Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೀಪಾವಳಿಗೆ ಶುಭಕೋರಿದ ಸಲ್ಮಾನ್-ಕತ್ರಿನಾ; ‘ನಿಮ್ಮ ಜೋಡಿ ಚೆನ್ನಾಗಿದೆ’ ಎಂದ ಅಭಿಮಾನಿಗಳು

ಸಲ್ಮಾನ್ ಹಾಗೂ ಕತ್ರಿನಾ ಒಟ್ಟಾಗಿ ನಟಿಸಿದ ‘ಏಕ್​ ಥಾ ಟೈಗರ್’, ‘ಟೈಗರ್ ಜಿಂದಾ ಹೈ’ ಸಿನಿಮಾಗಳಲ್ಲಿ ಇವರು ಒಟ್ಟಾಗಿ ನಟಿಸಿದರು. ಇವರ ಕೆಮಿಸ್ಟ್ರಿ ಪ್ರೇಕ್ಷಕರಿಗೆ ಇಷ್ಟ ಆಗಿದೆ. ಈಗ ‘ಟೈಗರ್ 3’ ಸಿನಿಮಾ ಮೂಲಕ ಮತ್ತೆ ಪ್ರೇಕ್ಷಕರ ಎದುರು ಇವರು ಬರುತ್ತಿದ್ದಾರೆ.

ದೀಪಾವಳಿಗೆ ಶುಭಕೋರಿದ ಸಲ್ಮಾನ್-ಕತ್ರಿನಾ; ‘ನಿಮ್ಮ ಜೋಡಿ ಚೆನ್ನಾಗಿದೆ’ ಎಂದ ಅಭಿಮಾನಿಗಳು
ಸಲ್ಮಾನ್-ಕತ್ರಿನಾ
Follow us
ರಾಜೇಶ್ ದುಗ್ಗುಮನೆ
|

Updated on: Nov 10, 2023 | 11:53 AM

ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ (Katrina Kaif) ಅವರು ದೀಪಾವಳಿ ಹಬ್ಬಕ್ಕೆ ಶುಭಕೋರಿದ್ದಾರೆ. ಇಬ್ಬರೂ ಒಟ್ಟಾಗಿ ನಿಂತಿರುವ ಫೋಟೋ ಪೋಸ್ಟ್ ಮಾಡಿರುವ ಸಲ್ಮಾನ್ ಖಾನ್ ‘ದೀಪಾವಳಿ ಶುಭಾಶಯ’ ಎಂದಿದ್ದಾರೆ. ಅಂದಹಾಗೆ, ಸಲ್ಮಾನ್ ಖಾನ್ ಈ ಫೋಟೋ ಪೋಸ್ಟ್ ಮಾಡೋಕೆ ಕಾರಣ ಆಗಿದ್ದು ‘ಟೈಗರ್ 3’ ಸಿನಿಮಾ. ಆದರೆ, ಇದನ್ನು ಗಮನಿಸದೇ ಹೆಚ್ಚಿನ ಮಂದಿ ಸಲ್ಮಾನ್ ಖಾನ್ ಹಾಗೂ ಕತ್ರಿನಾ ಜೋಡಿಯನ್ನು ಹೊಗಳುವ ಕೆಲಸದಲ್ಲಿ ನಿರತರಾಗಿದ್ದಾರೆ. ‘ಈ ಜೋಡಿ ಸೂಪರ್ ಎಂದೆಲ್ಲ’ ಕೆಲವರು ಕಮೆಂಟ್ ಮಾಡಿದ್ದಾರೆ.

ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಒಂದು ಕಾಲದಲ್ಲಿ ಪ್ರೀತಿಸುತ್ತಿದ್ದರು. ನಂತರ ಬ್ರೇಕಪ್ ಆಯಿತು. ಎರಡೂ ವಿಚಾರ ಗುಟ್ಟಾಗಿ ಉಳಿದಿಲ್ಲ. ಬ್ರೇಕಪ್ ಆದ ಬಳಿಕ ಸಲ್ಮಾನ್ ಹಾಗೂ ಕತ್ರಿನಾ ಮಾತನಾಡುತ್ತಿರಲಿಲ್ಲ. ಬಳಿಕ ಇವರ ಮಧ್ಯೆ ಮತ್ತೆ ಫ್ರೆಂಡ್​ಶಿಪ್ ಆಯಿತು. ಇಬ್ಬರ ಗೆಳೆತನ ಮುಂದುವರಿಯಿತು. ಇವರು ಒಟ್ಟಾಗಿ ನಟಿಸಿದ ‘ಏಕ್​ ಥಾ ಟೈಗರ್’, ‘ಟೈಗರ್ ಜಿಂದಾ ಹೈ’ ಸಿನಿಮಾಗಳಲ್ಲಿ ಇವರು ಒಟ್ಟಾಗಿ ನಟಿಸಿದರು. ಇವರ ಕೆಮಿಸ್ಟ್ರಿ ಪ್ರೇಕ್ಷಕರಿಗೆ ಇಷ್ಟ ಆಗಿದೆ. ಈಗ ‘ಟೈಗರ್ 3’ ಸಿನಿಮಾ ಮೂಲಕ ಮತ್ತೆ ಪ್ರೇಕ್ಷಕರ ಎದುರು ಇವರು ಬರುತ್ತಿದ್ದಾರೆ.

ನವೆಂಬರ್ 12ರಂದು ‘ಟೈಗರ್ 3’ ಸಿನಿಮಾ ರಿಲೀಸ್ ಆಗುತ್ತಿದೆ. ಸಿನಿಮಾ ನೋಡಿ ಎಂದು ಅವರು ಕೋರಿದ್ದಾರೆ. ಸಲ್ಮಾನ್ ಖಾನ್ ಅವರು ಕುರ್ತ ಧರಿಸಿದ್ದಾರೆ, ಕತ್ರಿನಾ ಸೀರೆ ಧರಿಸಿ, ಕೈಯಲ್ಲಿ ದೀಪ ಹಿಡಿದಿದ್ದಾರೆ. ಈ ಫೋಟೋಗೆ ಸಲ್ಮಾನ್ ಖಾನ್ ಅವರು, ‘ಟೈಗರ್ 3 ಭಾನುವಾರ (12 ನವೆಂಬರ್) ಹಿಂದಿ, ತೆಲುಗು, ತಮಿಳು ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ನಿಮ್ಮ ಟಿಕೆಟ್ ಬುಕ್ ಮಾಡಿ’ ಎಂದು ಸಲ್ಮಾನ್ ಖಾನ್ ಕೋರಿದ್ದಾರೆ.

ಇದನ್ನೂ ಓದಿ: ಪಾರ್ಟಿಯಲ್ಲಿ ಐಶ್ವರ್ಯಾಗೆ ಹಗ್ ಮಾಡಿದ ಸಲ್ಮಾನ್ ಖಾನ್? ವೈರಲ್ ಆಗಿದೆ ವಿಡಿಯೋ

ಈ ಫೋಟೋ ನೋಡಿದ ಅನೇಕರು ಸಲ್ಮಾನ್ ಖಾನ್ ಹಾಗೂ ಕತ್ರಿನಾ ಜೋಡಿಯನ್ನು ಹೊಗಳಿದ್ದಾರೆ. ‘ಕತ್ರಿನಾ ಅವರೇ ನಿಮಗೆ ಇನ್ನೂ ಸಮಯ ಇದೆ. ದಯವಿಟ್ಟು, ವಿಕ್ಕಿಗೆ ವಿಚ್ಛೇದನ ನೀಡಿ, ನಮ್ಮ ಭಾಯ್​ನ ಮದುವೆ ಆಗಿ’ ಎಂದು ಕೋರಿದ್ದಾರೆ. ಇನ್ನೂ ಕೆಲವರು ‘ಸಲ್ಮಾನ್ ಖಾನ್​ನ ಬೀಡೋಕೆ ಕಾರಣ ಏನು’ ಎಂದು ಪ್ರಶ್ನೆ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ