ಮಿಲಿಯನ್ ಮುಟ್ಟಿದ ‘ಮಿಸ್ಟರ್ ರಾಣಿ’ ಟೀಸರ್; ಹುಡುಗನೇ ಈ ಸಿನಿಮಾದ ಹೀರೋಯಿನ್

ಡಿಫರೆಂಟ್ ಕಥಾಹಂದರ ಹೊಂದಿರುವ ‘ಮಿಸ್ಟರ್​ ರಾಣಿ’ ಟೀಸರ್​ ಗಮನ ಸೆಳೆಯುತ್ತಿದೆ. ಕನ್ನಡದಲ್ಲಿ ಈ ರೀತಿ ಕಾನ್ಸೆಪ್ಟ್​ ಸಿನಿಮಾಗಳು ತೀರ ವಿರಳ. ಹಾಗಾಗಿ ‘ಮಿಸ್ಟರ್ ರಾಣಿ’ ಮೇಲೆ ನಿರೀಕ್ಷೆ ಮೂಡಿದೆ. ಕಾಮಿಡಿ ಕಥಾಹಂದರದ ಈ ಚಿತ್ರಕ್ಕೆ ಮಧುಚಂದ್ರ ಅವರು ನಿರ್ದೇಶನ ಮಾಡಿದ್ದಾರೆ. ದೀಪಕ್ ಸುಬ್ರಹ್ಮಣ್ಯ ಅವರು ಈ ಸಿನಿಮಾದಲ್ಲಿ ಹೀರೋ.. ಅಲ್ಲಲ್ಲ, ಹೀರೋಯಿನ್ ಆಗಿ ನಟಿಸಿದ್ದಾರೆ.

ಮಿಲಿಯನ್ ಮುಟ್ಟಿದ ‘ಮಿಸ್ಟರ್ ರಾಣಿ’ ಟೀಸರ್; ಹುಡುಗನೇ ಈ ಸಿನಿಮಾದ ಹೀರೋಯಿನ್
ದೀಪಕ್ ಸುಬ್ರಹ್ಮಣ್ಯ
Follow us
ಮದನ್​ ಕುಮಾರ್​
|

Updated on: Oct 23, 2024 | 5:54 PM

ಕನ್ನಡದ ‘ಮಿಸ್ಟರ್ ರಾಣಿ’ ಸಿನಿಮಾದ ಟೀಸರ್​ ಇತ್ತೀಚೆಗೆ ಬಿಡುಗಡೆಯಾಗಿ ಯೂಟ್ಯೂಬ್​ನಲ್ಲಿ 1 ಮಿಲಿಯನ್ ವೀಕ್ಷಣೆ ಕಂಡಿದೆ. ಈ ಮೊದಲು ಪೋಸ್ಟರ್​ ಮೂಲಕ ಈ ಚಿತ್ರ ಕೌತುಕ ಮೂಡಿಸಿತ್ತು. ಈಗ ಟೀಸರ್​ ಮೂಲಕ ಗಮನ ಸೆಳೆಯುತ್ತಿದೆ. ಇದು ಪಕ್ಕಾ ಕಾಮಿಡಿ ಸಿನಿಮಾ ಎಂಬುದನ್ನು ಟೀಸರ್​ ಒತ್ತಿ ಹೇಳುತ್ತಿದೆ. ಈ ಹಿಂದೆ ಕಾಮಿಡಿ ಕಥಾಹಂದರದ ‘ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ’ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳಿದ್ದ ಮಧುಚಂದ್ರ ಅವರು ಈಗ ‘ಮಿಸ್ಟರ್​ ರಾಣಿ’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.

‘ಮಿಸ್ಟರ್ ರಾಣಿ’ ಚಿತ್ರದಲ್ಲಿ ಇಂಟರೆಸ್ಟಿಂಗ್ ಕಹಾನಿ ಇದೆ. ಹೀರೋ ಆಗುವ ಆಸೆಯಿಂದ ಚಿತ್ರರಂಗಕ್ಕೆ ಬಂದ ಯುವಕ ನಂತರ ಆಕಸ್ಮಿಕವಾಗಿ ಹೀರೋಯಿನ್ ಆಗುತ್ತಾನೆ. ಈ ರೀತಿ ಡಿಫರೆಂಟ್​ ಕಹಾನಿ ಈ ಸಿನಿಮಾದಲ್ಲಿ ಇದೆ ಎಂಬುದು ಟೀಸರ್​ ಮೂಲಕ ಗೊತ್ತಾಗಿದೆ. ಟೀಸರ್ ರೀತಿಯೇ ಇಡೀ ಸಿನಿಮಾದಲ್ಲಿ ತರಲೆ, ತಮಾಷೆ ಜೋರಾಗಿ ಇರಲಿದೆ ಎಂದು ಸಿನಿಪ್ರಿಯರು ನಿರೀಕ್ಷಿಸಿದ್ದಾರೆ. ಸದ್ಯ ಟೀಸರ್​ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

ಇದನ್ನೂ ಓದಿ: ‘ಕಾಮಿಡಿ ಕಿಲಾಡಿಗಳು’ ಹಾಸ್ಯ ಕಲಾವಿದ ಗಿಲ್ಲಿ ನಟನ ಹೊಸ ಸಿನಿಮಾ ‘ಸರ್ವೇ ನಂಬರ್ 45’

ಅಂದಹಾಗೆ, ಈ ಸಿನಿಮಾದಲ್ಲಿ ಮುಖ್ಯ ಭೂಮಿಕೆ ಮಾಡಿರುವುದು ‘ಲಕ್ಷ್ಮಿ ನಿವಾಸ’ ಸೀರಿಯಲ್ ಖ್ಯಾತಿಯ ದೀಪಕ್ ಸುಬ್ರಹ್ಮಣ್ಯ. ‘ಲಕ್ಷ್ಮಿ ನಿವಾಸ’ ಧಾರಾವಾಹಿಯಲ್ಲಿ ಅವರು ಜಯಂತ್ ಎಂಬ ಪಾತ್ರ ಮಾಡಿ ಗಮನ ಸೆಳೆದರು. ಈಗ ‘ಮಿಸ್ಟರ್​ ರಾಣಿ’ ಸಿನಿಮಾದಲ್ಲಿ ಹುಡುಗಿಯ ಪಾತ್ರ ಮಾಡುವ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಅವರ ಬದಲಾವಣೆ ಕಂಡು ಚಿತ್ರರಂಗದ ಹಲವರಿಗೂ ಅಚ್ಚರಿ ಆಗಿದೆ.

‘ಮಿಸ್ಟರ್​ ರಾಣಿ’ ಟೀಸರ್​:

‘ಮಿಸ್ಟರ್​ ರಾಣಿ’ ಸಿನಿಮಾದಲ್ಲಿ ಹುಡುಗಿಯ ಪಾತ್ರ ಮಾಡಿರುವುದು ದೀಪಕ್ ಸುಬ್ರಹ್ಮಣ್ಯ ಎಂಬುದು ತಿಳಿದು ಸ್ವತಃ ಅವರ ಅಭಿಮಾನಿಗಳಿಗೆ ಶಾಕ್ ಆಗಿದೆ. ಒಟ್ಟಿನಲ್ಲಿ ಈ ಟೀಸರ್​ ಮೂಲಕ ಚಿತ್ರತಂಡದ ಪರಿಶ್ರಮ ಕಾಣಿಸಿದೆ. ತಾಂತ್ರಿಕ ಗುಣಮಟ್ಟ ಕೂಡ ಟೀಸರ್​ನಲ್ಲಿ ಕಾಣಿಸುತ್ತಿದೆ. ಈ ಎಲ್ಲ ಕಾರಣಗಳಿಂದಾಗಿ ಯೂಟ್ಯೂಬ್​ನಲ್ಲಿ ಮಿಲಿಯನ್​ಗಟ್ಟಲೆ ವೀಕ್ಷಣೆ ಕಂಡಿದೆ. ಬಹುತೇಕ ಎಲ್ಲರೂ ಪಾಸಿಟವ್ ಆಗಿ ಕಮೆಂಟ್ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಕಾನ್ಪುರದಲ್ಲಿ ಸ್ಕೂಟರ್ ಸವಾರಿ ಮಾಡುತ್ತಿದ್ದ ಮಹಿಳೆಗೆ ಕಚ್ಚಿದ ಸಾಕು ನಾಯಿ
ಕಾನ್ಪುರದಲ್ಲಿ ಸ್ಕೂಟರ್ ಸವಾರಿ ಮಾಡುತ್ತಿದ್ದ ಮಹಿಳೆಗೆ ಕಚ್ಚಿದ ಸಾಕು ನಾಯಿ
ಅಕ್ರಮ ಹಣ ವರ್ಗಾವಣೆ ಬಗ್ಗೆ ಎಲ್ಲರೆದುರೇ ಅತ್ತು ಗೋಳಾಡಿದ ಕಾಂಗ್ರೆಸ್ ಶಾಸಕಿ
ಅಕ್ರಮ ಹಣ ವರ್ಗಾವಣೆ ಬಗ್ಗೆ ಎಲ್ಲರೆದುರೇ ಅತ್ತು ಗೋಳಾಡಿದ ಕಾಂಗ್ರೆಸ್ ಶಾಸಕಿ
ಜೀ ಕನ್ನಡದ ಹೊಸ ರಿಯಾಲಿಟಿ ಶೋನಲ್ಲಿ ರಕ್ಷಕ್ ಬುಲೆಟ್
ಜೀ ಕನ್ನಡದ ಹೊಸ ರಿಯಾಲಿಟಿ ಶೋನಲ್ಲಿ ರಕ್ಷಕ್ ಬುಲೆಟ್
ಕಾರ್​ ಶೋರೂಂನಲ್ಲಿ ಅಗ್ನಿ ಅವಘಡ, ಸುಟ್ಟು ಭಸ್ಮವಾದ ಹೊಸ ವಾಹನಗಳು
ಕಾರ್​ ಶೋರೂಂನಲ್ಲಿ ಅಗ್ನಿ ಅವಘಡ, ಸುಟ್ಟು ಭಸ್ಮವಾದ ಹೊಸ ವಾಹನಗಳು
ಬಿಗ್ ಬಾಸ್ ಫಿನಾಲೆ ಸಮಯದಲ್ಲಿ ಬದಲಾವಣೆ; ಮಾಹಿತಿ ನೀಡಿದ ವಾಹಿನಿ
ಬಿಗ್ ಬಾಸ್ ಫಿನಾಲೆ ಸಮಯದಲ್ಲಿ ಬದಲಾವಣೆ; ಮಾಹಿತಿ ನೀಡಿದ ವಾಹಿನಿ
Daily Devotional: ಮಂಗಳಸೂತ್ರದ ಮಹತ್ವ ತಿಳಿಯಿರಿ
Daily Devotional: ಮಂಗಳಸೂತ್ರದ ಮಹತ್ವ ತಿಳಿಯಿರಿ
ಬುಧಗ್ರಹ ಮಕರ ರಾಶಿಗೆ ಪ್ರವೇಶ ಮಾಡುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಬುಧಗ್ರಹ ಮಕರ ರಾಶಿಗೆ ಪ್ರವೇಶ ಮಾಡುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಸುದೀಪ್ ಸರ್ ನೋಡಿದ್ರೆ ಭಯ ಆಗುತ್ತೆ: ತೆಲುಗು ಬಿಗ್ ಬಾಸ್ ವಿನ್ನರ್ ಮಾತು
ಸುದೀಪ್ ಸರ್ ನೋಡಿದ್ರೆ ಭಯ ಆಗುತ್ತೆ: ತೆಲುಗು ಬಿಗ್ ಬಾಸ್ ವಿನ್ನರ್ ಮಾತು
ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ಬಿಗ್ ಬಾಸ್ ಮನೆಯಲ್ಲಿ ಕೊನೇ ವಾರ ಊಟ ಸೇರಲ್ಲ: ವಿನ್ನರ್ ನಿಖಿಲ್ ಅನುಭವ
ಬಿಗ್ ಬಾಸ್ ಮನೆಯಲ್ಲಿ ಕೊನೇ ವಾರ ಊಟ ಸೇರಲ್ಲ: ವಿನ್ನರ್ ನಿಖಿಲ್ ಅನುಭವ