Rajkumar Death Anniversary : ಡಾ. ರಾಜ್ಕುಮಾರ್ ಪುಣ್ಯತಿಥಿ; ಅಣ್ಣಾವ್ರು ಎಂದಿಗೂ ಮರೆಯಾಗದ ನಕ್ಷತ್ರ
ರಾಜ್ಕುಮಾರ್ ಅಭಿಮಾನಿಗಳ ಪಾಲಿಗೆ ಏಪ್ರಿಲ್ ಖುಷಿ ಹಾಗೂ ದುಃಖ ನೀಡುವ ತಿಂಗಳು. ಏಪ್ರಿಲ್ 24ರಂದು ರಾಜ್ಕುಮಾರ್ ಬರ್ತ್ಡೇ. ಅದಕ್ಕೆ 12 ದಿನ ಇರುವಾಗಲೇ ಅವರು ನಿಧನ ಹೊಂದಿದರು.
ಡಾ. ರಾಜ್ಕುಮಾರ್ ಅವರು ಭಾರತ ಚಿತ್ರರಂಗ ಕಂಡ ಅಪ್ರತಿಮ ನಟ. ಭಾರತೀಯ ಚಿತ್ರರಂಗದಲ್ಲಿ ರಾಜ್ಕುಮಾರ್ (Rajkumar) ಅವರಿಗೆ ಬೇರೆ ಯಾರೂ ಸಾಟಿ ಇಲ್ಲ. 5 ದಶಕಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಅವರು ಹೀರೋ ಆಗಿ ಮೆರೆದರು. ಅವರು ನಮ್ಮನ್ನು ಅಗಲಿ ಇಂದಿಗೆ (ಏಪ್ರಿಲ್ 12) ಬರೋಬ್ಬರಿ 17 ವರ್ಷ. ರಾಜ್ಕುಮಾರ್ ಹಾಕಿಕೊಟ್ಟ ಆದರ್ಶ, ಅವರು ಚಿತ್ರರಂಗಕ್ಕೆ ನೀಡಿರುವ ಕೊಡುಗೆ ಹಾಗೂ ನೂರಾರು ಪಾತ್ರಗಳಿಂದ ಅವರು ಎಂದಿಗೂ ಶಾಶ್ವತ. ಅವರ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಅನೇಕರು ಅವರನ್ನು ನೆನಪಿಸಿಕೊಳ್ಳುತ್ತಿದ್ದಾರೆ.
ರಾಜ್ಕುಮಾರ್ ಅಭಿಮಾನಿಗಳ ಪಾಲಿಗೆ ಏಪ್ರಿಲ್ ಖುಷಿ ಹಾಗೂ ದುಃಖ ನೀಡುವ ತಿಂಗಳು. ಏಪ್ರಿಲ್ 24ರಂದು ರಾಜ್ಕುಮಾರ್ ಬರ್ತ್ಡೇ. ಅದಕ್ಕೆ 12 ದಿನ ಇರುವಾಗಲೇ ಅವರು ನಿಧನ ಹೊಂದಿದರು. 2006ರ ಏ.12ರಂದು ಅವರ ಕೋಟ್ಯಂತರ ಅಭಿಮಾನಿಗಳಿಗೆ ಆಘಾತ ತರುವ ಸುದ್ದಿ ಸಿಕ್ಕಿತ್ತು. ಅಣ್ಣಾವ್ರು ಇನ್ನಿಲ್ಲ ಎನ್ನುವ ಸುದ್ದಿ ಕೇಳಿ ಎಲ್ಲರಿಗೂ ಆಘಾತವಾಯಿತು. ರಾಜ್ಕುಮಾರ್ ಮೃತಪಡುವಾಗ ಅವರಿಗೆ 76 ವರ್ಷ ವಯಸ್ಸು. ಆ ಪ್ರಾಯದಲ್ಲಿ ಅವರು ನಿಧನರಾಗುತ್ತಾರೆ ಎಂದು ಯಾರೂ ಕೂಡ ಊಹಿಸಿರಲಿಲ್ಲ, ಕನಸಿನಲ್ಲಿಯೂ ಅದನ್ನು ಕಲ್ಪಿಸಿಕೊಂಡಿರಲಿಲ್ಲ. ಅಂಥ ಒಂದು ಘಟನೆ ಏ.12ರಂದು ನಡೆದೇಹೋಯಿತು.
ರಾಜ್ಕುಮಾರ್ ಅವರು ಭೌತಿಕವಾಗಿ ನಮ್ಮನ್ನು ಅಗಲಿರಬಹುದು. ಆದರೆ, ಸಿನಿಮಾಗಳ ಮೂಲಕ ಅವರು ಸದಾ ಅಭಿಮಾನಿಗಳ ಜೊತೆ ಇದ್ದಾರೆ. ತಮ್ಮ ಹಾಡುಗಳ ಮೂಲಕ ಕೇಳುಗರಲ್ಲಿ ಅವರಿದ್ದಾರೆ. ಜೀವನ ಮೌಲ್ಯಗಳ ಮೂಲಕ ಇಂದಿಗೂ ಅವರು ಅನೇಕರಿಗೆ ಆದರ್ಶ ವ್ಯಕ್ತಿ ಆಗಿದ್ದಾರೆ. ನೂರಾರು ಸಿನಿಮಾಗಳ ಮೂಲಕ ಅವರು ಅನೇಕರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಹೀಗಾಗಿ, ಅಭಿಮಾನಿಗಳ ಮಧ್ಯೆ ಅಣ್ಣಾವ್ರು ಸದಾ ಜೀವಂತ.
ಇಂದು ಅನೇಕರು ಅಣ್ಣಾವ್ರ ನೆನಪಿನಲ್ಲಿ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅನ್ನದಾನ, ರಕ್ತದಾನ, ಉಚಿತ ಆರೋಗ್ಯ ತಪಾಸಣೆ ಕಾರ್ಯಗಳು ರಾಜ್ಯಾದ್ಯಂತ ನಡೆಯುತ್ತಿದೆ. ರಾಜ್ಕುಮಾರ್ ಅವರು ಕಣ್ಣುಗಳನ್ನು ದಾನ ಮಾಡಿದ್ದರು. ಹೀಗಾಗಿ, ಇಂದು ಅನೇಕರು ಕಣ್ಣುಗಳನ್ನು ದಾನ ಮಾಡಲು ನೋಂದಣಿ ಮಾಡಿಸುತ್ತಿದ್ದಾರೆ.
ಶುಭೋದಯ | Good morning. ಅಪ್ಪಾಜಿಯ ಪುಣ್ಯಸ್ಮರಣೆಯಂದು ಅವರ ಸವಿನೆನಪಿನಲ್ಲಿ.
Have a blessed day. Take care. Jai Anjeneya. Jai Gurudev ??? pic.twitter.com/cV8q2qVz51
— Raghavendra Rajkumar (@RRK_Official_) April 12, 2023
ಇದನ್ನೂ ಓದಿ: ಅಪ್ಪು ಬಾಸ್, ಪುನೀತ್ ರಾಜ್ಕುಮಾರ್ ಅನ್ನು ನೆನಪಿಸಿಕೊಂಡ ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್
ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ರಾಜ್ಕುಮಾರ್ ಸಮಾಧಿ ಇದೆ. ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಅಲ್ಲಿಗೆ ಬಂದು ಅಣ್ಣಾವ್ರಿಗೆ ನಮಿಸುತ್ತಿದ್ದಾರೆ. ರಾಜ್ಕುಮಾರ್ ಸಮಾಧಿ ಪಕ್ಕ ಪುನೀತ್ ಸಮಾಧಿಯೂ ಇದೆ. ಅದನ್ನು ನೋಡಿ ಅಭಿಮಾನಿಗಳ ದುಃಖ ಇಮ್ಮಡಿ ಆಗಿದೆ. ಸೋಶಿಯಲ್ ಮೀಡಿಯಾದಲ್ಲೂ ಡಾ. ರಾಜ್ ಅವರನ್ನು ಸ್ಮರಿಸಿಕೊಳ್ಳಲಾಗುತ್ತಿದೆ. 17ನೇ ವರ್ಷದ ಪುಣ್ಯಸ್ಮರಣೆ ಪ್ರಯುಕ್ತ ಅವರ ಅನೇಕ ವಿಚಾರಗಳನ್ನು ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ನೆನಪು ಮಾಡಿಕೊಳ್ಳುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ