AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರೀದೇವಿ ಸಾವಿನ ಬಗ್ಗೆ ಬೋನಿ ಕಪೂರ್ ಮೇಲೆ ಮೂಡಿತ್ತು ಅನುಮಾನ; ಮೌನಕ್ಕೆ ಕಾರಣ ನೀಡಿದ್ದ ನಿರ್ಮಾಪಕ

Boney Kapoor Birthday: ಶ್ರೀದೇವಿಯನ್ನು ಬೋನಿ ಕಪೂರ್ ಅವರೇ ಸಾಯಿಸಿದರು ಎಂದು ಮಾತನಾಡಿಕೊಂಡ ಅನೇಕರಿದ್ದಾರೆ. ಆದರೆ, ಈ ಬಗ್ಗೆ ಬೋನಿ ಮೌನ ತಾಳಿದ್ದರು. ಯಾವುದೇ ಹೇಳಿಕೆಗೆ ಅವರು ಉತ್ತರಿಸುವ ಗೋಜಿಗೆ ಹೋಗಿರಲಿಲ್ಲ. ಇತ್ತೀಚೆಗೆ ಈ ಬಗ್ಗೆ ಅವರು ಮಾತನಾಡಿದ್ದರು. ಭಾರತದ ಮಾಧ್ಯಮಗಳಿಂದ ಎದುರಿಸಿದ ಟೀಕೆ ಬಗ್ಗೆ ಅವರು ಮಾತನಾಡಿದ್ದರು.

ಶ್ರೀದೇವಿ ಸಾವಿನ ಬಗ್ಗೆ ಬೋನಿ ಕಪೂರ್ ಮೇಲೆ ಮೂಡಿತ್ತು ಅನುಮಾನ; ಮೌನಕ್ಕೆ ಕಾರಣ ನೀಡಿದ್ದ ನಿರ್ಮಾಪಕ
ಶ್ರೀದೇವಿ, ಬೋನಿ ಕಪೂರ್​
 ಶ್ರೀಲಕ್ಷ್ಮೀ ಎಚ್
| Updated By: ಮದನ್​ ಕುಮಾರ್​|

Updated on: Nov 11, 2023 | 6:52 AM

Share

ನಿರ್ಮಾಪಕ ಬೋನಿ ಕಪೂರ್ (Boney Kapoor) ಅವರ ವೈಯಕ್ತಿಕ ಜೀವನ ಸಾಕಷ್ಟು ಚರ್ಚೆಗೆ ಒಳಗಾಗಿರುವಂಥದ್ದು. ಅವರಿಗೆ ಇಂದು (ನವೆಂಬರ್ 11) ಜನ್ಮದಿನ (Boney Kapoor Birthday). ಅವರಿಗೆ ಕುಟುಂಬದವರು ಹಾಗೂ ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ. ಮೋನಾ ಕಪೂರ್ ಜೊತೆ ದಾಂಪತ್ಯ ಜೀವನ ನಡೆಸುತ್ತಿರುವಾಗಲೇ ಶ್ರೀದೇವಿ (Sridevi) ಮೇಲೆ ಅವರಿಗೆ ಪ್ರೀತಿ ಮೂಡಿತು. ಮೋನಾಗೆ ವಿಚ್ಛೇದನ ನೀಡಿದ ವರ್ಷವೇ ಬೋನಿ ಅವರು ಶ್ರೀದೇವಿಯನ್ನು ಮದುವೆ ಆದರು. ಐದು ವರ್ಷಗಳ ಹಿಂದೆ ಶ್ರೀದೇವಿಯನ್ನು ಬೋನಿ ಕಪೂರ್ ಕಳೆದುಕೊಂಡಿದ್ದರು. ಶ್ರೀದೇವಿ ಸಾವಿನ ಬಗ್ಗೆ ಜನರಿಗೆ ಸಾಕಷ್ಟು ಅನುಮಾನ ಮೂಡಿತ್ತು.

ಶ್ರೀದೇವಿ ಸಾವು

1983ರಲ್ಲಿ ಮೋನಾ ಕಪೂರ್​ನ ಬೋನಿ ಕಪೂರ್ ಮದುವೆ ಆದರು. 1996ರಲ್ಲಿ ವಿಚ್ಛೇದನ ಪಡೆದರು. ಅದೇ ವರ್ಷ ಬೋನಿ ಕಪೂರ್ ಅವರು ಶ್ರೀದೇವಿಯನ್ನು ಮದುವೆ ಆದರು. 22 ವರ್ಷಗಳ ಕಾಲ ಇವರು ಹಾಯಾಗಿ ಸಂಸಾರ ನಡೆಸಿದ್ದರು. 2018ರ ಆಗಸ್ಟ್​ ತಿಂಗಳಲ್ಲಿ ಶ್ರೀದೇವಿ ಅವರು ಮದುವೆಗೆಂದು ದುಬೈಗೆ ತೆರಳಿದ್ದರು. ಹೋಟೆಲ್ ರೂಂನ ಬಾತ್​ ಟಬ್​ನಲ್ಲಿ ಅವರು ಮೃತಪಟ್ಟರು. ಅಚಾನಕ್ಕಾಗಿ ಅವರು ಮುಳುಗಿ ಬಿದ್ದು ಮೃತಪಟ್ಟಿದ್ದಾಗಿ ವರದಿ ಬಂತು. ದುಬೈ ಪೊಲೀಸರು ಇದನ್ನೇ ಹೇಳಿದ್ದರು.

ಇದನ್ನೂ ಓದಿ: Boney Kapoor: ನಿರ್ಮಾಪಕ ಬೋನಿ ಕಪೂರ್ ಪ್ರೀತಿ ಒಪ್ಪಲು ನಟಿ ಶ್ರೀದೇವಿಗೆ ಬೇಕಾಯ್ತು ಹಲವು ವರ್ಷ

ಮೌನ ವಹಿಸಿದ್ದರು:

ಶ್ರೀದೇವಿಯನ್ನು ಬೋನಿ ಕಪೂರ್ ಅವರೇ ಸಾಯಿಸಿದರು ಎಂದು ಮಾತನಾಡಿಕೊಂಡ ಅನೇಕರಿದ್ದಾರೆ. ಆದರೆ, ಈ ಬಗ್ಗೆ ಅವರು ಮೌನ ತಾಳಿದ್ದರು. ಯಾವುದೇ ಹೇಳಿಕೆಗೆ ಅವರು ಉತ್ತರಿಸುವ ಗೋಜಿಗೆ ಹೋಗಿರಲಿಲ್ಲ. ಇತ್ತೀಚೆಗೆ ಈ ಬಗ್ಗೆ ಅವರು ಮಾತನಾಡಿದ್ದರು. ಭಾರತ ಮಾಧ್ಯಮಗಳಿಂದ ಎದುರಿಸಿದ ಟೀಕೆ ಬಗ್ಗೆ ಅವರು ಮಾತನಾಡಿದ್ದರು. ‘ದಿ ನ್ಯೂ ಇಂಡಿಯನ್’​ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಬೋನಿ ಕಪೂರ್ ಅವರು, ‘ಶ್ರೀದೇವಿ ಅವರದ್ದು ಸಾಮಾನ್ಯ ಸಾವಲ್ಲ, ಅದು ಆಕಸ್ಮಿಕ ಸಾವು’ ಎಂದು ಹೇಳಿದ್ದರು. ‘ನಾನು ಈ ಬಗ್ಗೆ ಮಾತನಾಡಬಾರದು ಎಂದು ನಿರ್ಧರಿಸಿದ್ದೆ. ದುಬೈನಲ್ಲಿ ನನ್ನ ವಿಚಾರಣೆ ಮಾಡಿದಾಗ 24-48 ಗಂಟೆ ಮಾತನಾಡಿದ್ದೆ. ಭಾರತದ ಮಾಧ್ಯಮಗಳಿಂದ ಒತ್ತಡ ಇರುವುದರಿಂದ ಅವರು ವಿಚಾರಣೆ ಮಾಡಲೇಬೇಕಿತ್ತು. ಪೊಲೀಸರ ಎದುರು ನಾನು ಎಲ್ಲವನ್ನೂ ಹೇಳಿರುವಾಗ ಮತ್ತೆ ಹೇಳಲು ಏನೂ ಇರಲಿಲ್ಲ. ಶ್ರೀದೇವಿ ಸಾವಿನಲ್ಲಿ ಯಾವುದೇ ಶಂಕೆ ಇರಲಿಲ್ಲ. ಮರಣೋತ್ತರ ಪರೀಕ್ಷೆಯಲ್ಲೂ ಇದೊಂದು ಆಕಸ್ಮಿಕ ಸಾವು ಎಂದು ಬಂದಿತ್ತು’ ಎಂದಿದ್ದರು ಅವರು.

ಇದನ್ನೂ ಓದಿ: ಮದುವೆಗೂ ಮೊದಲೇ ಶ್ರೀದೇವಿ ಗರ್ಭಿಣಿಯಾಗಿದ್ರಾ? ಬೋನಿ ಕಪೂರ್ ಹೇಳಿದ್ರು ಅಸಲಿ ಕಥೆ

‘ಶ್ರೀದೇವಿ ಯಾವಾಗಲೂ ದೇಹದ ಫಿಟ್ನೆಸ್​ ಕಾಯ್ದುಕೊಳ್ಳಲು, ದೇಹದ ಶೇಪ್​ನ ಕಾಪಾಡಿಕೊಂಡು ಹೋಗಲು ಬಯಸುತ್ತಿದ್ದರು. ಅವರು ದೇಹದ ತೂಕವನ್ನು 46ಕ್ಕೆ ಇಳಿಸಿಕೊಂಡಿದ್ದರು. ಅವರು ಸಾಯುವುದಕ್ಕೂ ಮೊದಲು ವೈದ್ಯರು ಅವರಿಗೆ ಎಚ್ಚರಿಕೆ ನೀಡುತ್ತಲೇ ಇದ್ದರು. ನಿಮ್ಮ ಬಿಪಿ ಕಡಿಮೆ ಆಗುತ್ತಿದೆ ಎನ್ನುತ್ತಿದ್ದರು. ಊಟದಲ್ಲಿ ಉಪ್ಪನ್ನು ತ್ಯಜಿಸಬೇಡಿ ಎನ್ನುತ್ತಿದ್ದರು’ ಎಂದಿದ್ದರು ಬೋನಿ ಕಪೂರ್. ‘ಶ್ರೀದೇವಿ ಸಾವಿನ ನಂತರ ಅಕ್ಕಿನೇನಿ ನಾಗಾರ್ಜುನ ಅವರು ನಮ್ಮ ಮನೆಗೆ ಬಂದು, ಸಂತಾಪ ಸೂಚಿಸಿದ್ದರು. ಶ್ರೀದೇವಿ ಹಾಗೂ ನಾಗಾರ್ಜುನ ಒಟ್ಟಾಗಿ ಸಿನಿಮಾ ಮಾಡುತ್ತಿದ್ದರು. ಹೀಗಾಗಿ, ಶ್ರೀದೇವಿ ಡಯಟ್ ವಿಚಾರ ನಾಗಾರ್ಜುನಗೆ ಗೊತ್ತಿತ್ತು. ಬಾತ್​ರೂಂನಲ್ಲಿ ಪ್ರಜ್ಞೆತಪ್ಪಿ ಬಿದ್ದು ಶ್ರೀದೇವಿ ಒಮ್ಮೆ ಹಲ್ಲು ಮುರಿದುಕೊಂಡಿದ್ದರು. ಆ ಬಳಿಕ ಆರ್ಟಿಫೀಷಯಲ್ ಹಲ್ಲುಗಳನ್ನು ಹಾಕಿಕೊಂಡಿದ್ದರು’ ಎಂದಿದ್ದರು ಬೋನಿ ಕಪೂರ್.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!