‘ಪ್ರಭಾಸ್​ ಮುಂದೆ ಹೃತಿಕ್​ ರೋಷನ್​ ಏನೇನೂ ಅಲ್ಲ’: ವೈರಲ್​ ವಿಡಿಯೋದಲ್ಲಿ ಅಲ್ಲು ಅರ್ಜುನ್​ ಹೇಳಿಕೆ

ಪ್ರಭಾಸ್​ ಅವರು ‘ಕಲ್ಕಿ 2898 ಎಡಿ’ ಸಿನಿಮಾದಿಂದ ದೊಡ್ಡ ಗೆಲುವು ಪಡೆದಿದ್ದಾರೆ. ಆದರೆ ಅದನ್ನು ಬಾಲಿವುಡ್​ನ ಕೆಲವರು ಸಹಿಸಿಕೊಂಡಂತಿಲ್ಲ. ಈಗ ದಕ್ಷಿಣ ಭಾರತದ ಚಿತ್ರರಂಗ ಮತ್ತು ಬಾಲಿವುಡ್​ ನಡುವೆ ಯಾವುದು ಗ್ರೇಟ್​ ಎಂಬ ಕುರಿತು ಸಿನಿಪ್ರಿಯರು ಚರ್ಚೆ ನಡೆಸಿದ್ದಾರೆ. ಕೆಲವು ಹಳೇ ವಿಡಿಯೋವನ್ನು ಎಳೆದು ತಂದು ವೈರಲ್​ ಮಾಡಲಾಗಿದೆ.

‘ಪ್ರಭಾಸ್​ ಮುಂದೆ ಹೃತಿಕ್​ ರೋಷನ್​ ಏನೇನೂ ಅಲ್ಲ’: ವೈರಲ್​ ವಿಡಿಯೋದಲ್ಲಿ ಅಲ್ಲು ಅರ್ಜುನ್​ ಹೇಳಿಕೆ
ಹೃತಿಕ್​ ರೋಷನ್​, ಅಲ್ಲು ಅರ್ಜುನ್​, ಪ್ರಭಾಸ್​
Follow us
ಮದನ್​ ಕುಮಾರ್​
|

Updated on: Aug 23, 2024 | 4:00 PM

‘ಬಾಲಿವುಡ್​ ವರ್ಸಸ್​ ದಕ್ಷಿಣ ಭಾರತ ಚಿತ್ರರಂಗ’ ಎಂಬ ಚರ್ಚೆ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಅದಕ್ಕೆ ಕಾರಣ ಆಗಿದ್ದು ಬಾಲಿವುಡ್​ ನಟ ಅರ್ಷದ್​ ವಾರ್ಸಿ ಇತ್ತೀಚೆಗೆ ನೀಡಿದ ಹೇಳಿಕೆ. ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಪ್ರಭಾಸ್​ ಜೋಕರ್​ ರೀತಿ ಕಾಣ್ತಾರೆ ಎಂದು ಅರ್ಷದ್ ವಾರ್ಸಿ ಹೇಳಿದ್ದನ್ನು ಸೌತ್​ ಫಿಲ್ಮ್​ ಇಂಡಸ್ಟ್ರಿಯ ಅನೇಕರು ಖಂಡಿಸಿದ್ದಾರೆ. ಈ ಸಂದರ್ಭದಲ್ಲಿ ಬಾಲಿವುಡ್​ ಮತ್ತು ದಕ್ಷಿಣ ಭಾರತದ ಚಿತ್ರರಂಗದಲ್ಲಿ ಯಾವುದು ಮೇಲೆ ಎಂಬ ಬಿಸಿಬಿಸಿ ಚರ್ಚೆ ಜೋರಾಗಿದೆ. ಈ ನಡುವೆ ಅಲ್ಲು ಅರ್ಜುನ್​ ಅವರು ಹೃತಿಕ್​ ರೋಷನ್​ ಬಗ್ಗೆ ಮಾತನಾಡಿದ್ದ ಒಂದು ವಿಡಿಯೋ ವೈರಲ್​ ಆಗುತ್ತಿದೆ.

ವೇದಿಕೆ ಕಾರ್ಯಕ್ರಮವೊಂದರಲ್ಲಿ ಅಲ್ಲು ಅರ್ಜುನ್​ ಅವರು ಪ್ರಭಾಸ್​ ಅವರನ್ನು ಹೊಗಳುತ್ತಿದ್ದರು. ಈ ವೇಳೆ ರಾಜಮೌಳಿಯ ಹೇಳಿಕೆಯನ್ನು ಅಲ್ಲು ಅರ್ಜುನ್​ ಪುನರುಚ್ಚರಿಸಿದರು. ‘ರಾಜಮೌಳಿ ಹೇಳಿದಂತೆ ಪ್ರಭಾಸ್​ ಮುಂದೆ ಹೃತಿಕ್ ರೋಷನ್​ ಏನೇನೂ ಅಲ್ಲ’ ಎಂದು ಅಲ್ಲು ಅರ್ಜುನ್​ ಹೇಳಿದ್ದರು. ಆ ವಿಡಿಯೋವನ್ನು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಮಾಡಲಾಗುತ್ತಿದೆ.

old video of Allu Arjun’s comments on Hrithik Roshan resurfacing byu/KramerDwight inBollyBlindsNGossip

ಈ ಮೊದಲು ‘ಕೆಜಿಎಫ್​ 2’, ‘ಪುಷ್ಪ’, ‘ಬಾಹುಬಲಿ’ ಮುಂತಾದ ಸಿನಿಮಾಗಳು ಅಬ್ಬರಿಸಿದಾಗಲೂ ಹಿಂದಿ ಚಿತ್ರರಂಗ ವರ್ಸಸ್ ಸೌತ್​ ಸಿನಿಮಾ ಇಂಡಸ್ಟ್ರಿ ಎಂಬ ಟಾಕ್​ ಶುರುವಾಗಿತ್ತು. ಇವೆರಡರಲ್ಲಿ ಯಾವುದು ಗ್ರೇಟ್​ ಎಂಬ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ನೆಟ್ಟಿಗರು ಹಲವು ಬಗೆಯ ಅಭಿಪ್ರಾಯ ತಿಳಿಸುತ್ತಿದ್ದಾರೆ. ಬಾಲಿವುಡ್​ನಲ್ಲಿ ಹಲವು ಸಿನಿಮಾಗಳು ಸೋತಾಗ ಹಿಂದಿ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ‘ನಾವು ದಕ್ಷಿಣದ ಮಂದಿಯನ್ನು ನೋಡಿ ಕಲಿಯಬೇಕು’ ಅಂತ ಹೇಳಿದ್ದುಂಟು.

ಇದನ್ನೂ ಓದಿ: ‘ಕಲ್ಕಿ ಚಿತ್ರದಲ್ಲಿ ಪ್ರಭಾಸ್​ನ ಜೋಕರ್ ರೀತಿ ತೋರಿಸಲಾಗಿದೆ’; ಬಾಲಿವುಡ್ ನಟನ ಬೇಸರ

ಅಲ್ಲು ಅರ್ಜುನ್​ ಅವರ ಹಳೇ ವಿಡಿಯೋ ಈಗ ಮತ್ತೆ ವೈರಲ್​ ಆಗಿದ್ದು, ಅದನ್ನು ಇಟ್ಟುಕೊಂಡು ಜನರು ತಮ್ಮ ವಾದ ಮಂಡಿಸುತ್ತಿದ್ದಾರೆ. ಪ್ರಭಾಸ್​ ಅಭಿಮಾನಿಗಳು ಈ ವಿಡಿಯೋವನ್ನು ಹಂಚಿ ಹಬ್ಬ ಮಾಡುತ್ತಿದ್ದಾರೆ. ಆದರೆ ಹೃತಿಕ್​ ರೋಷನ್​ ಅಭಿಮಾನಿಗಳು ಅಲ್ಲು ಅರ್ಜನ್​ ಹೇಳಿದ ಮಾತನ್ನು ಒಪ್ಪಿಕೊಂಡಿಲ್ಲ. ಈಗಂತೂ ಚಿತ್ರರಂಗದಲ್ಲಿ ಭಾಷೆಯ ಗಡಿ ಇಲ್ಲದಂತಾಗಿದೆ. ಟಾಲಿವುಡ್​ನ ಸೆಲೆಬ್ರಿಟಿಗಳು ಬಾಲಿವುಡ್​ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅದೇ ರೀತಿ ಬಾಲಿವುಡ್​ ಮಂದಿ ಕೂಡ ತೆಲುಗು ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ. ‘ವಾರ್​ 2’ ಸಿನಿಮಾದಲ್ಲಿ ಹೃತಿಕ್​ ರೋಷನ್​ ಮತ್ತು ಟಾಲಿವುಡ್​ ಸ್ಟಾರ್​ ನಟ ಜೂನಿಯರ್​ ಎನ್​ಟಿಆರ್​ ನಡೆಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.