ಮಧುರೈ ಕಾರ್ತಿಕ ದೀಪಕ್ಕೆ ಸಿದ್ಧತೆ; ದರ್ಗಾದತ್ತ ಮುಸ್ಲಿಮರ ದಂಡು, ಸಿಆರ್‌ಪಿಎಫ್ ಸಿಬ್ಬಂದಿ ಮೇಲೆ ಹಿಂದೂಗಳಿಂದ ಪುಷ್ಪವೃಷ್ಟಿ
ಸುಪ್ರೀಂ ಕೋರ್ಟ್‌ನ ಕಟ್ಟುನಿಟ್ಟಿನ ನಿರ್ದೇಶನದ ಮೇರೆಗೆ ತಮಿಳುನಾಡಿನ ಮಧುರೈನಲ್ಲಿರುವ ತಿರುಪ್ಪರಂಕುಂಡ್ರಮ್ ಬೆಟ್ಟದ ಮೇಲಿರುವ ಪ್ರಾಚೀನ ‘ದೀಪತೂನ್’ ಕಲ್ಲಿನ ಸ್ತಂಭದಲ್ಲಿ ಇಂದು (ನವೆಂಬರ್ 28) ಕಾರ್ತಿಕ ದೀಪ ಬೆಳಗಲು ಭರದ ಸಿದ್ಧತೆಗಳು ನಡೆಯುತ್ತಿವೆ. ಬೆಟ್ಟದ ಸಂಪೂರ್ಣ ಭದ್ರತೆ ಮತ್ತು ಕಣ್ಗಾವಲನ್ನು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ವಹಿಸಿಕೊಂಡಿದ್ದು, ದೀಪೋತ್ಸವಕ್ಕೆ ಸಕಲ ವ್ಯವಸ್ಥೆ ಮಾಡಲಾಗಿದೆ. ದೇವಸ್ಥಾನದ ಅರ್ಚಕರು ಮತ್ತು ನ್ಯಾಯಾಲಯ ನೇಮಿಸಿರುವ ರಿಸೀವರ್‌ಗಳು ಸುರಕ್ಷಿತವಾಗಿ ಮೇಲೇರಿ ದೀಪದ ಬಾಣಲೆಯನ್ನು ಇರಿಸಿ ಜ್ಯೋತಿ ಬೆಳಗಲು ಅನುಕೂಲವಾಗುವಂತೆ ಇಂದು ಬೆಳಗ್ಗೆಯಿಂದಲೇ ಕಾರ್ಮಿಕರು ಮರದ ದಿಮ್ಮಿಗಳನ್ನು ಬಳಸಿ ದೀಪತೂನ್ ಕಲ್ಲಿನ ಸ್ತಂಭದ ಸುತ್ತಲೂ ತಾತ್ಕಾಲಿಕ ವೇದಿಕೆ ನಿರ್ಮಿಸಿದ್ದಾರೆ.

ಮಧುರೈ, ನವೆಂಬರ್ 28: ಸುಪ್ರೀಂ ಕೋರ್ಟ್‌ನ ಕಟ್ಟುನಿಟ್ಟಿನ ಆದೇಶದ ಮೇರೆಗೆ ಮಧುರೈನ ತಿರುಪ್ಪರಂಕುಂಡ್ರಮ್ ಬೆಟ್ಟದ ಮೇಲಿರುವ ‘ದೀಪತೂನ್’ ಕಲ್ಲಿನ ಸ್ತಂಭದಲ್ಲಿ ಇಂದು (ಶನಿವಾರ) ಕಾರ್ತಿಕ ದೀಪ ಬೆಳಗಲು ಭರದ ಸಿದ್ಧತೆಗಳು ಆರಂಭವಾಗಿವೆ. ಬೆಟ್ಟದ ಭದ್ರತೆ ಮತ್ತು ಕಣ್ಗಾವಲಿನ ಸಂಪೂರ್ಣ ನಿಯಂತ್ರಣವನ್ನು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ತನ್ನ ವಶಕ್ಕೆ ತೆಗೆದುಕೊಂಡಿದ್ದು, ಬಿಗಿ ಭದ್ರತೆಯ ನಡುವೆಯೇ ಬೆಟ್ಟದ ಮೇಲಿರುವ ಹಜರತ್ ಸುಲ್ತಾನ್ ಸಿಕಂದರ್ ಬಾದುಷಾ ಔಲಿಯಾ ದರ್ಗಾಕ್ಕೆ ಮುಸ್ಲಿಂ ಭಕ್ತರು ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಇಂದು ಬೆಳಿಗ್ಗೆಯಿಂದಲೇ ಬೆಟ್ಟದ ಮೇಲಿರುವ ದೀಪತೂನ್ ಸ್ತಂಭದ ಸುತ್ತಲೂ ಮರದ ದಿಮ್ಮಿಗಳನ್ನು ಬಳಸಿ ತಾತ್ಕಾಲಿಕ ವೇದಿಕೆ ನಿರ್ಮಿಸುವ ಕಾರ್ಯ ಆರಂಭವಾಗಿದೆ. ಬೆಟ್ಟದ ತಪ್ಪಲಿಗೆ ಆಗಮಿಸಿದ ಸಿಆರ್‌ಪಿಎಫ್ ಯೋಧರನ್ನು ಹಿಂದೂ ಭಕ್ತರು ಪುಷ್ಪವೃಷ್ಟಿ ಸುರಿಸುವ ಮೂಲಕ ಸ್ವಾಗತಿಸಿದ್ದಾರೆ. ಇಂದು ಸಂಜೆ 6 ಗಂಟೆಗೆ ದೀಪ ಬೆಳಗುವ ಸಾಧ್ಯತೆಯಿದೆ.
VIDEO | Karthigai Deepam: People welcome CRPF personnel in Madurai by showering flowers.
The Supreme Court has ordered the lighting of the lamp at the disputed Deepathoon stone pillar atop Thiruparankundram hill on Saturday.
#Deepam https://t.co/HFs6neukHP
— Press Trust of India (@PTI_News) November 28, 2026
ಇದನ್ನೂ ಓದಿ: ನಾಳೆಯೇ ‘ದೀಪತೂನ್’ನಲ್ಲಿ ಕಾರ್ತಿಕ ದೀಪ ಬೆಳಗಲು ಸುಪ್ರೀಂ ಕೋರ್ಟ್ ಆದೇಶ; ತಮಿಳುನಾಡು ಅಧಿಕಾರಿಗಳಿಗೆ ನ್ಯಾಯಾಂಗ ನಿಂದನೆ ನೋಟಿಸ್
ನವೆಂಬರ್ 24ರಂದು ಉಚ್ಚಿ ಪಿಳ್ಳೈಯಾರ್ ಮಂಟಪದಲ್ಲಿ ಬೆಳಗಿಸಲಾದ ಜ್ಯೋತಿಯನ್ನೇ ತಂದು ಇಂದು ದೀಪತೂನ್ನಲ್ಲಿ ದೀಪ ಬೆಳಗಿಸಲಾಗುತ್ತಿದೆ. ಸುಪ್ರೀಂ ಕೋರ್ಟ್ ನೇಮಿಸಿರುವ ದೇವಸ್ಥಾನದ ರಿಸೀವರ್‌ಗಳಾದ ಮದ್ರಾಸ್ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಾದ ಎಸ್. ವೈದ್ಯನಾಥನ್ ಮತ್ತು ವಿ. ಪಾರ್ಥಿಬನ್ ಅವರು ಮಧುರೈಗೆ ಆಗಮಿಸಿದ್ದು, ದೇವಸ್ಥಾನದ ವಂಶಪಾರಂಪರ್ಯ ಅರ್ಚಕರೊಂದಿಗೆ ಸೇರಿ ದೀಪ ಬೆಳಗುವ ನಿಖರ ಸಮಯವನ್ನು ಅಂತಿಮಗೊಳಿಸಲಿದ್ದಾರೆ. ಇಂದು ಸಂಜೆ 6 ಗಂಟೆಯ ಸುಮಾರಿಗೆ ದೀಪ ಬೆಳಗುವ ನಿರೀಕ್ಷೆಯಿದೆ. ಬೆಟ್ಟದ ತುದಿಗೆ ಕೇವಲ 20 ಪ್ರಮುಖರಿಗೆ ಮಾತ್ರ ಪ್ರವೇಶ ನೀಡಲಾಗುವುದು ಎಂದು ನಿವೃತ್ತ ನ್ಯಾಯಮೂರ್ತಿ ಎಸ್. ವೈದ್ಯನಾಥನ್ ತಿಳಿಸಿದ್ದಾರೆ.
#WATCH | Madurai, Tamil Nadu: A verbal altercation took place between BJP workers and security forces police over access to Thiruparankundram Hill, where the Supreme Court has directed that the ceremonial Karthigai Deepam be lit at the Deepathoon stone pillar today.
Central Reserve Police Force (CRPF) personnel have been deployed here to take security control of the hill and Sri Subramania Swamy Temple, hours after the Supreme Court ordered Central forces to secure the area for lighting the Karthigai Deepam at Deepathoon.
— ANI (@ANI) November 28, 2026
ಬೆಟ್ಟದ ಮೇಲಿನ ದರ್ಗಾದಲ್ಲಿ ಮುಸ್ಲಿಮರಿಂದ ಪ್ರಾರ್ಥನೆ:
ಇಂದು ಮುಂಜಾನೆ 6 ಗಂಟೆಯಿಂದಲೇ ತಮಿಳುನಾಡು ಹಾಗೂ ನೆರೆಯ ಕೇರಳದಿಂದ ಆಗಮಿಸಿದ 100ಕ್ಕೂ ಹೆಚ್ಚು ಮುಸ್ಲಿಂ ಯಾತ್ರಾರ್ಥಿಗಳು ಬೆಟ್ಟ ಹತ್ತಿ ಸಿಕಂದರ್ ಬಾದುಷಾ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಬೆಟ್ಟದ ತಪ್ಪಲಿನಲ್ಲಿ ಸಿಆರ್‌ಪಿಎಫ್ ಮತ್ತು ಸ್ಥಳೀಯ ಪೊಲೀಸರು ಭಕ್ತರ ಗುರುತಿನ ಚೀಟಿಗಳನ್ನು ಪರಿಶೀಲಿಸಿ, ಯಾವುದೇ ಅಡೆತಡೆಯಿಲ್ಲದೆ ದರ್ಗಾಕ್ಕೆ ತೆರಳಲು ಅವಕಾಶ ಮಾಡಿಕೊಟ್ಟಿದ್ದಾರೆ. ದರ್ಗಾದಿಂದ ಎಲ್ಲಾ ಕಡೆಗಳಿಂದ ಕನಿಷ್ಠ 50 ಮೀಟರ್ ದೂರದಲ್ಲಿ ದೀಪ ಬೆಳಗಬೇಕು ಮತ್ತು ದರ್ಗಾಕ್ಕೆ ಸಂಪೂರ್ಣ ರಕ್ಷಣೆ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.
#WATCH | Madurai, Tamil Nadu: Devotees and priests move towards Thiruparankundram Hill, where the ceremonial Karthigai Deepam will be lit at the Deepathoon stone pillar today. https://t.co/AeSReZQpob
— ANI (@ANI) November 28, 2026
ಇದನ್ನೂ ಓದಿ: ‘ವೇಟ್ರಿವೇಲ್ ಮುರುಗನುಕ್ಕು ಅರೋಗರಾ’: ‘ದೀಪತೂನ್’ನಲ್ಲಿ ಕಾರ್ತಿಕ ದೀಪ ಬೆಳಗಲು ಸುಪ್ರೀಂ ಆದೇಶದ ಬೆನ್ನಲ್ಲೇ ಮೋದಿ ಎಕ್ಸ್ ಸಂದೇಶ
VIDEO | Tamil Nadu: Supreme Court orders lighting of the lamp at Deepathoon today; CRPF personnel reach Thiruparankundram Hill.
#KarthigaiDeepamRow
(Full video available on PTI Videos – https://t.co/d8jp61yd2p) https://t.co/8Akig5zeiN
— Press Trust of India (@PTI_News) November 28, 2026
ಸುಪ್ರೀಂ ಕೋರ್ಟ್ ಆದೇಶದ ಬಳಿಕ ದೀಪ ಬೆಳಗುವ ಕಾರ್ಯಕ್ರಮಕ್ಕೆ ಸಿದ್ಧತೆ ನಡೆದಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ “ವೆಟ್ರಿವೇಲ್ ಮುರುಗನುಕ್ಕು ಅರೋಗರಾ!” (ಪವಿತ್ರ ವೇಲಾಯುಧಧಾರಿ ಮುರುಗನಿಗೆ ಜಯವಾಗಲಿ) ಎಂದು ಪೋಸ್ಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ನವೆಂಬರ್ 24ರಂದು ಸ್ಥಳೀಯ ಪೊಲೀಸರಿಂದ ತಡೆಯಲ್ಪಟ್ಟಿದ್ದ ಬಿಜೆಪಿ ನಾಯಕರಾದ ತಮಿಳಿಸೈ ಸೌಂದರರಾಜನ್, ಕೇಂದ್ರ ಸಚಿವ ಎಲ್. ಮುರುಗನ್, ನೈನಾರ್ ನಾಗೇಂದ್ರನ್ ಹಾಗೂ ಹಿಂದೂ ಮುನ್ನಣಿ ರಾಜ್ಯಾಧ್ಯಕ್ಷ ಕಡೇಶ್ವರ ಸುಬ್ರಹ್ಮಣ್ಯಂ ಸೇರಿದಂತೆ ಹಲವು ನಾಯಕರು ಇಂದು ತಿರುಪ್ಪರಂಕುಂಡ್ರಮ್‌ಗೆ ಭೇಟಿ ನೀಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:17 pm, Sat, 28 November 26




