ಶೂಟಿಂಗ್ ವೇಳೆ ಈ ಕಾರಣಕ್ಕೆ ಕನ್ಫ್ಯೂಸ್ ಆಗ್ತಾರೆ ಆಮಿರ್ ಖಾನ್
ಆಮಿರ್ ಖಾನ್ ಒಂದೇ ಸಮಯದಲ್ಲಿ ಎರಡು ಚಿತ್ರಗಳಲ್ಲಿ ನಟಿಸುವುದರಿಂದ ಉಂಟಾಗುವ ತೊಂದರೆಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಪಿಕೆ ಮತ್ತು ಧೂಮ್ 3 ಚಿತ್ರಗಳ ಚಿತ್ರೀಕರಣದ ಸಮಯದಲ್ಲಿ ಎದುರಿಸಿದ ಗೊಂದಲಗಳನ್ನು ಅವರು ವಿವರಿಸಿದ್ದಾರೆ. ಇದಲ್ಲದೆ, ಅವರು ಒಂದೇ ಸಮಯಕ್ಕೆ ಒಂದೇ ಚಿತ್ರದ ಮೇಲೆ ಕೇಂದ್ರೀಕರಿಸುವುದರ ಮಹತ್ವವನ್ನು ಒತ್ತಿಹೇಳಿದ್ದಾರೆ. "ಸಿತಾರೆ ಜಮೀನ್ ಪರ್" ಚಿತ್ರದಲ್ಲಿ ಅವರು ಬ್ಯುಸಿ ಇದ್ದಾರೆ.

ಆಮಿರ್ ಖಾನ್ ಅವರು ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿ ಇದ್ದಾರೆ. ಇದಕ್ಕೆ ಕಾರಣ ಅವರಿಗೆ 59ನೇ ವಯಸ್ಸಿಗೆ ಗರ್ಲ್ಫ್ರೆಂಡ್ ಸಿಕ್ಕಿದೆ ಎಂಬ ವಿಚಾರ. ಹೌದು, ಆಮಿರ್ ಖಾನ್ ಅವರು ಬೆಂಗಳೂರಿನ ಗೌರಿ ಹೆಸರಿನ ಹುಡುಗಿ ಜೊತೆ ಸುತ್ತಾಡುತ್ತಿದ್ದಾರೆ ಎಂದು ವರದಿ ಆಗಿದೆ. ಈಗ ಆಮಿರ್ ಖಾನ್ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ. ಅವರು ಫನ್ ಆದ ಘಟನೆ ಒಂದನ್ನು ಹೇಳಿದ್ದಾರೆ.
ಆಮಿರ್ ಖಾನ್ ಒಮ್ಮೆಗೆ ಒಂದು ಸಿನಿಮಾ ಮಾತ್ರ ಶೂಟ್ ಮಾಡಲು ಬಯಸುತ್ತಾರೆ. ಇದಕ್ಕೆ ಕಾರಣವೂ ಇದೆ. ಎರಡು ಸಿನಿಮಾಗಳನ್ನು ಒಟ್ಟಿಗೆ ಮಾಡಲು ಆರಂಭಿಸಿದರೆ ಅವರು ಗೊಂದಲಕ್ಕೆ ಒಳಗಾಗುತ್ತಾರಂತೆ. ಬಾಡಿ ಮ್ಯಾನರಿಸಂ ವಿಚಾರವ ಅವರಿಗೆ ಗೊಂದಲ ಮೂಡಿಸುತ್ತದೆ. ಇದರಿಂದ ಸಾಕಷ್ಟು ತೊಂದರೆ ಅನುಭವಿಸಿದ್ದೂ ಇದೆ. ಈ ಬಗ್ಗೆ ಅವರು ಈ ಮೊದಲಿನ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದರು.
‘ಶೂಟಿಂಗ್ ಮಾಡುವಾಗ ಗೊಂದಲ ಆಗುತ್ತದೆ. ಪಿಕೆ ಚಿತ್ರದ 45 ದಿನಗಳ ಶೂಟ್ ಮಾಡಿದೆ. ಮರುದಿನವೇ ಧೂಮ್ 3 ಚಿತ್ರದ ಕ್ಲೈಮ್ಯಾಕ್ಸ್ ಶೂಟ್ಗಾಗಿ ಸ್ವಿಜರ್ಲೆಂಡ್ಗೆ ತೆರಳಿದೆ. ‘ಹೊರಡೋಣ ಸಮಯ ಕಡಿಮೆ ಇದೆ’ ಎಂದು ಹೇಳುವ ಡೈಲಾಗ್ ಇತ್ತು. ನಾನು ಭೋಜ್ಪುರಿಯಲ್ಲಿ ಡೈಲಾಗ್ ಹೇಳಲು ಆರಂಭಿಸಿದ್ದೆ. ಪಿಕೆ ಸಿನಿಮಾ ಹ್ಯಾಂಗೋವರ್ನಲ್ಲೇ ಇದ್ದೆ’ ಎಂದು ಆಮಿರ್ ಖಾನ್ ಹೇಳಿದ್ದಾರೆ. ಪಿಕೆ ಚಿತ್ರದಲ್ಲಿ ಕೆಲವು ಭೋಜ್ಪುರಿಯಲ್ಲಿ ಹೇಳುವ ಡೈಲಾಗ್ಗಳು ಇವೆ. ಇದರ ಶೂಟ್ನ ಆಮಿರ್ ಪೂರ್ಣಗೊಳಿಸಿ ಬಂದಿದ್ದರು.
View this post on Instagram
ಮತ್ತೊಂದು ವಿಶೇಷ ಎಂದರೆ ಆಮಿರ್ ಖಾನ್ ಅವರು ಒಂದು ಸಿನಿಮಾ ವಿಚಾರವನ್ನು ಮತ್ತೊಂದು ಸಿನಿಮಾ ಸೆಟ್ನಲ್ಲಿ ಚರ್ಚಿಸುವುದಿಲ್ಲವಂತೆ. ಅವರು ಪಿಕೆ ಮಾಡುತ್ತಿರುವಾಗ ‘ಧೂಮ್ 3’ ಚಿತ್ರವನ್ನೂ ಮಾಡುತ್ತಿದ್ದರು. ಆದರೆ, ಸೆಟ್ನಲ್ಲಿ ಈ ವಿಚಾರವನ್ನು ಅವರು ಚರ್ಚಿಸಿಲ್ಲ ಅನ್ನೋದು ವಿಶೇಷ.
ಇದನ್ನೂ ಓದಿ: ಆಮಿರ್ ಖಾನ್ ಮಗನ ಸಿನಿಮಾಗೆ ಸಲ್ಮಾನ್, ಶಾರುಖ್ ಬೆಂಬಲ
ಆಮಿರ್ ಖಾನ್ ಅವರು ಸದ್ಯ ‘ಸಿತಾರೆ ಜಮೀನ್ ಪರ್’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ವರ್ಷಾಂತ್ಯಕ್ಕೆ ಈ ಚಿತ್ರ ರಿಲೀಸ್ ಆಗಲಿದೆ. ಹೀಗಿರುವಾಗಲೇ ಅವರ ಪ್ರೀತಿ ವಿಚಾರ ಚರ್ಚೆಗೆ ಬಂದಿದೆ. ಆಮಿರ್ ಖಾನ್ ಅವರು ಬೆಂಗಳೂರಿನ ಹುಡುಗಿಯನ್ನು ಪ್ರೀತಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಅವರನ್ನು ಯಾವಾಗ ವಿವಾಹ ಆಗುತ್ತಾರೆ? ಡೇಟಿಂಗ್ ವಿಚಾರ ನಿಜವೇ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.