‘ಶಿಲ್ಪಾನ ಮದುವೆ ಆಗಲು ರಾಜ್ ಕುಂದ್ರಾ ಹಣ ಸುರಿದಿದ್ದರು’; ಅನಿಲ್ ಕಪೂರ್  

ಶಿಲ್ಪಾ ಶೆಟ್ಟಿ ಅವರು ಮೊದಲಿನಷ್ಟು ಚಿತ್ರರಂಗದಲ್ಲಿ ಆ್ಯಕ್ಟಿವ್ ಆಗಿಲ್ಲ. ಅಲ್ಲೊಂದು ಇಲ್ಲೊಂದು ಸಿನಿಮಾ ಒಪ್ಪಿಕೊಂಡು ಅವರು ನಟಿಸುತ್ತಿದ್ದಾರೆ. ಅವರ ನಟನೆಯ ‘ಕೆಡಿ: ದಿ ಡೆವಿಲ್’ ಸಿನಿಮಾದಲ್ಲಿ ಶಿಲ್ಪಾ ನಟಿಸುತ್ತಿದ್ದಾರೆ. ಅವರು ಹಣದ ಕಾರಣಕ್ಕೆ ರಾಜ್​ ಕುಂದ್ರಾನ ಮದುವೆ ಆಗಿದ್ದರಂತೆ.

‘ಶಿಲ್ಪಾನ ಮದುವೆ ಆಗಲು ರಾಜ್ ಕುಂದ್ರಾ ಹಣ ಸುರಿದಿದ್ದರು’; ಅನಿಲ್ ಕಪೂರ್  
‘ಶಿಲ್ಪಾನ ಮದುವೆ ಆಗಲು ರಾಜ್ ಕುಂದ್ರಾ ಹಣ ಸುರಿದಿದ್ದರು’; ಅನಿಲ್ ಕಪೂರ್  
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Aug 28, 2024 | 8:51 AM

ಶಿಲ್ಪಾ ಶೆಟ್ಟಿ ಅವರು ಸದಾ ಸುದ್ದಿಯಲ್ಲಿ ಇರುತ್ತಾರೆ. ಅದರಲ್ಲೂ ರಾಜ್​ ಕುಂದ್ರಾ ಜೊತೆಗಿನ ಅವರ ದಾಂಪತ್ಯದ ವಿಚಾರ ಸದಾ ಚರ್ಚೆ ಆಗುತ್ತಲೇ ಇರುತ್ತದೆ. ರಾಜ್ ಕುಂದ್ರಾ ಅವರ ವಿರುದ್ಧ ಹಲವು ಆರೋಪಗಳು ಕೇಳಿ ಬಂದಿವೆ. ಆದಾಗ್ಯೂ ಶಿಲ್ಪಾ ಅವರನ್ನು ಬಿಟ್ಟುಕೊಟ್ಟಿಲ್ಲ. ಇದಕ್ಕೆ ಕಾರಣ ಹಣ ಎನ್ನಲಾಗಿದೆ. ಇದೇ ರೀತಿಯ ಆರೋಪವನ್ನು ಅನಿಲ್ ಕಪೂರ್ ಅವರು ಕೂಡ ಮಾಡಿದ್ದರು. ಆದರೆ, ಇದನ್ನು ಫನ್ ಆಗಿ ಹೇಳಿದ್ದರು ಅವರು.

ಶಿಲ್ಪಾ ಶೆಟ್ಟಿ ಅವರು ಟಾಕ್ ಶೋ ಒಂದಕ್ಕೆ ಬಂದಿದ್ದರು. ಇದರಲ್ಲಿ ಅನಿಲ್ ಕಪೂರ್ ಕೂಡ ಇದ್ದರು. ಇದನ್ನು ನಡೆಸಿಕೊಟ್ಟಿದ್ದು ಫರಾ ಖಾನ್. ಈ ಮೂವರು ಒಟ್ಟಾಗಿ ಮಾತುಕತೆ ನಡೆಸುತ್ತಿದ್ದರು. ಈ ವೇಳೆ ಕೆಲವು ಫನಿ ಪ್ರಶ್ನೆಗಳನ್ನು ಕೇಳಲಾಗಿತ್ತು. ಇದಕ್ಕೆ ಶಿಲ್ಪಾ ಶೆಟ್ಟಿ ಅವರು ಫನ್ನಿಯಾಗಿಯೇ ಉತ್ತರ ನೀಡಿದ್ದರು.

‘ರಾಜ್ ಜೊತೆ ಮದುವೆ ಆಗಲು ನೀವು ಓಕೆ ಎಂದಿದ್ದೀರಲ್ಲ. ಅವರೇನು ಸೀಟಿ ಹೊಡೆದರಾ ಅಥವಾ ತೋಳುಗಳನ್ನು ಚಾಚಿದ್ದರಾ’ ಎಂದು ಕೇಳಿದರು. ಇದಕ್ಕೆ ಉತ್ತರಿಸಿದ್ದ ಅನಿಲ್ ಕಪೂರ್ ‘ಹಣ ಚಾಚಿದ್ದರು’ ಎಂದಿದ್ದಾರೆ. ಇದನ್ನು ನೋಡಿ ನಕ್ಕಿದ್ದ ಶಿಲ್ಪಾ, ‘ಕೈಯನ್ನು ಕೂಡ ಚಾಚಿದ್ದರು’ ಎಂದಿದ್ದರು. ಅಂದರೆ ಹಗ್ ಮಾಡಿದ್ದರು ಎಂಬರ್ಥದಲ್ಲಿ ಅವರು ಹೇಳಿದ್ದರು. ಇದಕ್ಕೂ ಅನಿಲ್ ಕಪೂರ್ ಕೌಂಟರ್ ನೀಡಿದ್ದರು. ಅವರ ಕೈಯಲ್ಲಿ ಹಣ ಇತ್ತಲ್ಲ ಎಂದು ನಕ್ಕಿದ್ದರು.

View this post on Instagram

A post shared by GlamBlitz (@glamblitz_)

ಈ ಮೊದಲು ಕಪಿಲ್ ಶರ್ಮಾ ಶೋಗೆ ಶಿಲ್ಪಾ ಹಾಗೂ ರಾಜ್​ ಕುಂದ್ರಾ ಆಗಮಿಸಿದ್ದರು. ಈ ವೇಳೆ ಕಪಿಲ್ ಶರ್ಮಾ ಅವರು ರಾಜ್ ಕುಂದ್ರಾ ಅವರ ಮೇಲೆ ಫನ್ ಆಗಿ ಮಾತನಾಡಿದ್ದರು. ‘ಯಾವಾಗಲೂ ನೀವು ಶಿಲ್ಪಾ ಜೊತೆಯೇ ಇರುತ್ತೀರಿ. ವೆಕೇಶನ್ ತೆರಳುತ್ತೀರಿ, ಫುಟ್​ಬಾಲ್ ಮ್ಯಾಚ್​ಗೆ ತೆರಳುತ್ತೀರಿ. ಯಾವುದೇ ಕೆಲಸ ಇದಲ್ಲದೆ ಹಣ ಹೇಗೆ ಗಳಿಸುತ್ತೀರಿ. ನನಗೂ ಹೇಳಿ’ ಎಂದು ಜೋಕ್ ಮಾಡಿದ್ದರು.

ಇದನ್ನೂ ಓದಿ: ಶಿಲ್ಪಾ ಶೆಟ್ಟಿಗೆ ತುಳು ಭಾಷೆಯ ಮೇಲೆ ಇರೋ ಪ್ರೀತಿ ಎಂಥದ್ದು? ಇಲ್ಲಿದೆ ವಿಡಿಯೋ

ಶಿಲ್ಪಾ ಶೆಟ್ಟಿ ಅವರು ಹಣಕ್ಕಾಗಿ ರಾಜ್​ ಕುಂದ್ರಾನ ಮದುವೆ ಆಗಿದ್ದೇನೆ ಎಂಬುದನ್ನು ಅಲ್ಲಗಳೆಯುತ್ತಲೇ ಬರುತ್ತಿದ್ದಾರೆ. ‘ರಾಜ್ ಅವರನ್ನು ಮದುವೆ ಆಗುವುದಕ್ಕೂ ಮೊದಲು ನನ್ನ ಬಳಿ ಹಣ ಇತ್ತು. ಈಗಲೂ ಇದೆ’ ಎಂದು ಅವರು ಈ ಮೊದಲು ಹೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:50 am, Wed, 28 August 24

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ