ದುಲ್ಖರ್ ಸಲ್ಮಾನ್-ರಶ್ಮಿಕಾ ಮಂದಣ್ಣ ಅಭಿನಯದ ಸೀತಾ ರಾಮಂ ಚಿತ್ರದ ಟೀಸರ್ ಬಿಡುಗಡೆ

Sita Ramam teaser: ಈ ಚಿತ್ರವು ಮಲಯಾಳಂ, ತಮಿಳು, ತೆಲುಗು ಭಾಷೆಯಲ್ಲಿ ಮೂಡಿಬರಲಿದ್ದು, ಚಿತ್ರದ ಟೀಸರ್​ ಅನ್ನು ನೋಡಿದರೆ ಮನಮುಟ್ಟುವ ಪ್ರಮಕಥೆಯನ್ನು ಹೊಂದಿರುವುದರಲ್ಲಿ ಅನುಮಾನವೇ ಇಲ್ಲ.

ದುಲ್ಖರ್ ಸಲ್ಮಾನ್-ರಶ್ಮಿಕಾ ಮಂದಣ್ಣ ಅಭಿನಯದ ಸೀತಾ ರಾಮಂ ಚಿತ್ರದ ಟೀಸರ್ ಬಿಡುಗಡೆ
Dulquer Salmaan-Rashmika Mandanna
TV9kannada Web Team

| Edited By: Zahir PY

Jun 26, 2022 | 9:59 PM

ಸೌತ್ ಸಿನಿರಂಗದಲ್ಲಿ ಸೆನ್ಸೇಷನ್ ಸೃಷ್ಟಿಸಿರುವ ಮಾಲಿವುಡ್ ನಟ ದುಲ್ಖರ್ ಸಲ್ಮಾನ್ (Dulquer Salmaan) ಅಭಿನಯದ ಹೊಸ ಚಿತ್ರ ಸೀತಾ ರಾಮಂ (Sita Ramam teaser) ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಯೋಧನ ಕಥೆ ಹೇಳಲಿರುವ ಈ ಚಿತ್ರದಲ್ಲಿ ದುಲ್ಖರ್ ಲೆಫ್ಟಿನೆಂಟ್ ರಾಮ್ ಪಾತ್ರದಲ್ಲಿ ಕಾಣಿಸಿಕೊಂಡರೆ, ಸೀತಾ ಪಾತ್ರದಲ್ಲಿ ಮೃಣಾಲ್ ಠಾಕೂರ್ (Mrunal Thakur) ಅಭಿನಯಿಸಿದ್ದಾರೆ. ಇನ್ನು ಮತ್ತೊಂದು ಪ್ರಮುಖ ಪಾತ್ರದಲ್ಲಿ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಕಾಣಿಸಿಕೊಂಡಿರುವುದು ವಿಶೇಷ. ಸೌತ್ ಚಿತ್ರರಂಗದಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿರುವ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿರುವುದು ಹನು ರಾಘವಪುಡಿ.

ಚಿತ್ರದ ಟೀಸರ್ ಮೂಲಕವೇ ರೋಮ್ಯಾಂಟಿಕ್ ಕಥೆಯನ್ನು ತಿಳಿಸುವ ಸೂಚನೆ ನೀಡಿರುವ ನಿರ್ದೇಶಕ ರಾಘವಪುಡಿ, ಸೀತಾ ರಾಮಂ ಚಿತ್ರವನ್ನು ಕಾಶ್ಮೀರ ಕಣಿವೆಯಲ್ಲಿ ಚಿತ್ರವನ್ನು ಚಿತ್ರೀಕರಿಸಿರುವುದು ವಿಶೇಷ. ಅದರಲ್ಲೂ ಪಿಎಸ್ ವಿನೋದ್ ಅವರ ಸಿನಿಮಾಟೋಗ್ರಾಫಿಯು ಪ್ರತಿ ಫ್ರೇಮ್​ನಲ್ಲೂ ಎದ್ದು ಕಾಣಿಸುತ್ತಿದೆ. ಇನ್ನು ಚಿತ್ರದಲ್ಲಿ ಯೋಧನ ನಿರೀಕ್ಷೆಗಳು, ಪ್ರೀತಿಯ ಹುಡುಕಾಟವನ್ನು ನಿರೀಕ್ಷಿಸಬಹುದು. ಇನ್ನು ಈ ಚಿತ್ರಕ್ಕೆ ಬಂಡವಾಳ ಹೂಡಿರುವುದು ಅಶ್ವಿನಿ ದತ್ ಮತ್ತು ಪ್ರಿಯಾಂಕಾ ದತ್.

 

ಈ ಚಿತ್ರವು ಮಲಯಾಳಂ, ತಮಿಳು, ತೆಲುಗು ಭಾಷೆಯಲ್ಲಿ ಮೂಡಿಬರಲಿದ್ದು, ಚಿತ್ರದ ಟೀಸರ್​ ಅನ್ನು ನೋಡಿದರೆ ಮನಮುಟ್ಟುವ ಪ್ರಮಕಥೆಯನ್ನು ಹೊಂದಿರುವುದರಲ್ಲಿ ಅನುಮಾನವೇ ಇಲ್ಲ ಎನ್ನಬಹುದು. ಈಗಾಗಲೇ ಭಾರೀ ನಿರೀಕ್ಷೆ ಹುಟ್ಟುಹಾಕಿರುವ ಈ ಚಿತ್ರವು ಆಗಸ್ಟ್ 5 ರಂದು ವಿಶ್ವದಾದ್ಯಂತ ತೆರೆ ಕಾಣಲಿದೆ.

ಇದನ್ನೂ ಓದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada