Shaakuntalam: ಸದ್ದಿಲ್ಲದೇ ಒಟಿಟಿಗೆ ಬಂತು ‘ಶಾಕುಂತಲಂ’; ಕನ್ನಡದಲ್ಲೂ ಲಭ್ಯವಿದೆ ಸಮಂತಾ ನಟನೆಯ ಹೊಸ ಸಿನಿಮಾ
Amazon Prime Video: ಚಿತ್ರಮಂದಿರಗಳಲ್ಲಿ ‘ಶಾಕುಂತಲಂ’ ಸಿನಿಮಾ ಉತ್ತಮ ಪ್ರದರ್ಶನ ಕಾಣಲಿಲ್ಲ. ಸಮಂತಾ ಅಭಿಮಾನಿಗಳಿಗೂ ಈ ಚಿತ್ರ ಇಷ್ಟ ಆಗಿರಲಿಲ್ಲ. ಈಗ ಸೈಲೆಂಟ್ಗಾಗಿ ಈ ಸಿನಿಮಾ ಒಟಿಟಿಗೆ ಕಾಲಿಟ್ಟಿದೆ.
ಪೌರಾಣಿಕ ಕಥೆಗಳಿಗೆ ಯಾವಾಗಲೂ ಬೇಡಿಕೆ ಇರುತ್ತದೆ. ಆದರೆ ಪೌರಾಣಿಕ ಕಥಾಹಂದರವನ್ನು ಇಟ್ಟುಕೊಂಡು ಮಾಡಿದ ಸಿನಿಮಾಗಳು ಕೂಡ ಕೆಲವೊಮ್ಮೆ ಸೋತಿದ್ದುಂಟು. ಸಮಂತಾ ರುತ್ ಪ್ರಭು (Samantha Ruth Prabhu) ನಟನೆ ‘ಶಾಕುಂತಲಂ’ ಸಿನಿಮಾ ಕೂಡ ಹಾಗೆಯೇ ಆಯಿತು. ಬಹುಕೋಟಿ ರೂಪಾಯಿ ಬಜೆಟ್ ಸುರಿದು ಈ ಸಿನಿಮಾವನ್ನು ನಿರ್ಮಿಸಲಾಗಿತ್ತು. ಚಿತ್ರಮಂದಿರದಲ್ಲಿ ಈ ಚಿತ್ರಕ್ಕೆ ಭರ್ಜರಿ ಕಲೆಕ್ಷನ್ ಆಗಲಿದೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಆಗಿದ್ದೇ ಬೇರೆ. ಪ್ರೇಕ್ಷಕರಿಗೆ ‘ಶಾಕುಂತಲಂ’ (Shaakuntalam) ಸಿನಿಮಾ ಸ್ವಲ್ಪವೂ ಹಿಡಿಸಲಿಲ್ಲ. ಹಾಗಾಗಿ ಬಾಕ್ಸ್ ಆಫೀಸ್ನಲ್ಲಿ ಈ ಚಿತ್ರಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಈಗ ಈ ಸಿನಿಮಾ ಒಟಿಟಿ ಅಂಗಳಕ್ಕೆ ಕಾಲಿಟ್ಟಿದೆ. ಸೋತ ಸಿನಿಮಾ ಎಂಬ ಕಾರಣಕ್ಕೋ ಏನೋ ಯಾವುದೇ ಅಬ್ಬರದ ಪ್ರಚಾರ ಇಲ್ಲದೇ ಸೈಲೆಂಟ್ ಆಗಿ ಈ ಚಿತ್ರವನ್ನು ‘ಅಮೇಜಾನ್ ಪ್ರೈಂ ವಿಡಿಯೋ’ (Amazon Prime Video) ಮೂಲಕ ಸ್ಟ್ರೀಮ್ ಮಾಡಲಾಗುತ್ತಿದೆ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ ‘ಶಾಕುಂತಲಂ’ ಸಿನಿಮಾ ಸಿದ್ಧಗೊಂಡಿತ್ತು. ಪೌರಾಣಿಕ ಕಥೆಗಳು ಎಲ್ಲ ಪ್ರದೇಶಕ್ಕೂ ಅನ್ವಯ ಆಗುತ್ತವೆ. ಆದ್ದರಿಂದ ತೆಲುಗು ಮಾತ್ರವಲ್ಲದೇ ಕನ್ನಡ, ತಮಿಳು, ಹಿಂದಿ, ಮಲಯಾಳಂ ಭಾಷೆಯಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡಲಾಗಿತ್ತು. ಈಗ ಒಟಿಟಿ ಮೂಲಕ ಕೂಡ ಈ ಎಲ್ಲ ಭಾಷೆಯಲ್ಲೂ ‘ಶಾಕುಂತಲಂ’ ಚಿತ್ರ ವೀಕ್ಷಣೆಗೆ ಲಭ್ಯವಾಗಿದೆ.
‘ಶಾಕುಂತಲಂ’ ಸಿನಿಮಾ ಸೋತ ಬಳಿಕ ಸಮಂತಾಗೆ ನೆನಪಾಯ್ತು ಭಗವದ್ಗೀತೆಯ ಶ್ಲೋಕ
ಸಮಂತಾ ರುತ್ ಪ್ರಭು ಅವರನ್ನು ಓಡುವ ಕುದುರೆ ಎಂದೇ ಪರಿಗಣಿಸಲಾಗಿತ್ತು. ಅವರ ಸಿನಿಮಾಗೆ ಬಂಡವಾಳ ಹೂಡಿದರೆ ನಿರ್ಮಾಪಕರಿಗೆ ನಷ್ಟ ಆಗುವುದಿಲ್ಲ ಎಂದು ಟಾಲಿವುಡ್ ಮಂದಿ ಊಹಿಸಿದ್ದರು. ಆದರೆ ‘ಶಾಕುಂತಲಂ’ ಸಿನಿಮಾ ಸೋಲಿನಿಂದ ಆ ಲೆಕ್ಕಾಚಾರ ತಲೆಕೆಳಗಾಯಿತು. ಏಪ್ರಿಲ್ 14ರಂದು ಬಿಡುಗಡೆ ಆದ ಈ ಸಿನಿಮಾಗೆ ಮೊದಲ ವೀಕೆಂಡ್ ಕಳೆದರೂ ಎರಡಂಕಿ ಮುಟ್ಟಲು ಸಾಧ್ಯವಾಗಲಿಲ್ಲ. 3 ದಿನಕ್ಕೆ ಬಾಕ್ಸ್ ಆಫೀಸ್ನಲ್ಲಿ 10 ಕೋಟಿ ರೂಪಾಯಿ ಕೂಡ ಕಲೆಕ್ಷನ್ ಆಗಲಿಲ್ಲ. ಒಟಿಟಿಯಲ್ಲಾದರೂ ಈ ಸಿನಿಮಾಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಗಲಿದೆಯೇ ಎಂಬ ಕೌತುಕ ಮೂಡಿದೆ.
Our team is overwhelmed to have been honored with these prestigious Global Awards ✨ Thank you for this incredible recognition ?#Shaakuntalam streaming now on @PrimeVideoIN. https://t.co/obv3N5qKUw@Gunasekhar1 @Samanthaprabhu2 @ActorDevMohan #ManiSharma @neelima_guna… pic.twitter.com/2EjTVaOlLO
— Gunaa Teamworks (@GunaaTeamworks) May 11, 2023
‘ಶಾಕುಂತಲಂ’ ಸಿನಿಮಾದಲ್ಲಿ ಪೌರಾಣಿಕ ಕಥಾಹಂದರ ಇದೆ. ಶಕುಂತಲೆಯಾಗಿ ಸಮಂತಾ ರುತ್ ಪ್ರಭು ಕಾಣಿಸಿಕೊಂಡಿದ್ದಾರೆ. ಅಲ್ಲು ಅರ್ಜುನ್ ಅವರ ಪುತ್ರಿ ಅಲ್ಲು ಅರ್ಹಾ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾಳೆ. ಖ್ಯಾತ ನಿರ್ದೇಶಕ ಗುಣಶೇಖರ್ ಅವರು ಆ್ಯಕ್ಷನ್-ಕಟ್ ಹೇಳಿದ್ದಾರೆ. ಗ್ರಾಫಿಕ್ಸ್ ಮೂಲಕ ಕಟ್ಟಿಕೊಟ್ಟ ದೃಶ್ಯಗಳು ಗಮನ ಸೆಳೆದಿವೆ. ಮೇಕಿಂಗ್ ಗುಣಮಟ್ಟ ಕೂಡ ಚೆನ್ನಾಗಿದೆ. ಹಾಗಿದ್ದರೂ ಸಹ ಚಿತ್ರಮಂದಿರದಲ್ಲಿ ಈ ಸಿನಿಮಾ ಮೋಡಿ ಮಾಡಲಿಲ್ಲ. ಈ ಸೋಲಿನ ಬೇಸರವನ್ನು ಮರೆತು ಸಮಂತಾ ಅವರು ಮುಂದಿನ ಪ್ರಾಜೆಕ್ಟ್ಗಳತ್ತ ಗಮನ ಹರಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.