AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಜಯ್​ ರಾಝ್ ಮೇಲೆ ದುರ್ನಡತೆ ಆರೋಪ: ಸಹಾಯಕನಿಂದ ಲೈಂಗಿಕ ಕಿರುಕುಳ ಆಗಿದ್ಯಾ?

‘ಸನ್​ ಆಫ್​ ಸರ್ದಾರ್​ 2’ ಸಿನಿಮಾ ತಂಡದ ಜೊತೆ ಹಿರಿಯ ಕಲಾವಿದರ ವಿಜಯ್ ರಾಝ್​ ಅವರು ಕಿರಿಕ್​ ಮಾಡಿಕೊಂಡಿರುವುದು ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿದೆ. ನಟನ ಸಹಾಯಕರಿಂದ ಹೋಟೆಲ್​ ಸಿಬ್ಬಂದಿ ಮೇಲೆ ಲೈಂಗಿಕ ಕಿರುಕುಳ ಆಗಿದೆ ಎಂಬ ಆರೋಪ ಕೂಡ ಇದೆ. ಈ ಘಟನೆಗಳ ಬಗ್ಗೆ ವಿಜಯ್ ರಾಝ್​ ಅವರು ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದು, ಆ ಬಗ್ಗೆ ಇಲ್ಲಿದೆ ವಿವರ..

ವಿಜಯ್​ ರಾಝ್ ಮೇಲೆ ದುರ್ನಡತೆ ಆರೋಪ: ಸಹಾಯಕನಿಂದ ಲೈಂಗಿಕ ಕಿರುಕುಳ ಆಗಿದ್ಯಾ?
ವಿಜಯ್​ ರಾಝ್​
ಮದನ್​ ಕುಮಾರ್​
|

Updated on: Aug 17, 2024 | 7:17 PM

Share

ಬಾಲಿವುಡ್​ನ ಖ್ಯಾತ ನಟ ವಿಜಯ್ ರಾಝ್ ಅವರು ವಿವಾದದಲ್ಲಿ ಸಿಲುಕಿದ್ದಾರೆ. ‘ಸನ್​ ಆಫ್​ ಸರ್ದಾರ್​ 2’ ಸಿನಿಮಾ ತಂಡದಿಂದ ಅವರನ್ನು ಹೊರಗೆ ಹಾಕಲಾಗಿದೆ. ಇದಕ್ಕೆಲ್ಲ ಕಾರಣ ಏನು ಎಂಬುದನ್ನು ಸಹ-ನಿರ್ಮಾಪಕ ಕುಮಾರ್​ ಪಾಠಕ್​ ಅವರು ಮಾಧ್ಯಮಗಳಿಗೆ ವಿವರಿಸಿದ್ದಾರೆ. ಶೂಟಿಂಗ್ ಸೆಟ್​ನಲ್ಲಿ ವಿಜಯ್ ರಾಝ್​ ಅವರು ದುರ್ವರ್ತನೆ ತೋರಿದ್ದಾರೆ ಎಂಬುದು ನಿರ್ಮಾಪಕರ ಆರೋಪ. ಅಲ್ಲದೇ, ವಿಜಯ್ ರಾಝ್​ ಅವರ ಸಹಾಯಕನಿಂದ ಹೋಟೆಲ್ ಸಿಬ್ಬಂದಿ ಮೇಲೆ ಲೈಂಗಿಕ ದೌರ್ಜನ್ಯ ಆಗಿದೆ ಎಂದು ಕೂಡ ಆರೋಪಿಸಲಾಗಿದೆ.

ವಿಜಯ್​ ರಾಝ್​ ಅವರು ಹಲವು ವರ್ಷಗಳಿಂದ ಬಾಲಿವುಡ್​ನಲ್ಲಿ ಸಕ್ರಿಯರಾಗಿದ್ದಾರೆ. ಅವರಿಗೆ ಸಖತ್​ ಡಿಮ್ಯಾಂಡ್​ ಇದೆ. ಪೋಷಕ ಪಾತ್ರಗಳ ಮೂಲಕ ಅವರು ಗಮನ ಸೆಳೆದಿದ್ದಾರೆ. ‘ಸನ್​ ಆಫ್ ಸರ್ದಾರ್​ 2’ ಸಿನಿಮಾದಲ್ಲಿ ಅವರು ಅಜಯ್​ ದೇವಗನ್​ ಜೊತೆ ನಟಿಸುತ್ತಿದ್ದಾರೆ. ಆದರೆ ಅಜಯ್​ ದೇವಗನ್​ಗಿಂತಲೂ ಹೆಚ್ಚಿನ ಸೌಲಭ್ಯಗಳನ್ನು ತಮಗೆ ನೀಡಬೇಕು ಎಂದು ವಿಜಯ್ ರಾಝ್​ ಡಿಮ್ಯಾಂಡ್​ ಮಾಡಿದ್ದಾರೆ ಎಂದು ನಿರ್ಮಾಪಕರು ಆರೋಪಿಸಿದ್ದಾರೆ.

ವಿದೇಶದಲ್ಲಿ ಈ ಸಿನಿಮಾದ ಶೂಟಿಂಗ್​ ನಡೆಯುತ್ತಿದೆ. ಅಲ್ಲಿಗೆ ವಿಜಯ್ ರಾಝ್​ ತೆರಳಿದ್ದರು. ತಮಗೆ ಉಳಿದುಕೊಳ್ಳಲು ನೀಡಿದ ಹೋಟೆಲ್​ ರೂಮ್​ ತುಂಬ ಚಿಕ್ಕದಾಗಿದೆ ಎಂದು ವಿಜಯ್ ರಾಝ್ ಅವರು ಸಮಸ್ಯೆ ಹೇಳಿಕೊಂಡಿದ್ದಾರೆ. ಆ ಕಾರಣದಿಂದಲೇ ನಿರ್ಮಾಪಕರು ಇಷ್ಟೆಲ್ಲ ಕಿರಿಕ್​ ಶುರು ಮಾಡಿದ್ದಾರೆ ಎನ್ನಲಾಗಿದೆ. ಅಜಯ್​ ದೇವಗನ್​ಗೆ ನಮಸ್ಕಾರ ಮಾಡಿಲ್ಲ ಎಂಬ ಕಾರಣಕ್ಕೆ ತಮ್ಮನ್ನು ಸಿನಿಮಾದಿಂದ ಹೊರಗೆ ಇಡಲಾಗಿದೆ ಎಂದು ವಿಜಯ್ ರಾಝ್​ ಹೇಳಿದ್ದಾರೆ.

ಇದನ್ನೂ ಓದಿ: ಬಾಕ್ಸ್​ ಆಫೀಸ್​ನಲ್ಲಿ ಹೀನಾಯವಾಗಿ ಸೋತ ಅಜಯ್​ ದೇವಗನ್​-ಟಬು ಜೋಡಿಯ ಸಿನಿಮಾ

ಪ್ರತಿ ಕಲಾವಿದರನ್ನು ನೋಡಿಕೊಳ್ಳಲು ಸಹಾಯಕರನ್ನು ನೀಡಲಾಗುತ್ತದೆ. ಅವರನ್ನು ಸ್ಪಾಟ್​ ಬಾಯ್ಸ್​ ಎಂದು ಕರೆಯುತ್ತಾರೆ. ಆ ಪೈಕಿ ಒಬ್ಬನಿಂದ ಹೋಟೆಲ್​ ಸಿಬ್ಬಂದಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ಆರೋಪ ಇದೆ. ಅದರ ಬಗ್ಗೆಯೂ ವಿಜಯ್ ರಾಝ್​ ಮಾತನಾಡಿದ್ದಾರೆ. ‘ನನ್ನನ್ನು ಸಿನಿಮಾದಿಂದ ತೆಗೆದುಹಾಕಿದ್ದು ಹಾಗೂ ಸ್ಪಾಟ್​ ಬಾಯ್​ ಮೇಲಿನ ಆರೋಪ ಎಂಬುದು ಎರಡು ಪ್ರತ್ಯೇಕ ಘಟನೆ. ಇದನ್ನು ಒಟ್ಟಾಗಿ ನೋಡಬೇಡಿ. ಸ್ಪಾಟ್ ಬಾಯ್​ ವರ್ತನೆಗೂ ನನಗೂ ಸಂಬಂಧ ಇಲ್ಲ. ಅಂಥ ಕೃತ್ಯವನ್ನು ನಾನು ಬೆಂಬಲಿಸುವುದಿಲ್ಲ. ಆ ವ್ಯಕ್ತಿ ಜೊತೆ ನಾನು ಇನ್ಮುಂದೆ ಕೆಲಸ ಮಾಡಲ್ಲ’ ಎಂದು ವಿಜಯ್ ರಾಝ್​ ಅವರು ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಪುಟಿನ್ ರಹಸ್ಯ ನಿವಾಸದ ಮೇಲೆ ಉಕ್ರೇನ್ ಡ್ರೋನ್ ದಾಳಿ
ಪುಟಿನ್ ರಹಸ್ಯ ನಿವಾಸದ ಮೇಲೆ ಉಕ್ರೇನ್ ಡ್ರೋನ್ ದಾಳಿ
ಕಾರ್ಮಿಕರ ಮೇಲೆ ಹಲ್ಲೆ ಮಾಡಿ ಚಹಾ ಅಂಗಡಿ ಧ್ವಂಸಗೊಳಿಸಿದ ಪೊಲೀಸಪ್ಪ!
ಕಾರ್ಮಿಕರ ಮೇಲೆ ಹಲ್ಲೆ ಮಾಡಿ ಚಹಾ ಅಂಗಡಿ ಧ್ವಂಸಗೊಳಿಸಿದ ಪೊಲೀಸಪ್ಪ!
ದೊಡ್ಡ ಗಣಪತಿ ದೇವಸ್ಥಾನದಲ್ಲಿ ಮೋದಿ ಹೆಸರಿನಲ್ಲಿ ವಿಶೇಷ ಪೂಜೆ, ಅಭಿಷೇಕ
ದೊಡ್ಡ ಗಣಪತಿ ದೇವಸ್ಥಾನದಲ್ಲಿ ಮೋದಿ ಹೆಸರಿನಲ್ಲಿ ವಿಶೇಷ ಪೂಜೆ, ಅಭಿಷೇಕ
ಅಕ್ರಮವಾಗಿ ಪಾರ್ಟಿ ಮಾಡುತ್ತಿದ್ದವರಿಗೆ ಶಾಕ್, ಫಾರ್ಮ್​ಹೌಸ್ ಮೇಲೆ ದಾಳಿ
ಅಕ್ರಮವಾಗಿ ಪಾರ್ಟಿ ಮಾಡುತ್ತಿದ್ದವರಿಗೆ ಶಾಕ್, ಫಾರ್ಮ್​ಹೌಸ್ ಮೇಲೆ ದಾಳಿ
ಸಂಜಯ್ ರಾವತ್ ಮನೆ ಮುಂದೆ ಬಾಂಬ್ ಬೆದರಿಕೆ ಸಂದೇಶವಿರುವ ಕಾರು ಪತ್ತೆ
ಸಂಜಯ್ ರಾವತ್ ಮನೆ ಮುಂದೆ ಬಾಂಬ್ ಬೆದರಿಕೆ ಸಂದೇಶವಿರುವ ಕಾರು ಪತ್ತೆ
ಅಯ್ಯಪ್ಪ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಇಡುವುದರಿಂದ ಆಗುವ ಲಾಭಗಳೇನು?
ಅಯ್ಯಪ್ಪ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಇಡುವುದರಿಂದ ಆಗುವ ಲಾಭಗಳೇನು?
ಹೊಸ ವರ್ಷದ ಮೊದಲ ದಿನದಂದು ಈ ರಾಶಿಯವರಿಗೆ ಶುಭ ಫಲ
ಹೊಸ ವರ್ಷದ ಮೊದಲ ದಿನದಂದು ಈ ರಾಶಿಯವರಿಗೆ ಶುಭ ಫಲ
ನ್ಯೂ ಇಯರ್​​​: ಕುಡಿದು ಟೈಟಾದ ಯುವತಿ, ಆಟೋದಲ್ಲಿ ಕೂರಿಸಿ ಕಳಿಸಿದ ಪೊಲೀಸ್​​
ನ್ಯೂ ಇಯರ್​​​: ಕುಡಿದು ಟೈಟಾದ ಯುವತಿ, ಆಟೋದಲ್ಲಿ ಕೂರಿಸಿ ಕಳಿಸಿದ ಪೊಲೀಸ್​​
ಬೆಳಗಾವಿಯಲ್ಲಿ ನ್ಯೂಇಯರ್​​ ಕಿಕ್​​; ಭರ್ಜರಿ ಸ್ಟೆಪ್​ ಹಾಕಿದ ಜನರು
ಬೆಳಗಾವಿಯಲ್ಲಿ ನ್ಯೂಇಯರ್​​ ಕಿಕ್​​; ಭರ್ಜರಿ ಸ್ಟೆಪ್​ ಹಾಕಿದ ಜನರು
New Year 2026: ಹೊಸವರ್ಷಕ್ಕೆ ಅದ್ಧೂರಿ ಸ್ವಾಗತ; ಕುಣಿದು ಕುಪ್ಪಳಿಸಿದ ಜನರು
New Year 2026: ಹೊಸವರ್ಷಕ್ಕೆ ಅದ್ಧೂರಿ ಸ್ವಾಗತ; ಕುಣಿದು ಕುಪ್ಪಳಿಸಿದ ಜನರು