ಸ್ಯಾಂಡಲ್​ವುಡ್​ನ ಖ್ಯಾತ ನಿರ್ಮಾಪಕರ ಕಾರು ಅಪಘಾತ..!

Soorappa Babu: ಪವರ್​ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಪೃಥ್ವಿ, ರವಿಚಂದ್ರನ್ ಅಭಿನಯದ ದಶಮುಖ ಹಾಗೂ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-2, ಕೋಟಿಗೊಬ್ಬ-3 ಚಿತ್ರಗಳನ್ನು ಸೂರಪ್ಪ ಬಾಬು ನಿರ್ಮಿಸಿದ್ದರು.

ಸ್ಯಾಂಡಲ್​ವುಡ್​ನ ಖ್ಯಾತ ನಿರ್ಮಾಪಕರ ಕಾರು ಅಪಘಾತ..!
soorappa babu
TV9kannada Web Team

| Edited By: Zahir PY

Jun 26, 2022 | 6:03 PM

ಸ್ಯಾಂಡಲ್​ವುಡ್​ನ ಖ್ಯಾತ ನಿರ್ಮಾಪಕ ಸೂರಪ್ಪ ಬಾಬು (Soorappa Babu) ಸಂಚರಿಸುತ್ತಿದ್ದ ಕಾರು ಅಪಘಾತವಾಗಿದೆ. ಕುಟುಂಬದೊಂದಿಗೆ ತಮಿಳುನಾಡಿಗೆ ಪ್ರಯಾಣಿಸುತ್ತಿದ್ದ ವೇಳೆ ಅವಘಡ ಸಂಭವಿಸಿದ್ದು, ಪವಾಡ ಸದೃಶ ರೀತಿಯಲ್ಲೂ ಎಲ್ಲರೂ ಪಾರಾಗಿದ್ದಾರೆ. ಬೆಂಗಳೂರಿನಿಂದ ಬೆಳಗಿನ ಜಾವ ಕುಟುಂಬಸ್ಥರೊಂದಿಗೆ ತೆರಳಿದ್ದರು. ಈ ವೇಳೆ ಹೊಸೂರಿನಲ್ಲಿ ಅಪಘಾತ ಸಂಭವಿಸಿದೆ. ಕಾರಿನ ಮುಂಭಾಗ ನಜ್ಜುಗುಜ್ಜಾಗಿದ್ದರೂ, ಯಾರಿಗೂ ತೀವ್ರ ಗಾಯವಾಗಿಲ್ಲ ಎಂದು ಸೂರಪ್ಪ ಬಾಬು ತಿಳಿಸಿದ್ದಾರೆ.

ಭಾನುವಾರ ಬೆಳಗ್ಗೆ ಸೂರಪ್ಪ ಬಾಬು ಕುಟುಂಬಸ್ಥರು ತಮಿಳುನಾಡಿನಲ್ಲಿರುವ ಬ್ರಹ್ಮ ದೇವಸ್ಥಾನಕ್ಕೆ ಹೊರಟಿದ್ದರು. ಈ ವೇಳೆ ಹೊಸೂರು ಕ್ರಾಸ್ ಬಳಿ ಕಾರು ಆ್ಯಕ್ಸಿಡೆಂಟ್ ಆಗಿದೆ. ಈ ವೇಳೆ ಮುಂಭಾಗದಲ್ಲಿ ಕೂತಿದ್ದ ಸೂರಪ್ಪ ಬಾಬು ಅವರ ಕಾಲಿಗೆ ಪೆಟ್ಟಾಗಿದ್ದು, ಇತರರಿಗೆ ಯಾವುದೇ ತೊಂದರೆಯಾಗಿಲ್ಲ. ಕಾಲಿಗೆ ಕೊಂಚ ಪೆಟ್ಟು ಬಿದ್ದ ಕಾರಣ ವೈದ್ಯರಿಗೆ ತೋರಿಸಲು ಸೂರಪ್ಪ ಬಾಬು ಅಲ್ಲಿಂದ ಬೆಂಗಳೂರಿಗೆ ಹಿಂದಿರುಗಿದ್ದಾರೆ.

ನಾವು ಏಳು ಮಂದಿ ಇನ್ನೋವಾ ಕಾರಿನಲ್ಲಿ ದೇವಸ್ಥಾನಕ್ಕೆಂದು ಹೊರಟ್ಟಿದ್ದೆವು. ಆದರೆ ರಸ್ತೆ ಮಧ್ಯೆ ಅಪಘಾತ ಸಂಭವಿಸಿದೆ. ನನಗೆ ಈ ರೀತಿಯ ಅವಘಡ ಸಂಭವಿಸಿದ್ದು ಇದೇ ಮೊದಲು. ಆ ಸಮಯದಲ್ಲೂ ಅನೇಕರು ಅಲ್ಲಿಗೆ ಬಂದು ನನ್ನನ್ನು ಗುರುತಿಸಿದರು. ಅವರು ನಮಗೆ ಬೆಂಗಳೂರು ತಲುಪಲು ವ್ಯವಸ್ಥೆ ಮಾಡಿದರು. ನಾನು ಮುಂದಿನ ಸೀಟಿನಲ್ಲಿ ಕುಳಿತಿದ್ದೆ ಮತ್ತು ನನಗೆ ತೀವ್ರ ಕಾಲು ನೋವು ಕಾಣಿಸಿಕೊಂಡಿತು. ಹೀಗಾಗಿ ವೈದ್ಯರನ್ನು ಭೇಟಿಯಾಗಿ ಪರೀಕ್ಷಿಸಿದೆ. ಸದ್ಯ ಕಾಲಿಗೆ ಬ್ಯಾಂಡೇಜ್ ಹಾಕಲಾಗಿದ್ದು, ಈಗ ಆರಾಮಾಗಿದ್ದೇನೆ. ಅಲ್ಲದೆ ಸ್ವಲ್ಪ ದಿನ ರೆಸ್ಟ್ ತೆಗೆದುಕೊಳ್ಳಬೇಕೆಂದು ವೈದ್ಯರು ಸೂಚಿಸಿದ್ದಾರೆ ಎಂದು ಸೂರಪ್ಪ ತಿಳಿಸಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ವಿತಕರಾಗಿ ಹಾಗೂ ನಿರ್ಮಾಪಕರಾಗಿ ತೊಡಗಿಸಿಕೊಂಡಿರುವ ಸೂರಪ್ಪ ಬಾಬು ಅನೇಕ ಹಿಟ್​ ಚಿತ್ರಗಳನ್ನು ನೀಡಿದ್ದಾರೆ. ಪವರ್​ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಪೃಥ್ವಿ, ರವಿಚಂದ್ರನ್ ಅಭಿನಯದ ದಶಮುಖ ಹಾಗೂ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-2, ಕೋಟಿಗೊಬ್ಬ-3 ಚಿತ್ರಗಳನ್ನು ಸೂರಪ್ಪ ಬಾಬು ನಿರ್ಮಿಸಿದ್ದರು.

ಇದನ್ನೂ ಓದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada