‘ಈ ಸಿನಿಮಾದಿಂದ ಎಷ್ಟು ಹಣ ಬರುತ್ತದೆ ಎಂದು ರಾಧಿಕಾ ಎಂದಿಗೂ ಕೇಳಿಲ್ಲ’; ಯಶ್
ರಾಧಿಕಾ ಪಂಡಿತ್ ಅವರು ಯಶ್ನ 2016ರ ಡಿಸೆಂಬರ್ 6ರಂದು ವಿವಾಹ ಆದರು. ಇವರು ಹಾಯಾಗಿ ಸಂಸಾರ ನಡೆಸುತ್ತಾ ಇದ್ದಾರೆ. ಈಗ ಯಶ್ ಅವರು ಪತ್ನಿಯನ್ನು ಬಾಯ್ತುಂಬ ಹೊಗಳಿದ್ದಾರೆ. ಆ ಸಂದರ್ಭದ ವಿಡಿಯೋ ವೈರಲ್ ಆಗಿದೆ.
ರಾಧಿಕಾ ಪಂಡಿತ್ ಹಾಗೂ ಯಶ್ ದಂಪತಿ ಎಲ್ಲರಿಗೂ ಮಾದರಿ. ರಾಧಿಕಾ ಪಂಡಿತ್ ಅವರು ಯಶ್ಗೆ ಸದಾ ಬೆಂಬಲವಾಗಿ ನಿಂತಿದ್ದಾರೆ. ಯಶ್ ಎಷ್ಟೇ ಬ್ಯುಸಿ ಇದ್ದರೂ ಕುಟುಂಬಕ್ಕೆ ಸಮಯ ನೀಡುತ್ತಾರೆ. ಈಗ ರಾಧಿಕಾ ಪಂಡಿತ್ ಬಗ್ಗೆ ಯಶ್ ಅವರು ಮನಸಾರೆ ಮಾತನಾಡಿದ್ದಾರೆ. ಅವರು ಪತ್ನಿಯನ್ನು ಬಾಯ್ತುಂಬ ಹೊಗಳಿದ್ದಾರೆ. ಆ ಸಂದರ್ಭದ ವಿಡಿಯೋ ವೈರಲ್ ಆಗಿದೆ.
‘ದಿ ಹಾಲಿವುಡ್ ರಿಪೋರ್ಟರ್ ಇಂಡಿಯಾ’ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಯಶ್ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರು ಪತ್ನಿ ಬಗ್ಗೆಯೂ ಮಾತನಾಡಿದ್ದಾರೆ. ‘ಅವರು ನನ್ನ ಶಕ್ತಿ’ ಎಂದು ಯಶ್ ಅವರು ಹೇಳಿದ್ದಾರೆ.
‘ರಾಧಿಕಾ ಸಿಕ್ಕಿದ್ದು ನನ್ನ ಅದೃಷ್ಟ. ಅವಳು ಯಾವಾಗಲೂ ನನ್ನ ಬೆಂಬಲಿಸಿದ್ದಾಳೆ. ನನ್ನನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾಳೆ. ಇಬ್ಬರೂ ಒಟ್ಟಾಗಿ ಬೆಳೆದವರು. ನಾವಿಬ್ಬರೂ ಗೆಳೆಯರಾಗಿ ಪರಿಚಯ ಆದವರು. ನಂತರ ಮದುವೆ ಆದೆವು. ನಾನು ಏನು ಎಂಜಾಯ್ ಮಾಡುತ್ತೇನೆ ಅನ್ನೋದು ಫ್ರೆಂಡ್ ಆಗಿ ಅವಳಿಗೆ ಗೊತ್ತು. ಈ ಚಿತ್ರದಿಂದ ಏನು ಸಿಗುತ್ತದೆ? ಎಷ್ಟು ಹಣ ಸಿಗುತ್ತದೆ ಎಂದು ಯಾವಾಗಲೂ ಕೇಳಿಲ್ಲ. ಇದು ಒಳ್ಳೆಯ ಆಯ್ಕೆಯೇ ಅಥವಾ ಕೆಟ್ಟ ಆಯ್ಕೆಯೇ ಎಂದು ಕೇಳಿಲ್ಲ. ನೀನು ಖುಷಿಯಾಗಿದ್ದೀಯಾ ಎಂದಷ್ಟೇ ಕೇಳುತ್ತಾಳೆ. ಅವಳು ಅಟೆಷನ್ಷನ್ ಹಾಗೂ ಸಮಯವನ್ನು ಮಾತ್ರ ಕೇಳುತ್ತಾಳೆ’ ಎಂದಿದ್ದಾರೆ ಯಶ್.
ಇದನ್ನೂ ಓದಿ: ಮುಂಬೈನಲ್ಲಿ ಯಶ್, ರಾಧಿಕಾ ಪಂಡಿತ್ ಡಿನ್ನರ್: ಫೋಟೋ, ವಿಡಿಯೋಗೆ ಮುಗಿಬಿದ್ದ ಪಾಪರಾಜಿಗಳು
ರಾಧಿಕಾ ಪಂಡಿತ್ ಹಾಗೂ ಯಶ್ ಧಾರಾವಾಹಿಯಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಆ ಬಳಿಕ ಹಿರಿತೆರೆಗೆ ಒಟ್ಟಾಗಿ ಕಾಲಿಟ್ಟರು. ಇಬ್ಬರೂ ಕೆಲವು ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ್ದಾರೆ. ಇವರು 2016ರ ಡಿಸೆಂಬರ್ 6ರಂದು ವಿವಾಹ ಆದರು. ಇವರು ಹಾಯಾಗಿ ಸಂಸಾರ ನಡೆಸುತ್ತಾ ಇದ್ದಾರೆ. ಇಬ್ಬರೂ ಮತ್ತೊಮ್ಮೆ ತೆರೆಹಂಚಿಕೊಳ್ಳಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.