ಆಮಿರ್ ಖಾನ್-ರಣ್ಬೀರ್ ಕಪೂರ್ ಜಗಳ, ಮಧ್ಯಸ್ಥಿಕೆ ವಹಿಸಿದ ರೋಹಿತ್ ಶರ್ಮಾ
Ranbir Kapoor vs Aamir Khan: ಬಾಲಿವುಡ್ ಸ್ಟಾರ್ ನಟರಾದ ರಣ್ಬೀರ್ ಕಪೂರ್ ಮತ್ತು ಆಮಿರ್ ಖಾನ್ ಅವರು ಪಾರ್ಟಿಯೊಂದರಲ್ಲಿ ಜೋರಾಗಿ ಜಗಳ ಮಾಡಿಕೊಂಡಿದ್ದಾರೆ. ಪರಸ್ಪರರ ಬಗ್ಗೆ ನಿಂದನೆ, ಅವಮಾನ ಮಾಡಿಕೊಂಡಿರುವ ಜೊತೆಗೆ ಕೈ-ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದಾರೆ. ಆದರೆ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಮಧ್ಯ ಪ್ರವೇಶಿಸಿ ಅವರನ್ನು ತಡೆದಿದ್ದಾರೆ. ಅಷ್ಟಕ್ಕೂ ಇಬ್ಬರು ನಟರ ನಡುವೆ ಜಗಳ ಏಕಾಯ್ತು?

ಬಾಲಿವುಡ್ನ ಸ್ಟಾರ್ ನಟರಾದ ಆಮಿರ್ ಖಾನ್ ಮತ್ತು ರಣ್ಬೀರ್ ಕಪೂರ್ ಪರಸ್ಪರ ಜಗಳ ಮಾಡಿಕೊಂಡಿದ್ದಾರೆ. ಆಮಿರ್ ಖಾನ್, ರಣ್ಬೀರ್ ಕಪೂರ್ ಅವರಿಗೆ ಪಾರ್ಟಿಯೊಂದರಲ್ಲಿ ಅವಮಾನ ಮಾಡಿದ್ದಾರೆ. ರಣ್ಬೀರ್ ಕಪೂರ್ ಸಹ, ಹಿರಿಯ ನಟ ಎಂಬುದನ್ನೂ ಸಹ ನೋಡದೆ ಜಗಳ ಮಾಡಿರುವುದು ಮಾತ್ರವೇ ಅಲ್ಲದೆ, ಕೈ-ಕೈ ಮಿಲಾಯಿಸಲು ಮುಂದಾಗಿದ್ದಾರೆ. ಆದರೆ ಪಾರ್ಟಿಯಲ್ಲಿ ಹಾಜರಿದ್ದ ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಇಬ್ಬರ ಮಧ್ಯೆ ಬಂದು ಜಗಳವನ್ನು ತಡೆದಿದ್ದಾರೆ! ಅರೇ ಹೀಗೇಕಾಯ್ತು ಎಂದು ಗಾಬರಿ ಪಡಬೇಡಿ, ಏಕೆಂದರೆ ಇದೆಲ್ಲ ನಡೆದಿರುವುದು ಜಾಹೀರಾತಿನಲ್ಲಿ, ನಿಜ ಜೀವನದಲ್ಲಿ ಅಲ್ಲ.
ಐಪಿಎಲ್ ಹತ್ತಿರ ಬಂದಿದ್ದು ಐಪಿಎಲ್ಗೆ ಸಂಬಂಧಿಸಿದ ತಮಾಷೆಯ ಜಾಹೀರಾತುಗಳು ಒಂದೊಂದಾಗಿ ಬಿಡುಗಡೆ ಆಗುತ್ತಿವೆ. ಡ್ರೀಮ್ಸ್ 11 ಇದೀಗ ಹೊಸದೊಂದು ಜಾಹೀರಾತು ಬಿಡುಗಡೆ ಮಾಡಿದೆ. ಈ ಜಾಹೀರಾತಿನಲ್ಲಿ ಆಮಿರ್ ಖಾನ್, ರಣ್ಬೀರ್ ಕಪೂರ್ ಸೇರಿದಂತೆ ಹಲವಾರು ಮಂದಿ ಕ್ರಿಕೆಟಿಗರು ನಟಿಸಿದ್ದಾರೆ. ಇಂದಷ್ಟೆ ಜಾಹೀರಾತು ಬಿಡುಗಡೆ ಆಗಿದ್ದು, ಜಾಹೀರಾತು ಬಹಳ ಮಜವಾಗಿದೆ. ಅದರಲ್ಲೂ ಆಮಿರ್ ಖಾನ್ ಮತ್ತು ರಣ್ಬೀರ್ ಕಪೂರ್ ಅವರುಗಳ ತಮಾಷೆಯಂತೂ ಸಖತ್ ಆಗಿದೆ.
ರಿಷಬ್ ಪಂತ್, ತಮ್ಮ ಜೊತೆ ಫೋಟೊ ಕೇಳುವ ಬದಲಿಗೆ ರಣ್ಬೀರ್ ಕಪೂರ್ ಜೊತೆಗೆ ಫೋಟೊ ಕೇಳಿದಾಗ ಸಿಟ್ಟಾಗುವ ಆಮಿರ್ ಖಾನ್, ರಣ್ಬೀರ್ ಕಪೂರ್ ಅನ್ನು ರಣ್ವೀರ್ ಸಿಂಗ್ ಎಂದು ಕರೆಯುತ್ತಾರೆ. ಅದಕ್ಕೆ ಸಿಟ್ಟಾಗುವ ರಣ್ಬೀರ್ ಕಪೂರ್, ಹೋಗಿ ಹಾರ್ದಿಕ್ ಪಾಂಡ್ಯಾ ಬಳಿ ಇವರನ್ನು ನಾನು ಸಲ್ಮಾನ್ ಖಾನ್ ಎಂದರೆ ಇವರಿಗೆ ಸಿಟ್ಟು ಬರುವುದಿಲ್ಲವೇ ಎನ್ನುತ್ತಾರೆ. ಅದಕ್ಕೆ ಆಮಿರ್, ನನ್ನನ್ನು ಸಲ್ಮಾನ್ ಅನ್ನು ಪರ್ವಾಗಿಲ್ಲ, ಆದರೆ ಅರ್ಬಾಜ್ ಖಾನ್ ಎನ್ನಬೇಡ ಎಂದು ತಮಾಷೆ ಮಾಡುತ್ತಾರೆ. ನೋಡಿದರೆ ಅರ್ಬಾಜ್ ಖಾನ್ ಅಲ್ಲಿಯೇ ಇರುತ್ತಾರೆ. ಹೀಗೆ ಒಂದರ ಹಿಂದೊಂದು ಕಾಮಿಡಿ ಪಂಚ್ಗಳು ಹಲವು ಈ ಜಾಹೀರಾತಿನಲ್ಲಿ ಇವೆ.
ಇದನ್ನೂ ಓದಿ:ಮುಂದಿನ ವಿಶ್ವಕಪ್ಗೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಇಲ್ಲ..!
ಜಾಹೀರಾತಿನಲ್ಲಿ ಆಮಿರ್ ಖಾನ್, ರಣ್ಬೀರ್ ಕಪೂರ್, ಜಾಕಿ ಶ್ರಾಫ್, ಅರ್ಬಾಜ್ ಖಾನ್ ಕ್ರಿಕೆಟಿಗರಾದ ರೋಹಿತ್ ಶರ್ಮಾ, ರಿಷಬ್ ಪಂತ್, ರವಿಚಂದ್ರನ್ ಅಶ್ವಿನ್, ಹಾರ್ದಿಕ್ ಪಾಂಡ್ಯಾ, ಜಸ್ಪ್ರಿತ್ ಬುಮ್ರಾ ಅವರುಗಳು ನಟಿಸಿದ್ದಾರೆ. ರಣ್ಬೀರ್ ಮತ್ತು ಆಮಿರ್ ನಡುವಿನ ಜಗಳ ತಾರಕಕ್ಕೆ ಹೋದಾಗ ಮಧ್ಯ ಪ್ರವೇಶಿಸುವ ರೋಹಿತ್ ಶರ್ಮಾ, ಜಗಳ ನಿಲ್ಲಿಸುತ್ತಾರೆ. ಆದರೆ ಆಮಿರ್, ಈ ಜಗಳ ಗ್ರೌಂಡ್ನಲ್ಲಿ ಮುಂದುವರೆಯಲಿದೆ, ನಿನ್ನ ಟೀಂ ನೀನು ಮಾಡಿಕೊ, ನನ್ನ ಟೀಂ ನಾನು ಮಾಡಿಕೊಳ್ಳುತ್ತೇನೆ ಯಾರು ಗೆಲ್ಲುತ್ತಾರೋ ನೋಡೋಣ ಎಂದು ಸವಾಲು ಹಾಕಿದ್ದಾರೆ. ಈ ಜಾಹೀರಾತು ಮುಂದುವರೆಯುತ್ತದೆಯೋ ಕಾದು ನೋಡಬೇಕು. ಹಲವಾರು ಸೆಲೆಬ್ರಿಟಿಗಳು ಈ ಜಾಹೀರಾತನ್ನು ಹಂಚಿಕೊಂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ