ನಕಲಿ ಖಾತೆ ಸೃಷ್ಟಿಸಿಕೊಂಡಿದ್ದಾರೆ ರಣಬೀರ್ ಕಪೂರ್​​; ರಶ್ಮಿಕಾಗೂ ಆಗಿತ್ತು ಅಚ್ಚರಿ

ರಣಬೀರ್ ಕಪೂರ್ ಅವರು ಅಧಿಕೃತವಾಗಿ ಯಾವುದೇ ಸೋಶಿಯಲ್ ಮೀಡಿಯಾ ಖಾತೆ ಹೊಂದಿಲ್ಲ. ಆದರೆ, ಅವರು ಸೋಶಿಯಲ್ ಮೀಡಿಯಾದಲ್ಲಿ ಖಾತೆ ಹೊಂದಿದ್ದಾರೆ. ಎಲ್ಲಾ ವಿಚಾರಗಳನ್ನು ಅವರು ಗಮನಿಸುತ್ತಾ ಇರುತ್ತಾರೆ . ಈ ಬಗ್ಗೆ ಅವರು ಹೇಳಿಕೊಂಡಿದ್ದರು.

ನಕಲಿ ಖಾತೆ ಸೃಷ್ಟಿಸಿಕೊಂಡಿದ್ದಾರೆ ರಣಬೀರ್ ಕಪೂರ್​​; ರಶ್ಮಿಕಾಗೂ ಆಗಿತ್ತು ಅಚ್ಚರಿ
ರಶ್ಮಿಕಾ-ರಣಬೀರ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Aug 23, 2024 | 7:49 AM

ರಣಬೀರ್ ಕಪೂರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿಲ್ಲ ಎಂಬುದು ಅನೇಕರ ನಂಬಿಕೆ. ಅವರು ತಮ್ಮದೇ ಹೆಸರಿನಲ್ಲಿ ಖಾತೆ ಹೊಂದಿಲ್ಲ. ಟ್ವಿಟರ್, ಇನ್​ಸ್ಟಾಗ್ರಾಮ್, ಫೇಸ್​ಬುಕ್​ನಲ್ಲಿ ಹುಡುಕಿದರೆ ರಣಬೀರ್ ಕಪೂರ್ ಹೆಸರಲ್ಲಿ ಯಾವುದೇ ಅಧಿಕೃತ ಖಾತೆ ಸಿಗೋದಿಲ್ಲ. ಅಸಲಿಗೆ ರಣಬೀರ್ ಕಪೂರ್ ಅವರು ಸೋಶಿಯಲ್ ಮೀಡಿಯಾದಲ್ಲಿ ನಕಲಿ ಖಾತೆ ಹೊಂದಿದ್ದಾರಂತೆ. ಈ ವಿಚಾರವನ್ನು ಆಲಿಯಾ ಭಟ್ ಅವರು ಈ ಮೊದಲು ರಿವೀಲ್ ಮಾಡಿದ್ದರು.

ಸೆಲೆಬ್ರಿಟಿ ಪಟ್ಟ ಸಿಕ್ಕ ಬಳಿಕ ಬಹುತೇಕ ಕಲಾವಿದರು ಸೋಶಿಯಲ್ ಮೀಡಿಯಾ ಖಾತೆ ಓಪನ್ ಮಾಡುತ್ತಾರೆ. ಈ ಮೂಲಕ ಹೆಚ್ಚೆಚ್ಚು ಫಾಲೋವರ್ಸ್ ಹೊಂದಲು ಪ್ರಯತ್ನಿಸುತ್ತಾರೆ. ಬೇರೆ ಸೆಲೆಬ್ರಿಟಿಗಳಿಗೆ ತಮಿಗಿಂತ ಹೆಚ್ಚಿನ ಫಾಲೋವರ್ಸ್ ಇದ್ದಾರೆ ಎಂದು ಹೊಟ್ಟೆ ಉರಿದುಕೊಂಡ ಅನೇಕರು ಇದ್ದಾರೆ. ಆದರೆ, ರಣಬೀರ್ ಕಪೂರ್ ಇದಕ್ಕೆ ಭಿನ್ನ. ಅವರು ತಮ್ಮ ಹೆಸರಲ್ಲಿ ಯಾವುದೇ ಅಧಿಕೃತ ಖಾತೆ ಹೊಂದಿಲ್ಲ. ಆದರೆ, ಅವರು ಎಲ್ಲಾ ಸೆಲೆಬ್ರಿಟಿಗಳ ಮೇಲೆ ಕಣ್ಣಿಟ್ಟಿದ್ದಾರೆ. ಅದೂ ಫೇಕ್ ಖಾತೆ ಮೂಲಕ.

ಆಲಿಯಾ ಭಟ್ ಹಾಗೂ ದೀಪಿಕಾ ಪಡುಕೋಣೆ ಅವರು ಈ ಮೊದಲು ಕಾಫಿ ವಿತ್ ಕರಣ್ ಶೋಗೆ ಬಂದಿದ್ದರು. ಈ ವೇಳೆ ಆಲಿಯಾಗೆ ಈ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. ‘ಬೇರೆಯವರ ಹೆಸರಲ್ಲಿ ರಣಬೀರ್ ಕಪೂರ್ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ, ಹೌದೇ’ ಎಂದು ಕೇಳಲಾಯಿತು. ಇದಕ್ಕೆ ಹೌದು ಎನ್ನುವ ಉತ್ತರವನ್ನು ಆಲಿಯಾ ಭಟ್ ನೀಡಿದ್ದರು.

ರಶ್ಮಿಕಾ ಮಂದಣ್ಣ ಹಾಗೂ ರಣಬೀರ್ ಕಪೂರ್ ಅವರು ಈ ಮೊದಲು ‘ಅನಿಮಲ್’ ಸಿನಿಮಾ ಪ್ರಚಾರಕ್ಕೆ ಬಾಲಯ್ಯ ಶೋಗೆ ಬಂದಿದ್ದರು. ಈ ವೇಳೆ ರಶ್ಮಿಕಾ ಎದುರು ರಣಬೀರ್ ಈ ವಿಚಾರ ರಿವೀಲ್ ಮಾಡಿದ್ದರು. ‘ನೀವು ಸೋಶಿಯಲ್ ಮೀಡಿಯಾದಲ್ಲಿ ಇಲ್ಲ. ನಿಮಗೆ ಈ ಬಗ್ಗೆ ಹೇಗೆ ಗೊತ್ತು’ ಎಂದು ರಶ್ಮಿಕಾ ಅವರು ರಣಬೀರ್​ಗೆ ಕೇಳಿದ್ದರು. ಇದಕ್ಕೆ ಉತ್ತರ ನೀಡಿದ್ದ ರಣಬೀರ್, ‘ನಾನು ಸೋಶಿಯಲ್ ಮೀಡಿಯಾದಲ್ಲಿ ಇದ್ದೇನೆ. ಆದರೆ, ಬೇರೆಯವರ ಹೆಸರಲ್ಲಿ’ ಎಂದಿದ್ದರು.

ಸದ್ಯ ರಣಬೀರ್ ಕಪೂರ್ ಅವರ ಫೇಕ್ ಖಾತೆಯ ಹೆಸರು ಏನು ಎಂಬ ಬಗ್ಗೆ ಫ್ಯಾನ್ಸ್ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಆಲಿಯಾ ಭಟ್ ಅವರು 500ಕ್ಕೂ ಹೆಚ್ಚು ಜನರನ್ನು ಫಾಲೋ ಮಾಡುತ್ತಿದ್ದಾರೆ. ಈ ಪೈಕಿ ರಣಬೀರ್ ಕಪೂರ್ ಅವರ ಖಾತೆಯೂ ಇರಬಹುದು ಎಂದು ಅನೇಕರು ಊಹಿಸಿದ್ದಾರೆ.

ಇದನ್ನೂ ಓದಿ: 17ನೇ ವಯಸ್ಸಿಗೆ ಧೂಮಪಾನದ ಚಟ; ಆ ವ್ಯಕ್ತಿಗಾಗಿ ಸಿಗರೇಟ್ ಬಿಟ್ಟ ರಣಬೀರ್ ಕಪೂರ್

ರಣಬೀರ್ ಕಪೂರ್ ಅವರು ಸದ್ಯ ‘ರಾಮಾಯಣ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.