15 ಭರ್ಜರಿ ಸಿಕ್ಸ್: ವಿಶ್ವ ದಾಖಲೆಯ ಸೆಂಚುರಿ ಸಿಡಿಸಿದ ಎಬಿ ಡಿವಿಲಿಯರ್ಸ್
AB de Villiers Century 28 Balls: ಎಬಿ ಡಿವಿಲಿಯರ್ಸ್ ಬಾರಿಸಿದ್ದು ಟಿ20 ಕ್ರಿಕೆಟ್ನಲ್ಲಿ 2ನೇ ದಾಖಲೆ ಶತಕ. ಇದಕ್ಕೂ ಮುನ್ನ ಎಸ್ಟೋನಿಯಾ ತಂಡದ ಸಾಹಿಲ್ ಚೌಹಾಣ್ ಕೇವಲ 27 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಇದೀಗ 41ನೇ ವಯಸ್ಸಿನಲ್ಲಿ ಕೇವಲ 28 ಎಸೆತಗಳಲ್ಲಿ ಸೆಂಚುರಿ ಸಿಡಿಸಿ ಎಬಿ ಡಿವಿಲಿಯರ್ಸ್ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.
ಸಿಡಿಲಬ್ಬರದ ಸಿಡಿಲಮರಿ ಎಬಿ ಡಿವಿಲಿಯರ್ಸ್ ಮತ್ತೆ ಮೈದಾನಕ್ಕಿಳಿದಿದ್ದಾರೆ. ಮೈದಾನಕ್ಕಿಳಿದ ಬೆನ್ನಲ್ಲೇ ಸಿಡಿಲಬ್ಬರವನ್ನು ಸಹ ಶುರು ಮಾಡಿದ್ದಾರೆ. ಅದು ಕೂಡ ಕೇವಲ 28 ಎಸೆತಗಳಲ್ಲಿ ಸೆಂಚುರಿ ಸಿಡಿಸುವ ಮೂಲಕ ಎಂಬುದು ವಿಶೇಷ. ಇಂತಹದೊಂದು ವಿಸ್ಪೋಟಕ ಶತಕ ಬಾರಿಸಿದ್ದು ವರ್ಲ್ಡ್ ಲೆಜೆಂಡ್ಸ್ ಲೀಗ್ ಟೂರ್ನಿಯಲ್ಲಿ.
ಸೌತ್ ಆಫ್ರಿಕಾದ ಸೆಂಚುರಿಯನ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಬುಲ್ಸ್ ಲೆಜೆಂಡ್ಸ್ ಮತ್ತು ಟೈಟಾನ್ಸ್ ಲೆಜೆಂಡ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟ್ ಮಾಡಿದ ಟೈಟಾನ್ಸ್ ಲೆಜೆಂಡ್ಸ್ ಪರ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಎಬಿಡಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು.
ಮೊದಲ ಎಸೆತದಿಂದಲೇ ಹೊಡಿಬಡಿ ಆಟಕ್ಕೆ ಒತ್ತು ನೀಡಿದ ಡಿವಿಲಿಯರ್ಸ್ ಬುಲ್ಸ್ ಲೆಜೆಂಡ್ಸ್ ಬೌಲರ್ಗಳ ಬೆಂಡೆತ್ತಿದರು. ಪರಿಣಾಮ ಎಬಿಡಿ ಬ್ಯಾಟ್ನಿಂದ 15 ಸಿಕ್ಸ್ಗಳು ಮೂಡಿಬಂದವು. ಅಲ್ಲದೆ ಕೇವಲ 28 ಎಸೆತಗಳಲ್ಲಿ ಶತಕ ಪೂರೈಸಿದರು.
ವಿಶೇಷ ಎಂದರೆ ಈ 28 ಎಸೆತಗಳಲ್ಲಿ ಎಬಿಡಿ (101) ಕೇವಲ 2 ಎಸೆತಗಳಲ್ಲಿ ಮಾತ್ರ ರನ್ಗಳಿಸಿರಲಿಲ್ಲ. ಹಾಗೆಯೇ 15 ಸಿಕ್ಸ್ ಸಿಡಿಸಿದರೂ ಒಂದೇ ಒಂದು ಫೋರ್ ಬಾರಿಸಿರಲಿಲ್ಲ.
ಇನ್ನು ಎಬಿ ಡಿವಿಲಿಯರ್ಸ್ ಅವರ ಈ ಸಿಡಿಲಬ್ಬರದ ಬ್ಯಾಟಿಂಗ್ ಪರಿಣಾಮ ಟೈಟಾನ್ಸ್ ಲೆಜೆಂಡ್ಸ್ ತಂಡವು 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 278 ರನ್ ಕಲೆಹಾಕಿತು. ಈ ಕಠಿಣ ಗುರಿಯನ್ನು ಬೆನ್ನತ್ತಿದ ಬುಲ್ಸ್ ಲೆಜೆಂಡ್ಸ್ 14 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 125 ರನ್ಗಳಿಸಿದ್ದ ವೇಳೆ ಮಳೆ ಬಂದಿದ್ದರಿಂದ ಪಂದ್ಯವನ್ನು ರದ್ದುಗೊಳಿಸಲಾಯಿತು.
ದಾಖಲೆಯ ಶತಕ:
ಎಬಿ ಡಿವಿಲಿಯರ್ಸ್ ಬಾರಿಸಿದ್ದು ಟಿ20 ಕ್ರಿಕೆಟ್ನಲ್ಲಿ 2ನೇ ದಾಖಲೆ ಶತಕ. ಇದಕ್ಕೂ ಮುನ್ನ ಎಸ್ಟೋನಿಯಾ ತಂಡದ ಸಾಹಿಲ್ ಚೌಹಾಣ್ ಕೇವಲ 27 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಇದೀಗ 41ನೇ ವಯಸ್ಸಿನಲ್ಲಿ ಕೇವಲ 28 ಎಸೆತಗಳಲ್ಲಿ ಸೆಂಚುರಿ ಸಿಡಿಸಿ ಎಬಿ ಡಿವಿಲಿಯರ್ಸ್ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

ಸುನೀತಾ ವಿಲಿಯಮ್ಸ್ ಭೂಮಿಗೆ ಮರಳುತ್ತಿದ್ದಂತೆ ಜೂಲಾಸನ್ನಲ್ಲಿ ಸಂಭ್ರಮಾಚರಣೆ

ಸೋಂಕಿತ ಸೂಜಿ ಚುಚ್ಚುವ ಪ್ರಯತ್ನ ಯಾರಿಂದ ನಡೆದಿತ್ತು ಅಂತ ರಂಗನಾಥ್ ಹೇಳಲ್ಲ

ಒಂದು ರಾತ್ರಿ ಮಲಗಲು 5000 ರೂ.: ಪತ್ನಿಯ ಕರಾಳ ಮುಖ ಬಿಚ್ಚಿಟ್ಟ ಪತಿ

ಫೋಟೋ ತೆಗೆಸಿಕೊಳ್ಳುವ ಭರದಲ್ಲಿ ಗೌಡರನ್ನು ನೂಕಿದ ಅಭಿಮಾನಿಗಳು
