Mrunal Thakur: ಬಿಕಿನಿ ಫೋಟೋ ಪೋಸ್ಟ್ ಮಾಡಿದ ಮೃಣಾಲ್ ಠಾಕೂರ್; ‘ಹೀಗೇಕೆ ಆದ್ರಿ’ ಎಂದು ಕೇಳಿದ ಫ್ಯಾನ್ಸ್
ಮೃಣಾಲ್ ಅವರು ಬಿಕಿನಿ ತೊಟ್ಟು ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋ ಸಖತ್ ವೈರಲ್ ಆಗಿದೆ.
Updated on: Apr 04, 2023 | 3:19 PM

ನಟಿ ಮೃಣಾಲ್ ಠಾಕೂರ್ ಅವರು ‘ಸೀತಾ ರಾಮಂ’ ಸಿನಿಮಾ ಮೂಲಕ ಫೇಮಸ್ ಆದರು. ಅವರು ಈ ಚಿತ್ರದಲ್ಲಿ ಸೀರೆ ಉಟ್ಟು ಸಖತ್ ಟ್ರೆಡಿಷನಲ್ ಆಗಿ ಕಾಣಿಸಿಕೊಂಡಿದ್ದರು. ಈ ಪಾತ್ರ ಎಲ್ಲರ ಮನಸ್ಸಲ್ಲೂ ಅಚ್ಚಳಿಯಾಗಿ ಉಳಿದಿದೆ.

ಸೆಲೆಬ್ರಿಟಿಗಳು ಸಿನಿಮಾದಲ್ಲಿ ಮಾಡೋದು ಕೇವಲ ಪಾತ್ರ. ಆದರೆ, ಅವರು ತೆರೆ ಹಿಂದೆಯೂ ಅದೇ ರೀತಿ ಇರಬೇಕು ಎಂದು ಫ್ಯಾನ್ಸ್ ಬಯಸುತ್ತಾರೆ.

‘ಸೀತಾ ರಾಮಂ’ ಸಿನಿಮಾ ವಿಚಾರದಲ್ಲೂ ಇದೇ ರೀತಿ ಆಗಿದೆ. ಎಲ್ಲರೂ ಮೃಣಾಲ್ ಅವರನ್ನು ಸೀತೆ ಪಾತ್ರದ ರೀತಿಯೇ ಕಲ್ಪಿಸಿಕೊಳ್ಳುತ್ತಾರೆ. ಆದರೆ, ಅದು ಸಾಧ್ಯವಾಗುತ್ತಿಲ್ಲ.

ಮೃಣಾಲ್ ಅವರು ಬಿಕಿನಿ ತೊಟ್ಟು ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋ ಸಖತ್ ವೈರಲ್ ಆಗಿದೆ. ಮೃಣಾಲ್ ಅವರ ಬಿಕಿನಿ ಫೋಟೋ ಎಲ್ಲರ ಗಮನ ಸೆಳೆದಿದೆ.

ಮೃಣಾಲ್ ಅವರ ಬಿಕಿನಿ ಫೋಟೋ ನೋಡಿ ಅನೇಕರಿಗೆ ಅರಗಿಸಿಕೊಳ್ಳೋಕೆ ಸಾಧ್ಯವಾಗುತ್ತಿಲ್ಲ. ಈ ಫೋಟೋಗೆ ಫ್ಯಾನ್ಸ್ ನೆಗೆಟಿವ್ ಕಮೆಂಟ್ ಹಾಕುತ್ತಿದ್ದಾರೆ.

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.
Read More



