Samantha: ಶಾಕುಂತಲಂ ಸಿನಿಮಾ ಚಿತ್ರೀಕರಣದ ಐದು ಕೆಟ್ಟ ಅನುಭವಗಳ ನೆನೆದ ಸಮಂತಾ

ನಟಿ ಸಮಂತಾ, ಶಾಕುಂತಲಂ ಸಿನಿಮಾದ ಚಿತ್ರೀಕರಣದ ವೇಳೆ ತಾವು ಅನುಭವಿಸಿದ ಕಷ್ಟಗಳನ್ನು ನೆನಪಿಸಿಕೊಂಡಿದ್ದಾರೆ. ಚಿತ್ರೀಕರಣದ ವೇಳೆ ಸಮಂತಾಗೆ ಮೊಲ ಕಚ್ಚಿತ್ತಂತೆ!

Samantha: ಶಾಕುಂತಲಂ ಸಿನಿಮಾ ಚಿತ್ರೀಕರಣದ ಐದು ಕೆಟ್ಟ ಅನುಭವಗಳ ನೆನೆದ ಸಮಂತಾ
ಸಮಂತಾ
Follow us
ಮಂಜುನಾಥ ಸಿ.
|

Updated on: Apr 11, 2023 | 7:16 PM

ನಟಿ ಸಮಂತಾ (Samantha) ಲೇಡಿ ಸೂಪರ್ ಸ್ಟಾರ್ ಆಗುವ ಹಂತದಲ್ಲಿದ್ದಾರೆ. ಮರ ಸುತ್ತುವ ಪಾತ್ರಗಳಿಗೆ ಬಹುತೇಕ ಪೂರ್ಣವಿರಾಮ ಇಟ್ಟಂತಿರುವ ನಟಿ, ಮಹಿಳಾ ಪ್ರಧಾನ, ಭಿನ್ನ ಮಾದರಿಯ ಪಾತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಸೆರೊಗೇಟರಿ ಮದರ್ ಕುರಿತಾದ ಯಶೋಧಾ ಸಿನಿಮಾದ ಬಳಿಕ ಇದೀಗ ಕಾಳಿದಾಸನ ಅಭಿಜ್ಞಾನ ಶಾಕುಂತಲೆ ಕಾವ್ಯ ಆಧರಿಸಿ ಶಾಕುಂತಲಂ (Shakunthalam) ಸಿನಿಮಾದಲ್ಲಿ ನಟಿಸಿದ್ದು ಸಿನಿಮಾದ ಪ್ರಚಾರದಲ್ಲಿ ತೊಡಗಿದ್ದಾರೆ. ಈ ಸಂದರ್ಭದಲ್ಲಿ ತಾವು ಶಾಕುಂತಲಂ ಸಿನಿಮಾದ ಶೂಟಿಂಗ್​ನಲ್ಲಿ ತಮಗೆ ಕಷ್ಟವಾದ ಐದು ಘಟನೆಗಳನ್ನು ನೆನಪು ಮಾಡಿಕೊಂಡಿದ್ದಾರೆ.

ಶಾಕುಂತಲಂ ಸಿನಿಮಾಕ್ಕಾಗಿ ಸಮಂತಾ ತಮ್ಮ ತೋಳಿಗೆ ಹೂವಿನ ಮಾದರಿಯಲ್ಲಿದ್ದ ಆಭರಣ ಧರಿಸುತ್ತಿದ್ದರಂತೆ. ಪ್ರತಿ ದಿನ ಅದನ್ನು ಧರಿಸುತ್ತಿದ್ದ ಕಾರಣ ಅದರ ಅಚ್ಚು ಸಮಂತಾ ತೋಳಿನ ಮೇಲೆ ಮೂಡಿ ಒಂದು ರೀತಿಯ ಟ್ಯಾಟೂ ರೀತಿ ಆಗಿಬಿಟ್ಟಿತ್ತಂತೆ. ಹಲವು ದಿನಗಳ ಕಾಲ ಅದು ಹೋಗಿಯೇ ಇರಲಿಲ್ಲವಂತೆ, ತಾವು ಅದರ ಮೇಲೆ ಮೇಕಪ್ ಹಚ್ಚಿ ಅದನ್ನು ಮುಚ್ಚಿಡಬೇಕಾಗಿತ್ತು, ಬಹಳ ದಿನಗಳ ಪ್ರಯತ್ನದ ಬಳಿಕ ಅದು ಮಾಯವಾಯಿತು ಎಂದಿದ್ದಾರೆ ಸಮಂತಾ.

ನಾನು ಶಾಕುಂತಲಂ ಸಿನಿಮಾಕ್ಕಾಗಿ ಮೂರು ಭಾಷೆಗಳಲ್ಲಿ ಡಬ್ ಮಾಡಿದ್ದೇನೆ, ತೆಲುಗು, ತಮಿಳು ಹಾಗೂ ಹಿಂದಿ. ಅದು ಬಹಳ ಕಷ್ಟಕರವಾದ ಕೆಲಸ. ನನಗಂತೂ ಬಹಳ ಕಷ್ಟವಾಯಿತು. ರಾತ್ರಿ ಕನಸಿನಲ್ಲಿಯೂ ನಾನು ಡೈಲಾಗ್​ಗಳನ್ನು ಹೇಳುತ್ತಿದ್ದೆ. ಬೇರೆ ನಟರು ಹೇಗೆ ಅದನ್ನು ಮಾಡುತ್ತಾರೋ ಗೊತ್ತಿಲ್ಲ ನನಗಂತೂ ಬಹಳ ಕಷ್ಟವಾಯ್ತು ಎಂದಿದ್ದಾರೆ ನಟಿ ಸಮಂತಾ. ಇನ್ನು ಕೆಲವೇ ದಿನಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ, ಆಗ ಗೊತ್ತಾಗುತ್ತದೆ ನಾನು ಹೇಗೆ ಡಬ್ಬಿಂಗ್ ಮಾಡಿದ್ದೇನೆಂಬುದು ಎಂದಿದ್ದಾರೆ ನಟಿ.

ಶಾಕುಂತಲಂ ಸಿನಿಮಾದ ಚಿತ್ರೀಕರಣದ ವೇಳೆ ಮೊಲದಿಂದ ಕಚ್ಚಿಸಿಕೊಂಡರಂತೆ ಸಮಂತಾ. ಹೌದು, ಶಾಕುಂತಲಂ ಸಿನಿಮಾದ ಚಿತ್ರೀಕರಣಕ್ಕೆ ಹಲವು ಮೊಲ, ಜಿಂಕೆ, ಪಕ್ಷಿಗಳನ್ನು ಬಳಸಲಾಗಿದೆ. ಮೊಲವನ್ನು ಹಿಡಿದು ಚಿತ್ರೀಕರಣ ಮಾಡುವಾಗ ಅದು ಸಮಂತಾರಿಗೆ ಕಚ್ಚು ಬಿಟ್ಟಿತಂತೆ. ಮೊಲಗಳು ಕಾಣಿಸುವಷ್ಟು ಮುದ್ದು ಮತ್ತು ಅಮಾಯಕ ಪ್ರಾಣಿಗಳಲ್ಲ ಎಂದಿದ್ದಾರೆ ಸಮಂತಾ.

ಶಾಕುಂತಲಂ ಸಿನಿಮಾಕ್ಕಾಗಿ ಡ್ರೆಸ್ ಡಿಸೈನ್ ಅನ್ನು ಸುನಿತಾ ಮಾಡಿದ್ದಾರೆ. ಕೆಲವು ಅದ್ಭುತ ಡ್ರೆಸ್ ಹಾಗೂ ಆಭರಣಗಳನ್ನು ಅವರು ಡಿಸೈನ್ ಮಾಡಿಕೊಟ್ಟಿದ್ದರು. ಆದರೆ ಸಿನಿಮಾದಲ್ಲಿ ಒಂದು ಹಾಡಿದೆ ಆ ಹಾಡಿಗಾಗಿ ಭಿನ್ನವಾದ ಆದರೆ ಬಹಳ ತೂಕ ಇದ್ದ ಲೆಹಂಗಾ ಡಿಸೈನ್ ಮಾಡಿದ್ದರು. ಆ ಲೆಹಂಗಾ ಸುಮಾರು 30 ಕೆಜಿಗೂ ಹೆಚ್ಚು ತೂಕವಿತ್ತು. ಅದನ್ನು ಹಾಕಿಕೊಂಡು ಡ್ಯಾನ್ಸ್ ಮಾಡಬೇಕಾದರೆ ಬಹಳ ಕಷ್ಟವಾಗಿತ್ತು, ಲೆಹಂಗಾ ಹಾಕಿಕೊಂಡು ತಿರುಗಿದರೆ ಲೆಹಂಗಾನೇ ನನ್ನನ್ನು ತಿರುಗಿಸಿ ಬಿಡುತ್ತಿತ್ತು, ಆ ಲೆಹಂಗಾದಿಂದಾಗಿ ಡ್ಯಾನ್ಸ್ ಮಾಸ್ಟರ್​ ಕಡೆಯಿಂದ ಸಾಕಷ್ಟು ಬೈಸಿಕೊಂಡೆ ನಾನು ಎಂದಿದ್ದಾರೆ ಸಮಂತಾ.

ಇದನ್ನೂ ಓದಿ: ಮಾಜಿ ಗಂಡನ ಕುಟುಂಬದ ಮೇಲೆ ಸಮಂತಾಗೆ ಇನ್ನೂ ಕಡಿಮೆ ಆಗಿಲ್ಲ ಪ್ರೀತಿ; ಇಲ್ಲಿದೆ ಹೊಸ ಸಾಕ್ಷಿ

ಶಾಕುಂತಲಂ ಸಿನಿಮಾದಲ್ಲಿ ಸಮಂತಾರ ವಿಗ್ ಬಳಸಿದ್ದಾರಂತೆ. ಸಾಮಾನ್ಯವಾಗಿ ಸಮಂತಾ ವಿಗ್ ಬಳಸುವುದು ಬಹಳ ಅಪರೂಪ ಆದರೆ ಈ ಸಿನಿಮಾಕ್ಕೆ ವಿಗ್ ಬಳಸಿದ್ದಾರಂತೆ. ಮೊದಲಿಗೆ ಶಾಕುಂತಲಂ ಸಿನಿಮಾ ಕತೆ ಕೇಳಿದಾಗ ಇಷ್ಟವಾಯಿತಾದರೂ ನಟಿಸುವುದಿಲ್ಲ ಎಂದಿದ್ದರಂತೆ ಆದರೆ ಸಿನಿಮಾವನ್ನು ಬಿಡಲು ಮನಸ್ಸಾಗದೆ ನಟಿಸಲು ಒಪ್ಪಿಕೊಂಡಿದ್ದಾರೆ. ಆದರೆ ದಿ ಫ್ಯಾಮಿಲಿ ಮ್ಯಾನ್ ವೆಬ್ ಸರಣಿಯ ವಿಲನ್ ರಾಜಿಯ ಪಾತ್ರಕ್ಕೆ ಚೆನ್ನಾಗಿ ಎಕ್ಸಸೈಸ್ ಮಾಡಿ ಬಾಡಿ ಚೇಂಜ್ ಮಾಡಿಕೊಂಡಿದ್ದ ಸಮಂತಾ, ಶಾಕುಂತಲಂ ಸಿನಿಮಾಕ್ಕೆ ರಾಣಿಯಂತೆ ಕಾಣಲು ಜಿಮ್, ವೇಟ್ ಲಿಫ್ಟಿಂಗ್ ಎಲ್ಲವನ್ನೂ ಬಿಟ್ಟು ದೇಹವನ್ನು ಸಾಫ್ಟ್ ಮಾಡಿಕೊಂಡರಂತೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ