AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಶೋಲೆ’ ಚಿತ್ರವನ್ನು ರಿಮೇಕ್ ಮಾಡುವ ಆಸೆ ವ್ಯಕ್ತಪಡಿಸಿದ ಸಲ್ಮಾನ್ ಖಾನ್

ಸಲಿಮ್ ಖಾನ್ ಹಾಗೂ ಜಾವೇದ್ ಅಖ್ತರ್ ಅವರ ಜೀವನ ಆಧರಿಸಿ ಡ್ಯಾಕ್ಯುಮೆಂಟರಿ ಸೀರಿಸ್ ರಿಲೀಸ್ ಮಾಡಲಾಗಿದೆ. ಇಬ್ಬರೂ ಸೇರಿ ‘ಶೋಲೆ’ ಸಿನಿಮಾಗೆ ಚಿತ್ರಕಥೆ ಬರೆದಿದ್ದರು. ಈ ಚಿತ್ರವನ್ನು ಸಲ್ಮಾನ್ ಖಾನ್ ಅವರು ರಿಮೇಕ್ ಮಾಡಲು ಸಲ್ಮಾನ್ ಖಾನ್ ಮುಂದಾಗಿದ್ದಾರೆ ಎನ್ನಲಾಗಿದೆ.

‘ಶೋಲೆ’ ಚಿತ್ರವನ್ನು ರಿಮೇಕ್ ಮಾಡುವ ಆಸೆ ವ್ಯಕ್ತಪಡಿಸಿದ ಸಲ್ಮಾನ್ ಖಾನ್
ಸಲ್ಮಾನ್ ಖಾನ್
ರಾಜೇಶ್ ದುಗ್ಗುಮನೆ
|

Updated on: Aug 23, 2024 | 8:43 AM

Share

ಅಮಿತಾಭ್ ಬಚ್ಚನ್ ನಟನೆಯ ‘ಶೋಲೆ’ ಸಿನಿಮಾ ರಿಲೀಸ್ ಆಗಿ 50 ವರ್ಷಗಳು ಕಳೆಯುತ್ತಾ ಬಂದಿವೆ. 1975ರ ಆಗಸ್ಟ್ 15ರಂದು ರಿಲೀಸ್ ಆದ ಈ ಚಿತ್ರ ಹಲವು ವರ್ಷ ಯಶಸ್ವಿ ಪ್ರದರ್ಶನ ಕಂಡಿತು. ಈ ಸಿನಿಮಾದಲ್ಲಿ ಅಮಿತಾಭ್ ಅವರ ಪಾತ್ರ ಗಮನ ಸೆಳೆಯಿತು. ಈ ಸಿನಿಮಾನ ರಿಮೇಕ್ ಮಾಡುವ ಆಸೆಯನ್ನು ಸಲ್ಮಾನ್ ಖಾನ್ ವ್ಯಕ್ತಪಡಿಸಿದ್ದಾರೆ.

ಸಲಿಮ್ ಖಾನ್ ಹಾಗೂ ಜಾವೇದ್ ಅಖ್ತರ್ ಅವರ ಜೀವನ ಆಧರಿಸಿ ಡ್ಯಾಕ್ಯುಮೆಂಟರಿ ಸೀರಿಸ್ ರಿಲೀಸ್ ಮಾಡಲಾಗಿದೆ. ಇಬ್ಬರೂ ಸೇರಿ ‘ಶೋಲೆ’ ಸಿನಿಮಾಗೆ ಚಿತ್ರಕಥೆ ಬರೆದಿದ್ದರು. ಈ ಚಿತ್ರವನ್ನು ರಮೇಶ್ ಸಿಪ್ಪಿ ನಿರ್ದೇಶನ ಮಾಡಿದ್ದರು. ಅಮಿತಾಭ್ ಬಚ್ಚನ್, ಧರ್ಮೇಂದ್ರ, ಸಂಜೀವ್ ಕುಮಾರ್, ಜಯಾ ಬಚ್ಚನ್, ಹೇಮಾ ಮಾಲಿನಿ ಮೊದಲಾದವರು ನಟಿಸಿದ್ದರು. ಈ ಚಿತ್ರದ ರಿಮೇಕ್ ಬಗ್ಗೆ ಸಲ್ಲು ಮಾತನಾಡಿದ್ದಾರೆ.

ನಿರ್ದೇಶಕ ಫರಾ ಖಾನ್ ಜೊತೆ ಸಲ್ಮಾನ್ ಖಾನ್ ಮಾತುಕತೆ ನಡೆಸಿದ್ದಾರೆ. ‘ಸಲಿಮ್-ಜಾವೇದ್ ಅವರ ಯಾವ ಚಿತ್ರವನ್ನು ರಿಮೇಕ್ ಮಾಡಬೇಕು ಎಂದು ನಿಮಗೆ ಅನಿಸುತ್ತಿದೆ’ ಎಂದು ಫರಾ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಸಲ್ಲು, ‘ನಾನು ಶೋಲೆ ಹಾಗೂ ದೀವಾರ್ ಚಿತ್ರವನ್ನು ರಿಮೇಕ್ ಮಾಡುತ್ತೇನೆ. ಶೋಲೆ ಸಿನಿಮಾದಲ್ಲಿ ಬರೋ ವಿರೂ, ಜೈ ಹಾಗೂ ಗಬ್ಬರ್ ಸಿಂಗ್ ಪಾತ್ರವನ್ನು ಮಾಡಬೇಕು ಎನ್ನುವ ಆಸೆ ನನ್ನದು’ ಎಂದಿದ್ದಾರೆ ಸಲ್ಮಾನ್ ಖಾನ್.

ಇದನ್ನೂ ಓದಿ: ಕೊನೆಗೂ ಒಳ್ಳೆ ನಿರ್ದೇಶಕರ ಜೊತೆ ಕೈ ಜೋಡಿಸಿದ ಸಲ್ಮಾನ್ ಖಾನ್

ಮೊದಲು ಗಬ್ಬರ್ ಸಿಂಗ್ ಪಾತ್ರವನ್ನು ಡ್ಯಾನಿ ಅವರು ಮಾಡಬೇಕಿತ್ತಂತೆ. ಆ ಬಳಿಕ ಅಮ್ಜದ್ ಖಾನ್ ಅವರನ್ನು ತರಲಾಯಿತು. ಈ ಪಾತ್ರವನ್ನು ಮಾಡೋದಕ್ಕೆ ಅನೇಕ ಕಲಾವಿದರು ಅವಕಾಶ ಕೇಳಿದ್ದರಂತೆ. ‘ಶೋಲೆ’ ಸಿನಿಮಾ 1975ರ ಆಗಸ್ಟ್ 15ರಂದು ರಿಲೀಸ್ ಆಗಿ ಮೆಚ್ಚುಗೆ ಪಡೆಯಿತು. ಇದು ಅತ್ಯಂತ ಯಶಸ್ವಿ ಸಿನಿಮಾಗಳಲ್ಲಿ ಒಂದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.