Boney Kapoor: ನಿರ್ಮಾಪಕ ಬೋನಿ ಕಪೂರ್ ಪ್ರೀತಿ ಒಪ್ಪಲು ನಟಿ ಶ್ರೀದೇವಿಗೆ ಬೇಕಾಯ್ತು ಹಲವು ವರ್ಷ

ಮೋನಾ ಕಪೂರ್ ಜೊತೆ ದಾಂಪತ್ಯ ಜೀವನದಲ್ಲಿ ಇರುವಾಗಲೇ ಬೋನಿ ಅವರು ಶ್ರೀದೇವಿಯನ್ನು ಪ್ರೀತಿಸಿದ್ದರು. ಇದನ್ನು ತಿಳಿದು ಮೋನಾ ಶಾಕ್​ಗೆ ಒಳಗಾದರು. ಆಗಲೇ ಶ್ರೀದೇವಿ ಪ್ರೆಗ್ನೆಂಟ್ ಆಗಿದ್ದರು. 1996ರಲ್ಲಿ ಬೋನಿ ಅವರು ಮೋನಾಗೆ ವಿಚ್ಛೇದನ ಕೊಟ್ಟು ಅದೇ ವರ್ಷ ಶ್ರೀದೇವಿಯನ್ನು ಮದುವೆ ಆದರು.

Boney Kapoor: ನಿರ್ಮಾಪಕ ಬೋನಿ ಕಪೂರ್ ಪ್ರೀತಿ ಒಪ್ಪಲು ನಟಿ ಶ್ರೀದೇವಿಗೆ ಬೇಕಾಯ್ತು ಹಲವು ವರ್ಷ
ಬೋನಿ ಕಪೂರ್​, ಶ್ರೀದೇವಿ
Follow us
 ಶ್ರೀಲಕ್ಷ್ಮೀ ಎಚ್
| Updated By: ಮದನ್​ ಕುಮಾರ್​

Updated on: Nov 10, 2023 | 4:58 PM

ಬೋನಿ ಕಪೂರ್ (Boney Kapoor) ಅವರಿಗೆ ಶನಿವಾರ (ನವೆಂಬರ್ 11) ಜನ್ಮದಿನ (Boney Kapoor Birthday). ಅವರು ನಿರ್ಮಾಪಕರಾಗಿ ಫೇಮಸ್ ಆಗಿದ್ದಾರೆ. ಅವರಿಗೆ ಈಗ 68 ವರ್ಷ ವಯಸ್ಸು. ಬೋನಿ ಕಪೂರ್ ಅವರಿಗೆ ಕುಟುಂಬದವರು, ಅಭಿಮಾನಿಗಳು ಶುಭಾಶಯ ಜನ್ಮದಿನದ ಶುಭಾಶಯ ತಿಳಿಸುತ್ತಿದ್ದಾರೆ. ಬೋನಿ ಕಪೂರ್ ಮತ್ತು ಶ್ರೀದೇವಿ (Sridevi) ದಂಪತಿ ವೈಯಕ್ತಿಕ ಜೀವನದ ಕಾರಣಕ್ಕೂ ಹಲವು ಬಾರಿ ಸುದ್ದಿ ಆಗಿದ್ದಾರೆ. ಅವರ ಮದುವೆ ವಿಚಾರ ಸಾಕಷ್ಟು ವಿವಾದ ಸೃಷ್ಟಿ ಮಾಡಿತ್ತು. ಆ ಬಗ್ಗೆ ಇಲ್ಲಿದೆ ವಿವರ.

ಬೋನಿ ಕಪೂರ್ ಅವರು ಮೋನಾ ಕಪೂರ್ ಅವರನ್ನು ಮೊದಲು ಮದುವೆ ಆದರು. ಇವರು ವಿವಾಹ ಆಗಿದ್ದು 1983ರಲ್ಲಿ. ಬೋನಿ ಅವರನ್ನು ಮದುವೆ ಆಗುವಾಗ ಮೋನಾಗೆ 19 ವರ್ಷ ವಯಸ್ಸು. ಮೋನಾ ಸಂಪೂರ್ಣವಾಗಿ ಬೋನಿ ಜೊತೆಯೇ ಬೆಳೆದರು. ದಾಂಪತ್ಯ ಜೀವನದಲ್ಲಿ ಇರುವಾಗಲೇ ಬೋನಿ ಶ್ರೀದೇವಿಯನ್ನು ಪ್ರೀತಿಸಿದ್ದರು. ಇದನ್ನು ತಿಳಿದು ಮೋನಾ ಶಾಕ್​ಗೆ ಒಳಗಾದರು. ಆಗಲೇ ಶ್ರೀದೇವಿ ಪ್ರೆಗ್ನೆಂಟ್ ಆಗಿದ್ದರು. 1996ರಲ್ಲಿ ಬೋನಿ ಅವರು ಮೋನಾಗೆ ವಿಚ್ಛೇದನ ಕೊಟ್ಟು ಅದೇ ವರ್ಷ ಶ್ರೀದೇವಿಯನ್ನು ಮದುವೆ ಆದರು. ಶ್ರೀದೇವಿಯನ್ನು ಮದುವೆ ಆಗುವಾಗ ಬೋನಿ ಅವರು ಮೋನಾಗೆ ವಿಚ್ಛೇದನ ಕೊಟ್ಟಿರಲಿಲ್ಲ ಎನ್ನುವ ಮಾತೂ ಇದೆ.

Boney Kapoor: ‘ಶ್ರೀದೇವಿಯದ್ದು ಸಹಜ ಸಾವಲ್ಲ’: ಕೊನೆಗೂ ಮೌನ ಮುರಿದು ಕಾರಣ ತಿಳಿಸಿದ ಪತಿ ಬೋನಿ ಕಪೂರ್​

ಶ್ರೀದೇವಿಗೆ ಸಿಟ್ಟು?

ಬೋನಿ ಹಾಗೂ ಶ್ರೀದೇವಿ ಪ್ರೀತಿಸುತ್ತಿದ್ದರು. ಬೋನಿ ಕಪೂರ್​ಗೆ ಮದುವೆ ಆಗಿ ಮಕ್ಕಳಿರುವ ವಿಚಾರ ಶ್ರೀದೇವಿಗೆ ಗೊತ್ತಿತ್ತು. ಆದಾಗ್ಯೂ ಅವರು ಮದುವೆ ಆಗೋಕೆ ಒಪ್ಪಿದ್ದರು. ಒಮ್ಮೆ ಬೋನಿ ಅವರು ಮೋನಾ ಹಾಗೂ ಮಕ್ಕಳ ಜೊತೆ ಪಿಕ್​ನಿಕ್​ಗೆ ತೆರಳಿದ್ದರು ಎನ್ನಲಾಗಿದೆ. ಇದು ಶ್ರೀದೇವಿ ಕೋಪಕ್ಕೆ ಕಾರಣ ಆಗಿತ್ತಂತೆ. ಬೋನಿ ಕಪೂರ್ ಮೇಲೆ ಅವರು ಕೂಗಾಡಿದ್ದರಂತೆ. ಮದುವೆ ಬಳಿಕ ಮೊದಲ ಪತ್ನಿ ಮೋನಾ, ಮಕ್ಕಳಾದ ಅರ್ಜುನ್ ಕಪೂರ್ ಹಾಗೂ ಅನ್ಶುಲಾ ಕಪೂರ್​ನ ಭೇಟಿ ಮಾಡುವುದಕ್ಕೆ ಬೋನಿಗೆ ಶ್ರೀದೇವಿ ಅವಕಾಶ ನೀಡಲಿಲ್ಲ. ಅರ್ಜುನ್ ಕಪೂರ್ ಹಾಗೂ ಶ್ರೀದೇವಿ ಮಧ್ಯೆ ಒಳ್ಳೆಯ ಬಾಂಧವ್ಯ ಇರಲಿಲ್ಲ.

ಮದುವೆಗೂ ಮೊದಲೇ ಶ್ರೀದೇವಿ ಗರ್ಭಿಣಿಯಾಗಿದ್ರಾ? ಬೋನಿ ಕಪೂರ್ ಹೇಳಿದ್ರು ಅಸಲಿ ಕಥೆ

ಕಾಫಿ ವಿತ್ ಕರಣ್ ಶೋನಲ್ಲಿ ಭಾಗಿ ಆಗಿದ್ದಾಗ ಶ್ರೀದೇವಿ ಬಗ್ಗೆ ಅರ್ಜುನ್ ಕಪೂರ್ ಮಾತನಾಡಿದ್ದರು. ‘ಶ್ರೀದೇವಿ ನನ್ನ ಅಪ್ಪನ ಹೆಂಡತಿ ಅಷ್ಟೇ. ನನಗೂ ಅವರಿಗೂ ಯಾವುದೇ ಸಂಬಂಧ ಇಲ್ಲ’ ಎಂದಿದ್ದರು. 1984ರಲ್ಲಿ ಬೋನಿ ಕಪೂರ್ ಹಾಗೂ ಶ್ರೀದೇವಿ ಭೇಟಿ ಆಯಿತು. ‘ಮಿಸ್ಟರ್ ಇಂಡಿಯಾ’ ಸಿನಿಮಾದ ನಾಯಕಿ ಪಾತ್ರದಲ್ಲಿ ನಟಿಸಬೇಕು ಎಂದು ಅವರು ಕೋರಿಕೊಂಡಿದ್ದರು. ಆ ಬಳಿಕ ಇಬ್ಬರ ಮಧ್ಯೆ ಪ್ರೀತಿ ಆಯಿತು. 1993ರಲ್ಲಿ ಶ್ರೀದೇವಿಗೆ ಅವರು ಪ್ರಪೋಸ್ ಮಾಡಿದರು.

View this post on Instagram

A post shared by Boney.kapoor (@boney.kapoor)

‘ನಿಜವಾದ ಬೋನಿ ಕಪೂರ್​ನ ಪರಿಚಯ ಆದ ಬಳಿಕ ನನಗೆ ಅವರ ಮೇಲೆ ಪ್ರೀತಿ ಆಯಿತು. ಅವರನ್ನು ಒಪ್ಪಿಕೊಳ್ಳಲು ಹಲವು ವರ್ಷ ಬೇಕಾಯಿತು. ಕೊನೆಗೂ ಅವರ ಪ್ರೀತಿ ಒಪ್ಪಿದೆ. ನಾನು ನನ್ನ ಮನಸ್ಸಿನ ಮಾತು ಕೇಳಿದೆ. ನನ್ನ ನಿರ್ಧಾರದಿಂದ ನನ್ನ ಸಹೋದರಿ ಶಾಕ್ ಆಗಿದ್ದರು. ಆ ಸಂದರ್ಭದಲ್ಲಿ ನನ್ನ ಪಾಲಕರು ತೀರಿಕೊಂಡಿದ್ದರು’ ಎಂದಿದ್ದರು ಶ್ರೀದೇವಿ. 2018ರ ಆಗಸ್ಟ್ 13ರಂದು ದುಬೈನಲ್ಲಿ ಬಾತ್​ಟಬ್​ನಲ್ಲಿ ಮುಳುಗಿ ಶ್ರೀದೇವಿ ಅವರು ಮೃತಪಟ್ಟರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.