ಯಶ್ ಹಾದಿಯಲ್ಲಿ ಅನಿಲ್ ಕಪೂರ್, ಶಾರುಖ್, ಅಜಯ್, ಅಮಿತಾಬ್ ಬಚ್ಚನ್ಗೂ ಮಾದರಿ
Anil Kapoor: ಕನ್ನಡದ ಸ್ಟಾರ್ ನಟ ಯಶ್ ಹಿಡಿದ ಹಾದಿಯನ್ನೇ ಬಾಲಿವುಡ್ ನಟ ಅನಿಲ್ ಕಪೂರ್ ಹಿಡಿದಿದ್ದಾರೆ. ಶಾರುಖ್ ಖಾನ್, ಅಮಿತಾಬ್ ಬಚ್ಚನ್, ರಣ್ವೀರ್ ಸಿಂಗ್, ಅಜಯ್ ದೇವಗನ್, ಹೃತಿಕ್ ರೋಷನ್ ಇನ್ನೂ ಹಲವು ಬಾಲಿವುಡ್ ಸ್ಟಾರ್ ನಟರುಗಳಿಗೆ ಮಾದರಿ ಆಗಿದ್ದಾರೆ ಅನಿಲ್ ಕಪೂರ್.
ಶಾರುಖ್ ಖಾನ್, ಅಮಿತಾಬ್ ಬಚ್ಚನ್, ಹೃತಿಕ್ ರೋಷನ್, ಟೈಗರ್ ಶ್ರಾಫ್, ಅಕ್ಷಯ್ ಕುಮಾರ್, ಅಜಯ್ ದೇವಗನ್ ಇವರನ್ನೆಲ್ಲ ಬಾಲಿವುಡ್ನ ಸ್ಟಾರ್ ನಟರು ಎಂದು ಪರಿಗಣಿಸಲಾಗುತ್ತದೆ. ನಟ ಅನಿಲ್ ಕಪೂರ್ ಅನ್ನು ಈ ಸ್ಟಾರ್ ನಟರ ಸಾಲಿನಲ್ಲಿ ಪರಿಗಣಿಸಲಾಗುವುದಿಲ್ಲ. ಆದರೂ ಸಹ ಅನಿಲ್ ಕಪೂರ್ ಬಾಲಿವುಡ್ನ ಹಿರಿಯ ಹಾಗೂ ಈಗಲೂ ಬೇಡಿಕೆ ಉಳಿಸಿಕೊಂಡಿರುವ ನಟ. ಭಾರಿ ಜನಪ್ರಿಯತೆ, ಅಭಿಮಾನಿಗಳನ್ನು ಹೊಂದಿರುವ ಶಾರುಖ್, ಹೃತಿಕ್, ಅಮಿತಾಬ್ ಅಂಥಹಾ ದೊಡ್ಡ ಸ್ಟಾರ್ ನಟರುಗಳಿಗೆ ಮಾದರಿ ಆಗುವಂಥಹಾ ಕಾರ್ಯವನ್ನು ಅನಿಲ್ ಕಪೂರ್ ಮಾಡಿದ್ದಾರೆ. ಕನ್ನಡದ ಸ್ಟಾರ್ ನಟ ಯಶ್ ಅವರ ಹಾದಿಯನ್ನೇ ತುಳಿದಿದ್ದಾರೆ ಹಿರಿಯ ನಟ ಅನಿಲ್ ಕಪೂರ್.
67 ವರ್ಷ ವಯಸ್ಸಾದರೂ ಸಹ ಅನಿಲ್ ಕಪೂರ್ ಈಗಲೂ ಫಿಟ್ ಆಗಿದ್ದಾರೆ. ಸಿನಿಮಾಗಳಲ್ಲಿ ನಟಿಸುತ್ತಾರೆ ರಿಯಾಲಿಟಿ ಶೋಗಳಲ್ಲಿ ಭಾಗವಹಿಸುತ್ತಾರೆ. ಜಾಹೀರಾತುಗಳಲ್ಲಿಯೂ ಸಹ ಕಾಣಿಸಿಕೊಳ್ಳುತ್ತಾರೆ. ಆದರೆ ಇತ್ತೀಚೆಗೆ ಅನಿಲ್ ಕಪೂರ್ ಜಾಹೀರಾತೊಂದರಲ್ಲಿ ನಟಿಸಲು ನಿರಾಕರಿಸಿದ್ದಾರೆ. ಭಾರಿ ಸಂಭಾವನೆ ಕೊಡುವ ಆಮಿಷ ಒಡ್ಡಿದರೂ ಸಹ ಅನಿಲ್ ಕಪೂರ್ ಒಪ್ಪಿಲ್ಲ. ಬೃಹತ್ ಪಾನ್ ಮಸಾಲ, ಗುಟ್ಕಾ ಕಂಪೆನಿಯೊಂದು ತಮ್ಮ ಜಾಹೀರಾತಿನಲ್ಲಿ ನಟಿಸುವಂತೆ ಅನಿಲ್ ಕಪೂರ್ಗೆ ಆಫರ್ ಕೊಟ್ಟಿತು. ಜಾಹೀರಾತಿನಲ್ಲಿ ನಟಿಸಿದರೆ 10 ಕೋಟಿ ರೂಪಾಯಿ ಸಂಭಾವನೆ ಕೊಡುವುದಾಗಿ ಆಮಿಷ ಒಡ್ಡಿತು. ಆದರೆ ಅನಿಲ್ ಕಪೂರ್ ಗುಟ್ಕಾ ಜಾಹೀರಾತಿನ ಅವಕಾಶವನ್ನು ನಿರಾಕರಿಸಿದ್ದಾರೆ.
ಇದನ್ನೂ ಓದಿ:‘ಶಿಲ್ಪಾನ ಮದುವೆ ಆಗಲು ರಾಜ್ ಕುಂದ್ರಾ ಹಣ ಸುರಿದಿದ್ದರು’; ಅನಿಲ್ ಕಪೂರ್
ಅನಿಲ್ ಕಪೂರ್ ಸ್ವತಃ ಫಿಟ್ನೆಸ್ ಬಗ್ಗೆ ಅತೀವ ಆಸಕ್ತಿ ಇರುವ ವ್ಯಕ್ತಿಯಾಗಿದ್ದು. ಆರೋಗ್ಯದ ಬಗ್ಗೆ ಬಹಳ ಕಾಳಜಿವಹಿಸುತ್ತಾರೆ. ಸ್ವತಃ ತಾವು ಫಿಟ್ನೆಸ್ ಬಗ್ಗೆ ಗಮನವಹಿಸುವ ವ್ಯಕ್ತಿಯಾಗಿ ಆರೋಗ್ಯಕ್ಕೆ ಮಾರಕ ಆಗುವಂಥಹಾ ಗುಟ್ಕಾ, ತಂಬಾಕುಗಳ ಪ್ರಚಾರ ಮಾಡುವುದಿಲ್ಲವೆಂದು ನಿರ್ಣಯ ಮಾಡಿ ಗುಟ್ಕಾ ಜಾಹೀರಾತನ್ನು ಅನಿಲ್ ಕಪೂರ್ ನಿರಾಕರಿಸಿದ್ದಾರೆ. ನಟ ಯಶ್ಗೂ ಸಹ ಕೆಲ ತಿಂಗಳ ಹಿಂದೆ ಗುಟ್ಕಾ ಸಂಸ್ಥೆಯೊಂದು ಜಾಹೀರಾತಿನಲ್ಲಿ ನಟಿಸಲು ಕೇಳಿತ್ತು. ಆದರೆ ಯಶ್ ಅದನ್ನು ನಿರಾಕರಿಸಿದ್ದರು. ಆರೋಗ್ಯಕ್ಕೆ ಮಾರಕವಾಗುವ ಯಾವುದೇ ವಸ್ತುವನ್ನು ತಾವು ಪ್ರಚಾರ ಮಾಡುವುದಿಲ್ಲವೆಂದು ತಿಳಿಸಿದರು.
ಅಜಯ್ ದೇವಗನ್, ಶಾರುಖ್ ಖಾನ್, ಹೃತಿಕ್ ರೋಷನ್, ಫಿಟ್ನೆಸ್ ಬಗ್ಗೆ ಅತೀವ ಕಾಳಜಿ ಇರುವ ಟೈಗರ್ ಶ್ರಾಫ್ ಅವರುಗಳು ಗುಟ್ಕಾ, ಪಾನ್ ಮಸಾಲ ಜಾಹೀರಾತಿನಲ್ಲಿ ನಟಿಸಿದ್ದಾರೆ. ಈಗಲೂ ಕಾಣಿಸಿಕೊಳ್ಳುತ್ತಾರೆ. ಅಕ್ಷಯ್ ಕುಮಾರ್, ಅಮಿತಾಬ್ ಬಚ್ಚನ್ ಅವರುಗಳು ಸಹ ಗುಟ್ಕಾ ಜಾಹೀರಾತಿನಲ್ಲಿ ನಟಿಸಿದ್ದಾರೆ. ಅಕ್ಷಯ್ ಕುಮಾರ್, ಗುಟ್ಕಾ ಜಾಹೀರಾತಿನಲ್ಲಿ ನಟಿಸಿದ್ದಕ್ಕೆ ಟೀಕೆಗೆ ಗುರಿಯಾಗಿದ್ದರು. ಆಗ ತಾವು ಇನ್ನು ಮುಂದೆ ಗುಟ್ಕಾ ಜಾಹೀರಾತಿನಲ್ಲಿ ನಟಿಸುವುದಿಲ್ಲ ಎಂದಿದ್ದರು, ಅಲ್ಲದೆ ಜಾಹೀರಾತಿನಲ್ಲಿ ನಟಿಸಲು ಪಡೆದ ಸಂಭಾವನೆಯನ್ನು ದಾನ ಮಾಡಿದರು. ಅಮಿತಾಬ್ ಬಚ್ಚನ್ ಸಹ ಇದೇ ಕಾರಣಕ್ಕೆ ಟೀಕೆಗೆ ಗುರಿಯಾಗಿದ್ದರು. ಇನ್ನು ಮುಂದೆ ಅಂಥಹಾ ಜಾಹೀರಾತಿನಲ್ಲಿ ನಟಿಸುವುದಿಲ್ಲ ಎಂದಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ