ಏಳು ತಿಂಗಳ ಬಳಿಕ ಒಟಿಟಿಗೆ ಬಂದ ಹೃತಿಕ್ ರೋಷನ್ ಸಿನಿಮಾ ತಲುಪಲಿದೆ 40 ಕೋಟಿ ಜನರಿಗೆ

Hritik Roshan: ಕಳೆದ ವರ್ಷ ಸೆಪ್ಟೆಂಬರ್​ನಲ್ಲಿ ಬಿಡುಗಡೆ ಆಗಿದ್ದ ಹಿಂದಿ ವಿಕ್ರಂ-ವೇದ ಸಿನಿಮಾ ಏಳು ತಿಂಗಳ ಬಳಿಕ ಒಟಿಟಿಗೆ ಬರುತ್ತಿದೆ. 40 ಕೋಟಿ ಜನರಿಗೆ ಏಕಕಾಲಕ್ಕೆ ಸಿನಿಮಾ ವೀಕ್ಷಣೆಗೆ ಲಭ್ಯವಾಗಿ ಅದೂ ಉಚಿತವಾಗಿ!

ಏಳು ತಿಂಗಳ ಬಳಿಕ ಒಟಿಟಿಗೆ ಬಂದ ಹೃತಿಕ್ ರೋಷನ್ ಸಿನಿಮಾ ತಲುಪಲಿದೆ 40 ಕೋಟಿ ಜನರಿಗೆ
ವಿಕ್ರಂ ವೇದ
Follow us
|

Updated on:May 10, 2023 | 10:26 PM

ಇತ್ತೀಚೆಗೆ ಬಿಡುಗಡೆ ಆಗುತ್ತಿರುವ ಯಾವುದೇ ಭಾಷೆಯ ಸೂಪರ್ ಹಿಟ್ ಅಥವಾ ಫ್ಲಾಪ್ ಸಿನಿಮಾಗಳಾದರು ಹೆಚ್ಚೆಂದರೆ ಒಂದು ಅಥವಾ ಎರಡು ತಿಂಗಳೊಳಗಾಗಿ ಒಟಿಟಿಗೆ ಬಂದು ಬಿಡುತ್ತವೆ. ಕೆಲವು ಸಿನಿಮಾಗಳಂತೂ ಒಂದೇ ವಾರದಲ್ಲಿ ಒಟಿಟಿಗೆ ಕಾಲಿಡುವುದೂ ಇದೆ. ಆದರೆ ಬಾಲಿವುಡ್ ನಟ ಹೃತಿಕ್ ರೋಷನ್ (Hritik Roshan) ಹಾಗೂ ಸೈಫ್ ಅಲಿ ಖಾನ್ (Saif Ali Khan) ಮುಖ್ಯ ಪಾತ್ರದಲ್ಲಿ ನಟಿಸಿದ್ದ ಹಿಂದಿ ಸಿನಿಮಾ ವಿಕ್ರಂ-ವೇದ ಬರೋಬ್ಬರಿ ಏಳು ತಿಂಗಳ ಬಳಿಕ ಕೊನೆಗೂ ಒಟಿಟಿಗೆ ಬರುತ್ತಿದೆ. ಅದೂ ಒಂದೇ ಬಾರಿ 40 ಕೋಟಿ ವೀಕ್ಷಕರಿಗೆ ಸುಲಭಕ್ಕೆ ಸಿನಿಮಾ ಲಭ್ಯವಾಗಲಿದೆ.

ತಮಿಳಿನಲ್ಲಿ ವಿಜಯ್ ಸೇತುಪತಿ, ಮಾಧವನ್ ನಟಿಸಿದ್ದ ವಿಕ್ರಂ-ವೇದ ಸಿನಿಮಾವನ್ನು ಅದೇ ಹೆಸರಿನಲ್ಲಿ ಹಿಂದಿಗೆ ರೀಮೇಕ್ ಮಾಡಲಾಗಿತ್ತು. ವಿಜಯ್ ಸೇತುಪತಿ ನಟಿಸಿದ್ದ ಪಾತ್ರದಲ್ಲಿ ಹೃತಿಕ್ ರೋಷನ್ ಹಾಗೂ ಮಾಧವನ್ ನಟಿಸಿದ್ದ ಪಾತ್ರದಲ್ಲಿ ಸೈಫ್ ಅಲಿ ಖಾನ್ ನಟಿಸಿದ್ದರು, ಕಳೆದ ವರ್ಷ ಸೆಪ್ಟೆಂಬರ್ 22 ರಂದು ಈ ಸಿನಿಮಾ ತೆರೆಗೆ ಬಂದಿತ್ತು. ಸಿನಿಮಾ ಬಿಡುಗಡೆಗೆ ಮುಂಚೆ ಸದ್ದು ಮಾಡಿತ್ತಾದರೂ ಚಿತ್ರಮಂದಿರಗಳಿಗೆ ಬಂದಾಗ ದೊಡ್ಡ ಮಟ್ಟದ ಕಲೆಕ್ಷನ್ ಮಾಡಲಾಗಲಿಲ್ಲ. ಆದರೆ ವಿಮರ್ಶಕರು ಸಿನಿಮಾವನ್ನು ಹೃತಿಕ್ ಹಾಗೂ ಸೈಫ್​ರ ನಟನೆಯನ್ನು ಕೊಂಡಾಡಿದ್ದರು.

ಇದೀಗ ಇದೇ ಸಿನಿಮಾ ಜಿಯೋ ಸಿನಿಮಾ ಒಟಿಟಿಗೆ ಬರುತ್ತಿದೆ. ಮೇ 12 ರಂದು ಜಿಯೋ ಸಿನಿಮಾದಲ್ಲಿ ‘ವಿಕ್ರಂ ವೇದ’ ಹಿಂದಿ ಸಿನಿಮಾ ಬಿಡುಗಡೆ ಆಗುತ್ತಿದ್ದು, ಜಿಯೋ ಸಿನಿಮಾದ 40 ಕೋಟಿ ವೀಕ್ಷಕರು ಉಚಿತವಾಗಿ ಈ ಸಿನಿಮಾವನ್ನು ನೋಡಬಹುದಾಗಿದೆ. ಅಮೆಜಾನ್ ಪ್ರೈಂ, ನೆಟ್​ಫ್ಲಿಕ್ಸ್​ಗಳು ಭಾರತದಲ್ಲಿ ಹೊಂದಿರುವ ಸಬ್​ಸ್ಕ್ರೈಬರ್​ಗಳಿಗೆ ಹೋಲಿಸಿದರೆ ಇದು ಬಹಳ ದೊಡ್ಡ ಸಂಖ್ಯೆ.

ತಮ್ಮ ಸಿನಿಮಾ ಜಿಯೋ ಸಿನಿಮಾದಲ್ಲಿ ಬಿಡುಗಡೆ ಆಗುತ್ತಿರುವ ಕುರಿತಾಗಿ ಮಾತನಾಡಿರುವ ನಟ ಹೃತಿಕ್ ರೋಷನ್, ”ಸಿನಿಮಾ ಬಿಡುಗಡೆ ದಿನ ಆಗುವಂಥಹದ್ದೇ ಅನುಭವ ಈಗಲೂ ಆಗುತ್ತಿದೆ. ವಿಕ್ರಂ ವೇದ ಸಿನಿಮಾವು ಉಚಿತವಾಗಿ ಜಿಯೋ ಸಿನಿಮಾ ಮೂಲಕ ನೋಡಬಹುದಾಗಿದೆ ಅದೂ ಮರಾಠಿ ಹಾಗೂ ಬೆಂಗಾಲಿ ಭಾಷೆಯಲ್ಲಿ. ಜಿಯೋ ಸಿನಿಮಾ ಬಿಡುಗಡೆ ಮಾಡುತ್ತಿರುವ ಮೊದಲ ಸಿನಿಮಾ ಇದಾಗಿದ್ದು, ಇನ್ನೂ 100 ಸಿನಿಮಾಗಳನ್ನು ಅವರು ಬಿಡುಗಡೆ ಮಾಡಲಿದ್ದಾರೆ. ಆ ನೂರು ಸಿನಿಮಾಗಳಲ್ಲಿ ನಮ್ಮದು ಮೊದಲ ಸಿನಿಮಾ ಆಗಿರುವುದು ಖುಷಿಯ ವಿಚಾರ” ಎಂದಿದ್ದಾರೆ.

ವಿಕ್ರಂ ವೇದ ಸಿನಿಮಾದಲ್ಲಿ ಹೃತಿಕ್ ರೋಷನ್ ಜೊತೆಗೆ ಸೈಪ್ ಅಲಿ ಖಾನ್ ಸಹ ನಟಿಸಿದ್ದಾರೆ. ಭೂಗತ ಪಾತಕಿಯ ಪಾತ್ರದಲ್ಲಿ ಹೃತಿಕ ರೋಷನ್ ನಟಿಸಿದ್ದರೆ ಪಾತಕಿಯನ್ನು ಹಿಡಿಯಲು ನಿಯೋಜನೆಗೊಂಡ ಪೊಲೀಸ್ ಪಾತ್ರದಲ್ಲಿ ಸೈಫ್ ಅಲಿ ಖಾನ್ ನಟಿಸಿದ್ದಾರೆ. ಸಿನಿಮಾದಲ್ಲಿ ರಾಧಿಕಾ ಆಫ್ಟೆ, ಯೋಗಿತಾ ಬಿಹಾನಿ ಸಹ ನಟಿಸಿದ್ದಾರೆ. ಮೂಲ ಸಿನಿಮಾ ನಿರ್ದೇಶನ ಮಾಡಿದ್ದ ಪುಷ್ಕರ್-ಗಾಯತ್ರಿ ಅವರುಗಳೇ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಬಂಡವಾಳವನ್ನು ಜಿಯೋ ಸಿನಿಮಾಸ್, ರಿಲಯನ್ಸ್ ಎಂಟರ್ಟೈನ್​ಮೆಂಟ್, ಟಿ ಸೀರೀಸ್, ಫ್ರೈಡೆ ಫಿಲಂವರ್ಕ್ ಅವರುಗಳು ಹೂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:26 pm, Wed, 10 May 23

ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?