AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Johnny Depp: 2,535 ಕೋಟಿ ನೀಡ್ತೀವಿ ಅಂದ್ರು ಒಪ್ಪಿಕೊಳ್ಳದ ಜ್ಯಾಕ್​ ಸ್ಪ್ಯಾರೋ..!

Jack Sparrow: ಡಿಸ್ನಿ ಸಂಸ್ಥೆಯು ಪೈರೇಟ್ಸ್‌ ಆಫ್‌ ದಿ ಕೆರಿಬಿಯನ್‌ ಚಿತ್ರಕ್ಕಾಗಿ ಸಿದ್ದತೆಗಳನ್ನು ಆರಂಭಿಸಿದ್ದಾರೆ. ಇದೇ ವೇಳೆ ಜಾನಿ ಡೆಪ್ ತಮ್ಮ ವಿರುದ್ದ ಕೇಳಿ ಬಂದ ಆರೋಪಗಳಿಂದ ಮುಕ್ತರಾಗಿದ್ದಾರೆ.

Johnny Depp: 2,535 ಕೋಟಿ ನೀಡ್ತೀವಿ ಅಂದ್ರು ಒಪ್ಪಿಕೊಳ್ಳದ ಜ್ಯಾಕ್​ ಸ್ಪ್ಯಾರೋ..!
Johnny Depp
TV9 Web
| Updated By: ಝಾಹಿರ್ ಯೂಸುಫ್|

Updated on:Jun 26, 2022 | 7:48 PM

Share

ಹಾಲಿವುಡ್ ನಟ ಜಾನಿ ಡೆಪ್ (Johnny Depp) ಅಂದರೆ ಎಷ್ಟು ಜನರಿಗೆ ಗೊತ್ತಾಗುತ್ತೋ ಗೊತ್ತಿಲ್ಲ. ಆದರೆ ಜ್ಯಾಕ್​ ಸ್ಪ್ಯಾರೋ ಅಂದರೆ ಉದ್ದ ಕೂದಲಿನ, ಚಿನ್ನದ ಹಲ್ಲು ಹೊಂದಿರುವ ಜಾನಿ ಡೆಪ್​ ಅವರ ಮುಖ ಮಾತ್ರ ಕಣ್ಮುಂದೆ ಬರುತ್ತೆ. ಕಡಲುಗಳ್ಳರ ಕಥೆಯನ್ನು ಹೊಂದಿರುವ ಪೈರೇಟ್ಸ್‌ ಆಫ್‌ ದಿ ಕೆರಿಬಿಯನ್‌ ಸರಣಿಯ ಚಿತ್ರಗಳಲ್ಲಿ ಕ್ಯಾಪ್ಟನ್ ಜ್ಯಾಕ್​ ಸ್ಪ್ಯಾರೋ ಆಗಿ ಜಾನಿ ಡೆಪ್​ ನಟಿಸಿದ್ದಾರೆ ಅನ್ನುವುದಕ್ಕಿಂತ ಜೀವಿಸಿದ್ದಾರೆ ಎಂದರೆ ತಪ್ಪಾಗಲಾರದು. ಹೀಗಾಗಿಯೇ ಮತ್ತೊಮ್ಮೆ ಜ್ಯಾಕ್​ ಸ್ಪ್ಯಾರೋ ಅನ್ನು ಜನರ ಮುಂದಿಡಲು ಡಿಸ್ನಿ ಕಂಪೆನಿಯು ಇನ್ನಿಲ್ಲದ ಪ್ರಯತ್ನ ಮುಂದುವರೆಸಿದೆ. ಅದು ಕೂಡ ಬರೋಬ್ಬರಿ 2,535 ಕೋಟಿಗಳ ಆಫರ್​ ನೀಡುವ ಮೂಲಕ ಎಂಬುದೇ ವಿಶೇಷ. ಒಂದು ಚಿತ್ರಕ್ಕೆ 2,535 ಕೋಟಿಯ ಆಫರ್ ನೀಡಿದರೂ ಜಾನಿ ಡೆಪ್ ಯಾಕೆ ಇನ್ನೂ ಒಪ್ಪಿಕೊಂಡಿಲ್ಲ ಎಂಬ ಪ್ರಶ್ನೆ ಮೂಡುವುದು ಸಹಜ. ಇದಕ್ಕೆ ಕಾರಣ ನಟನ ಜೀವನದಲ್ಲಿ ಈ ಹಿಂದೆ ಬಿರುಗಾಳಿ ಎಬ್ಬಿಸಿದ ವಿವಾದಗಳು.

ಜಾನಿ ಡೆಪ್​ ತಮ್ಮ ಕೆರಿಯರ್​ನ ಉತ್ತುಂಗದಲ್ಲಿರುವಾಗ ಪತ್ನಿ ಪೀಡಕ ಎಂಬ ಆರೋಪಕ್ಕೆ ಗುರಿಯಾಗಿದ್ದರು. ಅಮೆರಿಕನ್ ನಟಿ ಅಂಬರ್ ಹರ್ಡ್ ಅವರನ್ನು ವಿವಾಹವಾಗಿದ್ದ ಜಾನಿ ಡೆಪ್ ವಿರುದ್ದ ಪತ್ನಿಯೇ ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದರು. ಈ ಸುದ್ದಿ ಭಾರೀ ಚರ್ಚೆಗೀಡಾಗುತ್ತಿದ್ದಂತೆ ಇತ್ತ ಜಾನಿ ಡೆಪ್​ ಆಫರ್​ಗಳು ಕುಂಠಿತವಾಗುತ್ತಾ ಹೋಯಿತು. ಅದರಲ್ಲೂ ಕೆಲವೊಂದು ಚಿತ್ರಗಳಿಂದ ಡೆಪ್ ಅವರನ್ನು ಕೈ ಬಿಡಲಾಯಿತು. ಇದೇ ವೇಳೆ ಡಿಸ್ನಿ ಕಂಪೆನಿ ಪೈರೇಟ್ಸ್‌ ಆಫ್‌ ದಿ ಕೆರಿಬಿಯನ್‌ ಚಿತ್ರದ 6ನೇ ಭಾಗದ ಚಿತ್ರಕಥೆಯನ್ನು ಶುರು ಮಾಡಿದ್ದರು. ಆದರೆ ಪತ್ನಿ ಪೀಡಕ ಎಂಬ ಆರೋಪ ಕೇಳಿ ಬರುತ್ತಿದ್ದಂತೆ ಡಿಸ್ನಿ ಜಾನಿ ಡೆಪ್ ಅವರನ್ನು ತಮ್ಮೆಲ್ಲಾ ಚಿತ್ರಗಳಿಂದ ಕೈ ಬಿಟ್ಟಿದ್ದರು.

ಇದೀಗ ಡಿಸ್ನಿ ಸಂಸ್ಥೆಯು ಪೈರೇಟ್ಸ್‌ ಆಫ್‌ ದಿ ಕೆರಿಬಿಯನ್‌ ಚಿತ್ರಕ್ಕಾಗಿ ಸಿದ್ದತೆಗಳನ್ನು ಆರಂಭಿಸಿದ್ದಾರೆ. ಇದೇ ವೇಳೆ ಜಾನಿ ಡೆಪ್ ತಮ್ಮ ವಿರುದ್ದ ಕೇಳಿ ಬಂದ ಆರೋಪಗಳಿಂದ ಮುಕ್ತರಾಗಿದ್ದಾರೆ. ಅಂದರೆ ಕೋರ್ಟ್ ಮೆಟ್ಟಿಲೇರಿದ್ದ ಅಂಬರ್ ಹರ್ಡ್ ಜಾನಿ ಡೆಪ್ ವಿರುದ್ದ​ ಸುಳ್ಳಾರೋಪ ಮಾಡಿದ್ದರು ಎಂಬ ತೀರ್ಪು ಬಂದಿದೆ. ಅಷ್ಟೇ ಅಲ್ಲದೆ ಮಾನನಷ್ಟ ಪಾವತಿಸುವಂತೆ ನಟಿಗೆ ಕೋರ್ಟ್ ತಿಳಿಸಿದೆ. ಇತ್ತ ಪತ್ನಿ ಪೀಡಕ ಆರೋಪದಿಂದ ನಟ ದೋಷಮುಕ್ತನಾಗುತ್ತಿದ್ದಂತೆ ಅಭಿಮಾನಿಗಳು ಸಂಭ್ರಮಿಸಲಾರಂಭಿಸಿದ್ದಾರೆ. ಅಷ್ಟೇ ಅಲ್ಲದೆ ಪತ್ನಿ ಆರೋಪ ಮಾಡಿದ ಬಳಿಕ ಕೋರ್ಟ್​ನಲ್ಲಿ ಅಂಬರ್ ಜೊತೆ ಜಾನಿ ಡೆಪ್ ನಡೆದುಕೊಂಡ ರೀತಿಯ ಬಗ್ಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗಿತ್ತು.

ಇದನ್ನೂ ಓದಿ
Image
KGF: ಕಬಾಲಿ ನಿರ್ದೇಶಕನ ಮಾಸ್ಟರ್​ ಪ್ಲ್ಯಾನ್​: ಬರಲಿದೆ ಮತ್ತೊಂದು ಕೆಜಿಎಫ್..!
Image
Yash Next Movie: ಯಶ್ ಮುಂದಿನ ಚಿತ್ರಕ್ಕೆ ಸೌತ್ ಸುಂದರಿ ನಾಯಕಿ..?
Image
Kabza: ಒಂದಲ್ಲ, ಎರಡಲ್ಲ, ಮೂರಲ್ಲ…ವಿದೇಶಿ ಭಾಷೆಗಳಲ್ಲೂ ಬಿಡುಗಡೆಯಾಗಲಿದೆ ಕಬ್ಜ
Image
Rashmika Mandanna: ಮಿಂಚಿಂಗೊ ಮಿಂಚಿಂಗ್…ಸದ್ಯಕ್ಕಂತು ಕನ್ನಡಕ್ಕಿಲ್ಲ ರಶ್ಮಿಕಾ ಮಂದಣ್ಣ..!

ಇದೀಗ ಜಾನಿ ಡೆಪ್ ಅವರೊಂದಿಗೆ ಡಿಸ್ನಿ ಕಂಪೆನಿ ಕ್ಷಮೆಯಾಚಿಸಬೇಕೆಂದು ಅಭಿಮಾನಿಗಳು ಆಗ್ರಹಿಸಿದ್ದಾರೆ. ಇದರ ಬೆನ್ನಲ್ಲೇ ಪೈರೇಟ್ಸ್‌ ಆಫ್‌ ದಿ ಕೆರಿಬಿಯನ್‌ ಚಿತ್ರಕ್ಕೆ ಮತ್ತೆ ಜಾನಿ ಡೆಪ್​ ಅವರನ್ನು ಕರೆತರುವ ಪ್ರಯತ್ನವನ್ನು ಡಿಸ್ನಿ ಶುರು ಹಚ್ಚಿಕೊಂಡಿದ್ದಾರೆ. ಏಕೆಂದರೆ ಹಲವು ಆರೋಪಗಳನ್ನು ಎದುರಿಸಿದರೂ, ಎಲ್ಲವನ್ನೂ ಕೋರ್ಟ್ ಮೂಲಕ ಗೆಲ್ಲುವ ಮೂಲಕ ಜಾನಿ ಡೆಪ್​ ತಮ್ಮ ನಿರಾಪರಾಧವನ್ನು ಸಾಬೀತುಪಡಿಸಿದ್ದಾರೆ. ಹೀಗಾಗಿಯೇ ಅಭಿಮಾನಿಗಳಿಗೆ ಜಾನಿ ಡೆಪ್​ ಮೇಲಿನ ಅಭಿಮಾನ ಮತ್ತಷ್ಟು ಹೆಚ್ಚಾಗಿದೆ.

ಇತ್ತ ಪೈರೇಟ್ಸ್‌ ಆಫ್‌ ದಿ ಕೆರಿಬಿಯನ್‌ ಚಿತ್ರದಲ್ಲಿ ಜ್ಯಾಕ್ ಸ್ಪ್ಯಾರೋ ಪಾತ್ರದಲ್ಲಿ ಜಾನಿ ಡೆಪ್ ಇಲ್ಲದೆ ಚಿತ್ರಕಥೆಯನ್ನು ಸಿನಿಪ್ರಿಯರು ಅರಗಿಸಿಕೊಳ್ಳುವುದಿಲ್ಲ ಎಂಬುದು ಡಿಸ್ನಿ ಕಂಪೆನಿಗೆ ಮನದಟ್ಟಾಗಿದೆ. ಹೀಗಾಗಿಯೇ ಮತ್ತೊಮ್ಮೆ ಜಾಕ್ ಸ್ಪ್ಯಾರೋ ಪಾತ್ರಕ್ಕಾಗಿ ಜಾನಿ ಡೆಪ್​ ಅವರನ್ನು ಕರೆತರುವ ಪಯತ್ನಕ್ಕೆ ಕೈ ಹಾಕಿದ್ದಾರೆ. ಅದರ ಮೊದಲ ಹೆಜ್ಜೆ ಎಂಬಂಯತೆ ಪೈರೇಟ್ಸ್‌ ಆಫ್‌ ದಿ ಕೆರಿಬಿಯನ್ ಚಿತ್ರದಲ್ಲಿ ಜ್ಯಾಕ್ ಸ್ಪ್ಯಾರೋ ಆಗಿ ಕಾಣಿಸಿಕೊಳ್ಳಲು ಬರೋಬ್ಬರಿ 2,535 ಕೋಟಿ ರೂ.ಗಳ ಆಫರ್ ಮುಂದಿಟಿದ್ದಾರೆ ಎಂದು ವರದಿಯಾಗಿದೆ. ಅದು ಕೂಡ ಈ ಹಿಂದೆ ನಡೆದಿರುವ ಘಟನೆಗಳಿಗೆ ಕ್ಷಮೆಯಾಚಿಸುತ್ತಾ ಎಂಬುದು ವಿಶೇಷ.

ಆದರೆ ಅಂಬರ್ ಹರ್ಡ್ ವಿರುದ್ದ ಕೇಸ್ ಗೆದ್ದ ಬಳಿಕ ಮಾತನಾಡಿದ್ದ ಜಾನಿ ಡೆಪ್, ಡಿಸ್ನಿ ಕಂಪೆನಿಯು 301 ಮಿಲಿಯನ್ ಡಾಲರ್ ನೀಡಿದರೂ ಪೈರೇಟ್ಸ್ ಆಫ್ ದಿ ಕೆರಿಬಿಯನ್‌ನಲ್ಲಿ ಜ್ಯಾಕ್ ಸ್ಪ್ಯಾರೋ ಆಗಿ ಹಿಂತಿರುಗುವುದಿಲ್ಲ ಎಂದು ತಿಳಿಸಿದ್ದರು. ಇದೇ ಕಾರಣದಿಂದಾಗಿ ಜಾನಿ ಡೆಪ್ ಇನ್ನೂ ಕೂಡ  2,535 ಕೋಟಿ ರೂ.ಗಳ ಆಫರ್​ ಅನ್ನು ಒಪ್ಪಿಕೊಂಡಿಲ್ಲ. ಇದಾಗ್ಯೂ ಡಿಸ್ನಿ ಮಾತ್ರ ತನ್ನ ಪ್ರಯತ್ನವನ್ನು ಮುಂದುವರೆಸುವ ಇರಾದೆಯಲ್ಲಿದೆ. ಏಕೆಂದರೆ ಜ್ಯಾಕ್ ಸ್ಪ್ಯಾರೋ ಪಾತ್ರದಲ್ಲಿ ಜಾನಿ ಡೆಪ್ ಬದಲು ಮತ್ತೊಬ್ಬ ನಟನನ್ನು ಊಹಿಸಲು ಕೂಡ ಸಾಧ್ಯವಿಲ್ಲ.

Published On - 7:47 pm, Sun, 26 June 22

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!