Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೀವ ಬೆದರಿಕೆ ನಡುವೆಯೂ ‘ಸಿಂಘಂ ಅಗೇನ್’ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿದ ಸಲ್ಮಾನ್ ಖಾನ್

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್​ನಿಂದ ಬೆದರಿಕೆ ಇದೆ ಎಂಬ ಕಾರಣದಿಂದ ಸಲ್ಮಾನ್ ಖಾನ್ ಅವರು ಕೆಲಸಗಳನ್ನು ನಿಲ್ಲಿಸಿಲ್ಲ. ‘ಸಿಂಘಂ ಅಗೇನ್’ ಸಿನಿಮಾದ ಶೂಟಿಂಗ್​ನಲ್ಲಿ ಅವರು ಭಾಗಿ ಆಗಿದ್ದಾರೆ. ಹಾಗಾಗಿ ಅವರ ಅತಿಥಿ ಪಾತ್ರ ಈ ಸಿನಿಮಾದಲ್ಲಿ ಇರಲಿದೆ ಎಂಬ ಮಾಹಿತಿ ಸಿಕ್ಕಿದೆ. ಬಾಲಿವುಡ್​ನ ಅನೇಕರು ಈ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ.

ಜೀವ ಬೆದರಿಕೆ ನಡುವೆಯೂ ‘ಸಿಂಘಂ ಅಗೇನ್’ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿದ ಸಲ್ಮಾನ್ ಖಾನ್
ಸಲ್ಮಾನ್ ಖಾನ್
Follow us
ಮದನ್​ ಕುಮಾರ್​
|

Updated on: Oct 22, 2024 | 4:21 PM

ನಟ ಸಲ್ಮಾನ್ ಖಾನ್ ಅವರಿಗೆ ಜೀವ ಬೆದರಿಕೆ ಇದೆ. ಗ್ಯಾಂಗ್​ಸ್ಟರ್​ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್​ನವರು ಬೆದರಿಕೆ ಹಾಕಿದ್ದಾರೆ. ಸಲ್ಮಾನ್ ಖಾನ್ ಅವರ ಆಪ್ತನಾದ ಬಾಬಾ ಸಿದ್ಧಿಕಿಯ ಹತ್ಯೆ ಇತ್ತೀಚೆಗೆ ನಡೆದಿದೆ. ಈ ಹಿನ್ನೆಲೆಯಲ್ಲಿ ಸಲ್ಮಾನ್ ಖಾನ್ ಅವರು ಸಿನಿಮಾ ಕೆಲಸಗಳಿಂದ ದೂರ ಇರಲಿದ್ದಾರೆ ಎನ್ನಲಾಗಿತ್ತು. ಆದರೆ ಅಂಥ ಬೆದರಿಕೆಗಳಿಗೆಲ್ಲ ಸಲ್ಲು ಜಗ್ಗಿಲ್ಲ. ಈಗಾಗಲೇ ಅವರು ಶೂಟಿಂಗ್​ಗೆ ಮರಳಿದ್ದಾರೆ. ‘ಸಿಂಘಂ ಅಗೇನ್’ ಚಿತ್ರದಲ್ಲಿ ಅತಿಥಿ ಪಾತ್ರ ಮಾಡುತ್ತಿದ್ದಾರೆ ಎಂದು ವರದಿ ಆಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

‘ಸಿಂಘಂ ಅಗೇನ್’ ಸಿನಿಮಾಗೆ ರೋಹಿತ್ ಶೆಟ್ಟಿ ಅವರು ನಿರ್ದೇಶನ ಮಾಡಿದ್ದಾರೆ. ಅಜಯ್ ದೇವಗನ್, ಕರೀನಾ ಕಪೂರ್ ಖಾನ್ ಅವರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಈ ಚಿತ್ರದಲ್ಲಿ ಅಕ್ಷಯ್​ ಕುಮಾರ್​, ಟೈಗರ್​ ಶ್ರಾಫ್, ದೀಪಿಕಾ ಪಡುಕೋಣೆ, ರಣವೀರ್ ಸಿಂಗ್​ ಮುಂತಾದ ಕಲಾವಿದರು ಅತಿಥಿ ಪಾತ್ರ ಮಾಡಿದ್ದಾರೆ. ಅದೇ ರೀತಿ ಸಲ್ಮಾನ್ ಖಾನ್​ ಅವರು ಕೂಡ ಅತಿಥಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಬಾಬಾ ಸಿದ್ಧಿಕಿ ಅವರ ನಿಧನದ ನಂತರ ಸಲ್ಮಾನ್ ಖಾನ್ ಅವರು ಆತಂಕಕ್ಕೆ ಒಳಗಾಗಿದ್ದರು. ಹಾಗಾಗಿ ಅವರನ್ನು ಚಿತ್ರೀಕರಣಕ್ಕೆ ಕರೆಯುವುದು ಬೇಡ ಎಂದು ‘ಸಿಂಘಂ ಅಗೇನ್’ ಚಿತ್ರತಂಡ ನಿರ್ಧರಿಸಿತ್ತು ಎಂಬ ಸುದ್ದಿ ಇತ್ತೀಚೆಗೆ ಕೇಳಿಬಂದಿತ್ತು. ಆದರೆ ಅದು ನಿಜವಾಗಿಲ್ಲ. ಸಲ್ಮಾನ್ ಖಾನ್ ಅವರ ಅತಿಥಿ ಪಾತ್ರ ಖಂಡಿತಾ ಇರಲಿದೆ ಎಂದು ಸ್ವತಃ ‘ಸಿಂಘಂ ಅಗೇನ್’ ಚಿತ್ರತಂಡದವರಿಂದಲೇ ಮಾಹಿತಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: ಸಲ್ಮಾನ್ ಖಾನ್ ಹತ್ಯೆಗೆ ಸ್ಕೆಚ್ ಹಾಕಿರುವ ಲಾರೆನ್ಸ್ ಬಿಷ್ಣೋಯ್ ಕುರಿತು ಬರಲಿದೆ ವೆಬ್ ಸಿರೀಸ್

ಬಹುತಾರಾಗಣ ಇರುವುದರಿಂದ ‘ಸಿಂಘಂ ಅಗೇನ್’ ಸಿನಿಮಾಗೆ ಮೇಲೆ ಜನರ ನಿರೀಕ್ಷೆ ಜಾಸ್ತಿ ಆಗಿದೆ. ಸಲ್ಮಾನ್ ಖಾನ್ ಅವರು ‘ದಬಂಗ್’ ಸಿನಿಮಾದ ಚುಲ್​ಬುಲ್ ಪಾಂಡೆ ಪಾತ್ರವನ್ನು ‘ಸಿಂಘಂ ಅಗೇನ್’ ಸಿನಿಮಾದಲ್ಲಿ ಮಾಡಲಿದ್ದಾರೆ. ಪ್ರೇಕ್ಷಕರ ನಿರೀಕ್ಷೆ ಡಬಲ್ ಆಗಲು ಇದು ಕೂಡ ಕಾರಣ. ವಿಷಯ ತಿಳಿದ ಬಳಿಕ ‘ಈ ಸಿನಿಮಾ ಖಂಡಿತಾ ಹಿಟ್ ಆಗಲಿದೆ’ ಎಂದು ಫ್ಯಾನ್ಸ್​ ಭವಿಷ್ಯ ನುಡಿಯುತ್ತಿದ್ದಾರೆ. ಈಗಾಗಲೇ ಟ್ರೇಲರ್​ ಗಮನ ಸೆಳೆದಿದೆ. ನವೆಂಬರ್​ 1ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಅದೇ ದಿನ ‘ಭೂಲ್ ಭುಲಯ್ಯ 3’ ಸಿನಿಮಾ ಕೂಡ ತೆರೆಕಾಣಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.