ಶೂಟಿಂಗ್ ಮಾಡುತ್ತಲೇ ಇದೆ ‘ಟೈಗರ್ 3’ ಟೀಂ; ಹೆಚ್ಚುವರಿಯಾಗಿ ಸೇರ್ಪಡೆ ಆಯ್ತು ಪ್ರಮುಖ ದೃಶ್ಯ

Tiger 3 Movie: ‘ವಾರ್’ ಸಿನಿಮಾದಲ್ಲಿ ನಟಿಸಿದ್ದ ಹೃತಿಕ್ ರೋಷನ್ ಪಾತ್ರವೂ ಸಿನಿಮಾದಲ್ಲಿ ಇದ್ದರೆ ಉತ್ತಮ ಎನ್ನುವ ಆಲೋಚನೆ ಯಶ್ ರಾಜ್ ಫಿಲ್ಮ್ಸ್​ಗೆ ಕೊನೇ ಕ್ಷಣದಲ್ಲಿ ಬಂದಿದೆ. ಹೀಗಾಗಿ ಇದರ ಶೂಟಿಂಗ್ ನಡೆದಿದೆ.

ಶೂಟಿಂಗ್ ಮಾಡುತ್ತಲೇ ಇದೆ ‘ಟೈಗರ್ 3’ ಟೀಂ; ಹೆಚ್ಚುವರಿಯಾಗಿ ಸೇರ್ಪಡೆ ಆಯ್ತು ಪ್ರಮುಖ ದೃಶ್ಯ
ಸಲ್ಮಾನ್ ಖಾನ್
Follow us
ರಾಜೇಶ್ ದುಗ್ಗುಮನೆ
|

Updated on: Nov 09, 2023 | 7:12 AM

ದೊಡ್ಡ ದೊಡ್ಡ ನಿರ್ಮಾಪಕರು ಸಿನಿಮಾ ರಿಲೀಸ್​ಗೆ ಕೆಲವು ತಿಂಗಳು ಇರುವಾಗಲೇ ಸಂಪೂರ್ಣ ಕೆಲಸ ಪೂರ್ಣಗೊಳಿಸಿಕೊಂಡಿರುತ್ತಾರೆ. ಕೊನೆಯ ಹಂತದಲ್ಲಿ ಸಿನಿಮಾಗೆ ಯಾವುದೇ ತೊಂದರೆ ಆಗದಿರಲಿ ಎನ್ನುವ ಕಾರಣಕ್ಕೆ ಈ ರೀತಿ ಮಾಡಲಾಗುತ್ತದೆ. ಆದರೆ, ‘ಟೈಗರ್ 3’ ಸಿನಿಮಾ (Tiger 3 Movie) ರಿಲೀಸ್​ಗೆ ಕೆಲವೇ ದಿನ ಬಾಕಿ ಇರುವಾಗಲೂ ತಂಡ ಶೂಟಿಂಗ್​ನಲ್ಲಿ ಭಾಗಿ ಆಗಿದೆ. ಈ ವಿಚಾರ ಅಭಿಮಾನಿಗಳಿಗೆ ಅಚ್ಚರಿ ತಂದಿದೆ. ಹೃತಿಕ್ ರೋಷನ್ ಅವರಿಗೆ ಸಂಬಂಧಿಸಿದ ದೃಶ್ಯವನ್ನು ಶೂಟ್ ಮಾಡಲಾಗಿದೆ. ಈ ಮೂಲಕ ಸಿನಿಮಾದ ಅವಧಿ ಹೆಚ್ಚಿದೆ.

‘ಟೈಗರ್ 3’ ಯಶ್​ ರಾಜ್ ಫಿಲ್ಮ್ಸ್​ನ ಸ್ಪೈ ಯೂನಿವರ್ಸ್ ಅಡಿಯಲ್ಲಿ ಸಿದ್ಧವಾದ ಸಿನಿಮಾ. ಈ ಕಾರಣದಿಂದಲೇ ‘ಪಠಾಣ್’ ಸಿನಿಮಾದಲ್ಲಿ ಪಠಾಣ್ ಹೆಸರಿನ ಪಾತ್ರ ಮಾಡಿದ್ದ ಶಾರುಖ್ ಖಾನ್ ಅವರು ‘ಟೈಗರ್ 3’ ಚಿತ್ರದಲ್ಲಿ ಅತಿಥಿ ಪಾತ್ರ ಮಾಡುತ್ತಿದ್ದಾರೆ. ‘ವಾರ್’ ಸಿನಿಮಾದಲ್ಲಿ ನಟಿಸಿದ್ದ ಹೃತಿಕ್ ರೋಷನ್ ಪಾತ್ರವೂ ಸಿನಿಮಾದಲ್ಲಿ ಇದ್ದರೆ ಉತ್ತಮ ಎನ್ನುವ ಆಲೋಚನೆ ಯಶ್ ರಾಜ್ ಫಿಲ್ಮ್ಸ್​ಗೆ ಕೊನೇ ಕ್ಷಣದಲ್ಲಿ ಬಂದಿದೆ. ಹೀಗಾಗಿ ಇದರ ಶೂಟಿಂಗ್ ನಡೆದಿದೆ.

ಈಗಾಗಲೇ ‘ಟೈಗರ್ 3’ ಚಿತ್ರದ ಸೆನ್ಸಾರ್ ಪ್ರಮಾಣಪತ್ರ ಪ್ರಕ್ರಿಯೆ ಪೂರ್ಣಗೊಂಡಿತ್ತು. ಈ ಮೊದಲು ಸಿನಿಮಾದ ಅವಧಿ 2 ಗಂಟೆ 33 ನಿಮಿಷ ಇತ್ತು. ಇತ್ತೀಚೆಗೆ ಯಶ್ ರಾಜ್ ಫಿಲ್ಮ್ಸ್ ಸ್ಟುಡಿಯೋದಲ್ಲಿ ಮತ್ತೆ ಶೂಟಿಂಗ್ ನಡೆದಿದೆ. ಹೃತಿಕ್ ಭಾಗದ ದೃಶ್ಯವನ್ನು ಸೆರೆ ಹಿಡಿಯಲಾಗಿದೆ. ಈ ಮೂಲಕ ಚಿತ್ರದ ಅವಧಿ 2 ಗಂಟೆ 36 ನಿಮಿಷ ಆಗಿದೆ. ಈ ವಿಚಾರ ಅಭಿಮಾನಿಗಳಿಗೆ ಖುಷಿ ನೀಡಿದೆ.

ಇದನ್ನೂ ಓದಿ: ‘ಟೈಗರ್​ 3’ ಅಡ್ವಾನ್ಸ್​ ಬುಕಿಂಗ್​ನಿಂದ ಬಂತು 10 ಕೋಟಿ ರೂ.; ಇದು ಸುನಾಮಿ ಮುನ್ಸೂಚನೆ

ಈಗಾಗಲೇ ‘ಟೈಗರ್ 3’ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಪ್ರಿ ಬುಕಿಂಗ್​ನಿಂದ ಚಿತ್ರಕ್ಕೆ 10 ಕೋಟಿ ರೂಪಾಯಿ ಹರಿದು ಬಂದಿದೆ. ಸಾಮಾನ್ಯವಾಗಿ ಸಿನಿಮಾಗಳು ಗುರುವಾರ ಅಥವಾ ಶುಕ್ರವಾರ ರಿಲೀಸ್ ಆಗುತ್ತವೆ. ಆದರೆ, ‘ಟೈಗರ್ 3’ ಸಿನಿಮಾ ಭಾನುವಾರ (ನವೆಂಬರ್ 12) ರಿಲೀಸ್ ಆಗುತ್ತಿದೆ. ದೀಪಾವಳಿ ಪ್ರಯುಕ್ತ ಸಾಲು ಸಾಲು ರಜೆ ಇರೋದು ಚಿತ್ರಕ್ಕೆ ಸಹಕಾರಿ ಆಗಲಿದೆ. ಸಲ್ಮಾನ್ ಖಾನ್, ಕತ್ರಿನಾ ಕೈಫ್, ಇಮ್ರಾನ್ ಹಶ್ಮಿ ಮೊದಲಾದವರು ಚಿತ್ರದಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ