- Kannada News Photo gallery Samantha says I Never Said This after Naga Chaitanya and Sobhita Dhulipala dating news go viral
Samantha: ‘ನಾನು ಇದನ್ನು ಹೇಳಲೇ ಇಲ್ಲ’: ಮಾಜಿ ಗಂಡನ ವಿಷಯಕ್ಕೆ ಸ್ಪಷ್ಟನೆ ನೀಡಿದ ಸಮಂತಾ
Samantha Ruth Prabhu: ಸಮಂತಾ ಹೇಳದೇ ಇರುವ ಮಾತುಗಳನ್ನೆಲ್ಲ ಇಟ್ಟುಕೊಂಡ ಕೆಲವು ಮಾಧ್ಯಮಗಳು ಸುಳ್ಳು ಸುದ್ದಿ ಪ್ರಕಟಿಸಿವೆ. ಅದರ ಬಗ್ಗೆ ಸಮಂತಾ ಸ್ಪಷ್ಟನೆ ನೀಡಿದ್ದಾರೆ.
Updated on:Apr 04, 2023 | 4:04 PM

ನಟಿ ಸಮಂತಾ ರುತ್ ಪ್ರಭು ಅವರು ನಾಗ ಚೈತನ್ಯ ಜೊತೆಗಿನ ದಾಂಪತ್ಯಕ್ಕೆ ವಿದಾಯ ಹೇಳಿದ ಬಳಿಕ ಒಂಟಿಯಾಗಿ ಜೀವನ ಸಾಗಿಸುತ್ತಿದ್ದಾರೆ. ವಿಚ್ಛೇದನ ಪಡೆದ ಬಳಿಕವೂ ಅವರ ಬಗ್ಗೆ ಗಾಸಿಪ್ ಹಬ್ಬುವುದು ನಿಂತಿಲ್ಲ. ಆ ವಿಚಾರದ ಬಗ್ಗೆ ಸಮಂತಾ ಈಗ ಮೌನ ಮುರಿದಿದ್ದಾರೆ.

ನಾಗ ಚೈತನ್ಯ ಹಾಗೂ ನಟಿ ಶೋಭಿತಾ ಧುಲಿಪಾಲಾ ಅವರು ಡೇಟಿಂಗ್ ಮಾಡುತ್ತಿರುವ ವಿಚಾರ ಈಗ ಗುಟ್ಟಾಗಿ ಉಳಿದಿಲ್ಲ. ಅನೇಕ ಕಡೆಗಳಲ್ಲಿ ಅವರು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಅವರಿಬ್ಬರ ಸಂಬಂಧದ ಬಗ್ಗೆ ಸಮಂತಾ ಮಾತಾಡಿದ್ದಾರೆ ಎಂದು ವರದಿ ಆಗಿತ್ತು.

ಮಾಜಿ ಗಂಡನ ಡೇಟಿಂಗ್ ಬಗ್ಗೆ ಸಮಂತಾ ಪ್ರತಿಕ್ರಿಯೆ ನೀಡಿದ್ದಾರೆ ಎನ್ನಲಾದ ಸುದ್ದಿ ಸ್ವತಃ ಸಮಂತಾ ಕಣ್ಣಿಗೆ ಬಿದ್ದಿದೆ. ಅದನ್ನು ನೋಡಿ ಅವರಿಗೆ ಶಾಕ್ ಆಗಿದೆ. ‘ಇದನ್ನು ನಾನು ಹೇಳಲೇ ಇಲ್ಲ’ ಎಂದು ಅವರೀಗ ಟ್ವಿಟರ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಸಮಂತಾ ರುತ್ ಪ್ರಭು ಮತ್ತು ನಾಗ ಚೈತನ್ಯ ಅವರು ಪ್ರೀತಿಸಿ ಮದುವೆ ಆದವರು. ಆದರೆ ಅವರ ದಾಂಪತ್ಯ ಜೀವನ ನಾಲ್ಕೇ ವರ್ಷಕ್ಕೆ ಅಂತ್ಯವಾಯಿತು. ವಿಚ್ಛೇದನ ಪಡೆದ ಬಳಿಕ ಸಮಂತಾ ಅವರು ಆ ವಿಚಾರದ ಬಗ್ಗೆ ಮೌನವಾಗಿದ್ದಾರೆ.

ನಾಗ ಚೈತನ್ಯ ಮತ್ತು ಸಮಂತಾ ನಡುವೆ ಯಾವ ವಿಚಾರಕ್ಕೆ ಕಿರಿಕ್ ಆಯಿತು? ಅವರು ಡಿವೋರ್ಸ್ ಪಡೆಯಲು ಅಸಲಿ ಕಾರಣ ಏನು ಎಂಬುದು ಇನ್ನೂ ಗುಟ್ಟಾಗಿಯೇ ಉಳಿದಿದೆ. ಹಳೇ ಘಟನೆಗಳನ್ನೆಲ್ಲ ಮರೆತು ಅವರು ಮುಂದೆ ಸಾಗುತ್ತಿದ್ದಾರೆ.
Published On - 4:04 pm, Tue, 4 April 23



















