‘ಅಪ್ಪು’ ಚಿತ್ರಕ್ಕೆ ರಮ್ಯಾ ನಾಯಕಿ ಆಗಬೇಕಿತ್ತು; ರಿವೀಲ್ ಆಯ್ತು ಅಚ್ಚರಿಯ ಮಾಹಿತಿ
‘ಅಪ್ಪು’ ಸಿನಿಮಾ ರೀ-ರಿಲೀಸ್ ಆಗುತ್ತಿದೆ. ಇದಕ್ಕೆ ಎಲ್ಲ ಕಡೆಗಳಲ್ಲಿ ಸಿದ್ಧತೆ ನಡೆಯುತ್ತಿದೆ. ಥಿಯೇಟರ್ಗಳಲ್ಲಿ ಸೆಟ್ಗಳನ್ನು ಹಾಕಲಾಗುತ್ತಿದೆ. ಈ ಮಧ್ಯೆ ಈ ಚಿತ್ರದ ಬಗ್ಗೆ ಹೊಸ ಹೊಸ ಮಾಹಿತಿ ರಿವೀಲ್ ಆಗುತ್ತಿದೆ. ಈ ಬಗ್ಗೆ ಸ್ಟಂಟ್ ಮಾಸ್ಟರ್ ವೆಂಕಟೇಶ್ ಅವರು ಮಾತನಾಡಿದ್ದಾರೆ .
ಪುನೀತ್ ರಾಜ್ಕುಮಾರ್ ನಟನೆಯ ‘ಅಪ್ಪು’ ಸಿನಿಮಾ ಮಾರ್ಚ್ 14ರಂದು ರೀ ರಿಲೀಸ್ ಆಗುತ್ತಿದೆ. ಈ ಚಿತ್ರದ ಮೂಲಕ ಪುನೀತ್ ಅವರನ್ನು ಮತ್ತೆ ನೆನಪಿಸಿಕೊಳ್ಳಲಾಗುತ್ತಿದೆ. ಈ ಚಿತ್ರದ ಸ್ಟಂಟ್ ಮಾಸ್ಟರ್ ವೆಂಕಟೇಶ್ ಅವರು ಟಿವಿ9 ಕನ್ನಡದ ಜೊತೆ ಮಾತನಾಡಿದ್ದಾರೆ. ಈ ಚಿತ್ರಕ್ಕೆ ರಕ್ಷಿತಾ ನಾಯಕಿ. ಆದರೆ, ಮೊದಲು ಈ ಚಿತ್ರದಲ್ಲಿ ರಕ್ಷಿತಾ ಬದಲು ರಮ್ಯಾಗೆ ಅವಕಾಶ ನೀಡಲಾಗಿತ್ತು ಎಂದು ಅವರು ರಿವೀಲ್ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.