AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರಾಮಾಯಣ’ ಮುಂಗಡ ಟಿಕೆಟ್ ಬುಕಿಂಗ್ ಶುರು, ನಿರೀಕ್ಷೆಗಿಂತಲೂ ಉತ್ತಮ ಆರಂಭ

ಎರಡು ವಾರಗಳ ಮುಂಚಿತವಾಗಿಯೇ ‘ರಾಮಾಯಣ’ ಸಿನಿಮಾದ ಮುಂಗಡ ಬುಕಿಂಗ್ ಆರಂಭಿಸಿದ್ದು, ಮೊದಲ ದಿನ ಅಂತ್ಯಕ್ಕೆ ಮುಂಚೆಯೇ ಒಳ್ಳೆಯ ಮೊತ್ತದ ಗಳಿಕೆಯೇ ಆಗಿದೆ. ಅಕ್ಟೋಬರ್ 20 ರಂದು ಭಾರತದ ಪ್ರಮುಖ ನಗರಗಳ ಆಯ್ದ ಚಿತ್ರಮಂದಿರಗಳಲ್ಲಿ ‘ರಾಮಾಯಣ’ ಸಿನಿಮಾದ ಮುಂಗಡ ಬುಕಿಂಗ್ ಆರಂಭ ಆಗಿದೆ. ಮುಂಬೈನಲ್ಲಂತೂ ಭರ್ಜರಿಯಾಗಿ ಮುಂಗಡ ಬುಕಿಂಗ್ ಚಾಲ್ತಿಯಲ್ಲಿದೆ.

‘ರಾಮಾಯಣ’ ಮುಂಗಡ ಟಿಕೆಟ್ ಬುಕಿಂಗ್ ಶುರು, ನಿರೀಕ್ಷೆಗಿಂತಲೂ ಉತ್ತಮ ಆರಂಭ
Ramayana Movie
ಮಂಜುನಾಥ ಸಿ.
|

Updated on: Oct 21, 2026 | 2:22 PM

Share

ಮುಖ್ಯಾಂಶಗಳು

  • ‘ರಾಮಾಯಣ’ ಸಿನಿಮಾದ ಮುಂಗಡ ಬುಕಿಂಗ್ ಓಪನ್
  • ಒಂದೇ ದಿನದಲ್ಲಿ 3 ಕೋಟಿಗೂ ಹೆಚ್ಚು ಮೌಲ್ಯದ ಟಿಕೆಟ್ ಮಾರಾಟ
  • ನವೆಂಬರ್ 05ಕ್ಕೆ ಸಿನಿಮಾ ರಿಲೀಸ್ ಆಗಲಿದೆ.

ರಣಬೀರ್ ಕಪೂರ್, ಯಶ್ ಮತ್ತು ಸಾಯಿ ಪಲ್ಲವಿ ನಟನೆಯ ‘ರಾಮಾಯಣ’ ಸಿನಿಮಾ ಬಿಡುಗಡೆಗೆ ಇನ್ನೂ 15 ದಿನಗಳಷ್ಟೆ ಬಾಕಿ ಇದೆ. ಎರಡು ವಾರಗಳ ಮುಂಚಿತವಾಗಿಯೇ ಚಿತ್ರತಂಡ ಮುಂಗಡ ಬುಕಿಂಗ್ ಆರಂಭಿಸಿದ್ದು, ಮೊದಲ ದಿನ ಅಂತ್ಯಕ್ಕೆ ಮುಂಚೆಯೇ ಒಳ್ಳೆಯ ಮೊತ್ತದ ಗಳಿಕೆಯೇ ಆಗಿದೆ. ಅಕ್ಟೋಬರ್ 20 ರಂದು ಭಾರತದ ಪ್ರಮುಖ ನಗರಗಳ ಆಯ್ದ ಚಿತ್ರಮಂದಿರಗಳಲ್ಲಿ ‘ರಾಮಾಯಣ’ ಸಿನಿಮಾದ ಮುಂಗಡ ಬುಕಿಂಗ್ ಆರಂಭ ಆಗಿದೆ. ಮುಂಬೈನಲ್ಲಂತೂ ಭರ್ಜರಿಯಾಗಿ ಮುಂಗಡ ಬುಕಿಂಗ್ ಚಾಲ್ತಿಯಲ್ಲಿದೆ.

ಅಕ್ಟೋಬರ್ 20ರಂದು ಭಾರತದಲ್ಲಿ ಟಿಕೆಟ್ ಬುಕಿಂಗ್ ಆರಂಭವಾಗಿದ್ದು, ಮೊದಲ 24 ಗಂಟೆ ಕಳೆಯುವ ಮುಂಚೆಯೇ 3 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಮುಂಗಡ ಬುಕಿಂಗ್ ಮಾರಾಟ ಮಾಡಲಾಗಿದೆ. ಸಿನಿಮಾ ಬಿಡುಗಡೆಗೆ ಇನ್ನೂ ಹದಿನೈದು ದಿನ ಇರುವಾಗಲೇ ಇಷ್ಟು ಮೊತ್ತದ ಟಿಕೆಟ್ ಮಾರಾಟ ಆಗಿರುವುದು ಸಾಮಾನ್ಯ ಅಂಶವಲ್ಲ. ಪ್ರಸ್ತುತ ಮುಂಬೈ, ಪುಣೆ, ಬೆಂಗಳೂರು, ದೆಹಲಿ, ಅಹಮದಾಬಾದ್ ಅಂಥಹ ಕೆಲ ಪ್ರಮುಖ ನಗರಗಳಲ್ಲಿ ಮಾತ್ರವೇ ಮುಂಗಡ ಬುಕಿಂಗ್ ಆರಂಭವಾಗಿದೆ. ಆಂಧ್ರ, ತೆಲಂಗಾಣ, ತಮಿಳುನಾಡುಗಳಲ್ಲಿ ಮುಂಗಡ ಬುಕಿಂಗ್ ಇನ್ನಷ್ಟೆ ಆರಂಭ ಆಗಬೇಕಿದೆ.

ಬೆಂಗಳೂರಿನಲ್ಲಿ ಸಹ ಪ್ರಸ್ತುತ ಕನ್ನಡ ಮತ್ತು ತೆಲುಗು ಆವೃತ್ತಿಗಳಿಗೆ ಮಾತ್ರವೇ ಮುಂಗಡ ಬುಕಿಂಗ್ ನೀಡಲಾಗಿದೆ. ಹಿಂದಿ ಆವೃತ್ತಿಯ ಯಾವುದೇ ಶೋ ಇಲ್ಲ. ಅಲ್ಲದೆ, ಸದ್ಯಕ್ಕೆ ಬೆಂಗಳೂರಿನಲ್ಲಿ ಶೋಗಳ ಸಂಖ್ಯೆಯೂ ಕಡಿಮೆ ಇವೆ. ದಿನಗಳು ಕಳೆದಂತೆ ಶೋಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ಸಕ್ನಿಲ್ಕ್ ವರದಿಯ ಪ್ರಕಾರ, ‘ರಾಮಾಯಣ’ ಚಿತ್ರವು ಮುಂಗಡ ಬುಕಿಂಗ್‌ನಲ್ಲಿ ಮೊದಲ ದಿನಕ್ಕೆ 3.13 ಕೋಟಿ ರೂ.ಗಳನ್ನು ಮುಂಗಡ ಬುಕಿಂಗ್​​ನಿಂದ ಸಂಗ್ರಹ ಮಾಡಿದೆ. ಮೊದಲ ದಿನ ಸುಮಾರು 86,187 ಟಿಕೆಟ್‌ಗಳನ್ನು ಮಾರಾಟ ಮಾಡಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಇನ್ನೂ ಹೆಚ್ಚಾಗಲಿದೆ. ಇನ್ನು ಅಮೆರಿಕ ಸೇರಿದಂತೆ ಇನ್ನು ಕೆಲ ವಿದೇಶಗಳಲ್ಲಿಯೂ ಸಹ ಸಿನಿಮಾದ ಮುಂಗಡ ಬುಕಿಂಗ್ ಆರಂಭವಾಗಿದ್ದು, ವಿದೇಶದಲ್ಲೂ ಸಹ ಸಿನಿಮಾಕ್ಕೆ ಒಳ್ಳೆಯ ಬೇಡಿಕೆ ಇದೆ.

ಇದನ್ನೂ ಓದಿ:‘ಕೆಜಿಎಫ್ ನೋಡಿ ನಾನು ಯಶ್ ಅಭಿಮಾನಿಯಾದೆ’; ರಣಬೀರ್ ಕಪೂರ್

ದೆಹಲಿ ಮತ್ತು ಮುಂಬೈನಲ್ಲಿ ಹೆಚ್ಚಿಗೆ ಟಿಕೆಟ್​​ಗಳು ಮುಂಗಡವಾಗಿ ಬುಕ್ ಆಗಿವೆ. ಮುಂಬೈನಲ್ಲಿ, 2,770 ರೂ. ಬೆಲೆಯ ಟಿಕೆಟ್‌ಗಳನ್ನು ಹೊಂದಿರುವ ಪಿವಿಆರ್ ಫೀನಿಕ್ಸ್ ಪಲ್ಲಾಡಿಯಮ್ ಪ್ರದರ್ಶನವು ಹೌಸ್‌ಫುಲ್ ಆಗಿದೆ. ಅದು ಮಾತ್ರವೇ ಅಲ್ಲದೆ ಬೇರೆ ಕೆಲವು ಪ್ರತಿಷ್ಠಿತ ಮಲ್ಟಿಪ್ಲೆಕ್ಸ್​​ಗಳು ಸಹ ಭರ್ತಿ ಆಗುತ್ತಿವೆ. ದೆಹಲಿಯಲ್ಲಿ ಬೆಳಿಗ್ಗೆ 7 ಗಂಟೆಯಿಂದಲೇ ಶೋಗಳು ಆರಂಭ ಆಗುತ್ತಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More