ರಶ್ಮಿಕಾ ಜೊತೆ ಒಂದೂವರೆ ತಿಂಗಳು ನಿರಂತರವಾಗಿ ಶೂಟಿಂಗ್ ಮಾಡಲಿದ್ದಾರೆ ಸಲ್ಮಾನ್ ಖಾನ್
ರಶ್ಮಿಕಾ ಮಂದಣ್ಣ ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಜೊತೆಗೆ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಸಿನಿಮಾಕ್ಕಾಗಿ ಒಂದೇ ಒಂದೂವರೆ ತಿಂಗಳ ದೊಡ್ಡ ಶೆಡ್ಯೂಲ್ನಲ್ಲಿ ಸಲ್ಮಾನ್ ಖಾನ್ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ.
ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ‘ಟೈಗರ್ 3’ ಬಳಿಕ ಒಪ್ಪಿಕೊಂಡ ಸಿನಿಮಾ ಎಂದರೆ ಅದು ‘ಸಿಖಂದರ್’ ಚಿತ್ರ. ಈ ಸಿನಿಮಾದ ಶೂಟಿಂಗ್ ಈಗಾಗಲೇ ಆರಂಭ ಆಗಿದೆ. ಅಂಬಾನಿ ಮನೆಯ ಮದುವೆ ಮತ್ತಿತ್ಯಾದಿ ಕಾರ್ಯಕ್ರಮಗಳ ಕಾರಣದಿಂದ ಅವರು ಬ್ಯುಸಿ ಇದ್ದರು. ಈಗ ಸಂಪೂರ್ಣವಾಗಿ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಳ್ಳಲು ಸಲ್ಲು ನಿರ್ಧರಿಸಿದ್ದಾರಂತೆ. ಮೊದಲೇ ಶೂಟಿಂಗ್ ಪೂರ್ಣಗೊಂಡರೆ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಸಹಕಾರಿ ಆಗಲಿದೆ ಎಂಬುದು ಅವರ ಆಲೋಚನೆ. ಹೀಗಾಗಿ, ಒಂದೇ ಸ್ಟ್ರೆಚ್ನಲ್ಲಿ ಒಂದೂವರೆ ತಿಂಗಳ ಶೂಟ್ ಮಾಡಲು ಅವರು ನಿರ್ಧರಿಸಿದ್ದಾರೆ.
‘ಸಿಖಂದರ್’ ಸಿನಿಮಾ 2025ರ ಈದ್ಗೆ ರಿಲೀಸ್ ಆಗಲಿದೆ. ಇದು ಬಿಗ್ ಬಜೆಟ್ ಸಿನಿಮಾ. ಅಲ್ಲದೆ, ಬೇರೆ ಬೇರೆ ಕಡೆಗಳಲ್ಲಿ ಸಿನಿಮಾದ ಶೂಟ್ ನಡೆಯಲಿದೆ. ಈ ಎಲ್ಲಾ ಕಾರಣದಿಂದ ಆದಷ್ಟು ಬೇಗ ಸಿನಿಮಾದ ಕೆಲಸ ಮುಗಿಸಿಕೊಳ್ಳುವ ಆಲೋಚನೆ ತಂಡಕ್ಕೆ ಇದೆ. ಹೀಗಾಗಿ, ಮುಂಬೈನಲ್ಲಿ 45 ದಿನಗಳ ಶೆಡ್ಯೂಲ್ ಇಡಲಾಗಿದೆ. ಸಲ್ಮಾನ್ ಖಾನ್ ಅವರು ನಿರಂತರವಾಗಿ ಈ ಸಿನಿಮಾದ ಕೆಲಸದಲ್ಲಿ ಭಾಗಿ ಆಗಲಿದ್ದಾರೆ.
ಸಲ್ಮಾನ್ ಖಾನ್ ಸಿನಿಮಾಗಳಲ್ಲಿ ಭರ್ಜರಿ ಆ್ಯಕ್ಷನ್ ಇರುತ್ತದೆ. ಈಗ ಶೂಟ್ ಮಾಡಲಿರುವ ಶೆಡ್ಯೂಲ್ನಲ್ಲೂ ಭರ್ಜರಿ ಆ್ಯಕ್ಷನ್ ಇರಲಿದೆ. ಸಲ್ಮಾನ್ ಖಾನ್ ಅವರು ಸ್ಟಂಟ್ಗಳನ್ನು ಮಾಡಲಿದ್ದಾರೆ. ಸ್ಟುಡಿಯೋ ಒಂದರಲ್ಲಿ ಈ ಶೂಟ್ ನಡೆಯಲಿದೆ. ಸೆಟ್ ನಿರ್ಮಾಣಕ್ಕೆ ಬರೋಬ್ಬರಿ 3 ತಿಂಗಳು ಹಿಡಿದಿದೆ. ಇನ್ನು, ಎಮೋಷನಲ್ ದೃಶ್ಯಗಳನ್ನು ಕೂಡ ಶೂಟ್ ಮಾಡಲಾಗುತ್ತಿದೆ.
ಇದನ್ನೂ ಓದಿ:‘ಶೋಲೆ’ ಚಿತ್ರವನ್ನು ರಿಮೇಕ್ ಮಾಡುವ ಆಸೆ ವ್ಯಕ್ತಪಡಿಸಿದ ಸಲ್ಮಾನ್ ಖಾನ್
ನಟಿ ರಶ್ಮಿಕಾ ಮಂದಣ್ಣ ಅವರು ಈ ಚಿತ್ರದ ನಾಯಕಿ. ಸತ್ಯರಾಜ್, ಪ್ರತೀಕ್ ಬಬ್ಬರ್ ಕೂಡ ಇಲ್ಲಿ ಇರುತ್ತಾರೆ. ಹೀಗಾಗಿ, ರಶ್ಮಿಕಾ ಅವರು ಕೆಲ ದಿನ ಮುಂಬೈನಲ್ಲಿ ತಂಗಲಿದ್ದಾರೆ. ಸಿನಿಮಾ ಕೆಲಸಗಳಿಗಾಗಿ ಅವರು ಚೆನ್ನೈ, ಹೈದರಾಬಾದ್ ಹಾಗೂ ಮುಂಬೈ ಮಧ್ಯೆ ಸುತ್ತಾಡುತ್ತಾರೆ.
ಸಲ್ಮಾನ್ ಖಾನ್ ಅವರಿಗೆ ಇತ್ತೀಚೆಗೆ ಯಾವುದೇ ದೊಡ್ಡ ಗೆಲುವು ಸಿಕ್ಕಿಲ್ಲ. ಈ ಕಾರಣದಿಂದ ಅವರು ತಮಿಳು ನಿರ್ದೇಶಕನ ಜೊತೆ ಕೈ ಜೋಡಿಸಿದರು. ಈ ಚಿತ್ರದ ಬಗ್ಗೆ ಫ್ಯಾನ್ಸ್ಗೆ ಸಾಕಷ್ಟು ನಿರೀಕ್ಷೆ ಇದೆ. ಈ ಸಿನಿಮಾನ 2025ರ ಈದ್ಗೆ ತರುವ ಆಲೋಚನೆ ಇದೆ. ಈ ವರ್ಷ ಈದ್ಗೆ ಸಲ್ಲು ಸಿನಿಮಾ ರಿಲೀಸ್ ಆಗಿಲ್ಲ. ಇದು ಅವರ ಫ್ಯಾನ್ಸ್ಗೆ ಬೇಸರ ಮೂಡಿಸಿದೆ. ರಶ್ಮಿಕಾ ಸಿನಿಮಾ ವಿಚಾರಕ್ಕೆ ಬರೋದಾದರೆ ಅವರು ‘ಪುಷ್ಪ 2’ ಚಿತ್ರದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:19 pm, Tue, 27 August 24