‘ಕಲ್ಕಿ ಚಿತ್ರದಲ್ಲಿ ಪ್ರಭಾಸ್​ನ ಜೋಕರ್ ರೀತಿ ತೋರಿಸಲಾಗಿದೆ’; ಬಾಲಿವುಡ್ ನಟನ ಬೇಸರ

ಪ್ರಭಾಸ್ ಅವರಿಗೆ ಸ್ಕ್ರೀನ್​ಸ್ಪೇಸ್ ನೀಡಬೇಕು ಎಂಬ ಏಕೈಕ ಕಾರಣಕ್ಕೆ ‘ಕಲ್ಕಿ 2898 ಎಡಿ’ ಚಿತ್ರದಲ್ಲಿ ಅವರಿಗೆ ಕೆಲವು ದೃಶ್ಯಗಳನ್ನು ನೀಡಲಾಗಿದೆ ಎಂದು ಕೆಲವರು ಹೇಳಿದ್ದಾರೆ. ಈ ವಿಚಾರದ ಬಗ್ಗೆ ಯಾವುದೇ ಸೆಲೆಬ್ರಿಟಿಗಳು ಮಾತನಾಡಿರಲಿಲ್ಲ. ಈಗ ಅರ್ಷದ್ ವಾರ್ಸಿ ಮಾತನಾಡಿದ್ದಾರೆ.

‘ಕಲ್ಕಿ ಚಿತ್ರದಲ್ಲಿ ಪ್ರಭಾಸ್​ನ ಜೋಕರ್ ರೀತಿ ತೋರಿಸಲಾಗಿದೆ’; ಬಾಲಿವುಡ್ ನಟನ ಬೇಸರ
ಕಲ್ಕಿ 2898 ಎಡಿ
Follow us
ರಾಜೇಶ್ ದುಗ್ಗುಮನೆ
|

Updated on: Aug 18, 2024 | 11:43 AM

‘ಕಲ್ಕಿ 2898 ಎಡಿ’ ಸಿನಿಮಾ ಸೂಪರ್ ಹಿಟ್ ಎನಿಸಿಕೊಂಡಿದೆ. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಮಾಡಿರೋ ಗಳಿಕೆ ಬರೋಬ್ಬರಿ 1100 ಕೋಟಿ ರೂಪಾಯಿ. ಈ ಸಿನಿಮಾ ಶೀಘ್ರವೇ ಒಟಿಟಿಗೆ ಕಾಲಿಡಲಿದೆ. ಈ ಸಿನಿಮಾದಲ್ಲಿ ಅನೇಕರು ಅಮಿತಾಭ್ ಬಚ್ಚನ್ ಮಾಡಿದ ಪಾತ್ರವನ್ನು ಮೆಚ್ಚಿಕೊಂಡಿದ್ದಾರೆ. ಕೆಲವರಿಗೆ ಪ್ರಭಾಸ್ ಪಾತ್ರಕ್ಕೆ ಇನ್ನೂ ತೂಕ ನೀಡಬಹುದು ಎಂದನಿಸಿತ್ತು. ಆದರೆ, ಓಪನ್ ಆಗಿ ಇದನ್ನು ಹೇಳಿಕೊಂಡವರು, ಅವರ ಪಾತ್ರವನ್ನು ಟೀಕಸಿದವರು ಕಡಿಮೆ. ಈಗ ಈ ಪಾತ್ರವನ್ನು ಬಾಲಿವುಡ್ ನಟ ಅರ್ಷದ್ ವಾರ್ಸಿ ಅವರು ಟೀಕೆ ಮಾಡಿದ್ದಾರೆ.

ಅರ್ಷದ್ ವಾರ್ಸಿ ಅವರು ಸ್ಯಾಮ್​ದಿಶ್ ಭಾಟಿಯಾ ಯೂಟ್ಯೂಬ್ ಚಾನೆಲ್ ನೀಡಿದ ಸಂದರ್ಶನದಲ್ಲಿ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಅವರಿಗೆ ‘ಕಲ್ಕಿ 2898 ಎಡಿ’ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಅಮಿತಾಭ್ ಬಚ್ಚನ್ ಪಾತ್ರವನ್ನು ಹೊಗಳಿದ್ದು, ಪ್ರಭಾಸ್ ಪಾತ್ರದ ಬಗ್ಗೆ ಬೇಸರ ಹೊರ ಹಾಕಿದ್ದಾರೆ.

‘ಕಲ್ಕಿ 2898 ಎಡಿ’ ಚಿತ್ರವನ್ನು ಇತ್ತೀಚೆಗೆ ವೀಕ್ಷಿಸಿದೆ. ನನಗೆ ಅದು ಇಷ್ಟ ಆಗಿಲ್ಲ. ಅಮಿತಾಭ್ ಬಚ್ಚನ್ ಅವರದ್ದು ಅದ್ಭುತ ಪಾತ್ರ. ಅವರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಅಷ್ಟು ಪವರ್ ಸಿಕ್ಕರೆ ಜೀವನ ಬದಲಾಗಿ ಬಿಡುತ್ತದೆ’ ಎಂದು ಅರ್ಷದ್ ವಾರ್ಸಿ ಹೇಳಿದ್ದಾರೆ. ಈ ಮೂಲಕ ಅವರು ಅಮಿತಾಭ್ ಬಚ್ಚನ್ ಅವರನ್ನು ಬಾಯ್ತುಂಬ ಹೊಗಳಿದ್ದಾರೆ.

View this post on Instagram

A post shared by Podcast (@podcasti)

ಇದನ್ನೂ ಓದಿ: ಪ್ರಭಾಸ್ ಜೊತೆ ನಟಿಸಲಿದ್ದಾರೆಯೇ ನಟಿ ಮೃಣಾಲ್ ಠಾಕೂರ್

‘ಪ್ರಭಾಸ್ ಅವರ ಪಾತ್ರದ ಬಗ್ಗೆ ಬೇಸರ ಇದೆ. ಅವರನ್ನು ಜೋಕರ್ ರೀತಿ ತೋರಿಸಲಾಗಿದೆ. ಯಾಕೆ? ಅವರನ್ನು ಅದ್ಭುತವಾಗಿ ತೋರಿಸಬಹುದಿತ್ತು. ಆದರೆ ನೀವು ಮಾಡಿದ್ದು ಏನು? ಈ ರೀತಿಯ ಸಿನಿಮಾಗಳನ್ನು ಏಕೆ ಮಾಡುತ್ತಾರೋ ಗೊತ್ತಿಲ್ಲ’ ಎಂದು ಅರ್ಷದ್ ಬೇಸರ ಹೊರಹಾಕಿದ್ದಾರೆ.

ಪ್ರಭಾಸ್ ಅವರಿಗೆ ಸ್ಕ್ರೀನ್​ಸ್ಪೇಸ್ ನೀಡಬೇಕು ಎಂಬ ಏಕೈಕ ಕಾರಣಕ್ಕೆ ‘ಕಲ್ಕಿ 2898 ಎಡಿ’ ಚಿತ್ರದಲ್ಲಿ ಅವರಿಗೆ ಕೆಲವು ದೃಶ್ಯಗಳನ್ನು ನೀಡಲಾಗಿದೆ ಎಂದು ಕೆಲವರು ಹೇಳಿದ್ದಾರೆ. ಈ ವಿಚಾರದ ಬಗ್ಗೆ ಯಾವುದೇ ಸೆಲೆಬ್ರಿಟಿಗಳು ಮಾತನಾಡಿರಲಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.