ಮುಂದಿನ ವಿಶ್ವಕಪ್ಗೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಇಲ್ಲ..!
T20 World Cup 2026: ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ 2026 ರಲ್ಲಿ ಒಟ್ಟು 20 ತಂಡಗಳು ಕಣಕ್ಕಿಳಿಯಲಿದೆ. ಇಲ್ಲಿ ಆತಿಥೇಯ ರಾಷ್ಟ್ರಗಳಾದ ಭಾರತ ಮತ್ತು ಶ್ರೀಲಂಕಾ ತಂಡಗಳಿಗೆ ನೇರ ಅರ್ಹತೆ ಪಡೆದುಕೊಂಡಿದೆ. ಹಾಗೆಯೇ ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಸೂಪರ್-8 ಹಂತಕ್ಕೇರಿರುವ ಎಂಟು ತಂಡಗಳೂ ಕೂಡ ಮುಂಬರುವ ವಿಶ್ವಕಪ್ಗೆ ಅರ್ಹತೆ ಗಿಟ್ಟಿಸಿಕೊಂಡಿದೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿ ಮುಕ್ತಾಯದ ಬೆನ್ನಲ್ಲೇ ಮುಂದಿನ ಟೂರ್ನಿಗೆ ರೂಪುರೇಷೆಗಳು ಸಿದ್ಧಗೊಂಡಿದೆ. ಅದರಂತೆ 2026 ರಲ್ಲಿ ಐಸಿಸಿ ಟಿ20 ವಿಶ್ವಕಪ್ ಆಯೋಜಿಸಲು ನಿರ್ಧರಿಸಲಾಗಿದೆ. ಈ ಚುಟುಕು ಕ್ರಿಕೆಟ್ ಟೂರ್ನಿಗೆ ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆತಿಥ್ಯವಹಿಸಲಿದೆ. ಅಂದರೆ ಬಹುತೇಕ ಪಂದ್ಯಗಳು ಭಾರತದಲ್ಲಿ ನಡೆದರೆ, ಕೆಲ ಮ್ಯಾಚ್ಗಳು ಶ್ರೀಲಂಕಾದಲ್ಲಿ ಜರುಗಲಿದೆ.
ಇನ್ನು ಈ ಟೂರ್ನಿಯನ್ನು 2026ರ ಫೆಬ್ರವರಿ ಮತ್ತು ಮಾರ್ಚ್ ನಡುವೆ ಆಯೋಜಿಸಲು ಐಸಿಸಿ ಆಡಳಿತ ಮಂಡಳಿ ನಿರ್ಧರಿಸಿದೆ. ಅದಕ್ಕೂ ಮುನ್ನ ಎಲ್ಲಾ ಮಂಡಳಿಗಳು ತಮ್ಮ ಸರಣಿಗಳನ್ನು ಪೂರ್ಣಗೊಳಿಸಲು ತಿಳಿಸಲಾಗಿದೆ.
ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ ಇಲ್ಲ:
ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ದಿಗ್ಗಜರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಕಾಣಿಸಿಕೊಳ್ಳುವುದಿಲ್ಲ. ಏಕೆಂದರೆ ಈ ಇಬ್ಬರು ಆಟಗಾರರು ಈಗಾಗಲೇ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ.
2024ರ ಟಿ20 ವಿಶ್ವಕಪ್ ಗೆದ್ದ ಬಳಿಕ ಇಬ್ಬರು ದಿಢೀರ್ ನಿವೃತ್ತಿ ಘೋಷಿಸಿದ್ದರು. ಹೀಗಾಗಿ ಭಾರತದಲ್ಲಿ ನಡೆಯಲಿರುವ ಚುಟುಕು ಕ್ರಿಕೆಟ್ ಸಮರದಲ್ಲಿ ಇಬ್ಬರು ದಾಂಡಿಗರು ಕಣಕ್ಕಿಳಿಯುವುದಿಲ್ಲ. ಅಲ್ಲದೆ ಈ ಟೂರ್ನಿಯಲ್ಲಿ ಟೀಮ್ ಇಂಡಿಯಾವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದಾರೆ.
ಇದಾಗ್ಯೂ ಇಬ್ಬರು ದಿಗ್ಗಜರನ್ನು ಟಿ20 ವಿಶ್ವಕಪ್ನ ರಾಯಭಾರಿಗಳಾಗಿ ಬಳಸಿಕೊಳ್ಳಲು ಐಸಿಸಿ ಚಿಂತಿಸಿದೆ. ಹೀಗಾಗಿ ಮುಂಬರುವ ವಿಶ್ವಕಪ್ ವೇಳೆ ಹಿಟ್ಮ್ಯಾನ್ ಹಾಗೂ ಕಿಂಗ್ ಕೊಹ್ಲಿ ಫೋಟೋಗಳು ಭಾರತದಲ್ಲಿ ರಾರಾಜಿಸಲಿದೆ.
ಇದನ್ನೂ ಓದಿ: IPL 2025: RCB ನೂತನ ಜೆರ್ಸಿ ಫೋಟೋ ಇಲ್ಲಿದೆ
20 ತಂಡಗಳು ಕಣಕ್ಕೆ:
ಐಸಿಸಿಯ ಮುಂದಿನ ಟೂರ್ನಿಯಲ್ಲಿ ಒಟ್ಟು 20 ಕಣಕ್ಕಿಳಿಯಲಿವೆ. ಈಗಾಗಲೇ 12 ತಂಡಗಳು ಟಿ20 ವಿಶ್ವಕಪ್ಗೆ ಅರ್ಹತೆ ಪಡೆದುಕೊಂಡಿದ್ದು, ಉಳಿದ 8 ತಂಡಗಳನ್ನು ಅರ್ಹತಾ ಸುತ್ತಿನ ಮೂಲಕ ಆಯ್ಕೆ ಮಾಡಲಾಗುತ್ತದೆ. ಟಿ20 ವಿಶ್ವಕಪ್ಗೆ ಅರ್ಹತೆ ಪಡೆದ ತಂಡಗಳು ಈ ಕೆಳಗಿನಂತಿದೆ….
- ಭಾರತ
- ಶ್ರೀಲಂಕಾ
- ಅಫ್ಘಾನಿಸ್ತಾನ್
- ಆಸ್ಟ್ರೇಲಿಯಾ
- ಬಾಂಗ್ಲಾದೇಶ್
- ಇಂಗ್ಲೆಂಡ್
- ಸೌತ್ ಆಫ್ರಿಕಾ
- ಯುಎಸ್ಎ
- ವೆಸ್ಟ್ ಇಂಡೀಸ್
- ನ್ಯೂಝಿಲೆಂಡ್
- ಪಾಕಿಸ್ತಾನ್
- ಐರ್ಲೆಂಡ್
ಅರ್ಹತಾ ಸುತ್ತಿನಲ್ಲಿರುವ ತಂಡಗಳು:
- ಝಿಂಬಾಬ್ವೆ
- ಬೋಟ್ಸ್ವಾನ
- ಕೀನ್ಯಾ
- ಮಲಾವಿ
- ನಮೀಬಿಯಾ
- ನೈಜೀರಿಯಾ
- ತಾಂಜಾನಿಯಾ
- ಉಗಾಂಡಾ
- ಬಹಾಮಾಸ್
- ಬರ್ಮುಡಾ
- ಕೆನಡಾ
- ಕೇಮನ್ ಐಲ್ಯಾಂಡ್
- ಜಪಾನ್
- ಕುವೈತ್
- ಮಲೇಷ್ಯಾ
- ನೇಪಾಳ
- ಓಮಾನ್
- ಪಪುವಾ ನ್ಯೂಗಿನಿಯಾ
- ಖತಾರ್
- ಸಮೋವಾ
- ಯುಎಇ
- ಗುರ್ನಸಿ
- ಇಟಲಿ
- ಜೆರ್ಸಿ
- ನೆದರ್ಲ್ಯಾಂಡ್ಸ್
- ಸ್ಕಾಟ್ಲೆಂಡ್