‘ಶಾಕುಂತಲಂ’ ಸಿನಿಮಾ ಸೋತ ಬಳಿಕ ಸಮಂತಾಗೆ ನೆನಪಾಯ್ತು ಭಗವದ್ಗೀತೆಯ ಶ್ಲೋಕ
Samantha Ruth Prabhu: ಸಿನಿಮಾ ಮಾಡುವುದಷ್ಟೇ ಸಮಂತಾ ಅವರ ಕೈಯಲ್ಲಿದೆ. ಅದರ ರಿಸಲ್ಟ್ ಅವರ ಕೈಯಲ್ಲಿ ಇಲ್ಲ. ಈ ರೀತಿ ಅವರು ತಮಗೆ ತಾವೇ ಸಮಾಧಾನ ಮಾಡಿಕೊಂಡಿದ್ದಾರೆ.
ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅವರು ಅಂದುಕೊಂಡಿದ್ದು ಬೇರೆ. ಆದರೆ ಅವರ ಜೀವನದಲ್ಲಿ ಆಗುತ್ತಿರುವುದೇ ಬೇರೆ. ಅವರು ನಟಿಸಿದ ‘ಶಾಕುಂತಲಂ’ ಚಿತ್ರ (Shaakuntalam Movie) ಸೂಪರ್ ಹಿಟ್ ಆಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಗಲ್ಲಾಪೆಟ್ಟಿಗೆಯಲ್ಲಿ ಈ ಸಿನಿಮಾ ಹೀನಾಯವಾಗಿ ಸೋತಿದೆ. ಬಹುಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಆದ ‘ಶಾಕುಂತಲಂ’ ಸಿನಿಮಾದ ಬಾಕ್ಸ್ ಆಫೀಸ್ ಗಳಿಕೆ ನೀರಸವಾಗಿದೆ. ಆದು ಸಹಜವಾಗಿಯೇ ಸಮಂತಾಗೆ ಬೇಸರ ಮೂಡಿಸಿದೆ. ಸಿನಿಮಾದ ಸೋಲಿನ ಬಳಿಕ ಅವರು ಸೋಶಿಯಲ್ ಮೀಡಿಯಾದಲ್ಲಿ ಭಗವದ್ಗೀತೆಯ (Bhagavad Gita) ಸಾಲುಗಳನ್ನು ಬರೆದುಕೊಂಡಿದ್ದಾರೆ. ಸದ್ಯ ಅವರ ಪೋಸ್ಟ್ ವೈರಲ್ ಆಗಿದೆ. ಸಮಂತಾ ಬಗ್ಗೆ ಇತ್ತೀಚೆಗೆ ಕೆಲವರು ಚುಚ್ಚು ಮಾತುಗಳನ್ನು ಆಡಿದ್ದರು. ಅಂಥವರಿಗೂ ಸಮಂತಾ ಅವರು ಭಗವದ್ಗೀತೆಯ ಸಾಲುಗಳ ಮೂಲಕ ತಿರುಗೇಟು ನೀಡಿರಬಹುದೇ ಎಂದು ನೆಟ್ಟಿಗರು ಊಹಿಸುತ್ತಿದ್ದಾರೆ.
‘ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ. ಮಾ ಕರ್ಮಫಲಹೇತುರ್ಭೂರ್ಮಾ ತೇ ಸಂಗೋಸ್ತ್ವಕರ್ಮಣಿ’ ಎಂದು ಸಮಂತಾ ಬರೆದುಕೊಂಡಿದ್ದಾರೆ. ‘ನೀನು ನಿನ್ನ ಕರ್ತವ್ಯವನ್ನು ತಿಳಿದು ಅದನ್ನು ಮಾಡುವುದರಲ್ಲಿ ಮನಸ್ಸಿಡಬೇಕು. ಫಲದ ಚಿಂತೆ ಮಾಡದೆ ಕರ್ತವ್ಯ ಮಾಡುವುದರಲ್ಲಿ ಶ್ರದ್ಧೆ ಇಡಬೇಕು. ಕರ್ತವ್ಯವನ್ನು ಮಾಡದೇ ಇರುವ ವಿಚಾರ ನಿನಗೆ ಬಾರದೇ ಇರಲಿ’ ಎಂದು ಈ ಸಾಲುಗಳ ಅರ್ಥ.
View this post on Instagram
ಸಿನಿಮಾ ಮಾಡುವುದಷ್ಟೇ ಸಮಂತಾ ಅವರ ಕೈಯಲ್ಲಿದೆ. ಅದರ ರಿಸಲ್ಟ್ ಅವರ ಕೈಯಲ್ಲಿ ಇಲ್ಲ. ಅವರು ಕಷ್ಟಪಟ್ಟು ‘ಶಾಕುಂತಲಂ’ ಸಿನಿಮಾದಲ್ಲಿ ನಟಿಸಿದರು. ಇಡೀ ತಂಡ ಶ್ರಮವಹಿಸಿ ಕೆಲಸ ಮಾಡಿದೆ. ಆದರೆ ಜನರಿಗೆ ಆ ಚಿತ್ರ ಇಷ್ಟ ಆಗಲಿಲ್ಲ. ಇದರಿಂದ ಸಮಂತಾ ಕುಗ್ಗಿ ಹೋಗಿಲ್ಲ. ಭಗವದ್ಗೀತೆಯ ಸಾಲುಗಳನ್ನು ನೆನಪಿಸಿಕೊಂಡು ತಮಗೆ ತಾವೇ ಸಮಾಧಾನ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಸಮಂತಾಳದ್ದು ಅಜ್ಜಿ ಮುಖ, ಹಣ ಗಳಿಸಲು ಅರೆಬೆತ್ತಲೆ ಕುಣಿಯುತ್ತಿದ್ದಾಳೆ: ನಾಲಿಗೆ ಹರಿಬಿಟ್ಟ ನಿರ್ಮಾಪಕ
ಸ್ಟಾರ್ ಕಲಾವಿದರು ಅಭಿನಯಿಸಿದ ಬಿಗ್ ಬಜೆಟ್ ಸಿನಿಮಾಗಳು ಎಷ್ಟೇ ಕೆಟ್ಟ ವಿಮರ್ಶೆ ಪಡೆದುಕೊಂಡರೂ ಕೂಡ ಮಿನಿಮಮ್ ಬಿಸ್ನೆಸ್ ಮಾಡುತ್ತವೆ. ಆದರೆ ‘ಶಾಕುಂತಲಂ’ ಚಿತ್ರಕ್ಕೆ ಅದು ಸಾಧ್ಯವಾಗಿಲ್ಲ. ಏಪ್ರಿಲ್ 14ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ರಿಲೀಸ್ ಆಯಿತು. ಮೊದಲ ದಿನ ತೆಲುಗು, ಕನ್ನಡ, ತಮಿಳು ಮುಂತಾದ ಭಾಷೆಗಳಿಂದ ಈ ಸಿನಿಮಾಗೆ ಆದ ಒಟ್ಟು ಕಲೆಕ್ಷನ್ ಅಂದಾಜು 5 ಕೋಟಿ ರೂಪಾಯಿ ಮಾತ್ರ.
ಇದನ್ನೂ ಓದಿ: ಮಾಜಿ ಗಂಡನ ಕುಟುಂಬದ ಮೇಲೆ ಸಮಂತಾಗೆ ಇನ್ನೂ ಕಡಿಮೆ ಆಗಿಲ್ಲ ಪ್ರೀತಿ; ಇಲ್ಲಿದೆ ಹೊಸ ಸಾಕ್ಷಿ
ವೀಕೆಂಡ್ನಲ್ಲಿ ‘ಶಾಕುಂತಲಂ’ ಸಿನಿಮಾದ ಕಲೆಕ್ಷನ್ ಸುಧಾರಿಸಬಹುದು ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಆಗಿದ್ದೇ ಬೇರೆ. ಶನಿವಾರ (ಏಪ್ರಿಲ್ 15) ಈ ಚಿತ್ರಕ್ಕೆ ಕೇವಲ 2 ಕೋಟಿ ರೂಪಾಯಿ ಕಮಾಯಿ ಆಯಿತು. ಭಾನುವಾರವಾದರೂ (ಏಪ್ರಿಲ್ 16) ಜನರು ಚಿತ್ರಮಂದಿರಕ್ಕೆ ಬರುತ್ತಾರೆ ಎಂಬ ಭರವಸೆ ಇತ್ತು. ಆದರೆ ಅಂದು ಕಲೆಕ್ಷನ್ ಇನ್ನಷ್ಟು ಕುಸಿಯಿತು. ಭಾನುವಾರ 1.5 ಕೋಟಿ ರೂಪಾಯಿ ಗಳಿಸುವಷ್ಟರಲ್ಲಿ ‘ಶಾಕುಂತಲಂ’ ಚಿತ್ರ ಸುಸ್ತು ಹೊಡೆಯಿತು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:34 pm, Tue, 18 April 23