AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Weekend With Ramesh: ವೀಕೆಂಡ್ ವಿತ್ ರಮೇಶ್​ನ ಈ ವಾರದ ಅತಿಥಿಗಳ್ಯಾರು?

Weekend With Ramesh: ವೀಕೆಂಡ್ ವಿತ್ ರಮೇಶ್ ಐದನೇ ಸೀಸನ್​ನ ಈ ವಾರದ ಅತಿಥಿಗಳ್ಯಾರು? ಈ ವಾರ ಇಬ್ಬರು ಸಾಧಕರು ಸಾಧಕರ ಕುರ್ಚಿಯನ್ನು ಅಲಂಕರಿಸಲಿದ್ದಾರೆ.

Weekend With Ramesh: ವೀಕೆಂಡ್ ವಿತ್ ರಮೇಶ್​ನ ಈ ವಾರದ ಅತಿಥಿಗಳ್ಯಾರು?
ವೀಕೆಂಡ್ ವಿತ್ ರಮೇಶ್
ಮಂಜುನಾಥ ಸಿ.
|

Updated on:Apr 18, 2023 | 4:15 PM

Share

ವೀಕೆಂಡ್ ವಿತ್ ರಮೇಶ್ (Weekend With Ramesh) ಐದನೇ ಸೀಸನ್​ ಪ್ರಾರಂಭವಾಗಿ ಕೆಲವು ವಾರಗಳು ಉರುಳಿವೆ. ಈವರೆಗೆ ನಟಿ ರಮ್ಯಾ (Ramya), ಪ್ರಭುದೇವ (Prabhu Deva), ಹೃದ್ರೋಗ ತಜ್ಞ ಡಾ ಮಂಜುನಾಥ್, ಹಿರಿಯ ನಟ ದತ್ತಣ್ಣ, ನಟ ಡಾಲಿ ಧನಂಜಯ್ ಅವರುಗಳು ಅತಿಥಿಗಳಾಗಿ ಆಗಮಿಸಿ ಸಾಧಕರ ಕುರ್ಚಿ ಅಲಂಕರಿಸಿದ್ದಾರೆ. ಇದೀಗ ಮುಂದಿನ ವಾರದ ಅತಿಥಿಗಳು ಯಾರು ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದೆ. ಅದಕ್ಕೆ ಉತ್ತರ ಇಲ್ಲಿದೆ.

ಈ ವಾರಾಂತ್ಯಕ್ಕೆ ಇಬ್ಬರು ಅತಿಥಿಗಳನ್ನು ಸಾಧಕರ ಕುರ್ಚಿ ಮೇಲೆ ಕೂರಿಸಲಾಗುತ್ತಿದೆ. ವಿಶೇಷವೆಂದರೆ ಇಬ್ಬರೂ ಸಹ ಜನಪ್ರಿಯ ಪೋಷಕ ನಟರು. ನಟ ಮಂಡ್ಯ ರಮೇಶ್ ಹಾಗೂ ನಟ ಅವಿನಾಶ್ ಅವರುಗಳು ಈ ವಾರ ಅತಿಥಿಗಳಾಗಿ ಆಗಮಿಸಿ ಸಾಧಕರ ಕುರ್ಚಿ ಏರಲಿದ್ದಾರೆ.

ಮಂಡ್ಯ ರಮೇಶ್ ಹಾಗೂ ಅವಿನಾಶ್ ಇಬ್ಬರೂ ಸಹ ಹಲವು ದಶಕಗಳಿಂದಲೂ ಕನ್ನಡ ಚಿತ್ರರಂಗದಲ್ಲಿದ್ದಾರೆ. ಮಂಡ್ಯ ರಮೇಶ್ ಅವರು ಸಿನಿಮಾ ಮಾತ್ರವೇ ಅಲ್ಲದೆ ರಂಗಭೂಮಿಯಲ್ಲಿಯೂ ಗುರುತಿಸಿಕೊಂಡಿದ್ದು ನಟನ ರಂಗತಂಡದ ಮೂಲಕ ಹಲವು ನಟ-ನಟಿಯರನ್ನು ಚಿತ್ರರಂಗಕ್ಕೆ ನೀಡಿದ್ದಾರೆ. ರಂಗಭೂಮಿಯನ್ನೇ ಉಸಿರಾಗಿಸಿಕೊಂಡಿದ್ದ ಮಂಡ್ಯ ರಮೇಶ್, ಜೀವನದಲ್ಲಿ ಹಲವು ಏಳು-ಬೀಳುಗಳನ್ನು ಕಂಡು ಈ ಹಂತದ ವರೆಗೆ ಬೆಳೆದವರು.

ಇನ್ನು ನಟ ಅವಿನಾಶ್ ಸಹ ಹಲವು ದಶಕಗಳಿಂದಲೂ ಚಿತ್ರರಂಗದಲ್ಲಿದ್ದೂ ಈಗಲೂ ಬೇಡಿಕೆಯ ಪೋಷಕ ನಟರಲ್ಲಿ ಒಬ್ಬರು. ಅವಿನಾಶ್ ಸಹ ರಂಗಭೂಮಿಯಿಂದ ಚಿತ್ರರಂಗಕ್ಕೆ ಬಂದವರೇ. ಮಾಳವಿಕ ಅವಿನಾಶ್ ಅವರ ಪತಿಯೂ ಆಗಿರುವ ಅವಿನಾಶ್ ಅವರ ಹಿಂದಿನ ಜೀವನದ ಬಗ್ಗೆ ಹೆಚ್ಚು ಜನರಿಗೆ ಗೊತ್ತಿಲ್ಲವಾದ್ದರಿಂದ ಈ ಎಪಿಸೋಡ್ ಕುತೂಹಲ ಮೂಡಿಸಿದೆ.

ಮಂಡ್ಯ ರಮೇಶ್ ಹಾಗೂ ಅವಿನಾಶ್ ಅವರುಗಳು ಸಾಧಕರ ಕುರ್ಚಿಯ ಮೇಲೆ ಕುಳಿತ ಚಿತ್ರವನ್ನು ಜೀ ಕನ್ನಡ ಈ ಗಾಗಲೇ ಹಂಚಿಕೊಂಡಿದೆಯಾದರೂ ಚಿತ್ರವನ್ನು ಬ್ಲರ್ ಮಾಡಿ ಈ ಬಾರಿಯ ಸಾಧಕರು ಯಾರು ಗುರುತಿಸಿ ಎಂದು ಓದುಗರನ್ನು ಕೇಳಿದೆ. ಬಹುತೇಕ ಓದುಗರು ಸರಿಯಾಗಿಯೇ ಗೆಸ್ ಮಾಡಿದ್ದು, ಈ ವಾರಾಂತ್ಯದ ಎಪಿಸೋಡ್​ಗಳಿಗಾಗಿ ಕಾಯುತ್ತಿರುವುದಾಗಿ ಹೇಳಿದ್ದಾರೆ.

ವೀಕೆಂಡ್ ವಿತ್ ರಮೇಶ್​ಗೆ ಕರೆತರಲಾಗುವ ಅತಿಥಿಗಳ ಬಗ್ಗೆ ಸದಾ ಒಂದು ಅಸಮಾಧಾನ ಇದ್ದೇ ಇದೆ. ಕೇವಲ ಸಿನಿಮಾದವರಿಗಷ್ಟೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ, ಅದರಲ್ಲಿಯೂ ನಾಯಕ-ನಾಯಕಿಯರನ್ನಷ್ಟೆ ಸಾಧಕರೆಂದು ಪರಿಗಣಿಸಲಾಗುತ್ತಿದೆ ಎಂಬುದು ಮುಖ್ಯ ಅಸಮಾಧಾನಗಳಲ್ಲಿ ಒಂದು. ಈ ವಾರ ಮತ್ತೆ ಸಿನಿಮಾ ಮಂದಿಯನ್ನೇ ಅತಿಥಿಗಳನ್ನಾಗಿ ಆಹ್ವಾನಿಸಲಾಗಿದೆಯಾದರೂ ಈ ಬಾರಿ ನಾಯಕ-ನಾಯಕಿಯರ ಬದಲಿಗೆ ಪೋಷಕ ಪಾತ್ರಗಳಲ್ಲಿ ನಟಿಸಿ ಜನರಿಗೆ ಹತ್ತಿರವಾದವರನ್ನು ಸಾಧಕರ ಕುರ್ಚಿಯಲ್ಲಿ ಕೂರಿಸಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:11 pm, Tue, 18 April 23

ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ