AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ವಾರ್ 2’ ಚಿತ್ರದ ಬಗ್ಗೆ ಜೂನಿಯರ್​ ಎನ್​ಟಿಆರ್ ಅಭಿಮಾನಿಗಳ ಅಸಮಾಧಾನ

Jr NTR: ‘ದೇವರ’ ಸಿನಿಮಾ ಮೂಲಕ ದೊಡ್ಡ ಹಿಟ್ ಕೊಟ್ಟಿರುವ ಜೂ ಎನ್​ಟಿಆರ್ ಇದೀಗ ಅವರ ಮೊದಲ ಬಾಲಿವುಡ್ ಸಿನಿಮಾ ‘ವಾರ್ 2’ನಲ್ಲಿ ಹೃತಿಕ್ ರೋಷನ್ ಜೊತೆಗೆ ನಟಿಸುತ್ತಿದ್ದಾರೆ. ‘ವಾರ್ 2’ ಸಿನಿಮಾದಲ್ಲಿನ ಜೂ ಎನ್​ಟಿಆರ್ ಅವರ ಹೊಸ ಲುಕ್ ಇತ್ತೀಚೆಗೆ ಲೀಕ್ ಆಗಿದೆ. ಆದರೆ ತಮ್ಮ ಮೆಚ್ಚಿನ ನಟನ ಹೊಸ ಲುಕ್ ಜೂ ಎನ್​ಟಿಆರ್ ಅಭಿಮಾನಿಗಳಿಗೆ ಇಷ್ಟವಾಗಿಲ್ಲ.

‘ವಾರ್ 2’ ಚಿತ್ರದ ಬಗ್ಗೆ ಜೂನಿಯರ್​ ಎನ್​ಟಿಆರ್ ಅಭಿಮಾನಿಗಳ ಅಸಮಾಧಾನ
Jr Ntr Movies
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.|

Updated on: Feb 12, 2025 | 6:39 PM

Share

‘ದೇವರ’ ಚಿತ್ರದ ಮೂಲಕ ಜೂನಿಯರ್​ ಎನ್​ಟಿಆರ್​ ಅವರು ದೊಡ್ಡ ಗೆಲುವು ಕಂಡರು. ಕೊರಟಾಲ ಶಿವ ನಿರ್ದೇಶನದ ಈ ಚಿತ್ರ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಮೊದಲ ಭಾಗ ಈಗಾಗಲೇ ಬಿಡುಗಡೆಯಾಗಿ ಮಿಶ್ರಪ್ರತಿಕ್ರಿಯೆ ಪಡೆಯಿತು. ಹೀಗಾಗಿ ಎರಡನೇ ಪಾರ್ಟ್ ಬರುತ್ತದೆಯೇ ಅಥವಾ ಇಲ್ಲವೇ ಎನ್ನುವ ಅನುಮಾನ ಅಭಿಮಾನಿಗಳಲ್ಲಿ ಮೂಡಿದೆ. ಹೀಗಿರುವಾಗಲೇ ಅವರು ‘ವಾರ್ 2’ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ದೃಶ್ಯಗಳು ಲೀಕ್ ಆಗಿವೆ.

ಹೃತಿಕ್ ರೋಷನ್ ನಟಿಸಿದ ಬಾಲಿವುಡ್ ಚಿತ್ರ ‘ವಾರ್​’ನ ಮುಂದುವರಿದ ಭಾಗವಾಗಿ ‘ವಾರ್ 2’ ಸಿನಿಮಾ ಮೂಡಿ ಬರುತ್ತಿದೆ. ಈ ಚಿತ್ರದಲ್ಲಿ ಹೃತಿಕ್ ಜೊತೆಗೆ ಜೂನಿಯರ್ ಎನ್​ಟಿಆರ್ ಕೂಡ ನಟಿಸಿದ್ದಾರೆ. ಈ ಚಿತ್ರದ ಚಿತ್ರೀಕರಣ ವೇಗವಾಗಿ ಸಾಗುತ್ತಿದೆ. ಈ ಚಿತ್ರದ ಕೆಲವು ಫೋಟೋಗಳು ಇತ್ತೀಚೆಗೆ ಸೋರಿಕೆಯಾಗಿವೆ.

ಮುಂಬೈನಲ್ಲಿ ‘ವಾರ್ 2’ ಚಿತ್ರೀಕರಣ ವೇಗವಾಗಿ ಸಾಗುತ್ತಿದೆ. ತಾರಕ್ ಅವರು ಆಕ್ಷನ್ ದೃಶ್ಯಗಳನ್ನು ಮಾಡುತ್ತಿದ್ದಾರೆ.. ಆದಾಗ್ಯೂ, ಈ ಸಾಹಸ ದೃಶ್ಯಗಳಿಗೆ ಸಂಬಂಧಿಸಿದ ಕೆಲವು ಫೋಟೋಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿವೆ. ಅದರಿಂದ ಚಿತ್ರತಂಡ ಆಘಾತಕ್ಕೊಳಗಾಯಿತು. ಬಹಳ ಅದ್ದೂರಿಯಾಗಿ ನಡೆಯುತ್ತಿರುವ ಚಿತ್ರೀಕರಣದ ಫೋಟೋಗಳು ಸೋರಿಕೆಯಾಗುತ್ತಿರುವುದು ಈಗ ಚಿತ್ರತಂಡದ ಮೇಲೆ ಒತ್ತಡ ಹೇರುತ್ತಿದೆ.

ಈ ಚಿತ್ರದಲ್ಲಿ ಜೂನಿಯರ್​ ಎನ್​ಟಿಆರ್ ನೆಗೆಟಿವ್ ಶೇಡ್ ಇರುವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವದಂತಿಗಳಿವೆ. ಕೆಲವು ಕಡೆಗಳಲ್ಲಿ ಅವರು ರಾ ಅಧಿಕಾರಿ ಪಾತ್ರ ಎಂದು ಕೂಡ ಹೇಳಲಾಗುತ್ತಿದೆ.ಈ ಚಿತ್ರದಲ್ಲಿನ ಆಕ್ಷನ್ ದೃಶ್ಯಗಳು ಪ್ರೇಕ್ಷಕರಿಗೆ ಇಷ್ಟ ಆಗಲಿದೆ.

ಅದ್ದೂರಿ ಚೇಸಿಂಗ್ ದೃಶ್ಯಗಳು ಸಿನಿಮಾದಲ್ಲಿ ಇರಲಿವೆ. ಈ ಆ್ಯಕ್ಷನ್ ಥ್ರಿಲ್ಲರ್ ಚಿತ್ರವನ್ನು ಯಶ್ ರಾಜ್ ಫಿಲ್ಮ್ಸ್‌ನ ಸ್ಪೈ ಯೂನಿವರ್ಸ್‌ನ ಭಾಗವಾಗಿ ನಿರ್ಮಿಸಲಾಗುತ್ತಿದೆ. ಈ ಚಿತ್ರವನ್ನು ಅಯಾನ್ ಮುಖರ್ಜಿ ನಿರ್ದೇಶಿಸುತ್ತಿದ್ದಾರೆ. ‘ವಾರ್ 2’ ಸೋರಿಕೆಯಾದ ಫೋಟೋಗಳಿಂದ ತಾರಕ್ ಅಭಿಮಾನಿಗಳು ನಿರಾಶೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಎನ್‌ಟಿಆರ್ ಅಭಿಮಾನಿಗಳು ಚಿತ್ರತಂಡಕ್ಕೆ ಜಾಗರೂಕರಾಗಿರಿ ಎಂದು ಎಚ್ಚರಿಸುತ್ತಿದ್ದಾರೆ. ‘ವಾರ್ 2’ ನಂತರ, ತಾರಕ್ ಅವರು ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಬಗ್ಗೆಯೂ ನಿರೀಕ್ಷೆ ಸೃಷ್ಟಿ ಆಗಿದೆ. ‘ದೇವರ 2’ ಯಾವಾಗ ಮೂಡಿ ಬರುತ್ತದೆ ಎಂಬ ಬಗ್ಗೆ ಸ್ಪಷ್ಟನೆ ಇಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ