AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಲ್ಮಾನ್ ಖಾನ್ ಹತ್ಯೆಗೆ ಸ್ಕೆಚ್ ಹಾಕಿರುವ ಲಾರೆನ್ಸ್ ಬಿಷ್ಣೋಯ್ ಕುರಿತು ಬರಲಿದೆ ವೆಬ್ ಸಿರೀಸ್

ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ಧಿಕಿ ನಿಧನದ ಬಳಿಕ ಲಾರೆನ್ಸ್ ಬಿಷ್ಣೋಯ್ ಬಗ್ಗೆ ಹತ್ತು ಹಲವು ಸುದ್ದಿಗಳು ಕೇಳಿಬರುತ್ತಿವೆ. ಈ ಹತ್ಯೆಯ ಹೊಣೆಯನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್​ನವರು ಹೊತ್ತುಕೊಂಡಿದ್ದಾರೆ. ಸಲ್ಮಾನ್​ ಖಾನ್​ ಮೇಲೂ ಇದೇ ಗ್ಯಾಂಗ್ ಕಣ್ಣಿಟ್ಟಿದೆ. ಭಾರಿ ಕುಖ್ಯಾತಿ ಗಳಿಸಿರುವ ಲಾರೆನ್ಸ್ ಬಿಷ್ಣೋಯ್ ಜೀವನದ ಮೇಲೆ ವೆಬ್ ಸಿರೀಸ್ ಮಾಡಲು ಸಿದ್ಧತೆ ನಡೆದಿದೆ.

ಸಲ್ಮಾನ್ ಖಾನ್ ಹತ್ಯೆಗೆ ಸ್ಕೆಚ್ ಹಾಕಿರುವ ಲಾರೆನ್ಸ್ ಬಿಷ್ಣೋಯ್ ಕುರಿತು ಬರಲಿದೆ ವೆಬ್ ಸಿರೀಸ್
ಲಾರೆನ್ಸ್​ ಬಿಷ್ಣೋಯ್
ಮದನ್​ ಕುಮಾರ್​
|

Updated on: Oct 18, 2024 | 6:16 PM

Share

ಗ್ಯಾಂಗ್​ಸ್ಟರ್​ ಲಾರೆನ್ಸ್ ಬಿಷ್ಣೋಯ್​ ಕುಖ್ಯಾತಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕೃಷ್ಣ ಮೃಗ ಹತ್ಯೆ ಮಾಡಿದ ಸಲ್ಮಾನ್​ ಖಾನ್ ಮೇಲೆ ಲಾರೆನ್ಸ್ ಹಗೆ ಸಾಧಿಸುತ್ತಿದ್ದಾನೆ. 2014ರಿಂದಲೂ ಆತ ಜೈಲಿನಲ್ಲೇ ಇದ್ದಾನೆ. ಹಾಗಿದ್ದರೂ ಕೂಡ ಜೈಲಿನಿಂದಲೇ ಅನೇಕ ಕೃತ್ಯಗಳನ್ನು ನಡೆಸುತ್ತಿದ್ದಾನೆ. ಭೂಗತ ಲೋಕದ ಚಟುವಟಿಕೆಗಳನ್ನು ಆತ ನಿಯಂತ್ರಣ ಮಾಡುತ್ತಿದ್ದಾನೆ. ಸಲ್ಮಾನ್​ ಖಾನ್​ಗೆ ಆಪ್ತವಾಗಿದ್ದ ಬಾಬಾ ಸಿದ್ಧಿಕಿಯ ಹತ್ಯೆಯನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್​ನವರೇ ಮಾಡಿದ್ದಾರೆ ಎನ್ನಲಾಗಿದೆ. ಲಾರೆನ್ಸ್ ಜೀವನದ ಕಹಾನಿಯನ್ನು ಇಟ್ಟುಕೊಂಡು ವೆಬ್ ಸಿರೀಸ್​ ಮಾಡಲಾಗುತ್ತಿದೆ.

ವರದಿಗಳ ಪ್ರಕಾರ, ‘ಜಾನಿ ಫೈರ್​ಫಾಕ್ಸ್​ ಫಿಲ್ಮ್ ಪ್ರೊಡಕ್ಷನ್’ ಸಂಸ್ಥೆಯು ಲಾರೆನ್ಸ್​ ಬಿಷ್ಣೋಯ್ ಜೀವನದ ಬಗ್ಗೆ ವೆಬ್ ಸರಣಿ ಮಾಡಲಿದೆ. ಈ ಕುರಿತು ಶೀಘ್ರದಲ್ಲೇ ಅಧಿಕೃತ ಘೋಷಣೆ ಆಗಲಿದೆ. ‘ಲಾರೆನ್ಸ್ – ಎ ಗ್ಯಾಂಗ್​ಸ್ಟರ್​ ಸ್ಟೋರಿ’ ಎಂದು ಈ ವೆಬ್ ಸರಣಿಗೆ ಶೀರ್ಷಿಕೆ ಇಡಲಾಗಿದೆ. ಇಂಡಿಯನ್ ಮೋಷನ್ ಪಿಕ್ಚರ್ಸ್​ ಅಸೋಸಿಯೇಷನ್​ ಕಡೆಯಿಂದ ಈ ಟೈಟಲ್​ಗೆ ಅನುಮತಿ ನೀಡಿದೆ ಎನ್ನಲಾಗಿದೆ.

ಇದನ್ನೂ ಓದಿ: ಗ್ಯಾಂಗ್​ಸ್ಟರ್ ಲಾರೆನ್ಸ್​ ಬಿಷ್ಣೋಯ್ ಪ್ರೇಯಸಿಯನ್ನು ಜೀವಂತವಾಗಿ ಸುಟ್ಟು ಹಾಕಿದ್ರಾ?

ಲಾರೆನ್ಸ್ ಬಿಷ್ಣೋಯ್ ಯಾರು? ಆತ ಇಷ್ಟು ದೊಡ್ಡ ಗ್ಯಾಂಗ್​ಸ್ಟರ್​ ಆಗಿ ಬೆಳೆದಿದ್ದು ಹೇಗೆ? ಆತನ ಬದುಕಿನಲ್ಲಿ ನಡೆದ ಸಿನಿಮೀಯ ಘಟನೆಗಳು ಏನು ಎಂಬ ಹಲವು ವಿಚಾರಗಳನ್ನು ಈ ವೆಬ್ ಸಿರೀಸ್​ನಲ್ಲಿ ತೋರಿಸುವ ಸಾಧ್ಯತೆ ಇದೆ. ಸಲ್ಮಾನ್ ಖಾನ್​ ಮೇಲೆ ಸೇಡು ತೀರಿಸಿಕೊಳ್ಳಲು ಲಾರೆನ್ಸ್​ ಪ್ರಯತ್ನಿಸುತ್ತಿದ್ದಾನೆ. ಆ ಕಾರಣದಿಂದಲೇ ಆತನಿಗೆ ಸಿಕ್ಕಾಪಟ್ಟೆ ಪ್ರಚಾರ ಸಿಗುತ್ತಿದೆ.

ಇದನ್ನೂ ಓದಿ: ‘ಸಲ್ಮಾನ್ ಖಾನ್ ತಿರುಗೇಟು ನೀಡಬೇಕು’: ಲಾರೆನ್ಸ್ ಬಿಷ್ಣೋಯ್ ವಿಚಾರಕ್ಕೆ ತಲೆ ಹಾಕಿದ ಆರ್​ಜಿವಿ

‘ಲಾರೆನ್ಸ್ – ಎ ಗ್ಯಾಂಗ್​ಸ್ಟರ್​ ಸ್ಟೋರಿ’ ವೆಬ್ ಸರಣಿಯಲ್ಲಿ ಲಾರೆನ್ಸ್​ ಬಿಷ್ಣೋಯ್ ಪಾತ್ರವನ್ನು ಯಾರು ಮಾಡುತ್ತಾರೆ ಎಂಬುದನ್ನು ತಿಳಿಯುವ ಕುತೂಹಲ ಮೂಡಿದೆ. ಇತ್ತೀಚೆಗೆ ರಾಮ್ ಗೋಪಾಲ್ ವರ್ಮಾ ಅವರು ಲಾರೆನ್ಸ್ ಬಿಷ್ಣೋಯ್ ಬಗ್ಗೆ ಟ್ವೀಟ್ ಮಾಡಿದ್ದರು. ಆತ ಜೈಲಿನಲ್ಲಿ ಇದ್ದುಕೊಂಡೇ ಸ್ಟಾರ್​ ನಟನ ಹತ್ಯೆಗೆ ಸ್ಕೆಚ್ ಹಾಕುತ್ತಾನೆ ಎಂಬ ಕಥೆ ರೋಷಕವಾಗಿದೆ ಎಂದು ಅವರು ‘ಎಕ್ಸ್​’ ಖಾತೆಯಲ್ಲಿ ಬರೆದುಕೊಂಡಿದ್ದರು. ಅಷ್ಟರಲ್ಲಾಗಲೇ ವೆಬ್ ಸರಣಿಗೆ ತಯಾರಿ ನಡೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಚಾಮರಾಜನಗರ ಬೋನಿಗೆ ಬಿದ್ದ ಹುಲಿ
ಚಾಮರಾಜನಗರ ಬೋನಿಗೆ ಬಿದ್ದ ಹುಲಿ
2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ
2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ
ಬಸ್​ ದುರಂತದಲ್ಲಿ ಸುಟ್ಟು ಕರಕಲಾದ ಮೃತದೇಹಗಳ ಗುರುತು ಪತ್ತೆ ಹೇಗಿರುತ್ತೆ?
ಬಸ್​ ದುರಂತದಲ್ಲಿ ಸುಟ್ಟು ಕರಕಲಾದ ಮೃತದೇಹಗಳ ಗುರುತು ಪತ್ತೆ ಹೇಗಿರುತ್ತೆ?