಠಿ ನೀಡಿತು. ಇದಾದ ನಂತರ ಒಂದೋ ಎರಡೋ ಬಾರಿ ಬಿಟ್ಟರೆ ಇವರಿಬ್ಬರೂ ಒಟ್ಟಿಗೆ ಕಾಣಿಸಲೇ ಇಲ್ಲ. ಈ ಮಧ್ಯೆ, ಮಂಗಳವಾರ ಐಶ್ವರ್ಯಾ ರೈ ತಮ್ಮ ಕುಟುಂಬದೊಂದಿಗೆ ಸಮಯ ಕಳೆಯುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಐಶ್ವರ್ಯ-ಆರಾಧ್ಯ ಜೊತೆ ಅಭಿಷೇಕ್ ಇಲ್ಲ:

ಅಭಿಷೇಕ್ ಬಚ್ಚನ್‌ನಿಂದ ವಿಚ್ಛೇದನದ ವದಂತಿಗಳ ನಡುವೆ ಐಶ್ವರ್ಯಾ, ತಮ್ಮ ಮಗಳು ಆರಾಧ್ಯ ಬಚ್ಚನ್ ಮತ್ತು ಅವರ ತಾಯಿ ಬೃಂದಾ ರೈ ಅವರೊಂದಿಗೆ ಖಾಸಗಿ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಿದ್ದರು, ಆದರೆ ಅಭಿಷೇಕ್ ಬಚ್ಚನ್ ಈ ಪಾರ್ಟಿಯಲ್ಲಿ ಕಾಣಿಸಿಕೊಂಡಿಲ್ಲ. ವೈರಲ್ ಆಗುತ್ತಿರುವ ಫೋಟೋದಲ್ಲಿ ಐಶ್ವರ್ಯಾ ತನ್ನ ಮಗಳು ಆರಾಧ್ಯ ಮತ್ತು ತಾಯಿ ಬೃಂದಾ ರೈ ಜೊತೆ ಕಾಣಿಸಿಕೊಂಡಿದ್ದಾರೆ. ಇದಲ್ಲದೆ, ಅವರ ಕೆಲವು ಸಂಬಂಧಿಕರು ಇದರಲ್ಲಿದ್ದಾರೆ.

ಸೋದರ ಸಂಬಂಧಿಯ ಹುಟ್ಟುಹಬ್ಬದಲ್ಲಿ ಐಶ್ವರ್ಯಾ:

ಈ ಫೋಟೋವನ್ನು ಐಶ್ವರ್ಯಾ ಅವರ ಸೋದರಸಂಬಂಧಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಐಶ್ವರ್ಯಾ ಭಾಗವಹಿಸಿದ್ದರು. ಫೋಟೋವನ್ನು ಹಂಚಿಕೊಳ್ಳುವಾಗ, ಅವರು ತಮ್ಮ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ ಸ್ನೇಹಿತರು ಮತ್ತು ಅನುಯಾಯಿಗಳಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ. ಅನೇಕ ಬಳಕೆದಾರರು ಈ ಫೋಟೋಗಳಿಗೆ ಪ್ರತಿಕ್ರಿಯಿಸಿದ್ದಾರೆ. ಕೆಲವು ಫ್ಯಾಮಿಲಿ ಫೋಟೋದಿಂದ ಅಭಿಷೇಕ್ ನಾಪತ್ತೆಯಾಗಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ನೀರು ತುಂಬಿರುವ ಬೆಂಗಳೂರಿನ ರಸ್ತೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ ಹತ್ತಿರುವುದು ನಿಜವೇ?

ಜುಲೈನಿಂದ ವಿಚ್ಛೇದನದ ವದಂತಿ:

ಐಶ್ವರ್ಯಾ ಮತ್ತು ಅಭಿಷೇಕ್ ವಿಚ್ಛೇದನದ ಬಗ್ಗೆ ಹಲವು ತಿಂಗಳುಗಳಿಂದ ವದಂತಿಗಳು ಕೇಳಿಬರುತ್ತಲೇ ಇದೆ. ಅಭಿಷೇಕ್ ಮತ್ತು ಐಶ್ವರ್ಯಾ ಮದುವೆಯಾಗಿ 17 ವರ್ಷಗಳಾಗಿವೆ. ದಂಪತಿಗೆ ಆರಾಧ್ಯ ಬಚ್ಚನ್ ಎಂಬ ಮಗಳಿದ್ದಾಳೆ. ಅವರ ವಿಚ್ಛೇದನದ ವದಂತಿಗಳು ಈ ವರ್ಷದ ಜುಲೈ ಆರಂಭದಲ್ಲಿ ಮೊದಲಿಗೆ ಕೇಳಿಬಂತು. ಅನಂತ್ ಅಂಬಾನಿ ಅವರ ಮದುವೆಯಲ್ಲಿ ಬಚ್ಚನ್ ಕುಟುಂಬದ ಜೊತೆ ಬರದೆ ಐಶ್ವರ್ಯಾ ಅವರು ತಮ್ಮ ಮಗಳೊಂದಿಗೆ ಪ್ರತ್ಯೇಕವಾಗಿ ಬಂದಿದ್ದರು. ಇದಾದ ನಂತರ ಅಭಿಷೇಕ್ ವಿಚ್ಛೇದನಕ್ಕೆ ಸಂಬಂಧಿಸಿದ ಪೋಸ್ಟ್ ಒಂದನ್ನು ಲೈಕ್ ಮಾಡುವ ಮೂಲಕ ಊಹಾಪೋಹಗಳಿಗೆ ಮತ್ತಷ್ಟು ತುಪ್ಪ ಸುರಿದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇವರಿಬ್ಬರೂ ಹೆಚ್ಚಾಗಿ ಪ್ರತ್ಯೇಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಮನೆಯಲ್ಲಿ ಅಕ್ಷತೆಯನ್ನು ಹೇಗೆ ತಯಾರಿಸಬೇಕು? ವಿಡಿಯೋ ನೋಡಿ
ಮನೆಯಲ್ಲಿ ಅಕ್ಷತೆಯನ್ನು ಹೇಗೆ ತಯಾರಿಸಬೇಕು? ವಿಡಿಯೋ ನೋಡಿ
Daily horoscope: ಈ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭ ಫಲವಿದೆ
Daily horoscope: ಈ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭ ಫಲವಿದೆ
ಜಾಮೀನು ಸಿಕ್ಕಿದ್ದಕ್ಕೆ ಚಾಮುಂಡಿ ಬೆಟ್ಟದಲ್ಲಿ ಹರಿಕೆ ತೀರಿಸಿದ ವಿಜಯಲಕ್ಷ್ಮಿ
ಜಾಮೀನು ಸಿಕ್ಕಿದ್ದಕ್ಕೆ ಚಾಮುಂಡಿ ಬೆಟ್ಟದಲ್ಲಿ ಹರಿಕೆ ತೀರಿಸಿದ ವಿಜಯಲಕ್ಷ್ಮಿ
ಸಿಟಿ ರವಿ ವಿರುದ್ಧ ರಾಷ್ಟ್ರಪತಿಗೆ ಪತ್ರ, ಮೋದಿ ಭೇಟಿ ಮಾಡುವೆ: ಹೆಬ್ಬಾಳ್ಕರ್
ಸಿಟಿ ರವಿ ವಿರುದ್ಧ ರಾಷ್ಟ್ರಪತಿಗೆ ಪತ್ರ, ಮೋದಿ ಭೇಟಿ ಮಾಡುವೆ: ಹೆಬ್ಬಾಳ್ಕರ್
ಭದ್ರಾವತಿ ಉಕ್ಕು ಕಾರ್ಖಾನೆಗೆ ಪುನಶ್ಚೇತನ: ಕುಮಾರಸ್ವಾಮಿ ಗುಡ್ ನ್ಯೂಸ್
ಭದ್ರಾವತಿ ಉಕ್ಕು ಕಾರ್ಖಾನೆಗೆ ಪುನಶ್ಚೇತನ: ಕುಮಾರಸ್ವಾಮಿ ಗುಡ್ ನ್ಯೂಸ್
ಸಿಟಿ ರವಿ ಅಶ್ಲೀಲ ಪದ ಬಳಸಿದ ವಿಡಿಯೋ ಬಿಡುಗಡೆ ಮಾಡಿದ ಲಕ್ಷ್ಮೀ ಹೆಬ್ಬಾಳ್ಕರ್
ಸಿಟಿ ರವಿ ಅಶ್ಲೀಲ ಪದ ಬಳಸಿದ ವಿಡಿಯೋ ಬಿಡುಗಡೆ ಮಾಡಿದ ಲಕ್ಷ್ಮೀ ಹೆಬ್ಬಾಳ್ಕರ್
ಕೊಹ್ಲಿ, ರೋಹಿತ್ ತಂಡಗಳನ್ನು ಸೋಲಿಸಿ 25 ಸಾವಿರ ರೂ. ಗೆದ್ದ ಯುವ ಆಟಗಾರ
ಕೊಹ್ಲಿ, ರೋಹಿತ್ ತಂಡಗಳನ್ನು ಸೋಲಿಸಿ 25 ಸಾವಿರ ರೂ. ಗೆದ್ದ ಯುವ ಆಟಗಾರ
ಬಳ್ಳಾರಿ: ಮನೆಯಿಂದ ದೂರವಾಗಿ 25 ವರ್ಷಗಳ ಬಳಿಕ ಪತ್ತೆಯಾದ ಮಹಿಳೆ
ಬಳ್ಳಾರಿ: ಮನೆಯಿಂದ ದೂರವಾಗಿ 25 ವರ್ಷಗಳ ಬಳಿಕ ಪತ್ತೆಯಾದ ಮಹಿಳೆ
ನೆಲಮಂಗಲ: ಬೆಳ್ಳಂ ಬೆಳಗ್ಗೆ ಬಾರ್ ತೆರದು ಅಕ್ರಮವಾಗಿ ಮದ್ಯ ಮಾರಾಟ
ನೆಲಮಂಗಲ: ಬೆಳ್ಳಂ ಬೆಳಗ್ಗೆ ಬಾರ್ ತೆರದು ಅಕ್ರಮವಾಗಿ ಮದ್ಯ ಮಾರಾಟ
ನಿಜಕ್ಕೂ ಎಲಿಮಿನೇಟ್ ಆದ್ರಾ ತ್ರಿವಿಕ್ರಂ?; ಅಭಿಮಾನಿಗಳಿಗೆ ಬಿಗ್ ಶಾಕ್
ನಿಜಕ್ಕೂ ಎಲಿಮಿನೇಟ್ ಆದ್ರಾ ತ್ರಿವಿಕ್ರಂ?; ಅಭಿಮಾನಿಗಳಿಗೆ ಬಿಗ್ ಶಾಕ್