AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದರ್ಶನ್ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದ ನಿಶಾ ಯೋಗೇಶ್ವರ್; ಮುಂದೇನಾಯ್ತು?

‘ನಮ್ಮ ಕುಟುಂಬದ ಗುಟ್ಟನ್ನು ರಟ್ಟು ಮಾಡುತ್ತೇನೆ. ನನ್ನ ತಂದೆಯಿಂದ ನಾನು ಸಾಕಷ್ಟು ಅವಮಾನ ಅನುಭವಿಸಿದ್ದೇನೆ’ ಎಂದು ನಿಶಾ ಯೋಗೇಶ್ವರ್ ಹೇಳಿದ್ದರು. ನಿಶಾ ಒಮ್ಮೆ ಚಿತ್ರರಂಗಕ್ಕೆ ಬರಲು ಪ್ರಯತ್ನಿಸಿದ್ದರು. ತಂದೆಯ ರೀತಿಯೇ ತಾವೂ ಕಲಾವಿದರಾಗಿ ಮಿಂಚಬೇಕು ಎಂದು ಕನಸು ಕಂಡಿದ್ದರು.

ದರ್ಶನ್ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದ ನಿಶಾ ಯೋಗೇಶ್ವರ್; ಮುಂದೇನಾಯ್ತು?
ದರ್ಶನ್-ನಿಶಾ
ರಾಜೇಶ್ ದುಗ್ಗುಮನೆ
|

Updated on:Oct 24, 2024 | 12:07 PM

Share

ಸಿಪಿ ಯೋಗೇಶ್ವರ್ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಅವರಿಗೆ ಚನ್ನಪಟ್ಟಣ ವಿಧಾನಸಭೆಯ ಉಪಚುನಾವಣೆಗೆ ಕಾಂಗ್ರೆಸ್​ನಿಂದ ಟಿಕೆಟ್ ಸಿಕ್ಕಿದೆ. ಈಗ ಅವರ ವಿರುದ್ಧ ಮಗಳು ನಿಶಾ ಯೋಗೇಶ್ವರ್ ಸಿಡಿದೆದ್ದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ತಂದೆ ವಿರುದ್ಧವೇ ಪೋಸ್ಟ್ ಹಾಕಿ ಸುದ್ದಿ ಆಗಿದ್ದಾರೆ. ಇಷ್ಟೊಂದು ಸದ್ದು ಮಾಡುತ್ತಿರುವ ನಿಶಾ ಒಮ್ಮೆ ಚಿತ್ರರಂಗಕ್ಕೆ ಬರಲು ಪ್ರಯತ್ನಿಸಿದ್ದರು. ತಂದೆಯ ರೀತಿಯೇ ತಾವೂ ಕಲಾವಿದರಾಗಿ ಮಿಂಚಬೇಕು ಎಂದು ಕನಸು ಕಂಡಿದ್ದರು.

ಸಿಪಿ ಯೋಗೇಶ್ವರ್ ಅವರು ‘ಸೈನಿಕ’, ‘ಉತ್ತರ ಧ್ರುವದಿಂ ದಕ್ಷಿಣ ಧ್ರುವಕು’, ‘ಬದ್ರಿ’, ‘ಕಂಬಾಲಹಳ್ಳಿ’, ‘ಪ್ರೀತಿ ನೀ ಇಲ್ಲದೆ ನಾ ಹೇಗಿರಲಿ’ ರೀತಿಯ ಸಿನಿಮಾ ಮಾಡಿ ಗಮನ ಸೆಳೆದಿದ್ದರು. ಅವರ ಕೊನೆಯ ಸಿನಿಮಾ ‘ಅಟ್ಟಹಾಸ’. ಈ ಚಿತ್ರದಲ್ಲಿ ಅವರು ಪೊಲೀಸ್ ಪಾತ್ರ ಮಾಡಿದ್ದರು. ವೀರಪ್ಪನ್ ಜೀವನ ಆಧರಿಸಿ ಸಿನಿಮಾ ಮಾಡಲಾಗಿತ್ತು. ಯೋಗೇಶ್ವರ್ ಅವರು ಸಿನಿಮಾಗಳಲ್ಲಿ ನಟಿಸಿದ್ದನ್ನು ನೋಡಿ ನಿಶಾ ಸಾಕಷ್ಟು ಪ್ರಭಾವಕ್ಕೆ ಒಳಗಾಗಿದ್ದರು.

‘ನನ್ನ ತಂದೆ ಶೂಟ್​ಗೆ ಹೋಗೋದನ್ನು ನಾನು ಬಾಲ್ಯದಲ್ಲಿ ನೋಡುತ್ತಿದ್ದೆ. ಆದರೆ, ನಾನು ಎಂದಿಗೂ ಸಿನಿಮಾ ಸೆಟ್​ಗೆ ಹೋಗಿಲ್ಲ. ನಾನು ನಾಚಿಕೆ ಸ್ವಭಾವದವಳು’ ಎಂದಿದ್ದರು ನಿಶಾ. ನಿಶಾ ಅವರು ಕಾಲೇಜಿಗೆ ಹೋಗುವ ಸಂದರ್ಭದಲ್ಲೇ ತೆಲುಗು ಹಾಗೂ ಕನ್ನಡ ಸಿನಿಮಾಗಳಿಂದ ಆಫರ್​ಗಳು ಬಂದಿದ್ದವು. ಆದರೆ, ಅದನ್ನು ರಿಜೆಕ್ಟ್ ಮಾಡಿ ಅವರು ವಿದೇಶಕ್ಕೆ ಓದಲು ತೆರಳಿದರು.

ಓದು ಮುಗಿಸಿ ಭಾರತಕ್ಕೆ ನಿಶಾ ಮರಳಿದರು. 2013ರ ಸಮಯದಲ್ಲಿ ಚಿತ್ರರಂಗಕ್ಕೆ ಬರಬೇಕು ಎಂದು ನಿಶಾ ಪ್ರಯತ್ನಿಸಿದರು. ಆಗ ಅವರು ದರ್ಶನ್ ನಟನೆಯ ‘ಅಂಬರೀಷ’ ಚಿತ್ರಕ್ಕೆ ನಾಯಕಿ ಆಗಿ ಆಯ್ಕೆ ಆಗಿದ್ದರು. ಈ ಚಿತ್ರದ ಮುಹೂರ್ತ ಕೂಡ ನಡೆದಿತ್ತು. ಈ ವೇಳೆ ನಿಶಾ ಕಾಲಿಗೆ ಏಟಾಗಿತ್ತು. ಅವರಿಗೆ 2 ತಿಂಗಳು ವಿಶ್ರಾಂತಿ ಪಡೆಯಬೇಕಾಗಿ ಬಂತು. ಆದರೆ, ತಂಡದವರು ಎರಡು ತಿಂಗಳು ಕಾಯೋ ಸ್ಥಿತಿಯಲ್ಲಿ ಇರಲಿಲ್ಲ. ಹೀಗಾಗಿ, ಅವರು ಸಿನಿಮಾದಿಂದ ಹೊರ ಬಂದರು.

ಇದನ್ನೂ ಓದಿ: ನನ್ನ ಕುಟುಂಬದ ಗುಟ್ಟು ಬಯಲಿಗೆಳೆಯುವೆ; ಅಪ್ಪ ಸಿ.ಪಿ ಯೋಗೇಶ್ವರ್ ಕುರಿತ ಶಾಕಿಂಗ್ ವಿಷಯ ಬಿಚ್ಚಿಟ್ಟ ನಿಶಾ

ಈ ಬೆಳವಣಿಗೆ ಬಗ್ಗೆ ನಿಶಾ ಮಾತನಾಡಿದ್ದರು. ‘ನನ್ನನ್ನು ಈ ಸಿನಿಮಾದಿಂದ ಹೊರಗೆ ಇಟ್ಟಿದ್ದಕ್ಕೆ ಯಾವುದೇ ಬೇಸರ ಇಲ್ಲ’ ಎಂದಿದ್ದರು ನಿಶಾ. ನಂತರ ತೆಲುಗು ಸಿನಿಮಾ ರಂಗಕ್ಕೆ ಕಾಲಿಡಲೂ ನಿಶಾ ಪ್ರಯತ್ನಿಸಿದ್ದರು. ಅವರು ‘ಶ್ರೀರಾಮರಕ್ಷ’ ಹೆಸರಿನ ತೆಲುಗು ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಅವರು ರಂಜಿತ್ ಮೆನನ್ ಜೊತೆ ತೆರೆ ಹಂಚಿಕೊಂಡಿದ್ದರು. ಈ ಚಿತ್ರ ಕೂಡ ರಿಲೀಸ್ ಆಗಿಲ್ಲ. ನಿಶಾಗೆ ಬಾಲಿವುಡ್​ಗೆ ಕಾಲಿಡಬೇಕು ಎಂಬ ಆಸೆಯೂ ಇತ್ತು. ಈ ಆಸೆಯೂ ಇಡೇರಲೇ ಇಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:59 am, Thu, 24 October 24

Follow Us
ವಿಜಯೇಂದ್ರರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಅಡ್ಡಮತದಾನ ಮಾಡಿದ್ರಾ?
ವಿಜಯೇಂದ್ರರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಅಡ್ಡಮತದಾನ ಮಾಡಿದ್ರಾ?
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹರಿದುಬಂದ ಪ್ರವಾಸಿಗರ ದಂಡು, ಭಕ್ತ ಸಾಗರ
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹರಿದುಬಂದ ಪ್ರವಾಸಿಗರ ದಂಡು, ಭಕ್ತ ಸಾಗರ
ಮಳೆಯಿಲ್ಲದೇ ಬರಿದಾಯ್ತು ಭೀಮಾ ನದಿ: ಜಾನುವಾರುಗಳಿಗೂ ಕುಡಿಯಲು ನೀರಿಲ್ಲ
ಮಳೆಯಿಲ್ಲದೇ ಬರಿದಾಯ್ತು ಭೀಮಾ ನದಿ: ಜಾನುವಾರುಗಳಿಗೂ ಕುಡಿಯಲು ನೀರಿಲ್ಲ
ಚಲಿಸುತ್ತಿದ್ದ ಬೈಕ್​​ ಮೇಲೆ ಮರದ ಕೊಂಬೆ ಬಿದ್ದು ಸವಾರ ಗಂಭೀರ
ಚಲಿಸುತ್ತಿದ್ದ ಬೈಕ್​​ ಮೇಲೆ ಮರದ ಕೊಂಬೆ ಬಿದ್ದು ಸವಾರ ಗಂಭೀರ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​​ನ್ಯೂಸ್​​ ಕೊಟ್ಟ ರಾಜ್ಯ ಸರ್ಕಾರ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​​ನ್ಯೂಸ್​​ ಕೊಟ್ಟ ರಾಜ್ಯ ಸರ್ಕಾರ
ಧಾರವಾಡದ ರಾಮನಾಳದಲ್ಲಿ ಸರ್ವಧರ್ಮ ಸಮನ್ವಯತೆಗೆ ಸಾಕ್ಷಿಯಾದ ಮೊಹರಂ ಆಚರಣೆ
ಧಾರವಾಡದ ರಾಮನಾಳದಲ್ಲಿ ಸರ್ವಧರ್ಮ ಸಮನ್ವಯತೆಗೆ ಸಾಕ್ಷಿಯಾದ ಮೊಹರಂ ಆಚರಣೆ
ಬರೋಬ್ಬರಿ 6 ಕಿ.ಮೀ. ಓಡಿದ ದಳಪತಿ ವಿಜಯ್
ಬರೋಬ್ಬರಿ 6 ಕಿ.ಮೀ. ಓಡಿದ ದಳಪತಿ ವಿಜಯ್
ಮಂತ್ರಾಲಯಕ್ಕೆ ಭಕ್ತ ಸಾಗರ: 21 ದಿನಗಳಲ್ಲೇ ಬಂತು ಕೋಟಿ ಕೋಟಿ ಕಾಣಿಕೆ!
ಮಂತ್ರಾಲಯಕ್ಕೆ ಭಕ್ತ ಸಾಗರ: 21 ದಿನಗಳಲ್ಲೇ ಬಂತು ಕೋಟಿ ಕೋಟಿ ಕಾಣಿಕೆ!
ಚಲಿಸುತ್ತಿದ್ದ ಓಮಿನಿ ಕಾರಿನಿಂದ ಕೆಳಗೆ ಬಿದ್ದ ಐವರು ಮಕ್ಕಳು!
ಚಲಿಸುತ್ತಿದ್ದ ಓಮಿನಿ ಕಾರಿನಿಂದ ಕೆಳಗೆ ಬಿದ್ದ ಐವರು ಮಕ್ಕಳು!
ಎಣ್ಣೆ ಕಿಕ್​ನಲ್ಲಿ ಮಹಿಳಾ PSIಗೇ ಕಾಲಿನಿಂದ ಒದ್ದು ನಿಂದಿಸಿದ ಯುವತಿ
ಎಣ್ಣೆ ಕಿಕ್​ನಲ್ಲಿ ಮಹಿಳಾ PSIಗೇ ಕಾಲಿನಿಂದ ಒದ್ದು ನಿಂದಿಸಿದ ಯುವತಿ