‘ಗಂಡ-ಹೆಂಡತಿಯಾಗಿ ಡಾಲಿ-ಅಮೃತಾ ಚೆನ್ನಾಗಿ ನಟನೆ ಮಾಡಿದ್ದಾರೆ’: ‘ಹೊಯ್ಸಳ’ ನೋಡಿ ರಮ್ಯಾ ಹೇಳಿದ್ದಿಷ್ಟು
Daali Dhananjay | Amrutha Iyengar: ಡಾಲಿ ಧನಂಜಯ್ ಮತ್ತು ಅಮೃತಾ ಐಯ್ಯಂಗಾರ್ ಅವರ ಜೋಡಿ ಬಗ್ಗೆ ನಟಿ ರಮ್ಯಾ ಮೆಚ್ಚುಗೆ ಸೂಚಿಸಿದ್ದಾರೆ. ‘ಹೊಯ್ಸಳ’ ಚಿತ್ರ ನೋಡಿ ಅವರು ವಿಮರ್ಶೆ ಹಂಚಿಕೊಂಡಿದ್ದಾರೆ.
ಬಹುನಿರೀಕ್ಷಿತ ‘ಹೊಯ್ಸಳ’ ಸಿನಿಮಾ ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ಡಾಲಿ ಧನಂಜಯ್ ಮತ್ತು ಅಮೃತಾ ಐಯ್ಯಂಗಾರ್ (Amrutha Iyengar) ಅವರು ಜೋಡಿಯಾಗಿ ನಟಿಸಿದ್ದಾರೆ. ಪೊಲೀಸ್ ಪಾತ್ರದಲ್ಲಿ ಧನಂಜಯ್ ಕಾಣಿಸಿಕೊಂಡಿದ್ದರೆ, ಅವರ ಪತ್ನಿ ಪಾತ್ರದಲ್ಲಿ ಅಮೃತಾ ನಟಿಸಿದ್ದಾರೆ. ಇಂದು (ಮಾರ್ಚ್ 30) ಗಾಂಧಿನಗರದಲ್ಲಿ ರಮ್ಯಾ ದಿವ್ಯ ಸ್ಪಂದನ (Ramya Divya Spandana) ಅವರು ‘ಹೊಯ್ಸಳ’ ಚಿತ್ರ ನೋಡಿ ತಮ್ಮ ವಿಮರ್ಶೆ ತಿಳಿಸಿದ್ದಾರೆ. ‘ಗಂಡ-ಹೆಂಡತಿಯಾಗಿ ಧನಂಜಯ್ ಮತ್ತು ಅಮೃತಾ ಚೆನ್ನಾಗಿ ನಟಿಸಿದ್ದಾರೆ. ಇಬ್ಬರ ನಟನೆಗೂ 10ಕ್ಕೆ 10 ಮಾರ್ಕ್ಸ್ ನೀಡುತ್ತೇನೆ. ಇಬ್ಬರ ಆನ್ಸ್ಕ್ರೀನ್ ಮತ್ತು ಆಫ್ಸ್ಕ್ರೀನ್ ಕೆಮಿಸ್ಟ್ರಿ ಚೆನ್ನಾಗಿದೆ’ ಎಂದು ರಮ್ಯಾ ಹೇಳಿದ್ದಾರೆ. ಡಾಲಿ ಧನಂಜಯ್ (Daali Dhananjay) ಜೊತೆ ರಮ್ಯಾ ಅವರು ‘ಉತ್ತರಕಾಂಡ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲುಇಲ್ಲಿ ಕ್ಲಿಕ್ ಮಾಡಿ.
Latest Videos